Big Breaking: ವೀಕೆಂಡ್ ವಿತ್ ರಮೇಶ್ ನಲ್ಲಿ ರಜನಿಕಾಂತ್, ರಾಜಮೌಳಿ.!
ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ಆರಂಭವಾಗುತ್ತಿದೆ. ಏಪ್ರಿಲ್ 20 ರಿಂದ ಶನಿವಾರ ಮತ್ತು ಭಾನುವಾರ ಸಾಧಕರ ಸಾಧನೆಯ ಕಥೆ ಪ್ರಸಾರವಾಗುತ್ತಿದೆ. ಈ ಸಲ ಯಾವೆಲ್ಲಾ ಸಾಧಕರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರ್ತಾರೆ ಎಂಬ ಕುತೂಹಲ ಕಾಡ್ತಿದೆ.
ಇಂತಹ ಸಮಯದಲ್ಲಿ ಬಹುದೊಡ್ಡ ಬ್ರೇಕಿಂಗ್ ಸುದ್ದಿಯನ್ನ ವೀಕೆಂಡ್ ವಿತ್ ರಮೇಶ್ ತಂಡದವರು ಬಿಟ್ಟುಕೊಟ್ಟಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಐಶ್ವರ್ಯ ರೈ, ರಾಜಮೌಳಿ ಹಾಗೂ ಪ್ರಭುದೇವ್ ಸಾಧಕರ ಸೀಟಿನಲ್ಲಿ ಕೂರಬಹುದು ಎನ್ನಲಾಗಿದೆ.
ಹಾಗಿದ್ರೆ, ಈ ಸೀನ್ ನಲ್ಲಿ ತಲೈವಾ ಬರ್ತಾರಾ? ವೀಕೆಂಡ್ ಸೀಟಿನಲ್ಲಿ ಐಶ್ವರ್ಯ ರೈ ಕುಳಿತುಕೊಳ್ತಾರಾ, ರಾಜಮೌಳಿ, ಪ್ರಭುದೇವ್ ಏನು ಹೇಳಿದ್ದಾರೆ? ಎಂದು ತಿಳಿಯಲು ಮುಂದೆ ಓದಿ...

ರಜನಿ, ಐಶ್, ರಾಜಮೌಳಿ ಯಾಕೆ?
ರಜನಿಕಾಂತ್, ರಾಜಮೌಳಿ, ಐಶ್ವರ್ಯ ರೈ, ಪ್ರಭುದೇವ್ ಅವರು ಪರಭಾಷೆಯಲ್ಲಿ ಸೂಪರ್ ಸ್ಟಾರ್ ಕಲಾವಿದರು. ಅವರು ಯಾಕೆ ಕನ್ನಡದ ಕಾರ್ಯಕ್ರಮಕ್ಕೆ ಬರಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ಇದನ್ನ ಸಮರ್ಥಿಸಿಕೊಳ್ಳುವ ಜೀ ವಾಹಿನಿ, ಇವರೆಲ್ಲಾ ಮೂಲತಃ ಕರ್ನಾಟಕವರು. ಇಲ್ಲಿಂದ ಹೋಗಿ ಅಲ್ಲಿ ಸೂಪರ್ ಸ್ಟಾರ್ ಗಳಾಗಿದ್ದಾರೆ. ಇವರ ಕಥೆ ಆರಂಭವಾಗುವುದು ಕರ್ನಾಟಕದಿಂದ. ಪ್ರೇಕ್ಷಕರು ಕೂಡ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಆಹ್ವಾನ ನೀಡಲಾಗಿದ್ಯಾ?
ರಜನಿಕಾಂತ್, ಐಶ್ವರ್ಯ ರೈ, ರಾಜಮೌಳಿ ಹಾಗೂ ಪ್ರಭುದೇವ್ ಅವರಿಗೆ ವೀಕೆಂಡ್ ವಿತ್ ರಮೇಶ್ ತಂಡದಿಂದ ಆಹ್ವಾನ ನೀಡಲಾಗಿದ್ಯ ಎಂದು ನೋಡಿದಾಗ, ಪತ್ರದ ಮೂಲಕ ಅವರ ಜೊತೆ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯದವರೆಗೂ ಅನುಮಾನ
ಈ ನಾಲ್ಕು ಜನರನ್ನ ಕರೆದುಕೊಂಡು ಬರಬೇಕು ಎಂಬ ಆಸೆ, ಅಭಿಮಾನಿ ವೀಕೆಂಡ್ ವಿತ್ ರಮೇಶ್ ತಂಡಕ್ಕಿದೆ. ಆದ್ರೆ, ಸದ್ಯದವರೆಗೂ ಅದು ನೆರವೇರುವ ಸಾಧ್ಯತೆ ಕಂಡು ಬಂದಿಲ್ಲ. ಬಹುಶಃ ಈ ಆವೃತ್ತಿಯಲ್ಲಿ ಇದು ಸಾಧ್ಯವಿಲ್ಲ ಎಂಬ ಮಾತುಗಳೇ ಕೇಳಿಬರುತ್ತಿದೆ.

ಪ್ರಭುದೇವ ಬರಬಹುದು!
ಹಾಗ್ನೋಡಿದ್ರೆ, ರಜನಿಕಾಂತ್, ಐಶ್ವರ್ಯ ರೈ, ರಾಜಮೌಳಿ ಬರೋದು ಅನುಮಾನ. ಆದ್ರೆ, ಪ್ರಭುದೇವ್ ಅವರ ಖಂಡಿತ ಬರಬಹುದು. ಯಾಕಂದ್ರೆ, ಈಗಾಗಲೇ ಅವರು ಕನ್ನಡದ ಟಿವಿ ಕಾರ್ಯಕ್ರಮಗಳಿಗೆ ಬಂದಿದ್ದಾರೆ. ಕರ್ನಾಟಕದ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಸೋ ಹಾಗಾಗಿ, ಪ್ರಭುದೇವ್ ಈ ಸೀಸನ್ ನಲ್ಲಿ ಎಂಟ್ರಿಯಾದ್ರೆ ಅಚ್ಚರಿ ಇಲ್ಲ.


Click it and Unblock the Notifications











