BBK12: ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಯಾಕೆ 'ಎಸ್' ಕ್ಯಾಟಗರಿ ಟಾಪಿಕ್ ಮಾತನಾಡಲಿಲ್ಲ?

ಬಿಗ್‌ಬಾಸ್ ಮನೆಯಲ್ಲಿ ವಾರವಿಡೀ ನಡೆಯುವುದನ್ನು ನೋಡಿ ವೀಕೆಂಡ್‌ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡುತ್ತಾರೆ. ಯಾರದ್ದು ತಪ್ಪು, ಯಾಕೆ ತಪ್ಪು ಎನ್ನುವ ಬಗ್ಗೆ ತಮ್ಮ ಶೈಲಿಯಲ್ಲಿ ಚರ್ಚಿಸುತ್ತಾ ಹೋಗುತ್ತಾರೆ. ತಪ್ಪು ಮಾಡಿದವರಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಚೆನ್ನಾಗಿ ಆಡಿದವರ ಬೆನ್ನುತಟ್ಟುತ್ತಾರೆ.

ವೀಕ್ಷಕರು ವಾರದ ಎಪಿಸೋಡ್ ಎಲ್ಲವನ್ನು ನೋಡಿ ವೀಕೆಂಡ್ ಸುದೀಪ್ ಯಾವೆಲ್ಲಾ ವಿಚಾರಗಳ ಬಗ್ಗೆ ಮಾತನಾಡಬಹುದು? ಯಾವುದೆಲ್ಲಾ ಮಾತನಾಡಬೇಕು? ಯಾರಿಗೆ ಕ್ಲಾಸ್ ತಗೋಬೇಕು ಎಂದು ಕಾದು ಕೂರುತ್ತಾರೆ. ಆದರೆ ಕೆಲವೊಮ್ಮೆ ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ಸುದೀಪ್ ಕೆಲವರಿಗೆ ಮಾತ್ರ ಬೈಯ್ತಾರೆ, ಕೆಲವರು ಬಗ್ಗೆ ಮಾತನಾಡಲ್ಲ ಎನ್ನುವ ಆರೋಪ ಕೂಡ ಇದೆ. ಈ ಬಗ್ಗೆ ಸ್ವತಃ ಸುದೀಪ್ ಮಾತನಾಡಿದ್ದಾರೆ.

Why Sudeep Stayed Silent on Ashwini Gowda s Controversial Word in Bigg Boss Weekend Panchayat

ಸೀಸನ್ 12 ಆರಂಭವಾದ ಕೆಲವೇ ದಿನಗಳಲ್ಲಿ ರಕ್ಷಿತಾ ಶೆಟ್ಟಿ ಅವರನ್ನು ಅಶ್ವಿನಿ ಗೌಡ ಹಾಗೂ ಜಾಹ್ನವಿ ಟಾರ್ಗೆಟ್ ಮಾಡಿದ್ದಾರೆ. ಆಕೆಯ ವಿರುದ್ಧ ಇಬ್ಬರೂ ಆಕ್ರೋಶಗೊಂಡಿದ್ದರು. ಆಕೆಯ ಮೇಲೆ ನಾಗವಲ್ಲಿ ಕಥೆ ಕಟ್ಟಿದ್ದರು. ಆಕೆಯ ಮೇಲೆ ಜೋರಾಗಿ ಗಲಾಟೆ ಮಾಡಿದ್ದರು. ಆಕೆ ಕೂಡ ತಿರುಗೇಟು ನೀಡಿದಾಗ ಆ ಬಗ್ಗೆ ಅಶ್ವಿನಿ, ಜಾಹ್ನವಿ ಮಾತನಾಡಿಕೊಂಡಿದ್ದರು.

ರಕ್ಷಿತಾ ಬಗ್ಗೆ ಮಾತನಾಡುತ್ತಾ ಆಕೆ 'ಸ್ಲಮ್' ಎಂದು ಅಶ್ವಿನಿ ಗೌಡ ಹೇಳಿದ್ದರು. ಜಾಹ್ನವಿ ಬಳಿ ಮಾತನಾಡುತ್ತಾ ಈ ರೀತಿ ಹೇಳಿದ್ದರು. ಬಳಿಕ ಅದನ್ನು ಮ್ಯೂಟ್ ಮಾಡಿ ಹಾಟ್‌ಸ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. "ಅವಳು ಮಾಡಿದ್ದು ನಿನ್ನೆ ಇನ್ನು ನನ್ನ ತಲೆಯಲ್ಲೇ ಕೂತಿದೆ. ಹೆಂಗೆ ಆಡ್ತಿದ್ಲು ಅವ್ಳು. ತೀರ 'ಸ್ಲಮ್' ತರ ಆಡ್ತಿದ್ಲಪ್ಪ ಅವ್ಳು. ಅವಳ ಲೆವೆಲ್‌ಗೆ ನಾವೆಲ್ಲಾ ಇಳಿಯೋಕೆ ಆಗಲ್ಲ" ಎಂದು ಜಾಹ್ನವಿ ಬಳಿ ಅಶ್ವಿನಿ ಹೇಳಿದ್ದರು.

ಮತ್ತೊಮ್ಮೆ ಮಾತನಾಡುವ ವೇಳೆ ""ಅವಳಿಗೆ ಫುಲ್ ಶೇಪ್‌ ಔಟ್ ಆಗೋಯ್ತು. ಏನು ಮಾತನಾಡಲಿಲ್ಲ ಇವತ್ತು. ನಾನು ಹೇಳಲಿಲ್ವಾ ಆ "S.." ಎಂದಿದ್ದರು. ಎಸ್ ಕ್ಯಾಟಗರಿ ಎಂದು ಅಶ್ವಿನಿ ಹೇಳಿರುವುದಾಗಿ ಭಾರೀ ಚರ್ಚೆ ಆಯಿತು. ಇದೇ ವಿವಾದದ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದರು. ಆದರೆ ಈ ವೀಕೆಂಡ್ ಪಂಚಾಯ್ತಿಯಲ್ಲಿ ಈ ವಿಚಾರದ ಬಗ್ಗೆ ಸುದೀಪ್ ಮಾತನಾಡಲೇ ಇಲ್ಲ.

ಇಷ್ಟೆಲ್ಲಾ ಚರ್ಚೆ ಹುಟ್ಟುಹಾಕಿದ ಅಶ್ವಿನಿ ಗೌಡ ಪದ ಬಳಕೆ ಬಗ್ಗೆ ಸುದೀಪ್ ಯಾಕೆ ಮಾತನಾಡಲಿಲ್ಲ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡಿತ್ತು. ನ್ಯೂಸ್ ಫಸ್ಟ್ ವಾಹಿನಿ ಸಂದರ್ಶನದಲ್ಲಿ ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ. "ಈ ಶೋನಲ್ಲಿ ನನ್ನ ಜಾಗಕ್ಕೆ ಬಂದು ನಿಂತಾಗಲೂ ಅದರ ತೂಕ ಗೊತ್ತಾಗುವುದು. ಹೊರಗಡೆ ಇರುವವರು ಸಾವಿರ ಹೇಳಬಹುದು, ಅವ್ರಿಗೆ ಹೇಳಿದ್ರು, ಇವ್ರಿಗೆ ಹೇಳಲಿಲ್ಲ, ಈ ವಿಚಾರ ಮಾತನಾಡಲಿಲ್ಲ ಎನ್ನಬಹುದು. ಉದಾಹರಣೆಗೆ ಸ್ಪರ್ಧಿಯೊಬ್ಬರು 'ಎಸ್' ಅಂತ ಬಳಸಿಬಿಡ್ತಾರೆ" ಎಂದು ಸುದೀಪ್ ಪ್ರಸ್ತಾಪಿಸಿದ್ದಾರೆ.

"ಸುದೀಪ್ ಯಾಕೆ ಆ ವಿಚಾರದ ಬಗ್ಗೆ ಮಾತನಾಡಲಿಲ್ಲ ಎಂದು ಕೇಳುತ್ತಾರೆ. ಒಂದು ವೇಳೆ ನಾನು ಕೇಳಿದ್ರೆ ಏನಾಗ್ತಿತ್ತು. ಏನ್ರಿ 'ಎಸ್' ಅಂದಿದ್ರೆ, ಅಣ್ಣಾ 'ಎಸ್' ಅಂದ್ರೆ ಸಿಲ್ಲಿ ಅಣ್ಣ. ಎಷ್ಟು ಸಿಲ್ಲಿ ನೋಡಿ ಅಣ್ಣ ಆ ಹುಡುಗಿ ಎನ್ನಬಹುದು. ಆಗ ಟಾಪಿಕ್ ಹೋಯ್ತಲ್ಲ. ಇದೇ ಶೋನಲ್ಲಿ ಟಿ ಗಾಂಚಾಲಿ ಅಂತ ಬಂತು. ಟಿ ಗಾಂಚಲಿ ಅಂದ್ರೆ ಏನು ಅಂತ ಎಲ್ಲರಿಗೂ ಗೊತ್ತು. ಆದರೆ ಅಲ್ಲಿ ತಲೆ ಗಾಂಚಾಲಿ ಅಂದುಬಿಟ್ರು" ಎಂದು ಸುದೀಪ್ ವಿವರಿಸಿದ್ದಾರೆ. ಈ ಮೂಲಕ ಅಶ್ವಿ ಗೌಡ ಹೇಳಿದ 'ಎಸ್' ಕ್ಯಾಟಗರಿ ವಿಚಾರದ ಬಗ್ಗೆ ವೀಕೆಂಡ್ ಪಂಚಾಯ್ತಿಯಲ್ಲಿ ಯಾಕೆ ಮಾತನಾಡಲಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

More from Filmibeat

Read more about: sudeep bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X