ಅನುಪಮಾ ಗೌಡ ಮನೆ ಫಿನಿಶಿಂಗ್ ಮಾಡದೇ ಗೃಹಪ್ರವೇಶ ಮಾಡಿದ್ದು ಆ ಒಬ್ಬ ವ್ಯಕ್ತಿಗಾಗಿ..!
ಕಿರುತೆರೆ ನಟಿ, ರಾಜಾ-ರಾಣಿ ಆಂಕರ್ ಅನುಪಮಾ ಗೌಡ ಇತ್ತೀಚೆಗೆ ತನ್ನ ಕನಸಿನ ಮನೆಗೆ ಕಾಲಿಟ್ಟಿದ್ದಾರೆ. ಅದ್ದೂರಿಯಾಗಿ ಮನೆ ಗೃಹಪ್ರವೇಶ ಮಾಡಿದ್ದಾರೆ. ಅನುಪಮಾ ಅವರ ಮನೆಯ ಗೃಹಪ್ರವೇಶಕ್ಕೆ ಕಿರುತೆರೆ ತಾರೆಯರೆಲ್ಲ ಬಂದಿದ್ದರು.
ಅನುಪಮಾ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಎಲ್ಲರ ಜೊತೆಗೂ ನಗುತ್ತಾ, ಖುದಿ ಖುಷಿಯಾಗಿ ಇರುತ್ತಾರೆ. ಪಾಸಿಟಿವ್ ವೈಬ್ ಕ್ರಿಯೇಟ್ ಮಾಡುವ ನಟಿ. ಹೀಗಾಗಿ ಸ್ನೇಹಿತರು ಜಾಸ್ತಿ. ಗೃಹಪ್ರವೇಶದ ದಿನ ಬಂದಂತ ನಟಿಯರನ್ನು ನೋಡಿದರೆ ಗೊತ್ತಾಗುತ್ತೆ.

ಇತ್ತಿಚೆಗಷ್ಟೇ ತಮ್ಮ ಮನೆಯ ಗೃಹಪ್ರವೇಶದ ವಿಡಿಯೋವನ್ನು ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮನೆಯ ಕನಸು ಯಾವಾಗಿನದ್ದು, ಬೆಂಗಳೂರಿನಲ್ಲಿ ಮನೆ ತೆಗೆದುಕೊಂಡಿದ್ದಕ್ಕೆ ಎಷ್ಟು ಖುಷಿ ಇದೆ. ಅಪ್ಪನನ್ನ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬೆಲ್ಲಾ ವಿಚಾರವನ್ನು ಹಂಚಿಕೊಂಡಿದ್ದರು. ಆದರೆ ಅದಕ್ಕೂ ಬಹಳ ಮುಖ್ಯವಾಗಿ ಮನೆಯ ಗೃಹಪ್ರವೇಶ ಇಷ್ಟು ಬೇಗ ಮಾಡಿದ್ದೇಕೆ ಎಂಬ ವಿಚಾರ ಬಯಲಾಗಿದೆ.
ಮನೆ ಫಿನಿಶಿಂಗ್ ಮಾಡದೇ ಗೃಹ ಪ್ರವೇಶ
ಅನುಪಮಾ ಗೌಡ ಈ ಮೊದಲು ಅಪಾರ್ಟ್ಮೆಂಟ್ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಆದರೆ ಆಮೇಲೆ ನಿರ್ಧಾರ ಬದಲಾಗಿತ್ತು. ಇಂಡಿಪೆಂಡೆಂಟ್ ಹೌಸ್ ತೆಗೆದುಕೊಳ್ಳಬೇಕೆಂದು ನಿರ್ಧಾರ ಮಾಡಿದ್ದರು. ಅದರಂತೆ ತನ್ನ ಸೇವಿಂಗ್ಸ್ ಹಣವನ್ನೆಲ್ಲ ಹಾಕಿ, ಲೋನ್ ಮಾಡಿಸಿ ಮನೆಯನ್ನು ಕಟ್ಟಿಸಿದ್ದಾರೆ. ಆದರೆ ಇನ್ನು ಫಿನಿಶಿಂಗ್ ಆಗಿಲ್ಲ. ಆದರೂ ಗೃಹ ಪ್ರವೇಶ ಮಾಡಿ ಮುಗಿಸಿದ್ದಾರೆ.
ಸ್ಪೆಷಲ್ ಪರ್ಸನ್‌ಗಾಗಿ ಗೃಹಪ್ರವೇಶ
ಮನೆ ಫಿನಿಶಿಂಗ್ ಆಗದೇದ್ದರೂತೆ ಇಲ್ಲ, ಈ ಕಾರ್ಯಕ್ರಮದಲ್ಲಿ ನನ್ನ ಗೆಳತಿ ಓಡಾಡಬೇಕು ಎಂಬುದು ಅನುಪಮಾ ಆಸೆ. ಹೀಗಾಗಿ ಬೇಗನೇ ಗೃಹಪ್ರವೇಶ ಮಾಡಿದ್ದಾರೆ. ಆ ಗೆಳತಿ ಬೇರೆ ಯಾರೂ ಅಲ್ಲ ನೇಹಾ ಗೌಡ. ಹೌದು ನೇಹಾ ಗೌಡ ಈಗ ತುಂಬು ಗರ್ಭಿಣಿ. ಇನ್ನು ಕೆಲವೇ ದಿನಗಳಲ್ಲಿ ಡೆಲಿವರಿಯಾಗಲಿದೆ. ಹೀಗಾಗಿ ತನ್ನ ಗೆಳತಿಗಾಗಿ ಈ ಗೃಹಪ್ರವೇಶ ಮಾಡಿದ್ದಾರೆ.

ತನ್ನ ಗೆಳತಿ ಬಗ್ಗೆ ನೇಹಾ ಹೇಳಿದ್ದೇನು?
ಈ ಸಂತಸದ ಬಗ್ಗೆ ನೇಹಾ ಗೌಡ ಮಾತನಾಡಿದ್ದಾರೆ. 'ಎಷ್ಟು ಖುಷಿಯಿಂದ ಈ ಸಂಭ್ರಮವನ್ನ ಆಚರಿಸುತ್ತಿದ್ದಾಳೆ. ಅದಕ್ಕಿಂತ ಹೆಚ್ಚು ಖುಷಿ ನನಗಿದೆ. ಎಲ್ಲರೂ ಕೇಳ್ತಾ ಇದ್ರು, ಇನ್ನು ಫಿನಿಶ್ ಆಗಿಲ್ಲ, ಯಾಕೆ ಇಷ್ಟು ಬೇಗ ಮಾಡಿಸ್ತಾ ಇದ್ದೀರಾ ಅಂತ ಎಲ್ಲರು ಕೇಳ್ತಾ ಇದ್ರು. ನಂಗೋಸ್ಕರ ಅವ್ಳು ಇಷ್ಟು ಬೇಗ ಮಾಡ್ಸಿದ್ದಾಳೆ. ನಂಗೆ ಡೆಲಿವರಿ ಆಗಿಬಿಡುತ್ತದೆ. ಆಮೇಲೆ ಇಷ್ಟೆಲ್ಲ ಓಡಾಡೋದಕ್ಕೆ ಆಗಲ್ಲ. ಆದರೆ ಈ ಕಾರ್ಯಕ್ರಮಕ್ಕೆ ನೀವೂ ಬರಲೇಬೇಕು, ಓಡಾಡಲೇಬೇಕು ಅಂತ ಇಷ್ಟು ಬೇಗ ಗೃಹಪ್ರವೇಶ ಮಾಡಿದ್ದಾಳೆ. ಈ ರೀತಿಯ ನಿರ್ಧಾರ ಎಲ್ಲರೂಗೆದುಕೊಳ್ಳುವುದು ಕಷ್ಟ' ಎಂದಿದ್ದಾರೆ.
ನೇಹಾ-ಅನುಪಮಾ ಬೆಸ್ಟ್ ಫ್ರೆಂಡ್ಸ್
ಅನುಪಮಾ ಗೌಡ, ನೇಹಾ ಗೌಡ, ಇಶಿತಾ ಇವರೆಲ್ಲಾ ಬೆಸ್ಟ್ ಫ್ರೆಂಡ್ಸ್. ಸುಮಾರು ವರ್ಷದಿಂದಾನೂ ಇವರ ಫ್ರೆಂಡ್‌ಶಿಪ್ ಇದೆ. ಎಲ್ಲೇ ಹೋದರೂ ಜೊತೆಗೆ ಹೋಗ್ತಾರೆ. ಸಭೆ ಸಮಾರಂಭಗಳಲ್ಲಿ ಒಟ್ಟಾಗುತ್ತಾರೆ. ಹೀಗೆ ತಮ್ಮ ನಂಟನ್ನು ಹಾಗೇ ಕಾಪಾಡಿಕೊಂಡು ಬಂದಿದ್ದಾರೆ. ಹೀಗಾಗಿ ನೇಹಾಗೆ ಮಗು ಆಗುವುದಕ್ಕೂ ಮುನ್ನವೇ ಅನುಪಮಾ ಗೌಡ ಗೃಹ ಪ್ರವೇಶ ಮಾಡಿದ್ದಾರೆ.


Click it and Unblock the Notifications











