'ಮುದ್ದು ಸೊಸೆ'ಯ ನಟಿ ಪ್ರತಿಮಾ ಪಿಯುಸಿಯನ್ನೇ ಕೊನೆ ಮಾಡಿದ್ದೇಕೆ? ಪದವಿ ಮುಗಿಸಲಿಲ್ಲ ಯಾಕೆ?
ಕಲರ್ಸ್ ಕನ್ನಡದಲ್ಲಿ ಈಗಷ್ಟೇ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮುಕ್ತಾಯವಾಗಿದೆ. ಅದೇ ಸಮಯಕ್ಕೆ ಈಗ ಅದೇ ರೀತಿಯ ಬೇರೆ ಎಮೋಷನಲ್ ಕಥೆ ಹೊಂದಿರುವಂತ ಧಾರಾವಾಹಿ ಬರುತ್ತಿದ್ದು, ಹೊಸ ಧಾರಾವಾಹಿಯನ್ನು ಪ್ರೇಕ್ಷಕರಿಗೆ ನೀಡಲು ವಾಹಿನಿ ಸಜ್ಜಾಗಿದೆ. ಸೋಮವಾರದಿಂದ 'ಮುದ್ದು ಸೊಸೆ' ಧಾರಾವಾಹಿ ತೆರೆಗೆ ಬರಲು ರೆಡಿಯಾಗಿದೆ. ಈ ಧಾರಾವಾಹಿ ಮೂಲಕ ಬಿಗ್‌ಬಾಸ್ ತ್ರಿವಿಕ್ರಮ್ ಹೀರೋ ಆಗಿ ನಟಿಸುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಪ್ರತಿಮಾ ಕಾಣಿಸಿಕೊಳ್ಳುತ್ತಿದ್ದಾರೆ.
ಇದೊಂದು ಇಡೀ ಫ್ಯಾಮಿಲಿ ಕೂತು ನೋಡಬಹುದಾದಂತ ಕಥೆ. ಅದರಲ್ಲೂ ಮಂಡ್ಯ ಭಾಗದಲ್ಲಿ ನಡೆಯುವ ಸ್ಟೋರಿ. ಊರ ದೊಡ್ಡ ಗೌಡನ ಮಗನಿಗೆ ಮದುವೆ ಮಾಡಿಸಲು ಹೊರಟ ತಂದೆ, ಆ ಹೆಣ್ಣು ಮಗುವಿನ ಕಷ್ಟವನ್ನು ನೋಡುವುದಿಲ್ಲ. ವಿದ್ಯಾಗೆ ತಾನು ಓದಿ, ಡಾಕ್ಟರ್ ಆಗಬೇಕೆಂಬ ಕನಸು ಇಟ್ಟುಕೊಂಡು ಓದಿನಲ್ಲಿ ಸದಾ ಮುಂದಿರುತ್ತಾಳೆ. ಆದರೆ, ಮದುವೆ ಎಂಬುದು ಓದಿಗೆ ಹೇಗೆ ಅಡ್ಡಿಯಾಗುತ್ತೆ? ಅದೆಲ್ಲವನ್ನು ಹೇಗೆ ನಿಭಾಯಿಸಬಲ್ಲಳು ವಿದ್ಯಾ ಎಂಬುದು ಕಥೆ. ಈ ಧಾರಾವಾಹಿಯಲ್ಲಿ ವಿದ್ಯಾ ಪಾತ್ರದಲ್ಲಿ ಪ್ರತಿಮಾ ನಟಿಸಿದ್ದಾರೆ. ಆದರೆ ರಿಯಲ್ ಲೈಫ್‌ನಲ್ಲಿ ಓದಿನ ಬಗ್ಗೆ ಪ್ರತಿಮಾ ಅವರಿಗೆ ಆಸಕ್ತಿ ಇತ್ತಾ? ಪಿಯುಸಿಗೆ ಶಿಕ್ಷಣವನ್ನು ಕೊನೆಗೊಳಿಸಿದ್ದೇಕೆ? ತಿಳಿಯಲು ಮುಂದೆ ಓದಿ.

ಕಿರುತೆರೆಯ 'ಮುದ್ದು ಸೊಸೆ' ಪ್ರತಿಮಾ
'ಮುದ್ದು ಸೊಸೆ' ಧಾರಾವಾಹಿಯ ಪ್ರೋಮೋಗಳು ಈಗಾಗಲೇ ಎಲ್ಲರ ಗಮನ ಸೆಳೆದಿವೆ. ವಿದ್ಯಾಳ ಕನಸು, ಭದ್ರೇ ಗೌಡನ ಆಸೆ, ಶಿವರಾಮೇಗೌಡನ ಖದರ್ ಎಲ್ಲವನ್ನು ನೋಡಿ ಆಗಿದೆ. ಈ ಧಾರಾವಾಹಿಯ ಪ್ರೋಮೋ ನೋಡಿದಾಗಿಂದ ಸಾಮಾನ್ಯವಾಗಿ ಸೀರಿಯಲ್ ಪ್ರೇಮಿಗಳಿಗೆ ಧಾರಾವಾಹಿ ನೋಡುವ ಹಂಬಲವೂ ಹೆಚ್ಚಾಗಿದೆ. ಆ ದಿನವೂ ಹತ್ತಿರವಾಗಿದೆ. ಸೋಮವಾರದಿಂದ ಈ ಧಾರಾವಾಹಿ ಆರಂಭವಾಗಿದೆ.
ರಿಯಲ್ ಲೈಫ್‌ನಲ್ಲಿ ಪ್ರತಿಮಾ ಓದೇನು?
ಸೀರಿಯಲ್‌ನಲ್ಲಿ ದೊಡ್ಡ ಕನಸು, ಓದುವುದರಲ್ಲಿ ಟಾಪ್. ಪ್ರೋಮೋದಲ್ಲಿಯೇ ಇರುವಂತೆ ಎಲ್ಲರ ಪೇಪರ್‌ನಲ್ಲಿ ಮಾರ್ಕ್ಸ್ ಎಲ್ಲಿ ಕೊಡೋದು ಅಂತ ನೋಡ್ತೀವಿ. ಆದರೆ, ಪ್ರತಿಮಾ ಪೇಪರ್‌ನಲ್ಲಿ ಮಾರ್ಕ್ಸ್ ಎಲ್ಲಾದರೂ ಹಿಡಿಬಹುದಾ ಅಂತ ನೋಡ್ತೀವಿ ಅನ್ನೋ ಡೈಲಾಗ್ ಇದೆ. ಅಂದ್ರೆ ಸೀರಿಯಲ್‌ನಲ್ಲಿ ವಿದ್ಯಾ ಅಷ್ಟು ಚೆನ್ನಾಗಿ ಓದಿದ್ರೆ, ರಿಯಲ್ ಲೈಫ್‌ನಲ್ಲಿ ಪ್ರತಿಮಾ ಅದ್ಯಾಕೋ ಪಿಯುಸಿಗೆ ಶಿಕ್ಷಣವನ್ನು ಮುಗಿಸಿದ್ದಾರೆ.
ಡಿಗ್ರಿ ಬಗ್ಗೆ ಅಭಿಪ್ರಾಯ
ಸಾಮಾನ್ಯವಾಗಿ ಪೋಷಕರು ಓದಿನ ಕಡೆಗೆ ಹೆಚ್ಚು ಒತ್ತು ಕೊಡುತ್ತಾರೆ. ಮಕ್ಕಳು ಮೊದಲು ಓದಲಿ, ಆಮೇಲೆ ನಟನೆ ಅನ್ನುತ್ತಾರೆ. ಪ್ರತಿಮಾ ಪಿಯುಸಿ ಮುಗಿಸಿ ನಟನೆ ಕಡೆಗೆ ಹೆಚ್ಚು ಇತ್ತು ಕೊಟ್ಟರು. ಅವರ ಮನೆಯ ಕಡೆಗೂ ಹೆಚ್ಚಿನ ಒತ್ತಡವಿದೆ. ಡಿಗ್ರಿ ಮಾಡಿಕೊಳ್ಳಬೇಕು ಅಂತ. ಆದರೆ, ನಟನೆ, ಓದು ಎರಡನ್ನು ಬ್ಯಾಲೆನ್ಸ್ ಮಾಡೋದು ಕಷ್ಟ ಎನ್ನುವ ಪ್ರತಿಮಾ ಡಿಗ್ರಿ ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲೂ ಇದ್ದಾರೆ. ಸೀರಿಯಲ್ ಗ್ಯಾಪ್ ಸಿಕ್ಕಾಗ ಓದುವುದು ಖಂಡಿತ ಕಷ್ಟವೇ. ಆದರೆ, ಅದೆಲ್ಲವನ್ನು ನಿವಾರಿಸಿಕೊಂಡು ಓದುವ ಕಡೆಗೂ ಗಮನ ಕೊಡಬೇಕು ಎನ್ನುತ್ತಾರೆ ನಟಿ.
ಡಾಕ್ಟರ್ ಆಗುವ ಕನಸು
ಸೀರಿಯಲ್‌ನಲ್ಲಿ ವಿದ್ಯಾಗೆ ದೊಡ್ಡ ಡಾಕ್ಟರ್ ಆಗಬೇಕೆಂಬ ಕನಸು ಇರುತ್ತೆ. ಆದರೆ, ವಿದ್ಯಾಳ ತಂದೆಗೆ ಒಂದೊಳ್ಳೆ ಕಡೆ ಸಂಬಂಧ ಬಂದಾಗ ಮಗಳ ಮದುವೆಯನ್ನು ಮಾಡಿ ಮುಗಿಸಿ ಬಿಡಬೇಕೆಂಬ ಆಸೆ. ಹೀಗಾಗಿ ಮಗಳ ಡಾಕ್ಟರ್ ಕನಸಿಗೆ ಬ್ರೇಕ್ ಹಾಕಿ ಮದುವೆ ಮಾಡಲು ಹೊರಟಿದ್ದಾರೆ. ಆದರೆ, ಭದ್ರೆಗೌಡನಿಗೆ ವಿದ್ಯಾಳೆಂದರೆ ಪಂಚಪ್ರಾಣ ಹೀಗಾಗಿ ಅವಳ ಕನಸಿಗೆ ಖಂಡಿತ ಜೊತೆಯಾಗಿ ನಿಲ್ಲುತ್ತಾನೆ ಎಂಬ ನಿರೀಕ್ಷೆ ವೀಕ್ಷಕರದ್ದು.


Click it and Unblock the Notifications











