For Quick Alerts
  ALLOW NOTIFICATIONS  
  For Daily Alerts

  ಈ ಪ್ರಶ್ನೆಗೆ ಉತ್ತರ ಕೊಟ್ಟರೆ 1 ಕೋಟಿ ಗೆಲ್ಲಲಿದ್ದಾರೆ 19 ವರ್ಷದ ಯುವಕ

  |
  ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರೆ ಕೋಟಿ ಗೆಲ್ಲಲಿದ್ದಾನೆ ಈ ಯುವಕ | FILMIBEAT KANNADA

  ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿ ಕುತೂಹಲವಾಗಿ ಸಾಗುತ್ತಿದೆ. ಕನ್ನಡದಲ್ಲಿ ಒಂದು ಕೋಟಿ ಪ್ರಶ್ನೆಯ ಸನಿಹಕ್ಕೆ ಸದ್ಯಕ್ಕೆ ಯಾರೂ ಬಂದಿಲ್ಲ. ಆದರೆ ಹಿಂದಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಒಂದು ಕೋಟಿ ಗೆಲ್ಲುವ ಹಂತಕ್ಕೆ ಸ್ಪರ್ಧಿಯೊಬ್ಬ ಬಂದು ನಿಂತಿದ್ದಾನೆ.

  ಹೌದು, 50 ಲಕ್ಷ ಗೆದ್ದುಕೊಂಡಿರುವ ಉತ್ತರ ಪ್ರದೇಶದ ಯುವಕ ಹಿಮಾಂಶು ಈಗ ಒಂದು ಕೋಟಿ ಗೆಲ್ಲುವ ಹಾದಿಯಲ್ಲಿದ್ದಾರೆ. ನಿನ್ನೆಯ ಆಟದಲ್ಲಿ ಹದಿನಾಲ್ಕು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಅಚ್ಚರಿ ನೀಡಿದ್ದ ಹಿಮಾಂಶು ಈಗ ಹದಿನೈದನೇ ಪ್ರಶ್ನೆಗೆ ಉತ್ತರಿಸಲು ತಯಾರಾಗಿದ್ದಾನೆ.

  ಯುವ ಸಂಸದರಿಗೆ ನಿಜಕ್ಕೂ 'ಹಾಟ್ ಸೀಟ್‌' ಆದ ಕನ್ನಡದ ಕೋಟ್ಯಧಿಪತಿ!ಯುವ ಸಂಸದರಿಗೆ ನಿಜಕ್ಕೂ 'ಹಾಟ್ ಸೀಟ್‌' ಆದ ಕನ್ನಡದ ಕೋಟ್ಯಧಿಪತಿ!

  ಅಚ್ಚರಿ ಅಂದ್ರೆ ಹಿಮಾಂಶು ಎದುರಿಸಿದ ಮೊದಲನೇ ಪ್ರಶ್ನೆಗೆ ಲೈಫ್ ಲೈನ್ ಬಳಸಿಕೊಂಡಿದ್ದರು. ಈಗ ಹಿಮಾಂಶು ಬಳಿ ಯಾವುದೇ ಲೈಫ್ ಲೈನ್ ಇಲ್ಲ. ಆದರೂ ಕೋಟಿ ಗೆಲ್ಲುವ ಭರವಸೆ ಹುಟ್ಟಿಕೊಂಡಿದೆ. ಅಷ್ಟಕ್ಕೂ, ಹಿಮಾಂಶು ಆಟ ಹೇಗಿತ್ತು? ಮುಂದೆ ಓದಿ....

  ಒಟ್ಟಾರೆ ಬಹುಮಾನ ಎಷ್ಟು?

  ಒಟ್ಟಾರೆ ಬಹುಮಾನ ಎಷ್ಟು?

  ಕೌನ್ ಬನೇಗಾ ಕರೋಡ್ ಪತಿ 11ನೇ ಆವೃತ್ತಿಯ ಒಟ್ಟಾರೆ ಬಹುಮಾನದ ಮೊತ್ತ 7 ಕೋಟಿ. ಕಳೆದ ಐದು ಆವೃತ್ತಿಗಳಿಂದ ಬಹುಮಾನದ ಮೊತ್ತ ಏಳು ಕೋಟಿ ನಿಗದಿ ಮಾಡಲಾಗಿದೆ. 2013, 2014, 2017, 2018 ಹಾಗೂ 2019ನೇ ವರ್ಷವೂ 7 ಕೋಟಿ ಅಂತಿಮ ಮೊತ್ತ.

  ಹಿಮಾಂಶು ಎದುರು ಎರಡು ಪ್ರಶ್ನೆ

  ಹಿಮಾಂಶು ಎದುರು ಎರಡು ಪ್ರಶ್ನೆ

  ಉತ್ತರ ಪ್ರದೇಶದ 19 ವರ್ಷದ ಯುವಕ ಹದಿನಾಲ್ಕು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ 50 ಲಕ್ಷ ಗೆದ್ದಿದ್ದಾನೆ. ಈಗ ಇನ್ನು ಎರಡು ಪ್ರಶ್ನೆ ಬಾಕಿಯಿದೆ. ಹದಿನೈದನೇ ಪ್ರಶ್ನೆ ಉತ್ತರ ಕೊಟ್ಟರೆ 1 ಕೋಟಿ ಮತ್ತು ಹದಿನಾರನೇ ಪ್ರಶ್ನೆಗೆ ಸರಿ ಉತ್ತರ ಕೊಟ್ಟರೆ 7 ಕೋಟಿ ಸಿಗಲಿದೆ.

  ಬಹುಮುಖ್ಯ ಬದಲಾವಣೆ ಜೊತೆ ಬರ್ತಿದೆ 'ಬಿಗ್ ಬಾಸ್ ಕನ್ನಡ-7'ಬಹುಮುಖ್ಯ ಬದಲಾವಣೆ ಜೊತೆ ಬರ್ತಿದೆ 'ಬಿಗ್ ಬಾಸ್ ಕನ್ನಡ-7'

  ಹೆಚ್ಚು ಹಣ ಗಳಿಸಿರುವವರ ಪಟ್ಟಿ

  ಹೆಚ್ಚು ಹಣ ಗಳಿಸಿರುವವರ ಪಟ್ಟಿ

  ಹರ್ಷವರ್ಧನ್ ನವತೆ ಮೊದಲ, ವಿಜಯ್ ರೌಲ್ ಮತ್ತು ಅರುಂಧತಿ, ರವಿ ಮೋಹನ್ ಸೈನಿ ಒಂದು ಕೋಟಿ ಗೆದ್ದಿದ್ದರು. ಸುಶೀಲ್ ಕುಮಾರ್ 5 ಕೋಟಿ ಗೆದ್ದಿದ್ದರು. ಸನ್ಮಿತ್ ಕೌರ್ 5 ಕೋಟಿ ಗಳಿಸಿದ್ದರು. ಅಚೀನ್ ಮತ್ತು ಸಾರ್ಥಕ್ ನರುಲಾ 7 ಕೋಟಿ ಗೆದ್ದಿದ್ದರು.

  ಕೋಟ್ಯಧಿಪತಿ ಹಾಟ್ ಸೀಟ್ನಲ್ಲಿ ಎರಡನೇ ಸಲ ಕೂತಿದ್ದ ಜಗ್ಗೇಶ್ ಗಳಿಸಿದ್ದೆಷ್ಟು?ಕೋಟ್ಯಧಿಪತಿ ಹಾಟ್ ಸೀಟ್ನಲ್ಲಿ ಎರಡನೇ ಸಲ ಕೂತಿದ್ದ ಜಗ್ಗೇಶ್ ಗಳಿಸಿದ್ದೆಷ್ಟು?

  ದಾಖಲೆ ಬರೆಯುತ್ತಾರಾ ಹಿಮಾಂಶು

  ದಾಖಲೆ ಬರೆಯುತ್ತಾರಾ ಹಿಮಾಂಶು

  'ಕೌನ್ ಬನೇಗಾ ಕರೋಡ್ ಪತಿ' ಇತಿಹಾಸದಲ್ಲಿ ಇದುವರೆಗೂ ಏಳು ಕೋಟಿ ಗೆದ್ದಿರುವುದು ಒಬ್ಬರೆ. ಇದೀಗ, ಹಿಮಾಂಶು ಅವರು ಕೇವಲ ಎರಡು ಪ್ರಶ್ನೆಯ ಹಿಂದಿದ್ದಾರೆ. ಒಂದು ಪ್ರಶ್ನೆಗೆ ಸರಿ ಉತ್ತರ ಕೊಟ್ಟರೆ ಒಂದು ಕೋಟಿ, ಎರಡು ಪ್ರಶ್ನೆಗೆ ಸರಿ ಉತ್ತರ ಕೊಟ್ಟರೆ ಏಳು ಕೋಟಿ ಗಳಿಸಲಿದ್ದಾರೆ. ಇಂದು ಕಾರ್ಯಕ್ರಮ ಮುಂದುವರೆಯಲಿದೆ.

  English summary
  Trainee Pilot Himanshu wins 50 lakhs so far in kaun banega crorepati. he will win 1 crore today?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X