'ಬಿಗ್ ಬಾಸ್' ಅರ್ಧಕ್ಕೆ ಬಿಟ್ಟು ಹೊರನಡೆದ ವೈಲ್ಡ್ ಕಾರ್ಡ್ ಸ್ಪರ್ಧಿ ವೈಷ್ಣವಿ

By Bharath Kumar

'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದಲ್ಲೊಂದು ಬೇಜಾರಿನ ಸಂಗತಿ ನಡೆದಿದೆ. ಈ ವಾರದ ಎಲಿಮಿನೇಷನ್ ಗೆ ಒಂದು ದಿನದ ಮುಂಚೆಯೇ ಬಿಗ್ ಮನೆಯಿಂದ ಸ್ಪರ್ಧಿಯೊಬ್ಬರು ಹೊರ ನಡೆದಿದ್ದಾರೆ.

ಹೌದು, ಎಂಟನೇ ವಾರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ನಟಿ ವೈಷ್ಣವಿ, ತಮ್ಮ ಆಟವನ್ನ ಅರ್ಧಕ್ಕೆ ನಿಲ್ಲಿಸಿ ಮನೆಯಿಂದ ಹೊರಬಂದಿದ್ದಾರೆ. ಕಳೆದ ಎರಡು ದಿನಗಳಿಂದ ಯಾವುದೇ ಟಾಸ್ಕ್ ನಲ್ಲಿ ಭಾಗಿಯಾಗದೇ ಇದ್ದ ವೈಷ್ಣವಿಯ ಮನವಿಗೆ ಬಿಗ್ ಬಾಸ್ ಸ್ಪಂದಿಸಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಅವಕಾಶ ಮಾಡಿಕೊಟಿದ್ದಾರೆ.

ಹೀಗಾಗಿ, 54ನೇ ದಿನ ಬಿಗ್ ಬಾಸ್ ಮನೆಯಿಂದ ವೈಷ್ಣವಿ ನಿರ್ಗಮಿಸಿದ್ದಾರೆ. ಅಷ್ಟಕ್ಕೂ, ವೈಷ್ಣವಿ ಬಿಗ್ ಮನೆಯಿಂದ ಹೊರ ಬರಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.....

ಬೆನ್ನು ನೋವಿನಿಂದ ಬಳಲುತ್ತಿದ್ದ ವೈಷ್ಣವಿ

ಬೆನ್ನು ನೋವಿನಿಂದ ಬಳಲುತ್ತಿದ್ದ ವೈಷ್ಣವಿ

ನಟಿ ವೈಷ್ಣವಿ ಬೆನ್ನಿಗೆ ಪೆಟ್ಟು ಬಿದ್ದಿದೆ. 'ಗಂಧದ ಗುಡಿ' ಟಾಸ್ಕ್ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ವೈಷ್ಣವಿಗೆ ಪೆಟ್ಟಾಗಿದ್ದು, ಸತತವಾಗಿ ಬೆನ್ನು ನೋವಿನಿಂದ ಬಳಲುತ್ತಿದ್ದರು. ಬಿಗ್ ಬಾಸ್ ವೈದ್ಯರು ಕೂಡ ವೈಷ್ಣವಿಗೆ ಚಿಕಿತ್ಸೆ ನೀಡಿ ಬೆನ್ನಿಗೆ ಬೆಲ್ಟ್ ನೀಡಿದ್ದರು.

ಮನೆಯಿಂದ ಹೊರಹೋಗಲು ನಿರ್ಧಾರ

ಮನೆಯಿಂದ ಹೊರಹೋಗಲು ನಿರ್ಧಾರ

ಬೆನ್ನು ನೋವು ಹೆಚ್ಚಿದ್ದ ಕಾರಣ ವೈಷ್ಣವಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಿರ್ಧರಿಸಿದರು. ಈ ಬಗ್ಗೆ ಬಿಗ್ ಬಾಸ್ ಗೂ ಹಲವು ಬಾರಿ ಮನವಿ ಮಾಡಿಕೊಂಡರು.

ವೈಷ್ಣವಿ ಕಣ್ಣೀರಿಗೆ ಸ್ಪಂಧಿಸಿದ ಬಿಗ್ ಬಾಸ್

ವೈಷ್ಣವಿ ಕಣ್ಣೀರಿಗೆ ಸ್ಪಂಧಿಸಿದ ಬಿಗ್ ಬಾಸ್

ಬೆನ್ನು ನೋವಿನಿಂದ ಬಳಲುತ್ತಿದ್ದ ನಟಿ ವೈಷ್ಣವಿ ''ನನ್ನಿಂದ ಆಟವಾಡಲು ಸಾಧ್ಯವಿಲ್ಲ, ನಾನು ಹೊರಗೆ ಹೋಗಬೇಕೆಂದು'' ಕಣ್ಣೀರಿಟ್ಟರು. ಕೊನೆಗೆ ವೈಷ್ಣವಿ ಅವರ ಕಣ್ಣೀರಿಗೆ ಸ್ಪಂಧಿಸಿದ ಬಿಗ್ ಬಾಸ್ ಮನೆಯಿಂದ ಹೊರ ಬರಲು ಅವಕಾಶ ಮಾಡಿಕೊಟ್ಟರು.

ಬೆನ್ನು ನೋವು ಇದ್ದರೂ ಮನೆಗೆ ಹೋಗಿದ್ದು ಯಾಕೆ?

ಬೆನ್ನು ನೋವು ಇದ್ದರೂ ಮನೆಗೆ ಹೋಗಿದ್ದು ಯಾಕೆ?

ಮೊದಲಿನಿಂದಲೂ ನಟಿ ವೈಷ್ಣವಿಗೆ ಬೆನ್ನು ನೋವು ಇದೆ. ಈ ವಿಷ್ಯವನ್ನ ಮೊದಲೇ ಬಿಗ್ ಬಾಸ್ ಆಯೋಜಕರಿಗೆ ತಿಳಿಸಲಾಗಿತ್ತು. ಹೋಗಿ ನೋಡಿ, ನೋವು ಹೆಚ್ಚಾದರೇ ಹೊರಗೆ ಕರೆದುಕೊಳ್ಳುತ್ತೇವೆ ಎಂದಿದ್ದರು. ಆ ಕಾರಣದಿಂದ ವೈಷ್ಣವಿ ಬಿಗ್ ಮನೆಗೆ ಬರಲು ಒಪ್ಪಿದ್ದರು ಎಂದು ಸ್ವತಃ ಅವರೇ ಹೇಳಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ನಟಿ

ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ನಟಿ

8ನೇ ವಾರ ನಟಿ ವೈಷ್ಣವಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶ ಮಾಡಿದ್ದರು. ಆದ್ರೆ, ಅನಾರೋಗ್ಯದ ಹಿನ್ನೆಲೆ ಈಗ ಮನೆಯಿಂದ ಹೊರಬಂದಿದ್ದು, ಮತ್ತೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶವಿಲ್ಲದಂತಾಗಿದೆ.

ತೇಜಸ್ವಿನಿ ಕೂಡ ಹೊರಬಂದು ಒಳಹೋಗಿದ್ದರು

ತೇಜಸ್ವಿನಿ ಕೂಡ ಹೊರಬಂದು ಒಳಹೋಗಿದ್ದರು

ಇದಕ್ಕೂ ಮುಂಚೆ ನಟಿ ತೇಜಸ್ವಿನಿ ಅವರನ್ನ ಕೂಡ ತುರ್ತು ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಿದ್ದರು. ತೇಜಸ್ವಿನಿ ಅವರ ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ತೇಜಸ್ವಿನಿ ಹೊರಬಂದಿದ್ದರು. ಎರಡು ದಿನದ ನಂತರ ಮತ್ತೆ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ದುರಾದೃಷ್ಟವಶಾತ್ ಅದೇ ವಾರ ತೇಜಸ್ವಿನಿ ಎಲಿಮಿನೇಟ್ ಕೂಡ ಆದರು.

More from Filmibeat

English summary
Bigg boss kannada 5 Wild card contestants Vaishnavi Walk out From Bigg boss show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X