'ಉಪಾಧ್ಯಕ್ಷ' ಸಿನಿಮಾ ಒಪ್ಪುತ್ತಿದ್ದಂತೆ ಅಳುತ್ತಾ ಮನೆಗೆ ಬಂದಿದ್ದೇಕೆ ಮಲೈಕಾ ವಸುಪಾಲ್?

By ಅನಿತಾ ಬನಾರಿ

ನಟಿ ಮಲೈಕಾ ವಸುಪಾಲ್ ಬಗ್ಗೆ ಗೊತ್ತಾ ಎನ್ನುವುದಕ್ಕಿಂತಲೂ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಎಡವಟ್ ಲೀಲಾ ಬಗ್ಗೆ ಗೊತ್ತಾ ಎಂದು ಕೇಳಿದರೆ ಎಲ್ಲರಿಗೂ ಬಹು ಬೇಗ ಗೊತ್ತಾಗುತ್ತೆ. ಹೌದು, 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ಎಡವಟ್ ಲೀಲಾ ಆಗಿ ಪಾತ್ರ ನಿರ್ವಹಿಸಿದ್ದ ನಟಿ ಮಲೈಕಾ ವಸುಪಾಲ್ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದವರು. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡವರು.

'ಹಿಟ್ಲರ್ ಕಲ್ಯಾಣ' ಧಾರಾವಾಹಿ ಮುಗಿಯುತ್ತಿದ್ದಂತೆ ನಟಿ ಮಲೈಕಾ ವಸುಪಾಲ್ ಸಿನಿ ಕ್ಷೇತ್ರಕ್ಕೆ ಹಾರಿದರು. 'ಉಪಾಧ್ಯಕ್ಷ' ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟ ಈಕೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು, 'ಉಪಾಧ್ಯಕ್ಷ' ಸಿನಿಮಾದಲ್ಲಿ ಚಿಕ್ಕಣ್ಣ ನಾಯಕ ನಟನಾಗಿ ನಟಿಸಿದರೆ, ಮಲೈಕಾ ವಸುಪಾಲ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

Why is Malaika Vasupal so upset when she agrees to act in Upadhyaksha movie

ಅಂದ ಹಾಗೇ ಇದು ತಮ್ಮ ಮೊದಲ ಸಿನಿಮಾವಾದರೂ 'ಉಪಾಧ್ಯಕ್ಷ' ಸಿನಿಮಾ ಒಪ್ಪಿಕೊಂಡು ಶೂಟಿಂಗ್ ಹೋದ ಮೊದಲ ದಿನವೇ ಮಲೈಕಾ ವಾಸುಪಾಲ್ ಮನೆಗೆ ಅಳುತ್ತಾ ಬಂದಿದ್ದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಮಲೈಕ ವಸುಪಾಲ್ ಮಾತನಾಡಿದ್ದಾರೆ. "ನಾನು ಬಹಳ ಸಂತೋಷದಿಂದ ಉಪಾಧ್ಯಕ್ಷ ಸಿನಿಮಾಗೆ ಒಪ್ಪಿಕೊಂಡಿದ್ದೆ. ಕಥೆ ಬಹಳ ಹಿಡಿಸಿತ್ತು. ನನ್ನ ಪಾತ್ರವೂ ನನಗೆ ಇಷ್ಟವಾಗಿತ್ತು. ಆದರೆ ಈ ವಿಚಾರ ತಿಳಿಯುತ್ತಿದ್ದಂತೆಯೇ ನನ್ನ ಸ್ನೇಹಿತರು ಹಾಗೂ ಕುಟುಂಬದವರೆಲ್ಲ ಅದ್ಯಾಕೆ ಆ ಸಿನಿಮಾಗೆ ಒಪ್ಪಿಕೊಂಡೆ, ಅದ್ಯಾಕೆ ಆ ರೀತಿಯ ಪಾತ್ರ? ಚಿಕ್ಕಣ್ಣ ಬಹಳ ದೊಡ್ಡ ನಟನೇನಲ್ಲ ಎಂಬಿತ್ಯಾದಿ ಮಾತುಗಳನ್ನು ಹೇಳಿದರು. ಆಗ ನನಗೆ ನನ್ನ ಆಯ್ಕೆ ಬಗ್ಗೆಯೇ ಅನುಮಾನ ಶುರುವಾಯ್ತು. ಬಹಳ ದುಃಖವಾಯ್ತು! ಮೊದಲ ದಿನದ ಶೂಟಿಂಗ್ ನಂತರ ಮನೆಗೆ ಬಂದು ಜೋರಾಗಿ ಅತ್ತಿದ್ದೆ" ಎಂದರು ನಟಿ ಮಲೈಕ ವಾಸುಪಾಲ್.

"ಈ ರೀತಿಯಾಗಿ ಯಾರನ್ನು ಮಿಸ್ ಗೈಡ್ ಮಾಡಬಾರದು. ನನ್ನ ಮೊದಲ ಸಿನಿಮಾ ಆಗಿದ್ದರಿಂದ ನಾನು ಖಂಡಿತವಾಗಿಯೂ ಚೆನ್ನಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಂಡಿದ್ದೆ. ಆದರೆ ಒಂದಷ್ಟು ಜನ ನನ್ನನ್ನು ಕೆಟ್ಟ ರೀತಿಯಲ್ಲಿ ಇನ್‌ಫ್ಲ್ಯೂಯೆನ್ಸ್ ಮಾಡಲು ಪ್ರಯತ್ನಿಸಿದರು. ಆಗ ನನಗೆ ಗಾಬರಿಯಾಯಿತು. ಚಿಕ್ಕಣ್ಣ ಬಹಳ ಒಳ್ಳೆಯ ನಟರು. ಅವರೊಂದಿಗೆ ನಟಿಸಿರುವ ಖುಷಿ ನನಗೆ ಇದೆ" ಎಂದು ಮಲೈಕಾ ವಸುಪಾಲ್ ಹೇಳಿಕೊಂಡಿದ್ದಾರೆ.

Why is Malaika Vasupal so upset when she agrees to act in Upadhyaksha movie

ಇದರ ಜೊತೆಗೆ "ದರ್ಶನ್ ಅಥವಾ ಸುದೀಪ್ ಅವರೊಂದಿಗೆ ನಟಿಸುವಷ್ಟು ನಾನಿನ್ನು ಬೆಳೆದಿಲ್ಲ. ಅಷ್ಟೇ ಅಲ್ಲದೆ ನಾನು ಸಾಮಾನ್ಯವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವಾಗ ಕಥೆಯನ್ನು ಕೇಳುತ್ತೇನೆಯೇ ಹೊರತು ಅದರ ನಾಯಕ ನಟ ಯಾರು ಎಂದು ಕೇಳುವುದಿಲ್ಲ. ಒಂದು ಸಿನಿಮಾದ ಪ್ರೊಡಕ್ಷನ್ ಹೌಸ್ ಗಟ್ಟಿ ಇದ್ದರೆ, ಆ ಸಿನಿಮ ಗೆದ್ದಂತೆಯೇ. ಉಪಾಧ್ಯಕ್ಷ ಸಿನಿಮಾ ಶೂಟಿಂಗ್ ಸಮಯದಲ್ಲಿ ನನ್ನನ್ನು ಕನ್ಫ್ಯೂಸ್ ಮಾಡಿದ ಎಲ್ಲರಿಗೂ ನನ್ನ ನಟನೆಯ ಮೂಲಕ ಉತ್ತರ ಕೊಟ್ಟಿದ್ದೇನೆ. ಉಪಾಧ್ಯಕ್ಷ ಸಿನಿಮಾ ರಿಲೀಸ್ ಆದ ಮೇಲೆ ನನಗೆ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಈ ಬಗ್ಗೆ ನನಗೆ ಬಹಳ ಸಂತೋಷವಿದೆ" ಎಂದರು

ಈ ವಿಚಾರವಾಗಿ ನನ್ನ ತಾಯಿಯು ಬಹಳ ಸಪೋರ್ಟಿವ್ ಆಗಿ ಇದ್ದರು. ನಾನು ಕನ್ಫ್ಯೂಸ್ ಆದಾಗಲೆಲ್ಲಾ, ನೀನು ಕಥೆಯನ್ನು ಒಪ್ಪಿಕೊಂಡಾಗಿದೆ ಈಗ ಮಾಡಿ ಮುಗಿಸು ಎಂದು ಧೈರ್ಯ ತುಂಬಿದರು. ಕಥೆಯನ್ನು ಕೇಳಿ ಅವರಿಗೂ ಕಥೆ ಇಷ್ಟವಾಗಿದೆ ಎಂದು ಹೇಳಿದ್ದರು. ನಾನು ನನ್ನ ತಾಯಿಯ ಮಾತುಗಳನ್ನೇ ಗಂಭೀರವಾಗಿ ತೆಗೆದುಕೊಂಡು ಈ ಸಿನಿಮಾ ಮುಗಿಸಿದೆ. ಈಗ ಈ ಉಪಾಧ್ಯಕ್ಷ ಸಿನಿಮಾ ಬಗ್ಗೆ ನನಗೆ ಬಹಳ ಹೆಮ್ಮೆ ಖುಷಿ ಇದೆ ಎಂದು ತನ್ನ ತಾಯಿಯ ಸಪೋರ್ಟ್ ಬಗ್ಗೆಯೂ ನೆನಪಿಸಿಕೊಂಡರು ನಟಿ ಮಲೈಕಾ ವಾಸುಪಾಲ್.

"ಇದೀಗ ನನಗೆ ಎರಡನೇ ಸಿನಿಮಾ ಆಗಿ ವಿದ್ಯಾಪತಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಡಾಲಿ ಧನಂಜಯ ಅವರ ನಿರ್ಮಾಣದ ಚಿತ್ರ ಇದಾಗಿದ್ದು ಚಿತ್ರನಟ, ನಿರ್ದೇಶಕ, ರಂಗಭೂಮಿ ಕಲಾವಿದ ನಾಗಭೂಷಣ್ ಅವರು ಕೂಡ ಸಿನಿಮಾದಲ್ಲಿದ್ದಾರೆ. ಇದೇ ಏಪ್ರಿಲ್ 10 ರಂದು ಈ ಸಿನಿಮಾ ತೆರೆ ಕಾಣಲಿದ್ದು ಇದರ ಬಗ್ಗೆ ನಾನು ಬಹಳ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ" ನಟಿ ಮಲೈಕಾ ವಾಸುಪಾಲ್.

More from Filmibeat

English summary
Malaika Vasupal, who made her acting debut through television, is currently busy on the big screen,
Read more about: actress sandalwood movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X