ಕನ್ನಡದ ಕೋಟ್ಯಧಿಪತಿ ಶೋ ಬಗ್ಗೆ ಒಂದು ನಿರಾಸೆ ಸುದ್ದಿ
ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಕಳೆದ ಮೂರು ಆವೃತ್ತಿಯಲ್ಲಿ ಪ್ರತಿ ದಿನವೂ ಪ್ರಸಾರವಾಗ್ತಿತ್ತು. ಶನಿವಾರ ಮತ್ತು ಭಾನುವಾರ ಎಪಿಸೋಡ್ ಇರ್ತಿರಲಿಲ್ಲ. ಆದ್ರೀಗ, ನಾಲ್ಕನೇ ಆವೃತ್ತಿಯಲ್ಲಿ ಈ ಸಂಪ್ರದಾಯ ಬದಲಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೊದಲ ಸಲ ಟೆಲಿಕಾಸ್ಟ್ ಆಗ್ತಿರುವ ಕನ್ನಡದ ಕೋಟ್ಯಧಿಪತಿ ವಾರಾಂತ್ಯದಲ್ಲಿ ಮಾತ್ರ ನಿಮ್ಮ ಮುಂದೆ ಬರಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಹೀಗಾಗಿ, ಪ್ರತಿದಿವೂ ಗೇಮ್ ಶೋ ನೋಡಿ ಎಂಜಾಯ್ ಮಾಡಬಹುದು ಎಂದುಕೊಂಡಿದ್ದವರಿಗೆ ಇದು ನಿರಾಸೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ''ವಾರದಲ್ಲಿ ಬರಬೇಕಾ ಅಥವಾ ವಾರಾಂತ್ಯಕ್ಕೆ ಬರಬೇಕಾ ಎನ್ನುವುದು ಆ ವಾಹಿನಿಯ ಶಕ್ತಿಗೆ ಸಂಬಂಧಪಟ್ಟ ವಿಷ್ಯ. ವಾರದ ದಿನದಲ್ಲಿ ಈ ಎಪಿಸೋಡ್ ಕೊಟ್ರೆ ಕಥೆಗಳನ್ನ ನೋಡೋರು ಬೇಸರವಾಗಬಹುದು. ಸಹಜವಾಗಿ ವೀಕೆಂಡ್ ಗಳಲ್ಲಿ ಗೇಮ್ ಶೋ, ರಿಯಾಲಿಟಿ ಶೋ ಮಾಡ್ತೀವಿ. ಅದೇ ಉದ್ದೇಶದಿಂದ ವಾರಾಂತ್ಯಕ್ಕೆ ಹೋದ್ವಿ'' ಎಂದು ಸಮರ್ಥಿಸಿಕೊಂಡರು.

ಈ ಮುಂಚೆ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ತಕಧಿಮಿತ ಶೋ ನಡೆಯುತ್ತಿತ್ತು. ಈ ಶೋ ಈಗಾಗಲೇ ಮುಗಿದಿದೆ. ಹಾಗಾಗಿ, ಅದೇ ವೇಳೆಗೆ ಕನ್ನಡದ ಕೋಟ್ಯಧಿಪತಿ ಜಾಗ ಮಾಡಿಕೊಂಡಿದೆ.


Click it and Unblock the Notifications











