'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರಾ ನಟಿ ತನುಶ್ರೀ ದತ್ತಾ.?
'ಆಶಿಕ್ ಬನಾಯಾ ಆಪ್ನೇ...' ಹಾಡಲ್ಲಿ ನಟ ಇಮ್ರಾನ್ ಹಶ್ಮಿ ಜೊತೆಗೆ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದ ನಟಿ ತನುಶ್ರೀ ದತ್ತಾ ಚಿತ್ರರಂಗದಿಂದ ದೂರ ಸರಿದು ವರ್ಷಗಳೇ ಉರುಳಿದೆ.
ಎಂಟು ವರ್ಷಗಳ ಕಾಲ ಯು.ಎಸ್.ಎ ನಲ್ಲಿದ್ದು ಸದ್ದು-ಸುದ್ದಿ ಮಾಡದ ತನುಶ್ರೀ ದತ್ತಾ, ಮೊನ್ನೆಮೊನ್ನೆಯಷ್ಟೇ ಭಾರತಕ್ಕೆ ಬಂದಿಳಿದರು. ಎಂಟು ವರ್ಷಗಳ ಬಳಿಕ ನಟಿ ತನುಶ್ರೀ ದತ್ತಾ ಮುಂಬೈನಲ್ಲಿ ಲ್ಯಾಂಡ್ ಆಗಲು ಕಾರಣ 'ಬಿಗ್ ಬಾಸ್' ಎನ್ನಲಾಗುತ್ತಿದೆ.
ವರ್ಕೌಟ್, ಡಯೆಟ್ ನೆಲ್ಲಾ ಬದಿಗಿಟ್ಟು ತೊಂಡೆಹಣ್ಣಿನಂತಾಗಿರುವ ತನುಶ್ರೀ ದತ್ತಾಗೆ 'ಬಿಗ್ ಬಾಸ್' ಕಡೆಯಿಂದ ಆಫರ್ ಹೋಗಿದ್ಯಂತೆ. ಹೀಗಾಗಿ, ಮರಳಿ ಮುಂಬೈಗೆ ಬಂದಿದ್ದಾರೆ ಎಂದು ಗುಲ್ಲೆಬ್ಬಿದೆ.

ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡಿದ್ಮೇಲೆ, ಅವಕಾಶಗಳಿಂದ ವಂಚಿತರಾದ ತನುಶ್ರೀ ದತ್ತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದರು. ಇದೀಗ 'ಬಿಗ್ ಬಾಸ್' ಮೂಲಕ ತನುಶ್ರೀ ದತ್ತಾ ಅದೃಷ್ಟ ಪರೀಕ್ಷೆಗೆ ರೆಡಿ ಆಗಿದ್ದಾರಾ.? ಗೊತ್ತಿಲ್ಲ.!
ಇನ್ನೆರಡು ದಿನಗಳಲ್ಲಿ 'ಬಿಗ್ ಬಾಸ್-12' ಶುರುವಾಗಲಿದೆ. 'ಬಿಗ್ ಬಾಸ್' ಮನೆಯೊಳಗೆ ತನುಶ್ರೀ ದತ್ತಾ ಹೋಗ್ತಾರಾ, ಇಲ್ವಾ ಅನ್ನೋದು ಸೆಪ್ಟೆಂಬರ್ 16 ರಂದು ಪಕ್ಕಾ ಆಗಲಿದೆ. ಅಂದ್ಹಾಗೆ, ಈ ಬಾರಿ 'ಬಿಗ್ ಬಾಸ್'ನಲ್ಲಿ ವಿಚಿತ್ರ ಜೋಡಿಗಳು ಬರ್ತಿರೋದು ನಿಮಗೆಲ್ಲ ಗೊತ್ತಿದೆ ತಾನೇ.?!


Click it and Unblock the Notifications










