Sanjana Burli: ಸಂಜನಾ ಬುರ್ಲಿ 'ಪುಟ್ಟಕ್ಕನ ಮಕ್ಕಳು' ಬಿಟ್ಟ ರಿಯಲ್ ಕಾರಣ ರಿವೀಲ್!

By ಎಸ್ ಸುಮಂತ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ನಗಿಸಿದ್ದಕ್ಕಿಂತ ಅಳಿಸಿದ್ದೆ ಹೆಚ್ಚು. ಅದರ ಜೊತೆಗೆ ಹೆಣ್ಣು ಮಕ್ಕಳು ಪುರುಷನ ಮೇಲೆ ಅವಲಂಬಿತವಾಗದೇ ಬದುಕುವುದನ್ನು ತೋರಿಸಿಕೊಟ್ಟಿತ್ತು. ಗಂಡ ಮೋಸ ಮಾಡಿದರೂ ಸಮಾಜದಲ್ಲಿ ಹೇಗೆ ಗಟ್ಟಿಯಾಗಿ ನಿಲ್ಲಬೇಕು ಎಂಬುದನ್ನು ತೋರಿಸಿಕೊಟ್ಟ ಧಾರಾವಾಹಿ. ಮೂರು ಹೆಣ್ಣು ಮಕ್ಕಳನ್ನು ಒಬ್ಬಳೇ ತಾಯಿ ಸಾಕಿ ಸಲಹಿದಳು. ಆ ಪುಟ್ಟಕ್ಕನನ್ನು ನೋಡಿ ಅದೆಷ್ಟೋ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಸ್ಟ್ರಾಂಗ್ ಆದರು. ಮತ್ತಷ್ಟು ಪುಟ್ಟಕ್ಕಂದಿರು ಜನಿಸಿದರು.

ಪುಟ್ಟಕ್ಕ ಮೆಸ್ ನಡೆಸಿದರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರು. ದೊಡ್ಡ ಮಗಳಿಗೆ ಅಮ್ಮನಿಗೆ ಹೆಗಲಾಗುವುದು ಅನಿವಾರ್ಯವಾಗಿತ್ತು. ಇನ್ನಿಬ್ಬರು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನೆ ಕೊಡಿಸಿದಳು. ಸ್ನೇಹಾ ಡಿಸಿಯಾಗಬೇಕೆಂಬ ಬಯಕೆ ಹೊಂದಿದ್ದಳು. ಅದರಂತೆ ಡಿಸಿಯೂ ಆದಳು. ಆದರೆ ಡಿಸಿಯಾಗಿ ಕೆಲವೇ ದಿನಗಳಲ್ಲಿ ಸಾವು ಕೂಡ ಬಂದಿದೆ. ಅಷ್ಟಕ್ಕೂ ಸ್ನೇಹಾ ಪಾತ್ರ ಸಾಯಿಸೋದಕ್ಕೆ ನಿಜವಾದ ಕಾರಣ ಈಗ ರಿವೀಲ್ ಆಗಿದೆ.

Why Sanjana Burli Quit Zee kannada Puttakkana makkalu serial

ಪುಟ್ಟಕ್ಕನ ಸಂಕಟಕ್ಕೆ ಹೇಳತೀರದು

ಪುಟ್ಟಕ್ಕನಿಗೆ ತನ್ನ ಮೂವರು ಹೆಣ್ಣು ಮಕ್ಕಳೇ ಪ್ರಪಂಚ. ಆದರೆ ದೊಡ್ಡ ಮಗಳನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿದ್ದ ಪುಟ್ಟಕ್ಕ ಈಗೀಗ ಸರಿಯಾಗಿದ್ದರು. ಆದರೆ ಈಗ ಮತ್ತೆ ಎರಡನೇ ಮಗಳನ್ನು ಕಳೆದುಕೊಂಡಿದ್ದಾಳೆ. ಪುಟ್ಟಕ್ಕನ ನೋವನ್ನ ನೋಡಲು ಆಗುತ್ತಿಲ್ಲ. ಮಗಳನ್ನು ಕಳೆದುಕೊಂಡು ಆಕಾಶವೇ ಕಳಚಿಬಿದ್ದಂತೆ ಆಡುತ್ತಿದ್ದಾಳೆ. ಬದುಕೇ ಬರಿದಾಗಿದೆ ಎನ್ನುವಂತ ಪರಿಸ್ಥಿತಿಯಲ್ಲಿ ಇದ್ದಾಳೆ. ಆದರೆ ಪುಟ್ಟಕ್ಕನ ಸಂಕಟಕ್ಕೆ ವೀಕ್ಷಕರು ನೊಂದುಕೊಂಡಿದ್ದಾರೆ.

ಪಾತ್ರ ಸಾಯಿಸುವಂಥದ್ದು ಏನಿತ್ತು..?

ಸ್ನೇಹಾ ಸಾವು ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಿಸಿ ಪೋಸ್ಟ್ ಕೂಡ ಈಗ ಸಿಕ್ಕಿದೆ. ಹೀಗಿರುವಾಗ ಇಷ್ಟು ಬೇಗ ಸ್ನೇಹಾರನ್ನ ಸಾಯಿಸುವ ಅಗತ್ಯವೇನಿತ್ತು. ಆ ಪಾತ್ರಕ್ಕೆ ಬೇರೆ ಯಾರನ್ನಾದರೂ ತೆಗೆದುಕೊಳ್ಳಬಹುದಿತ್ತು ಎಂದೆಲ್ಲಾ ಸಲಹೆ ಕೊಡ್ತಾ ಇದಾರೆ. ಆದರೆ ಈ ಕಮೆಂಟ್‌ಗಳಿಗೆ ಹಲವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಸ್ನೇಹಾ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು. ಆದರೆ ಸಂಜನಾ ಬುರ್ಲಿ ಪಾತ್ರಕ್ಕೆ ಬೇರೊಬ್ಬರು ಬಂದಿದ್ದರೆ ನೆಗೆಟಿವ್ ಕಮೆಂಟ್ಸ್‌ ಬರ್ತಿತ್ತು. ಕೆಲವರು ಒಪ್ಪುತ್ತಾ ಇರಲಿಲ್ಲ. ಹೀಗಾಗಿ ಕಥೆಯಲ್ಲಿ ಸ್ನೇಹಾ ಪಾತ್ರವನ್ನೇ ಸಾಯಿಸಿದ್ದಾರೆ.

ಪಾತ್ರ ಅಂತ್ಯವಾಗಲೇಬೇಕಿತ್ತು!

ಸ್ನೇಹಾ ಪಾತ್ರವನ್ನು ಉಳಿಸಿದ್ದರೆ ಚೆನ್ನಾಗಿರ್ತಾ ಇತ್ತು ಅಂತ ಹಲವರು ಹೇಳಿದ್ದಾರೆ. ಎಷ್ಟೋ ಜನಕ್ಕೆ ಈ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಡಿಸಿಯಾಗಿ ಏನಾದರೂ ಸಾಧನೆ ಮಾಡುವಂತೆ ಮಾಡಿಲ್ಲ. ಇಷ್ಟು ಬೇಗ ಸಾಯಿಸಿದ್ದು ಬೇಡವಾಗಿತ್ತು ಎಂದೇ ಕಮೆಂಟ್ ಹಾಕುತ್ತಿದ್ದಾರೆ. ಆದರೆ ಸ್ನೇಹಾಳನ್ನು ಸಾಯಿಸದೇ ಪಾತ್ರಧಾರಿಯನ್ನು ಬದಲಾಯಿಸಿದರೆ ಜನ ಒಪ್ಪುವುದಕ್ಕೆ ಕಷ್ಟ ಸಾಧ್ಯವಾಗಿತ್ತು.

ಇಲ್ಲಿದೆ ನೋಡಿ ನಿಜವಾದ ಕಾರಣ

ಸಂಜನಾ ಬುರ್ಲಿ ಈ ಮೊದಲೇ ಧಾರಾವಾಹಿ ಬಿಡುವ ಬಗ್ಗೆ ಸುಳಿವು ನೀಡಿದ್ದರು. ಕಷ್ಟವಾದರೂ ಕೆಲವೊಂದು ವಿದಾಯ ಹೇಳಲೇಬೇಕು ಎಂದು ಪೋಸ್ಟ್ ಮಾಡಿದ್ದರು. ಅವರು ಸೀರಿಯಲ್ ಬಿಡುವುದು ಅಂದೇ‌ ಕನ್ಫರ್ಮ ಆಗಿತ್ತು. ಹೀಗಾಗಿ ಆ ಪಾತ್ರವನ್ನು ಸಾಯಿಸಿದ್ದಾರೆ. ಇನ್ನು ಕಮೆಂಟ್ ಬಾಕ್ಸ್‌ನಲ್ಲೇ ಒಬ್ಬರು ಕಾಮೆಂಟ್ ಪ್ರಕಾರ ಸಂಜನಾ ಬುರ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಅವರು ಧಾರಾವಾಹಿ ಬಿಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯ ತಮ್ಮ ಪೋಸ್ಟ್‌ನಲ್ಲಿ ವೈಯಕ್ತಿಕ ಕಾರಣಕ್ಕೆ ಧಾರಾವಾಹಿ ಬಿಟ್ಟಿರುವುದಾಗಿ ಹೇಳಿದ್ದಾರೆ.

More from Filmibeat

English summary
Zee kannada puttakkana makkalu Written Update on commenters. Here is the details about This is the reason why Sanjana Burli left the serial;
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X