For Quick Alerts
  ALLOW NOTIFICATIONS  
  For Daily Alerts

  ಚಿರಂತನ್ ಗಾಗಿ ಮನೆ ಬಿಟ್ಟು ಬರುತ್ತಾರಾ ಚಂಚಲ?

  |

  ಜಾನಕಿ ಪೊಲೀಸ್ ಎನ್ನುವ ಸತ್ಯ ಶಾಂತರಾಜುಗೆ ಗೊತ್ತಾಗಿದೆ. ಚಂಚಲ ಮದುವೆ ಮುರಿದು ಬೀಳುವ ಲಕ್ಷಣ ಕಾಣುತ್ತಿದೆ. ರಾಜು ಚೌಧರಿ ಮಗ ಮತ್ತು ಚಂಚಲ ಮದುವೆ ಒಪ್ಪಿಗೆ ನೀಡಿಲ್ಲ. ಮುಂದೇನಾಗುತ್ತೆ ಎನ್ನುವ ಕುತೂಹಲ ಪ್ರೇಕ್ಷರಲ್ಲಿ ಮನೆ ಮಾಡಿದೆ.

  ಪೊಲೀಸ್ ಎಂದರೆ ಭಯ ಪಡುವ ಶಾಂತರಾಜು ಜಾನಕಿ ಮುಂದೆ ಎಲ್ಲಾ ಸತ್ಯವನ್ನು ಹೇಳಿದ್ದಾರೆ. ಪೊಲೀಸ್ ಮನೆಯಲ್ಲೆ ಇದ್ದೀನಿ ಎನ್ನುವ ಸತ್ಯ ಗೊತ್ತಾಗುತ್ತಿದಂತೆ ಶಾಂತರಾಜುಗೆ ಏನು ಮಾಡಬೇಕು ಎಂದು ತಿಳಿಯದೆ ಗಾಬರಿಯಲ್ಲಿದ್ದಾರೆ.

  ಜಾನಕಿಯೇ ಸೊಸೆ ಎಂದು ನಿರಂಜನ್ ಮನೆಯವರಿಗೆ ಗೊತ್ತಾಗುತ್ತಾ?

  ಚಂಚಲ ಮದುವೆ ವಿಚಾರದ ಮಾತುಕತೆ ಜೋರಾಗಿ ನಡೆಯುತ್ತಿದೆ. ರಾಜು ಚೌಧರಿ ಯಾವುದೆ ಕಾರಣಕ್ಕು ಚಂಚಲ ಅವರನ್ನು ಸೊಸೆಯಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಮುಂದೇನಾಗುತ್ತೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ. ಮುಂದೆ ಓದಿ..

  ಮನೆ ಬಿಟ್ಟುಹೊರಟ ಶಾಂತರಾಜು

  ಮನೆ ಬಿಟ್ಟುಹೊರಟ ಶಾಂತರಾಜು

  ಕೊಲೆ ಮಾಡಿದ್ದೀನಿ ಎಂದು ಊರು ಊರು ಅಲೆದುಕೊಂಡೆ ಇರುವ ನಿರಂಜನ್ ತಂದೆ ಶಾಂತರಾಜು ಮತ್ತೆ ಮನೆಗೆ ಬಂದಿದ್ದರು. ಆದ್ರೀಗ ಮನೆಯಿಂದ ಹೊರಟು ನಿಂತಿದ್ದಾರೆ. ಪೊಲೀಸ್ ಎಂದರೆ ಭಯಪಡುವ ಶಾಂತರಾಜುಗೆ ಪೊಲೀಸ್ ಮನೆಯಲ್ಲೆ ಇದ್ದೀನಿ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗಿದೆ ರಾತ್ರೋ ರಾತ್ರಿ ಮನೆ ಬಿಟ್ಟು ಹೊರಟಿದ್ದಾರೆ.

  ಜಾನಕಿ ಮೇಲೆಯೆ ಅನುಮಾನ ಪಟ್ಟ ಪತಿ ನಿರಂಜನ್

  ಶಾಂತರಾಜು ಬಗ್ಗೆ ಗೊತ್ತಾಯಿತು ಭಾರ್ಗಿಗೆ

  ಶಾಂತರಾಜು ಬಗ್ಗೆ ಗೊತ್ತಾಯಿತು ಭಾರ್ಗಿಗೆ

  ಎಲ್ಲಿಂದರಲ್ಲಿ ಅಲೆದಾಡುತ್ತ, ಊರು ಊರು ಸುತ್ತಾಡುತ್ತಿದ್ದ ಶಾಂತರಾಜು ಎಲ್ಲಿದ್ದಾರೆ ಎನ್ನುವ ಮಾಹಿತಿ ಭಾರ್ಗಿ ಅವರಿಗೆ ಗೊತ್ತಿರಲ್ಲಿಲ್ಲ. ಶಾಂತರಾಜು ಅವರನ್ನು ಹುಡುಕುತ್ತಿದ್ದ ಭಾರ್ಗಿ ಅವರಿಗೆ ವಿಚಾರ ಗೊತ್ತಾಗಿದೆ. ಭಾರ್ಗಿ ಕಡೆಯವರು ಶಾಂತ ರಾಜು ಇರುವ ಮಾಹಿತಿಯನ್ನು ಭಾರ್ಗಿಗೆ ನೀಡಿದ್ದಾರೆ. ಮನೆಯಿಂದ ಹೊರಟ ಶಾಂತರಾಜು ಅವರ ನಡೆಯನ್ನು ಗಮನಿಸುತ್ತಿದ್ದಾರೆ.

  ಶಾಂತರಾಜು ಜೊತೆ ಮಾತನಾಡಬೇಕು ಎಂದಿದ್ದ ಜಾನಕಿ

  ಶಾಂತರಾಜು ಜೊತೆ ಮಾತನಾಡಬೇಕು ಎಂದಿದ್ದ ಜಾನಕಿ

  ಶಾಂತರಾಜು ಈಗಾಗಲೆ ಕೊಲೆ ಮಾಡಿರುವ ವಿಚಾರವನ್ನು ಜಾನಕಿ ಬಳಿ ಹೇಳಿದ್ದಾರೆ. ಇದರ ನಡುವೆ ಸಂತೋಷ್ ಶಾರ್ದೂಲ್ ಕೊಲೆ ವಿಚಾರದ ಒಂದಿಷ್ಟು ಫೈಲ್ ಗಳ ಪರಿಶೀಲನೆಗೆ ಜಾನಕಿ ಬಳಿ ತಂದು ಕೊಟ್ಟಿದ್ದಾರೆ. ಇದೆಲ್ಲ ಆದ ನಂತರ ಜಾನಕಿ ಶಾಂತರಾಜು ಬಳಿ ಮಾತನಾಡಬೇಕೆಂದು ರೂಮಿಗೆ ಹೋದರೆ ಶಾಂತರಾಜು ನಿದ್ದೆಯಲ್ಲಿದ್ದಾರೆ, ಹಾಗಾಗಿ ಬೆಳಗ್ಗೆ ಮಾತನಾಡಲು ಪ್ಲಾನ್ ಮಾಡಿದ್ದಾರೆ ಜಾನಕಿ. ಆದ್ರೆ ಆಗಲೆ ಶಾಂತರಾಜು ಮನೆಬಿಟ್ಟು ತೆರಳಿಸಿದ್ದಾರೆ.

  ರೋಚಕ ತಿರುವು ಪಡೆದ ಮಗಳು ಜಾನಕಿ : ಕೋರ್ಟ್ ಗೆ ಎಂಟ್ರಿ ಕೊಟ್ಟ ಸಿ ಎಸ್ ಪಿ

  ಗೊಂದಲದಲ್ಲಿ ಚಂಚಲ ಮದುವೆ

  ಗೊಂದಲದಲ್ಲಿ ಚಂಚಲ ಮದುವೆ

  ಚಂಚಲ ಮದುವೆ ವಿಚಾರ ಮತ್ತಷ್ಟು ಕಠಿಣವಾಗಿದೆ. ಮಾಜಿ ಗೃಹ ಸಚಿವ ರಾಜು ಚೌಧರಿ ಮಗ ಚಿರಂತನ್ ಅವರನ್ನು ಪ್ರೀತಿಸುತ್ತಿದ್ದರು. ಆದ್ರೀಗ ರಾಜು ಚೌಧರಿ ಚಂಚಲ ಅವರನ್ನು ಸೊಸೆಮಾಡಿಕೊಳ್ಳಲು ತಯಾರಿಲ್ಲ. ರಾಜು ಚೌಧರಿ ಒಪ್ಪಿಗೆ ನೀಡದಿದ್ರೆ, ಚಿರಂತನ್ ಅವರನ್ನು ಕೆರೆದುಕೊಂಡು ಬಂದು ಮಗಳ ಜೊತೆ ನಿಶ್ಚಿತಾರ್ಥ ಮಾಡಿಸಲು ಸಿದ್ಧರಾಗಿದ್ದಾರೆ ಭಾರ್ಗಿ. ಮತ್ತೊಂದೆಡೆ ಚಂಚಲ ಮನೆಬಿಟ್ಟು ಬಂದರೆ ಸೊಸೆ ಎಂದು ಒಪ್ಪಿಕೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.

  ಚಿರಂತನ್ ಜೊತೆ ಚಂಚಲ ಮದುವೆಯಾಗುತ್ತಾ?

  ಚಿರಂತನ್ ಜೊತೆ ಚಂಚಲ ಮದುವೆಯಾಗುತ್ತಾ?

  ಚಿರಂತನ್ ಮತ್ತು ಚಂಚಲ ಮದುವೆಗೆ ಇಬ್ಬರು ಮನೆಯಲ್ಲೂ ಒಪ್ಪಿಗೆ ಸಿಕ್ಕಿಲ್ಲ. ಹಾಗಾಗಿ ಇಬ್ಬರ ಮದುವೆಯಾಗುತ್ತಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಮನೆಯವರ ಕಿತ್ತಾಟದ ನೋಡಲಾಗದೆ ಇಬ್ಬರು ಸಹ ಮನೆಯವರ ಒಪ್ಪಿಗೆ ಇಲ್ಲದೆ ಮದುವೆಯಾಗುತ್ತಾರಾ ಎನ್ನುವ ಅನುಮಾನ ಕೂಡ ಇದೆ.

  English summary
  Will chanchala and chiranthan tie the knot in Magalu Janaki Kannada serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X