Niveditha Gowda: ಚಂದನ್ ಬರ್ತ್ ಡೇ ಪ್ರೋಮೋ ಹಾಕಿದ್ದೇ ಕೊನೆ; ನಿವಿ ಸೈಲೆಂಟ್ ಆಗಿದ್ದೇಕೆ?

By ಎಸ್ ಸುಮಂತ್

ಬಿಗ್ ಬಾಸ್ ಮೂಲಕ ಮನೆ ಮಾತಾದ ಗೊಂಬೆ ಅಲಿಯಾಸ್ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸ್ತಾ ಇರ್ತಾರೆ. ಪಡ್ಡೆ ಹೈಕ್ಳ ಹಾರ್ಟ್‌ಗೆ ತನ್ನ ಮೋಹಕ ನೋಟದಿಂದಾನೇ ಲಗ್ಗೆ ಇಡುತ್ತಾರೆ. ನಿವೇದಿತಾ ಗೌಡಗೆ ಫ್ಯಾನ್ಸ್ ಕಡಿಮೆ ಏನು ಇಲ್ಲ. ಆಕೆಯ ಒಂದೇ ಒಂದು ರೀಲ್ಸ್ ಸಾಕು ವೀವ್ಸ್ ಹುಚ್ಚೆದ್ದು ರೀಚ್ ಆಗುತ್ತೆ. ಅಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ ಕಿರುತೆರೆಯ ಡಾಲ್.

ಬಿಗ್ ಬಾಸ್ ಮುಗಿದ ಮೇಲೆ ನಿವೇದಿತಾ ಹೆಚ್ಚು ಆಕ್ಟಿವ್ ಆಗಿದ್ದು, 'ಗಿಚ್ಚಿ ಗಿಲಿಗಿಲಿ' ಕಾರ್ಯಕ್ರಮದಲ್ಲಿ. ಈಗಲೂ ಅದೇ ರಾಗದಲ್ಲಿಯೇ ಮಾತಾಡ್ತಾರೆ. ಕನ್ನಡ ಕೊಂಚ ಸ್ಪಷ್ಟವಾಗಿದೆ. ಬಿಗ್ ಬಾಸ್‌ಗೆ ಬಂದ ಹೊಸತರಲ್ಲಿ ನಿವೇದಿತಾ ಗೌಡ ಅನ್ನೋದನ್ನು ಸ್ಟೈಲ್ ಆಗಿ ಹೇಳ್ತಾ ಇದ್ದವರು. ಸದ್ಯ 'ಬಾಯ್ಸ್ ವರ್ಸಸ್ ಗರ್ಲ್ಸ್' ಕಾರ್ಯಕ್ರಮದಲ್ಲೂ ನಿವೇದಿತಾ ಕಾಣಿಸಿಕೊಂಡಿದ್ದಾರೆ. ಈಗ ವಿಚಾರ ಏನಂದ್ರೆ ನಿವೇದಿತಾ ಗೌಡ ಯೂಟ್ಯೂಬ್ ವಿಚಾರ.

Why Niveditha Gowda didnt upload chandan shetty s birthday Video in youtube

ಅಡುಗೆ ರೆಡಿ ಮಾಡಿದ್ದ ನಿವೇದಿತಾ ಗೌಡ

ಬಿಗ್ ಬಾಸ್‌ನಲ್ಲಿ ಪರಿಚಯವಾದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅದ್ದೂರಿಯಾಗಿ ಮದುವೆ ಕೂಡ ಆದ್ರು. ಆದರೆ ಸಂಬಂಧ ಹೆಚ್ಚು ವರ್ಷ ಉಳಿಯಲಿಲ್ಲ. ಇಬ್ಬರು ಒಪ್ಪಿ ಡಿವೋರ್ಸ್ ಕೂಡ ಪಡೆದಿದ್ದಾರೆ. ಆದ್ರೆ ಡಿವೋರ್ಸ್ ಪಡೆಯುವುದಕ್ಕೂ ಮುನ್ನ ನಿವೇದಿತಾ ತನ್ನ ಮಾಜಿ ಗಂಡನಿಗೆ ಸರ್ಪೈಸ್ ಪಾರ್ಟಿ ಅರೆಂಜ್ ಮಾಡಿದ್ದರು. ತಾನೇ ಅಡುಗೆ ಮಾಡಿದ್ದರು.

ಪ್ರೋಮೋ ಬಿಟ್ರು ವಿಡಿಯೋ ಇಲ್ಲ

ನಿವೇದಿತಾ ಗೌಡ ಜಗತ್ತಿಗೆ ಪರಿಚಯವಾಗಿದ್ದೆ ಸೋಷಿಯಲ್ ಮೀಡಿಯಾ ಮೂಲಕ. ಹೀಗಾಗಿ ಕುಂತರೆ ನಿಂತರೆ, ಊಟ ಮಾಡಿದ್ರೆ, ಶಾಪಿಂಗ್ ಹೋದ್ರೆ ಎಲ್ಲದನ್ನು ವಿಡಿಯೋ ಮಾಡಿ ಹಾಕುತ್ತಾ ಇದ್ದರು. ಚಂದನ್ ಶೆಟ್ಟಿ ಮನೆಗೆ ಬಂದ ಮೇಲಂತು ಅಡುಗೆ ವಿಡಿಯೋಗಳು ಹೆಚ್ಚಾಗಿ ಬರ್ತಾ ಇತ್ತು. ಆದರೆ ಅದ್ಯಾಕೋ ಏನೋ ಒಂದು ವರ್ಷದಿಂದ ವಿಡಿಯೋ ಮಾಡುವುದನ್ನೇ ಬಿಟ್ಟಿದ್ದಾರೆ. ವ್ಲಾಗ್ ಅಪ್ಲೋಡ್ ಆಗಿಲ್ಲ.

ಇಬ್ಬರ ಡಿವೋರ್ಸ್ ಘೋಷಣೆ

ಬರ್ತ್ ಡೇ ಸೆಲೆಬ್ರೇಷನ್ ಮಾಡೋದಕ್ಕೆ ನಿವೇದಿತಾ ಹೊಟೇಲ್ ಒಂದರಲ್ಲಿ ತಾನೇ ಅಡುಗೆ ಮಾಡಿದ್ದರು. ಚಿಕನ್ ಐಟಂಗಳನ್ನ ಮಾಡಿ ಚಂದನ್‌ಗೆ ಸರ್ಪೈಸ್ ಪಾರ್ಟಿ ಅರೆಂಜ್ ಮಾಡಿದ್ದರು. ಚಂದನ್ ಬರ್ತ್ಡೇ ಇರೋದು ಸೆಪ್ಟೆಂಬರ್ 17. ಆದ್ರೆ ನಿವಿ ಆ ಪ್ರೋಮೋ ಅಪ್ಲೋಡ್ ಮಾಡಿರೋದು ಸೆ.16-2023 ರಲ್ಲಿ. ವಿಡಿಯೋ ಬಿಟ್ಟೆ ಇಲ್ಲ. ಅದೇನಾಯ್ತೋ ಹತ್ತು ತಿಂಗಳಷ್ಟರಲ್ಲಿ ಅಂದ್ರೆ 2024-ಜೂನ್ ತಿಂಗಳಲ್ಲಿ ಡಿವೋರ್ಸ್ ಸುದ್ದಿ ಆಯ್ತು. ಸೆಲೆಬ್ರೇಷನ್ ಮಾಡಿದ್ದ ವಿಡಿಯೋ ನಿವಿ ಬಳಿಯೇ ಉಳಿದು ಬಿಡ್ತು.

ರೀಲ್ಸ್ ಅಷ್ಟೇ ಅಪ್ಲೋಡ್

ನಿವೇದಿತಾ ಹಾಗಂತ ಸೋಷಿಯಲ್ ಮೀಡಿಯಾದಿಂದ ದೂರ ಹೋಗಿದ್ದಾರೆ ಅಂತಲ್ಲ. ರೀಲ್ಸ್‌ಗಳಲ್ಲಿಯೇ ಮುಳುಗೋಗಿದ್ದಾರೆ. ಆಕೆ ಹಾಕುವ ಒಂದೊಂದು ರೀಲ್ಸ್‌ಗಳಿಗೆ ಬರುವ ಕಮೆಂಟ್ಸ್ ನೋಡಿದ್ರೆ ತಲೆ ತಿರುಗಿ ಬೀಳಬೇಕು. ಅಷ್ಟು ಕೆಟ್ಟ ಕಮೆಂಟ್ಸ್ ಬರುತ್ತವೆ. ಈ ಮೊದಲೆಲ್ಲ ನಿವೇದಿತಾ ಕೂಡ ಆ ಕಮೆಂಟ್ಸ್‌ಗೆ ತಲೆ ಕೆಡಿಸಿಕೊಳ್ತಾ ಇದ್ರು ಅನ್ಸುತ್ತೆ. ಅದಕ್ಕೆ ಆಗಾಗ ಕಮೆಂಟ್ ಸೆಕ್ಷನ್ ಆಫ್ ಆಗ್ತಾ ಇತ್ತು. ಈಗ ನಿವೇದಿತಾ ಮೈಂಡ್ ಕೂಡ ಬದಲಾಗಿರಬಹುದು. ಕಮೆಂಟ್ ಸೆಕ್ಷನ್ ನಿಮ್ದೆ ಏನಾದ್ರೂ ಕಾಮೆಂಟ್ ಮಾಡಿ ಅಂತ ಸುಮ್ನಾಗಿದ್ದಾರೆ.

More from Filmibeat

English summary
Bigg Boss Fame Niveditha Gowda didnt post Chandan's birthday surprise Video till now;
Read more about: niveditha gowda sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X