'ಸೇಸಮ್ಮ' ಸನ್ನಿ ಲಿಯೋನ್ ಗೆ ಎದುರಾಗಿದೆ 'ಕಿರು' ಸಮಸ್ಯೆ

By ರವಿಕಿಶೋರ್

ಪ್ರೇಮ್ ಅಭಿನಯದ 'ಡಿಕೆ' ಚಿತ್ರದಲ್ಲಿ ಬಾಗಿಲು ತೆಗೆಯೇ ಸೇಸಮ್ಮ ಎಂದು ಕುಣಿದ ಬೆಡಗಿಗೆ ದುತ್ತನೆ ಸಮಸ್ಯೆಯೊಂದು ಎದುರಾಗಿದೆ. ನೀಲಿ ಚಿತ್ರಗಳ ಮುದ್ರೆಯಿಂದ ಹೊರಬರುತ್ತಾ ಮೆಲ್ಲಮೆಲ್ಲಗೆ ನಟಿಯಾಗಿ ನೆಲೆಕಂಡುಕೊಳ್ಳಲು ತಿಣುಕಾಡುತ್ತಿರುವ ಸನ್ನಿ ಲಿಯೋನ್ ಇದೀಗ ಪರದಾಡುವಂತಾಗಿದೆ. 'ಜಿಸ್ಮ್ 2' ಚಿತ್ರದ ಮೂಲಕ ಆರಂಭವಾದ ಅವರ ಸಿನಿ ಪಯಣ 'ಏಕ್ ಪಹೇಲಿ ಲೀಲಾ' ವರೆಗೂ ಬಂದುನಿಂತಿದೆ.

'ಏಕ್ ಪಹೇಲಿ ಲೀಲಾ' ಚಿತ್ರ ರು.40 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸಲ್ಲಿ ಸನ್ನಿ ಲಿಯೋನ್ ರಾಣಿಯಂತೆ ಮೆರೆಯುವಂತೆ ಮಾಡಿದೆ. ಇಷ್ಟೆಲ್ಲಾ ಮಿಂಚುತ್ತಿದ್ದರೂ ಸನ್ನಿ ಲಿಯೋನ್ ಅವರಿಗೆ ಇದೀಗ ಹೊಸ ಸಮಸ್ಯೆಯೊಂದು ಎದುರಾಗಿದೆ. [ಗರ್ಭಿಣಿ ಸುದ್ದಿ, ಮೌನ ಹೊರಹಾಕಿದ ಸನ್ನಿ ಲಿಯೋನ್]

ಸನ್ನಿ ಲಿಯೋನ್ ಅಭಿನಯದ ಚಿತ್ರಗಳ ಸ್ಯಾಟಲೈಟ್ ರೈಟ್ಸ್ ನ್ನು ಯಾರೂ ಮೂಸಿ ನೋಡುತ್ತಿಲ್ಲ. ಒಂದು ವೇಳೆ ಸನ್ನಿ ಅಭಿನಯದ ಚಿತ್ರಗಳ ಟಿವಿ ರೈಟ್ಸ್ ಕೊಂಡರೂ ಮಧ್ಯರಾತ್ರಿ ಬಳಿಕ ಪ್ರಸಾರ ಮಾಡಬೇಕಾಗುತ್ತದೆ. ಪ್ರೈಮ್ ಟೈಮ್ ನಲ್ಲಿ ಪ್ರಸಾರ ಮಾಡಲು ಸಾಧ್ಯವಾಗಲ್ಲ ಎಂಬ ನಿರ್ಧಾರಕ್ಕೆ ಟಿವಿ ವಾಹಿನಿಗಳು ಬಂದಿವೆ.

ಸನ್ನಿ ಸಂದರ್ಶನ ಪ್ರಸಾರ ಮಾಡಿದರೂ ಕಷ್ಟ

ಸನ್ನಿ ಸಂದರ್ಶನ ಪ್ರಸಾರ ಮಾಡಿದರೂ ಕಷ್ಟ

ಒಂದು ವೇಳೆ ಸನ್ನಿ ಲಿಯೋನ್ ಅವರ ಸಂದರ್ಶನ ಪ್ರಸಾರ ಮಾಡಿದರೂ ಕಷ್ಟ. ಏಕೆಂದರೆ ಚಾನಲ್ ಗಳಿಗಿರುವ ಫ್ಯಾಮಿಲಿ ಲುಕ್ ಗೆ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ಚಾನಲ್ ಹೆಡ್ ಗಳು ಭಾವಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಸನ್ನಿಗೆ ಪ್ರಚಾರದ ಕವರೇಜ್ ನೀಡಲು ಹಿಂದೇಟು ಹಾಕುತ್ತಿವೆ.

ವೃತ್ತಿ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ

ವೃತ್ತಿ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸನ್ನಿ ಅವರ ವೃತ್ತಿ ಬದುಕಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವಂತಿದೆ. ಟಿವಿ ರೈಟ್ಸನ್ನು ಗಮನದಲ್ಲಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡುವ ನಿರ್ಮಾಪಕರು ಸನ್ನಿ ಚಿತ್ರಗಳನ್ನು ಕೈಬಿಡುಗ ಸಾಧ್ಯತೆಗಳು ಹೆಚ್ಚಾಗಿವೆ.

ಹೀರೋಯಿನ್, ಐಟಂ ಎರಡಕ್ಕೂ ಓಕೆ

ಹೀರೋಯಿನ್, ಐಟಂ ಎರಡಕ್ಕೂ ಓಕೆ

ಸನ್ನಿ ಲಿಯೋನ್ ಎಂದರೆ ಬೆಳ್ಳಿಪರದೆ ಬೆಚ್ಚಗಾಗುತ್ತದೆ. ಯುವಕರಲ್ಲಿ ಸಖತ್ ಕ್ರೇಜ್ ಹುಟ್ಟಿಸಿರುವ ತಾರೆ. ಅತಿ ಕಡಿಮೆ ಸಮಯದಲ್ಲಿ ಚಿತ್ರೋದ್ಯಮದಲ್ಲಿ ಹೆಸರು ಮಾಡಿದ ನಟಿ. ಕೇವಲ ಹೀರೋಯಿನ್ ಆಗಿಯಷ್ಟೇ ಉಳಿಯದೆ ಐಟಂ ಸಾಂಗ್ ಮೂಲಕವೂ ರಂಜಿಸುತ್ತಿರುವ ಬೆಡಗಿ.

ರಾಖಿ ಸಾವಂತ್ ಹಂಗಾ ಅನ್ನೋದು

ರಾಖಿ ಸಾವಂತ್ ಹಂಗಾ ಅನ್ನೋದು

ಇಷ್ಟೆಲ್ಲಾ ಬೇಡಿಕೆ ಇರುವ ತಾರೆಯನ್ನು ಎಡಗೈಯಲ್ಲಿ ನಿವಾಳಿಸಿ ಬಿಸಾಕಿದ್ದರು ಡ್ರಾಮಾ ಕ್ವೀನ್ ರಾಖಿ ಸಾವಂತ್. ಒಂದು ಖಡಕ್ ಐಟಂ ಸಾಂಗ್ ಮೂಲಕ ರಾಖಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸನ್ನಿ ಲಿಯೋನ್ ನಿಮಗೆ ಪ್ರತಿಸ್ಪರ್ಧಿಯಾಗಲ್ಲವೇ ಎಂದು ಕೇಳಿದ ಪ್ರಶ್ನೆಗೆ, ರಾಖಿ ಬಿರುಸಿನಿಂದ ಉತ್ತರಿಸುತ್ತಾ, ಒಬ್ಬ ನೀಲಿ ತಾರೆಯೊಂದಿಗೆ ನನ್ನ ಹೋಲಿಕೆ ಸರಿಯಿಲ್ಲ ಎಂದಿದ್ದರು.

ಹೋಲಿಸುವುದಾದರೆ ಮಡೋನ್ನಾಗೆ ಹೋಲಿಸಿ

ಹೋಲಿಸುವುದಾದರೆ ಮಡೋನ್ನಾಗೆ ಹೋಲಿಸಿ

ನನ್ನನ್ನು ಜೆನ್ನಿಫರ್ ಲೋಫೆಜ್ ಗೋ ಅಥವಾ ಮಾಡೋನ್ನಾ ಅವರಿಗೋ ಹೋಲಿಸುವುದನ್ನು ಬಿಟ್ಟು ಈ ರೀತಿ ಥರ್ಡ್ ಗ್ರೇಡ್ ನಟಿಯೊಂದಿಗೆ ಹೋಲಿಸಿದ್ದು ಸರಿಯಿಲ್ಲ ಎಂದಿದ್ದರು. ನನ್ನ ಐಟಂ ಹಾಡು ಎಲ್ಲರ ಮನಗೆಲ್ಲುತ್ತೆ. ವಯಸ್ಕರ ಚಿತ್ರಗಳಲ್ಲಿ ನಾನು ಅಭಿನಯಿಸಲ್ಲ ಎಂದಿದ್ದರು.

More from Filmibeat

English summary
According to the reports, almost all the popular general entertainment channels (GEC's) are ignoring Sunny Leone's films and are not showing in promoting her films or even catering time slots for her interviews and other publicity coverage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X