ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ 'ಕೋದಂಡರಾಮ' ನಟಿ ?
ಕನ್ನಡದಲ್ಲಿ ಮತ್ತೆ ''ಬಿಗ್ ಬಾಸ್'' ಜಾತ್ರೆ ಆರಂಭವಾಗುತ್ತಿದೆ. ನಿನ್ನೆ [ ಆಗಸ್ಟ್ 15 ] ಸ್ವಾತಂತ್ರೋತ್ಸವದ ಹಿನ್ನೆಲೆ ಈ ಬಾರಿಯ ಲೋಗೊ ಅನಾವರಣ ಮಾಡಲಾಗಿದೆ. ಇನ್ನೂ ಮಲಯಾಳಂನಲ್ಲಿ ಈಗಾಗಲೇ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಿದ್ದು ಹಿಂದಿಯಲ್ಲಿ ಈ ಆಗಸ್ಟ್ 23ರಿಂದ ''ಬಿಗ್ ಬಾಸ್'' ಶುರುವಾಗಲಿದೆ. ತೆಲುಗಿನಲ್ಲಿ ಸೆಪ್ಟೆಂಬರ್ 7ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಈ ಹಿನ್ನೆಲೆ ಕನ್ನಡ.. ಹಿಂದಿ ಮತ್ತು ತೆಲುಗಿನಲ್ಲಿ ಯಾರೆಲ್ಲಾ ಈ ಬಾರಿ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡಬಹುದು ಎನ್ನುವ ಕುತೂಹಲ ಗರಿಗೆದರಿದೆ. ಯಾಕೆಂದರೆ.. ''ಬಿಗ್ ಬಾಸ್'' ಅಂದ್ರೇನೇ ವಿವಾದಿತ ವ್ಯಕ್ತಿತ್ವಗಳ ಗೂಡು.

ಇದಕ್ಕೆ ಕೈಗನ್ನಡಿ ಎಂಬಂತೆ ಈ ಹಿಂದೆ ಹಲವಾರು ವಿವಾದಾತ್ಮಕ ವ್ಯಕ್ತಿಗಳು ಈ ಮನೆಯಲ್ಲಿ ದರ್ಶನ ನೀಡಿದ್ದಾರೆ. ಮನೆಯಲ್ಲಿ ಕೂಡ ರಂಪ ರಾಮಾಯಣ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಆ ನಂತರ ಅವರ ಕಥೆ ಅದೇನಾಯ್ತು ಎನ್ನುವುದು ಅವರಿಗೆ ಗೊತ್ತಾದರು ಕೂಡ ಸದ್ಯ ಈ ಬಾರಿ ಕೂಡ ಎಂದಿನಂತೆ ಹಲವರ ಹೆಸರು ಚರ್ಚೆಯಲ್ಲಿದೆ. ಆ ಪೈಕಿ ''ಫ್ಲೋರಾ ಸೈನಿ'' ಹೆಸರು ಕೂಡ ಒಂದು.
ಹೌದು. ಫ್ಲೋರಾ ಸೈನಿ ಅಲಿಯಾಸ್ ಆಶಾ ಸೈನಿ. ಚಂಡೀಗಡನ ಚೆಲುವೆ. 1999ರಲ್ಲಿ ತೆಲುಗಿನ ''ಪ್ರೇಮಕೋಸಂ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಫ್ಲೋರಾ ಆ ನಂತರ ನಾಯಕಿಯಾಗಿ ಹೆಚ್ಚು ಕಡಿಮೆ 50 ಚಿತ್ರಗಳನ್ನು ಮಾಡಿದರು. ತೆಲುಗಿನಿಂದ ಆ ನಂತರ ಕನ್ನಡ ಚಿತ್ರರಂಗಕ್ಕೂ ಕೂಡ ವಲಸೆ ಬಂದಿದ್ದ ಫ್ಲೋರಾ ಸೈನಿ, ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅಭಿನಯದ ''ಕೋದಂಡರಾಮ'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ''ಸಂಗೀತಾ'' ಪಾತ್ರವನ್ನು ನಿರ್ವಹಿಸಿದ್ದರು.
ಆ ನಂತರ ''ಗಿರಿ''.. ''ನಮ್ಮಣ್ಣ''.. ''ವ್ಹಾರೇ ವ್ಹಾ''.. ''ಸಿಐಡಿ ಈಶಾ''.. ಚಿತ್ರಗಳಲ್ಲಿ ಕೂಡ ಫ್ಲೋರಾ ಆಕ್ಟ್ ಮಾಡಿದ್ದರು. ಇಂಥಾ ಫ್ಲೋರಾ ಸೈನಿ ಈ ಬಾರಿ ಕೂಡ ನಾಗಾರ್ಜುನ ಸಾರಥ್ಯದಲ್ಲಿ ಸೆಪ್ಟೆಂಬರ್ 7ರಿಂದ ಶುರುವಾಗಲಿರುವ ತೆಲುಗು ''ಬಿಗ್ ಬಾಸ್''ನಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ''ottplay''.. ''ಟಿವಿ9 ತೆಲುಗು'' ಸೇರಿ ಅನೇಕ ಮಾಧ್ಯಮಗಳು ಈ ಕುರಿತು ವರದಿಯನ್ನು ಮಾಡಿವೆ.
ಅಂದ್ಹಾಗೇ ಚಿತ್ರರಂಗದಿಂದ ತುಸು ಅಂತರ ಕಾಪಾಡಿಕೊಂಡಿರುವ ಫ್ಲೋರಾ ವೆಬ್ ಸರಣಿಗಳತ್ತ ಹೆಚ್ಚು ವಾಲಿದ್ದಾರೆ. ಆ ಪೈಕಿ ಇವರ ಕೆಲ ವೆಬ್ ಸೀರಿಸ್ ನೋಡಲು ಎರಡು ಕಣ್ಣು ಸಾಲದು. ಇದು ಹೊರತು ಪಡಿಸಿದರೆ ''ಮಾಯಾನಗರಿ''.. ''ಆರ್ಯ''.. ''ರಾನಾ ನಾಯ್ಡು'' ಅಂತಹ ವೆಬ್ ಸರಣಿಗಳಲ್ಲಿ ಕೂಡ ಫ್ಲೋರಾ ಕಾಣಿಸಿಕೊಂಡಿದ್ದಾರೆ.

ಇನ್ನು ವ್ಯೆಯಕ್ತಿಕ ಜೀವನದಲ್ಲಿ ಕೂಡ ವಿವಾದಗಳನ್ನು ಮಾಡಿಕೊಂಡವರು ಫ್ಲೋರಾ ಸೈನಿ. ಖ್ಯಾತ ನಿರ್ಮಾಪಕ ಗೌರಂಗ್ ದೋಷಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಫ್ಲೋರಾ ಆ ನಂತರ 2023ರಲ್ಲಿ ತಮ್ಮ ಭಯಾನಕ ಅನುಭವ ಹಂಚಿಕೊಂಡಿದ್ದರು. ಗೌರಂಗ್ ದೋಷಿ ವಿರುದ್ದ ಕಿರುಕುಳದ ಆರೋಪ ಮಾಡಿದ್ದರು. ಆ ನಂತರ ಹೆಸರೇಳದೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಫ್ಲೋರಾ ಸೈನಿ 14 ತಿಂಗಳು ನರಕಯಾತನೆ ಅನುಭವಿಸಿದ್ದಾಗಿ ಹೇಳಿದ್ದರು. ಮನೆಯಲ್ಲಿ ನನ್ನ ಕೂಡಿ ಹಾಕಲಾಗಿತ್ತು ನನ್ನ ಮೇಲೆ ಹಲ್ಲೆ ನಡೆದಿತ್ತು ಎಂದು ಕೂಡ ಹೇಳಿದ್ದರು.
ಫ್ಲೋರಾ ಸೈನಿಯ ಬದುಕಿನ ಈ ಎಲ್ಲಾ ಅಂಶಗಳನ್ನು ಈ ಬಾರಿ ತೆಲುಗು ''ಬಿಗ್ ಬಾಸ್'' ನಲ್ಲಿ ಇವರಿಗೆ ಮಣೆ ಹಾಕಲಾಗುತ್ತಿದೆ ಎನ್ನುವ ಮಾತು ಸದ್ಯ ಆಂಧ್ರ ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿದೆ. ನಿಜಕ್ಕೂ ಫ್ಲೋರಾ ಸೈನಿ ಈ ಬಾರಿ '' ಬಿಗ್ ಬಾಸ್'' ಮನೆಗೆ ಹೋಗ್ತಾರಾ ಎನ್ನುವುದಕ್ಕೆ ಉತ್ತರ ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ.


Click it and Unblock the Notifications











