'ಬೆಂಗಳೂರಿಗೆ ಆತ್ಮವಿಲ್ಲ' ಎಂದು ಕನ್ನಡಿಗರನ್ನು ಕೆರಳಿಸಿದ್ದ ಚೆಲುವೆಗೆ ಸಿಕ್ತು ಈ ಬಾರಿಯ ಬಿಗ್ ಬಾಸ್ ನಲ್ಲಿ ಅವಕಾಶ ?
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿಯೇ ಹಲವಾರು ಜನ ಬಿಗ್ ಬಾಸ್‌ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಯಾಕೆಂದರೆ ಬಿಗ್ ಬಾಸ್‌ನ ನಿಯಮಾವಳಿಯೇ ಹಾಗೇ ಇದೆ. ಮಾನದಂಡಕ್ಕೆ ಕೇವಲ ಹೆಸರು ಮಾತ್ರ ಮುಖ್ಯವಲ್ಲ ಬದಲಿಗೆ ಆ ಹೆಸರಿಗೊಂದು ಸಮ್ಮೋಹಕವಾದ ಶಕ್ತಿ ಇರಬೇಕು.. ಆ ಹೆಸರು ಕೇಳಿದರೆ ಸಾಕು ಜನಸಾಮಾನ್ಯರು..
ಕಾರ್ಯಕ್ರಮ ನೋಡಲು ಬಂದು ಕೂರಬೇಕು.. ಇಲ್ಲದಿದ್ದರೆ ಯಾವುದಾದರೂ ವಿವಾದ ಮಾಡಿಕೊಂಡಿರಬೇಕು.. ಸದಾ ಕಾಲ ಕಾಲು ಕೆರೆದು ಜಗಳಕ್ಕೆ ನಿಲ್ಲುವ ವಿವಾದಿತ ವ್ಯಕ್ತಿಯಾಗಿರಬೇಕು.. ಹೀಗಿದ್ದಾಗಲೇ ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಾಗುವುದು ಎನ್ನುವ ಮಾತು ಕಿರುತೆರೆಯಲ್ಲಿ ಕೇಳಿ ಬರುತ್ತೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು.

ಯಾಕೆಂದರೆ.. ಆ ಭಾಷೆ ಈ ಭಾಷೆ ಎನ್ನದೇ ಎಲ್ಲ ಭಾಷೆಯ ಸ್ಫರ್ಧಿಗಳ ಲಿಸ್ಟ್ ಮೇಲೆ ಕಣ್ಣಾಡಿಸಿದರೆ ಅಲ್ಲಿ ಕಾಂಟ್ರವರ್ಸಿಯಲ್ ವ್ಯಕ್ತಿತ್ವಗಳೇ ಹೆಚ್ಚು ಕಣ್ಣಿಗೆ ಕಾಣಿಸುತ್ತಾವೆ. ಹೀಗಾಗಿ ಈ ಬಾರಿ ಕೂಡ ಇದೇ ತರಹದ ವ್ಯಕ್ತಿಗಳನ್ನು ನಾವು ನೀವು ಮನೆಯಲ್ಲಿ ನೋಡಬಹುದು. ಇದಕ್ಕೆ ಪುರಾವೆ ಎನ್ನುವಂತೆ ಈಗಾಗಲೇ ಕೆಲವರ ಹೆಸರುಗಳು ಕೂಡ ಚಾಲ್ತಿಯಲ್ಲಿವೆ. ಆ ಪೈಕಿ ಅಪೂರ್ವ ಮುಖಿಜಾ ಕೂಡ ಒಬ್ಬರು.
ಹೌದು, ಅಪೂರ್ವ ಮುಖೀಜಾ .. ಉತ್ತರ ಭಾರತದಲ್ಲಿ ದಿ ರೆಬಲ್ ಕಿಡ್ ಎಂದೇ ಪ್ರಖ್ಯಾತರಾದವರು. ಈ ವರ್ಷದ ಆರಂಭದಲ್ಲಿ ಮತ್ತೊಬ್ಬ ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಪೋಷಕರ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾಗ ಅಲ್ಲಿಯೇ ಮೈ ಕುಲುಕಿಸಿಕೊಂಡು ನಕ್ಕವರಲ್ಲಿ ಇವರು ಕೂಡ ಒಬ್ಬರು.
ಈ ಕಾರ್ಯಕ್ರಮದ ನಂತರ ದೇಶವ್ಯಾಪಿ ಆಕ್ರೋಶಕ್ಕೆ ಗುರಿಯಾದ ಅಪೂರ್ವ ಮುಖಿಜಾ ಹಿಂದೊಮ್ಮೆ ಬದುಕಲು ಬೆಂಗಳೂರು ಯೋಗ್ಯವಾದ ಊರಲ್ಲ ಎಂದು ಹೇಳಿದ್ದರು. ಆ ನಗರಕ್ಕೆ ಆತ್ಮ ಇಲ್ಲ.. ಕನ್ನಡ ಗೊತ್ತಿಲ್ಲ ಎಂದು ಆಟೋ ಚಾಲಕ ನನ್ನ ಜೊತೆ ಮಾತನಾಡಲಿಲ್ಲ ಎಂದು ಹೇಳಿದ್ದ ಅಪೂರ್ವ ಬೆಂಗಳೂರನ್ನು ನಾನು ಯಾವತ್ತು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದರು. ಈ ಮೂಲಕ ಕನ್ನಡಿಗರನ್ನು ಕೆರಳಿಸಿದ್ದರು. ಆಕ್ರೋಶಕ್ಕೆ ಗುರಿಯಾಗಿದ್ದರು.
ಇಂಥಾ ಅಪೂರ್ವ ಮುಖಿಜಾ ಈ ಬಾರಿಯ ಹಿಂದಿ ಬಿಗ್ ಬಾಸ್ ಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಇದಕ್ಕೆ ಪೂರಕವಾಗಿ ಖುದ್ದು ಅಪೂರ್ವ ಮುಖಿಜಾ ಈ ವಿಚಾರದ ಕುರಿತು ಮಾತನಾಡಿದ್ದಾರೆ ಕೂಡ. ಈ ಕುರಿತು ''ಪಿಂಕ್ ವಿಲ್ಲಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಪೂರ್ವ ಮುಖಿಜಾ ಬಿಗ್ ಬಾಸ್‌ದಿಂದ ಆಫರ್ ಬಂದ ವಿಚಾರವನ್ನು ತಳ್ಳಿ ಹಾಕಿಲ್ಲ. ಬದಲಿಗೆ ಬಿಗ್ ಬಾಸ್‌ದಿಂದ ನನಗೆ ಕರೆ ಬಂದಿದ್ದು ನಿಜಾ ಆದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸುಲಭದ ಮಾತಲ್ಲ ಭಾವನಾತ್ಮಕವಾಗಿ ನಾವು ತುಂಬಾ ಸ್ಟ್ರಾಂಗ್ ಆಗಿರಬೇಕು ಎಂದು ಹೇಳಿದ್ದಾರೆ.

ನಾನು ಯಾವತ್ತು ಇಲ್ಲ ಎಂದು ಹೇಳಿಲ್ಲ ಬಂದಿರುವ ಅವಕಾಶವನ್ನು ಕೂಡ ನಿರಾಕರಿಸಿಲ್ಲ ಆದರೆ ನಾನು ತುಂಬಾ ಯೋಚನೆ ಮಾಡುತ್ತೇನೆ, ನನ್ನಲ್ಲಿನ ಭಯ ಆತಂಕ ಭಯ ಇದಕ್ಕೆ ಕಾರಣ ಇರಬಹುದು ಎಂದು ಹೇಳಿರುವ ಅಪೂರ್ವ ಹಣ ಎಲ್ಲದಕ್ಕಿಂತ ಮುಖ್ಯ ಅವರು ಹೆಚ್ಚಿನ ಹಣ ನನಗೆ ಕೊಡಲು ಸಿದ್ಧರಿದ್ದರೆ ನಾನು ಭಾಗವಹಿಸಲು ಸಿದ್ದ ಎಂದು ಹೇಳಿದ್ದಾರೆ.
ಅಂದ್ಹಾಗೇ ಅಪೂರ್ವ ಮುಖಿಜಾ ಬೆಂಗಳೂರಿನಲ್ಲಿ ಕೆಲ ಕಾಲ ವಾಸ ಇದ್ದರು. ಆಗಿನ್ನೂ ಅವರಿಗೆ 23ರ ಹರೆಯ. ಬೆಂಗಳೂರಿನಲ್ಲಿ ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಪೂರ್ವಗೆ ಬೆಂಗಳೂರಿನ ನಿಮ್ಮ ಅನುಭವದ ಬಗ್ಗೆ ಮಾತನಾಡಿ ಎಂದಾಗ ಬೆಂಗಳೂರಿನ ಬಗ್ಗೆ ಬಾಯಿಗೆ ಬಂದಂತೆ ಅಪೂರ್ವ ಮಾತನಾಡಿದ್ದರು. ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು.


Click it and Unblock the Notifications











