Brundavana: ಆಸೆಯಂತೆ 'ಬೃಂದಾವನ' ಹೀರೊ ಬದಲಾದರೂ ವರುಣ್ ಆರಾಧ್ಯ ಆಯ್ಕೆಗೆ ಅಪಸ್ವರವೇಕೆ?

By ಎಸ್ ಸುಮಂತ್

ಇತ್ತೀಚೆಗೆ ವರುಣ್ ಆರಾಧ್ಯ ಹೆಸರು ಕೇಳದವರು ಯಾರು ಇಲ್ಲ ಎನ್ನಬಹದು. ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಖ್ಯಾತಿ ಪಡೆದಿದ್ದವರು ವರುಣ್. ಬಳಿಕ ವೈಯಕ್ತಿಕ ಜೀವನದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಜೋಡಿ ಮೂಲಕವೇ ಫೇಮಸ್ ಆಗಿದ್ದ ವರುಣ್, ಬಳಿಕ ಬ್ರೇಕಪ್ ನಿಂದಾಗಿಯೇ ಸೌಂಡು ಮಾಡಿದ್ದರು.

ಬ್ರೇಕಪ್ ಬಳಿಕ ಇದೀಗ 'ಬೃಂದಾವನ'ಕ್ಕೆ ಎಂಟ್ರಿಯಾಗಿದ್ದಾರೆ. ದೊಡ್ಡ ಕುಟುಂಬದಲ್ಲಿ ಮುದ್ದು ಮೊಮ್ಮಗನಾಗಿ ಆಕಾಶ್ ಇದ್ದಾನೆ. ಎಲ್ಲರ ಆಸೆ, ಆಕಾಂಕ್ಷೆಗಳು ಆಕಾಶ್ ಮೇಲೆಯೇ ಇದೆ. ಆಕಾಶನ ಮದುವೆ ಮಾಡಬೇಕೆಂಬುದೇ ಮನೆಯವರೆಲ್ಲರ ಕನಸು. ಹೆಣ್ಣು ನೋಡಿದ್ದಾಯ್ತು, ಶಾಸ್ತ್ರಗಳು ಶುರು ಆಗಿದ್ದು ಆಯಿತು. ಆದರೆ, ಚಪ್ಪರಕ್ಕೆ ಬರುವಷ್ಟರಲ್ಲಿ ಹೀರೋನೆ ಬದಲಾಗಿಬಿಟ್ಟಿದ್ದಾನೆ.

Why is the audience not happy with Colours Kannada serial Brindavana hero Varun Aradya

ವಿಶ್ವನಾಥ್ ಸ್ಥಾನಕ್ಕೆ ಬಂದ್ರು ವರುಣ್

ಕಲರ್ಸ್ ಕನ್ನಡ ಆಗಾಗ ಹೊಸತನಗಳಿಗೆ ಬಾಗುತ್ತದೆ. ಅದರಂತೆ ವಿಭಿನ್ನ ಧಾರಾವಾಹಿಗಳನ್ನು ತರುತ್ತದೆ. ಅದರಲ್ಲೂ ಸದ್ಯಕ್ಕೆ ಬರುತ್ತಿರುವ 'ಬೃಂದಾವನ' ಅಂತು ಇಡೀ ಕುಟುಂಬದ ಜನ ಕೂತು ನೋಡುವಂತ ಧಾರಾವಾಹಿ. 36 ಜನ ಸದಸ್ಯರನ್ನು ಹೊಂದಿರುವಂತ ಕೂಡು ಕುಟುಂಬ. ಹಿರಿಯ ಕಲಾವಿದರೆ ಈ ಧಾರಾವಾಹಿ ಮೂಲಕ ಬಂದಿದ್ದಾರೆ. ಎಲ್ಲರನ್ನು ಒಂದೇ ವೇದಿಕೆಯಲ್ಲಿ ನೋಡುವುದು ಸಂತಸದ ವಿಚಾರವೇ. ಇಡೀ ಕುಟುಂಬದ ಮುದ್ದು ಮೊಮ್ಮಗನಾಗಿದ್ದ ಆಕಾಶ ಈಗ ಬದಲಾಗಿದ್ದಾನೆ. ಈ ಪಾತ್ರಕ್ಕೆ ಟಿಕ್ ಟಾಕ್‌ನಲ್ಲಿ ಮಿಂಚಿದ್ದ ವರುಣ್ ಆರಾಧ್ಯ ಎಂಟ್ರಿ ಕೊಟ್ಟಿದ್ದಾರೆ.

ವರುಣ್ ಆರಾಧ್ಯ ಬಗ್ಗೆ ಜನ ಏನಂತಾರೆ..?

'ಬೃಂದಾವನ' ಧಾರಾವಾಹಿಯ ಕಥೆಯಲ್ಲಿ ನಾಯಕ ಇನ್ನು ಓದುತ್ತಾ ಇರುತ್ತಾನೆ. ಡಿಗ್ರಿ ಕೂಡ ಮುಗಿದಿರುವುದಿಲ್ಲ. ಅದಾಗಲೇ ಮನೆಯವರ ಕನಸಿಗೆ ನೀರೆರೆಯುವಂತ ಹುಡುಗಿ ಸಿಕ್ಕಾಗಿರುತ್ತದೆ. ಪುಷ್ಪಾ ಹಳ್ಳಿ ಹುಡುಗಿ. ಮೈಕೈ ತುಂಬಿಕೊಂಡು ಚೆನ್ನಾಗಿದ್ದಾಳೆ. ಆದರೆ, ಮೊದಲಿದ್ದ ಆಕಾಶ ಅಂದರೆ ವಿಶ್ವನಾಥ್ ಚಿಕ್ಕ ಹುಡುಗನ ರೀತಿ ಕಾಣುತ್ತಾರೆ ಎಂಬ ಕಮೆಂಟ್‌ಗಳು ತೇಲಿ ಬಂದಿದ್ದವು. ಹೀಗಾಗಿಯೇ ಕಲರ್ಸ್ ಕನ್ನಡ ನಾಯಕನನ್ನು ಬದಲಾವಣೆ ಮಾಡಿದೆ ಎಂಬ ಮಾತಿದೆ. ಆದರೆ, ಆಕಾಶನ ಪಾತ್ರಕ್ಕೆ ನಿಜಕ್ಕೂ ವರುಣ್ ಆರಾಧ್ಯ ಬಂದಿರುವುದು ಜನಕ್ಕೆ ಇಷ್ಟ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರವೇನು?

ಆಕಾಶ ಮತ್ತೆ ಬದಲಾಗಬಹುದಾ..?

ಮೊದಲಿದ್ದ ನಾಯಕ ಚಿಕ್ಕವನಂತೆ ಕಾಣುತ್ತಾನೆ. ನಾಯಕಿಗೆ ಮ್ಯಾಚ್ ಆಗುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದ ಕಾರಣಕ್ಕೆ ನಾಯಕನನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ. ಆದರೆ, ಇದೀಗ ವರುಣ್ ಆರಾಧ್ಯ ಧಾರಾವಾಹಿಯಲ್ಲಿ ಮುಂದುವರೆದರೆ ನಾವೂ ಧಾರಾವಾಹಿ ನೋಡಲ್ಲ ಎಂಬೆಲ್ಲಾ ರೀತಿಯಾಗಿ ಕಮೆಂಟ್‌ಗಳು ಬರುತ್ತಿವೆ. ಮೊದಲೇ ಕೂಡು ಕುಟುಂಬ. ಖ್ಯಾತಿ ಪಡೆದ ಕಲಾವಿದರೆ ಇರುವ ಈ ಧಾರಾವಾಹಿಯಲ್ಲಿ ಮುಖ್ಯವಾದ ಹೀರೊ ಬಗ್ಗೆಯೆ ಕಮೆಂಟ್‌ಗಳು ಬಂದರೆ ಕಲರ್ಸ್ ಕನ್ನಡ ಮತ್ತೆ ತಮ್ಮ ನಿರ್ಧಾರವನ್ನೇನಾದರು ಬದಲಾಯಿಸಬಹುದಾ ಎಂಬ ಅನುಮಾನ ಮೂಡಿದೆ.

Why is the audience not happy with Colours Kannada serial Brindavana hero Varun Aradya

ವರುಣ್ ಬಗ್ಗೆ ಅಪಸ್ವರವೇಕೆ..?

ವರುಣ್ ಆರಾಧ್ಯ ಸೋಷಿಯಲ್ ಮೀಡಿಯಾದಲ್ಲಿ ಚಿರಪರಿಚಿತರು. ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಖಂಡಿತ ಗೊತ್ತಿರುತ್ತದೆ. ಇತ್ತೀಚೆಗೆ ಬ್ರೇಕಪ್ ವಿಚಾರದಲ್ಲಿಯೇ ಸಿಕ್ಕಾಪಟ್ಟೆ ಸೌಂಡು ಮಾಡಿದ್ದಾರೆ. ಹೀಗಾಗಿ ಹಲವರು ವರುಣ್ ಆರಾಧ್ಯ ಆಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ವಿಶ್ವನಾಥ್ ಚಿಕ್ಕವರಾಗಿಯೇ ಕಂಡರು, ಆ ಪಾತ್ರಕ್ಕೆ ಅವರ ನಟನೆ ಅದ್ಭುತವಾಗಿತ್ತು. ಆದರೆ, ವರುಣ್ ಆರಾಧ್ಯಗೆ ನಟನೆ ಅನ್ನುವುದು ಇನ್ನು ಸರಿಯಾಗಿ ಬರುತ್ತಿಲ್ಲ. ಮೊದಲ ಹೀರೋನೆ ಬೆಸ್ಟ್ ಅಂತೆಲ್ಲಾ ಕಮೆಂಟ್‌ಗಳು ಬರುತ್ತಿವೆ.

More from Filmibeat

English summary
Audience not happay with Brindavana Serial new hero Varun Aradhya:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X