»   » 'ಜೀ ಕನ್ನಡ' ತೊರೆಯುವ ಸುದ್ದಿ ಬಗ್ಗೆ ರಾಘವೇಂದ್ರ ಹುಣಸೂರು ಹೇಳಿದ್ದೇನು.?

'ಜೀ ಕನ್ನಡ' ತೊರೆಯುವ ಸುದ್ದಿ ಬಗ್ಗೆ ರಾಘವೇಂದ್ರ ಹುಣಸೂರು ಹೇಳಿದ್ದೇನು.?

Posted By:
Subscribe to Filmibeat Kannada
ರಾಘವೇಂದ್ರ ಹುಣಸೂರ್ ಜೀ ಕನ್ನಡ ತೊರೆಯುತ್ತಾರಾ? | Filmibeat Kannada

ಕನ್ನಡದ ಜನಪ್ರಿಯ ವಾಹಿನಿ 'ಜೀ ಕನ್ನಡ'ದ ಪ್ರೋಗ್ರಾಮಿಂಗ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು 'ಜೀ ಕನ್ನಡ' ಚಾನೆಲ್ ಬಿಡುವ ಮನಸು ಮಾಡಿದ್ದಾರೆ ಎನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡಿದೆ.

ಈಗಾಗಲೇ ಕನ್ನಡ ಕಿರುತೆರೆಗೆ ಸಾಕಷ್ಟು ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನೀಡಿರುವ ಇವರು ಈಗ 'ಜೀ ಕನ್ನಡ' ಬಿಟ್ಟು ಬೇರೆ ವಾಹಿನಿ ಸೇರಿಕೊಳ್ಳುತ್ತಾರೆ ಎನ್ನುವ ಮಾತಿದೆ. ಆದರೆ ಈ ಬಗ್ಗೆ ಸ್ವತಃ ರಾಘವೇಂದ್ರ ಹುಣಸೂರು ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ದೊಂದಿಗೆ ಮಾತನಾಡಿದ್ದಾರೆ. ಮುಂದೆ ಓದಿ...

'ಸ್ಟಾರ್ ಸುವರ್ಣ'ಗೆ ಹೋಗ್ತಾರಾ.?

'ಜೀ ಕನ್ನಡ' ವಾಹಿನಿಯಲ್ಲಿ ಸದ್ಯ ಬಿಸಿನೆಸ್ ಮತ್ತು ಪ್ರೋಗ್ರಾಮಿಂಗ್ ಹೆಡ್ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ಹುಣಸೂರು ಇದೀಗ 'ಸ್ಟಾರ್ ಸುವರ್ಣ' ವಾಹಿನಿಗೆ ಹೋಗ್ತಾರೆ ಎನ್ನುವ ಸುದ್ದಿ ಇದೆ.

ಆಫರ್ ಬಂದಿವೆ

''ಇತರ ವಾಹಿನಿಯಿಂದ ಆಫರ್ ಬಂದಿರುವುದು ನಿಜ. ಆದರೆ ನಾನು 'ಜೀ ಕನ್ನಡ' ವಾಹಿನಿ ಬಿಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ಪ್ರೋಗ್ರಾಮಿಂಗ್ ಹೆಡ್

ಮಾತುಕತೆ ನಡೆಯುತ್ತಿದೆ

''ಕನ್ನಡದ ಬೇರೆ ಬೇರೆ ಚಾನಲ್ ಗಳಿಂದ ಅವಕಾಶಗಳು ಬಂದಿದೆ. ಅವು ಇನ್ನೂ ಮಾತುಕತೆಯ ಹಂತದಲ್ಲಿದೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ಪ್ರೋಗ್ರಾಮಿಂಗ್ ಹೆಡ್

ಇಲ್ಲಿಯೇ ಮುಂದುವರೆಯುತ್ತೇನೆ

''ಸದ್ಯಕ್ಕೆ ಇಲ್ಲಿಯೇ (ಜೀ ಕನ್ನಡ) ಮುಂದುವರೆಯುತ್ತೇನೆ'' ಎಂದು ಹೇಳಿರುವ ರಾಘವೇಂದ್ರ ಹುಣಸೂರು ಈ ಮೂಲಕ ಎಲ್ಲ ಸುದ್ದಿಗೆ ತೆರೆ ಎಳೆದಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಹಂಸಲೇಖ ಯಾಕೆ ಬರ್ಲಿಲ್ಲ.? ಕಾರಣ ಬಹಿರಂಗ.!

ಟಿ ಆರ್ ಪಿ

ಟಿ ಆರ್ ಪಿ ಯಲ್ಲಿ ಸದ್ಯ ಒಳ್ಳೆಯ ಸ್ಥಾನದಲ್ಲಿ ಇರುವ 'ಜೀ ಕನ್ನಡ' ವಾಹಿನಿಯ ಮಾಸ್ಟರ್ ಬ್ರೇನ್ ರಾಘವೇಂದ್ರ ಹುಣಸೂರು. ಅಕಸ್ಮಾತ್ತಾಗಿ ಅವರು ವಾಹಿನಿಯಿಂದ ಹೊರಗೆ ಬಂದರೆ ಟಿ ಆರ್ ಪಿ ಕಡಿಮೆ ಆದರೂ ಆಗಬಹುದು.

ಕೇಳ್ರಪ್ಪೋ ಕೇಳ್ರಿ, ಜಗ್ಗೇಶ್, ರಕ್ಷಿತಾ, ಭಟ್ರು ಮತ್ತೆ ಒಟ್ಟಿಗೆ ಬರ್ತಿದ್ದಾರೆ.!

ಯಶಸ್ವಿ ಕಾರ್ಯಕ್ರಮಗಳು

'ಜೀ ಕನ್ನಡ' ವಾಹಿನಿಯ ಯಶಸ್ವಿ ಕಾರ್ಯಕ್ರಮಗಳಾದ 'ವೀಕೆಂಡ್ ವಿತ್ ರಮೇಶ್', 'ಡ್ರಾಮಾ ಜೂನಿಯರ್ಸ್', 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್' ಕಾರ್ಯಕ್ರಮಗಳ ಸೂತ್ರಧಾರ ರಾಘವೇಂದ್ರ ಹುಣಸೂರು.

ಸರಿಗಮಪ ಶೋ ನಿಂದ ಹೊರ ನಡೆದ ರಾಜೇಶ್ ಕೃಷ್ಣನ್

ರಾಘವೇಂದ್ರ ಹುಣಸೂರು ಕಾರ್ಯಕ್ರಮಗಳು

ಇನ್ನು ಕನ್ನಡ ಕಿರುತೆರೆಯಲ್ಲಿ ರಾಘವೇಂದ್ರ ಹುಣಸೂರು ಅನೇಕ ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳಲ್ಲಿ 'ಪ್ಯಾಟೆ ಹುಡುಗಿರ ಹಳ್ಳಿ ಲೈಫು', 'ಹಳ್ಳಿ ಹೈದ ಪ್ಯಾಟೆಗೆ ಬಂದ' ಪ್ರಮುಖವಾಗಿವೆ.

English summary
Will Zee Kannada Channel head Raghavendra Hunsur quit Zee Kannada..? 'ಜೀ ಕನ್ನಡ'ದ ಪ್ರೋಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರ್ 'ಜೀ ಕನ್ನಡ' ವಾಹಿನಿ ಬಿಡುವ ಸುದ್ದಿ ಬಗ್ಗೆ ಮಾತನಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada