ಮೇಘಾ ಶೆಟ್ಟಿಯೇ ಕಮೆಂಟ್ ಬಾಕ್ಸ್ ಆನ್ ಮಾಡಿದ್ರು ಅವರ ಅಭಿಮಾನಿಗಳು ಆಫ್ ಮಾಡಿದ್ದೇಕೆ?

By ಎಸ್ ಸುಮಂತ್

ಮೇಘಾ ಶೆಟ್ಟಿ ಅಂದ್ರೆ ಕ್ರೇಜ್ ಸ್ವಲ್ಪ ಜಾಸ್ತಿಯೇ ಇದೆ. ಅವರ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ಸೀರಿಯಲ್ ಲೋಕಕ್ಕೆ ಪದಾರ್ಪಣೆ ಮಾಡಿದಾಗಿನಿಂದಾನೂ ಅವರಿಗೆ ಅಭಿಮಾನಿ ಬಳಗ ಜಾಸ್ತಿ ಇದೆ.

ಅನು ಸಿರಿಮನೆಯಾಗಿ ಮೇಘಾ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಈಗ ಸಿನಿಮಾಗಳ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ರಿಲೀಸ್ ಆಗ್ಬೇಕಿರುವ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

Why is the comment section turned off for Megha Shetty s fan page posts

ಮೇಘಾ ಶೆಟ್ಟಿ ಫಿಟ್ನೆಸ್ ಫ್ರೀಕ್. ದಂತದ ಗೊಂಬೆಯಂತೆ ತಮ್ಮ ದೇಹವನ್ನ ಮೇಂಟೈನ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಫೋಟೋಶೂಟ್, ವಿಡಿಯೋ ಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಆ ವಿಡಿಯೋಗಳನ್ನ ಅಭಿಮಾನಿಗಳು ಸಹ ಫ್ಯಾನ್ ಪೇಜ್‌ನಲ್ಲಿ ಅದೇ ಫೋಟೋ, ವಿಡಿಯೋಗಳನ್ನ ಹಾಕಿಕೊಳ್ಳುತ್ತಾರೆ. ಆದರೆ ಮೇಘಾ ಶೆಟ್ಟಿ ಅವರೇ ಕಮೆಂಟ್ ಬಾಕ್ಸ್ ಆಫ್ ಮಾಡಿರಲ್ಲ ಅಭಿಮಾನಿಗಳು ಮಾಡಿರೋದ್ಯಾಕೆ..?

ಫ್ಯಾನ್ಸ್ ಕಮೆಂಟ್ ಬಾಕ್ಸ್ ಆಫ್

ಮೇಘಾ ಶೆಟ್ಟಿ ಅಭಿಮಾನಿಗಳು ಹಲವು ಪೇಜ್‌ಗಳು ಕ್ರಿಯೇಟ್ ಆಗಿವೆ. ಅದರಲ್ಲಿ ಮೇಘಾ ಶೆಟ್ಟಿ ಎಂಬ ಹೆಸರಿನ ಪೇಜ್‌ನಲ್ಲಿ ಹಲವು ಫೋಟೋ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ. ಈ ಪೇಜ್‌ನಲ್ಲಿ 62 ಸಾವಿರಕ್ಕಿಂತ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಇದರಲ್ಲಿ ಹಲವು ವಿಡಿಯೋಗಳಿಗೆ ಕಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.

ರಿಸೆಂಟ್ ವರ್ಕೌಟ್ ವಿಡಿಯೋ

ಮೇಘಾ ಶೆಟ್ಟಿ ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಾರೆ. ಅದರಲ್ಲೂ ಜಿಮ್ನಾಸ್ಟಿಕ್ ಪ್ರಾಕ್ಟೀಸ್ ಮಾಡ್ತಾ ಇದ್ದಾರೆ. ಇತ್ತೀಚಿನ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಅದೇ ವಿಡಿಯೋವನ್ನು ಫ್ಯಾನ್ ಪೇಜ್ ನಲ್ಲೂ ಹಾಕಿಕೊಂಡಿದ್ದಾರೆ. ಇಲ್ಲಿ ವಿಶೇಷ ಎಂದರೆ ಅಭಿಮಾನಿಗಳು ಈ ವಿಡಿಯೋ ಕಮೆಂಟ್ ಆಫ್ ಮಾಡಿದ್ದಾರೆ. ಆದರೆ ಮೇಘಾ ಶೆಟ್ಟಿ ಆಫ್ ಮಾಡಿಲ್ಲ.

ದರ್ಶನ್ ಫೋಟೋಗೂ ನೋ ಕಮೆಂಟ್

ಹಾಗೇ ದರ್ಶನ್ ಅವರ ಹುಟ್ಟು ಹಬ್ಬದ ದಿನ ಒಂದು ವಿಡಿಯೋವೊಂದನ್ನ ಹಂಚಿಕೊಂಡಿದ್ದ ಅಭಿಮಾನಿಗಳು ಅಲ್ಲಿಯೂ ಕಮೆಂಟ್ ಹಾಕೋದಕ್ಕೆ ಅವಕಾಶ ನೀಡಿಲ್ಲ. ಮೇಘಾ ಶೆಟ್ಟಿ ಇಂಟರ್‌ವ್ಯೂನಲ್ಲಿ ದರ್ಶನ್ ಮಾತಾಡಿರೋ ವಿಡಿಯೋ ಹಾಕಿದ್ದಾರೆ. ಆ ವಿಡಿಯೋಗೂ ಕಮೆಂಟ್ ಆಫ್ ಮಾಡಿದ್ದಾರೆ. ಆದರೆ ಮೇಘಾ ಶೆಟ್ಟಿ ತಮ್ಮ ಸ್ಟೋರಿಯಲ್ಲಿ ದರ್ಶನ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದರು. ಆದರೆ ಅಭಿಮಾನಿಗಳು ಹಳೆ ಫೋಟೋ, ವಿಡಿಯೋಗಳನ್ನ ಮಿಕ್ಸ್ ಮಾಡಿ ವಿಡಿಯೋ ಮಾಡಿದ್ದಾರೆ.

ಕಾಮೆಂಟ್ಸ್ ಸೆಕ್ಷನ್ ಆಫ್ ಏಕೆ?

ಜಿಮ್ನಾಸ್ಟಿಕ್‌ನಲ್ಲಿ ಹುಡುಗರ ಜೊತೆಗೂ ಮಾಡಿರುವ ವಿಡಿಯೋಗೂ ಕಮೆಂಟ್ ಆಫ್ ಮಾಡಿದ್ದಾರೆ. ಈ ಹಿಂದೆ ಇದೆ ವಿಡಿಯೋಗೆ ನೆಗೆಟಿವ್ ಕಮೆಂಟ್ಸ್ ಬಂದಿತ್ತು. ಆಗಷ್ಟೇ ದರ್ಶನ್ ಅರೆಸ್ಟ್ ಆಗಿದ್ರು. ಹೀಗಾಗಿ ದರ್ಶನ್ ಅವರು ಅರೆಸ್ಟ್ ಆಗಿದ್ರು ಡ್ಯಾನ್ಸ್ ಮಾಡ್ತಾ ಇದ್ದೀರಾ ಅಂತೆಲ್ಲಾ ಮೆಸೇಜ್ ಹಾಕಿದ್ದರು. ಹೀಗಾಗಿ ಕಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ. ಮೇಘಾ ಶೆಟ್ಟಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟಿಯ ಬಗ್ಗೆ ಯಾವುದೇ ರೀತಿಯ ನೆಗೆಟಿವ್ ಕಮೆಂಟ್ ಹಾಕೋದು ಇಷ್ಟ ಆಗೋದಿಲ್ಲ ಅನ್ನಿಸುತ್ತೆ. ಹೀಗಾಗಿ ನೆಗೆಟಿವ್ ಕಮೆಂಟ್ಸ್ ಬರುವ ಕಡೆ ಆಫ್ ಮಾಡಿದ್ದಾರೆ. ಇದು ತಮ್ಮ ನಟಿಯ ಬಗ್ಗೆ ಇರುವ ಅಭಿಮಾನ, ಪ್ರೀತಿಯನ್ನ ತೋರಿಸಿದೆ.

More from Filmibeat

English summary
Here is the details about Actress Megha shetty's fan page comment box off;
Read more about: serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X