For Quick Alerts
  ALLOW NOTIFICATIONS  
  For Daily Alerts

  'ಜೊತೆ ಜೊತೆಯಲಿ' ಬದಲು 'ಶ್ರೀರಸ್ತು ಶುಭಮಸ್ತು'? ಎರಡು ಧಾರಾವಾಹಿಗಳ ಭವಿಷ್ಯವೇನು?

  By ಎಸ್ ಸುಮಂತ್
  |

  ಹೀಗೊಂದು ಅನುಮಾನ ಧಾರಾವಾಹಿ ವಲಯದಲ್ಲಿ ಕೇಳಿ ಬರುತ್ತಿದೆ. ಕಾರಣ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆಗುತ್ತಿರುವ ಬದಲಾವಣೆಯೂ ಇರಬಹುದು. 'ಜೊತೆ ಜೊತೆಯಲಿ' ಧಾರಾವಾಹಿಯ ಕಥೆ ಹಾಗೂ ಸ್ಟಾರ್‌ ಕಾಸ್ಟ್‌ನಿಂದ ಖ್ಯಾತಿ ಗಳಿಸಿತ್ತು.

  ಆದರೆ ಇತ್ತೀಚೆಗೆ 'ಜೊತೆ ಜೊತೆಯಲಿ' ತಂಡ ಹಾಗೂ ಅನಿರುದ್ಧ್ ನಡುವಿನ ಸಮರ ಎಲ್ಲವನ್ನೂ ತಲೆಕೆಳಗೆ ಮಾಡಿದೆ. ಕೆಲವೊಂದು ಭಿನ್ನಾಭಿಪ್ರಾಯಗಳು, ಕೆಲವೊಂದು ಮನಸ್ತಾಪಗಳು ಧಾರಾವಾಹಿಯೊಳಗಿನ ಪಾತ್ರ ಬದಲಾವಣೆ ತನಕ ಸಾಗಿದೆ. ಆದರೆ ಆರ್ಯನ ಪಾತ್ರವನ್ನು ಜನರ ಮನಸ್ಸಿನಿಂದ ಅಳಿಸುವುದಕ್ಕೆ ಸಾಧ್ಯವಾಗಲಿಲ್ಲ. ಆ ಲುಕ್, ಆ ಸ್ಟೈಲ್, ಆ ಪಾತ್ರಕ್ಕೆ ಅನಿರುದ್ಧ್ ಅವರೇ ಬೇಕು ಎಂಬ ಹಠ ನೋಡುಗರದ್ದಾಗಿತ್ತು. ಇದು ಧಾರಾವಾಹಿ ತಂಡಕ್ಕೂ ದೊಡ್ಡ ತಲೆನೋವಾಗಿತ್ತು.

  ಆದಿಗೆ ಇನ್ನು ಅಮ್ಮನ ಮೇಲೆ ಅನುಮಾನ : ಮಗನ ಪ್ರೀತಿ ಕಂಡು ಖುಷಿಯಾಗುತ್ತಿದ್ದಾಳೆ ಅಖಿಲಾ..!ಆದಿಗೆ ಇನ್ನು ಅಮ್ಮನ ಮೇಲೆ ಅನುಮಾನ : ಮಗನ ಪ್ರೀತಿ ಕಂಡು ಖುಷಿಯಾಗುತ್ತಿದ್ದಾಳೆ ಅಖಿಲಾ..!

  ಜನರಿಗೆ ಎಲ್ಲೂ ಬದಲಾವಣೆಯಾಗಿದೆ ಅಂತ ಅನಿಸದ ಹಾಗೇ ಆರ್ಯನ ಪಾತ್ರ ಬದಲಾಯಿಸಬೇಕೆಂದು ಫ್ಲ್ಯಾನ್ ಮಾಡಿತ್ತು. ಆರ್ಯವರ್ಧನ್ ಧಾರಾವಾಹಿಯಲ್ಲಿ ಕಣ್ಮರೆಯಾಗುತ್ತಿದ್ದಂತೆ ಹೊಸ ಪಾತ್ರವನ್ನು ಪರಿಚಯಿಸಿತ್ತು. ಅನಿರುದ್ಧ್ ಜಾಗಕ್ಕೆ ಅಲ್ಲದಿದ್ದರೂ ಹೊಸ ಪಾತ್ರದಲ್ಲಿ ಹರೀಶ್ ರಾಜ್‌ರನ್ನು ಎಂಟ್ರಿ ಕೊಡಿಸಿತ್ತು.

  ಕ್ರೇಜ್ ಹುಟ್ಟು ಹಾಕಿದ್ಧ 'ಜೊತೆ ಜೊತೆಯಲಿ'

  ಕ್ರೇಜ್ ಹುಟ್ಟು ಹಾಕಿದ್ಧ 'ಜೊತೆ ಜೊತೆಯಲಿ'

  ಆರ್ಯವರ್ಧನ್ ಇಲ್ಲದೆ ಹೋದರೆ ನಾವೂ ಧಾರಾವಾಹಿಯನ್ನೇ ನೋಡುವುದಿಲ್ಲ ಎಂದು ಹಲವರು ಕಮೆಂಟ್‌ಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಇದ್ದರು. ಇದು ಧಾರಾವಾಹಿ ತಂಡಕ್ಕೂ ಸ್ವಲ್ಪ ಆತಂಕವಾಗಿಯೇ ಕಂಡಿತ್ತು. ಆದರೆ ಅನಿವಾರ್ಯ ಅನಿರುದ್ಧ್ ಅವರನ್ನು ಮುಂದುವರೆಸುವುದಕ್ಕೆ ಮನಸ್ಸು ಇರಲಿಲ್ಲ. ಆದರೆ ಕಥೆ ತಿರುಗಿಸಿದ ರೀತಿ ಎಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮುಂದೇನಾಗಬಹುದು.. ಮುಂದೇನಾಗಬಹುದು ಎಂಬ ಕುತೂಹಲವನ್ನು ಹುಟ್ಟು ಹಾಕಿದೆ. ಅನು ಈಗ ಕೆಡುಕರನ್ನು ಹುಡುಕಿ ಸದೆ ಬಡಿಯಲು ಸಿದ್ಧವಾಗಿದ್ದಾಳೆ.

  ಅರ್ಧಾಂಗಿ: ದಿಗಂತ್ ವಿಚಾರದಲ್ಲಿ ಸೌಭಾಗ್ಯ ಗೇಮ್ ಆಡಿದ್ದೇಕೆ? ಮೈತ್ರಿಗಿಂತ ಲಾಭ ಜಾಸ್ತಿನಾ?ಅರ್ಧಾಂಗಿ: ದಿಗಂತ್ ವಿಚಾರದಲ್ಲಿ ಸೌಭಾಗ್ಯ ಗೇಮ್ ಆಡಿದ್ದೇಕೆ? ಮೈತ್ರಿಗಿಂತ ಲಾಭ ಜಾಸ್ತಿನಾ?

  'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯುತ್ತಾ?

  'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯುತ್ತಾ?

  ನಂಬರ್ ಒನ್ ಸ್ಥಾನದಲ್ಲಿದ್ದ 'ಜೊತೆ ಜೊತೆಯಲಿ' ಕ್ರಮೇಣವಾಗಿ ಕುಸಿಯುತ್ತಾ ಬಂದಿದೆ. ಈಗ ಏಳು ಅಥವಾ ಎಂಟನೇ ಸ್ಥಾನದಲ್ಲಿ ಬಂದು ನಿಂತಿದೆ. ಇತ್ತ ಆರ್ಯವರ್ಧನ ಪಾತ್ರದ ವಿಚಾರದಲ್ಲೂ ಕಿರಿಕ್ ಆಗಿತ್ತು. ಈ ಕಾರಣಕ್ಕಾಗಿಯೇ ಧಾರಾವಾಹಿಯನ್ನು ಮುಗಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸದ್ಯ ಹರೀಶ್ ಅಲಿಯಸ್ ವಿಶ್ವಾಸ್ ರೂಪದಲ್ಲಿ ಇರುವುದೇ ಆರ್ಯವರ್ಧನ್ ಎಂಬ ಸತ್ಯ ಗೊತ್ತಾಗಬೇಕಿದೆ. ಮನೆಯೊಳಗಿನ ಈ ಎಲ್ಲಾ ಸಮಸ್ಯೆಗಳ ಹಿಂದೆ ಯಾರಿದ್ದಾರೆ ಎಂಬುದು ತಿಳಿಯಬೇಕಿದೆ. ಅನುಗೆ ಮದುವೆಯಾಗಬೇಕಿದೆ. ಇಷ್ಟೆಲ್ಲಾ ಕಥೆ ಮುಗಿಸಲು ಹತ್ತಿರ ಹತ್ತಿರ ವರ್ಷ ಬೇಕಾದರೂ ತಳ್ಳಬಹುದು. ಈ ಎಲ್ಲಾ ಆಲೋಚನೆ ಮಾಡಿ ನೋಡಿದರೆ ಈಗಲೇ ಧಾರಾವಾಹಿ ಮುಗಿಸುವ ಹಂತಕ್ಕೆ ಹೋಗುವುದಿಲ್ಲ ಅಂತನಿಸಿದೆ.

  ಸುಧಾರಾಣಿ ಧಾರಾವಾಹಿ ಯಾವಾಗ?

  ಸುಧಾರಾಣಿ ಧಾರಾವಾಹಿ ಯಾವಾಗ?

  ಇನ್ನು ಈ ಧಾರಾವಾಹಿಗಳ ಕಾಂಪಿಟೇಷನ್ ಸಮಯದಲ್ಲಿ ಹೊಸ ಹೊಸ ಧಾರಾವಾಹಿಗಳ ಉದಯವಾಗುತ್ತಲೇ ಇರುತ್ತದೆ. ಜನ ಮೆಚ್ಚಿದ್ದಾರೆ ಎಂಬ ಕಾರಣಕ್ಕೆ ಅಷ್ಟೇ ಧಾರಾವಾಹಿಗಳನ್ನು ಮುಂದುವರೆಸುವುದಿಲ್ಲ. ಹೊಸ ಹೊಸ ಧಾರಾವಾಹಿಗೆ ದಾರಿ ಮಾಡಿಕೊಡಲಾಗುತ್ತದೆ. ಹಲವು ದಿನಗಳಿಂದ ಅತಿ ಶಿಘ್ರದಲ್ಲಿಯೇ ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿ ಬರಲಿದೆ ಎಂದು ತೋರಿಸಲಾಗುತ್ತಿದೆ. ಪ್ರೋಮೊ ನೋಡಿದವರು ಕೂಡ ಕಥೆ ಸೂಪರ್ ಎನ್ನುತ್ತಿದ್ದಾರೆ. ಈ ಧಾರಾವಾಹಿ ಕೂಡ ಆದಷ್ಟು ಬೇಗ ಬರಲಿದೆ.

  ʻಕಮಲಿʼ ಜಾಗ ಸೇರಲಿದ್ಯಾ ʻಜೊತೆಜೊತೆಯಲಿʼ?

  ʻಕಮಲಿʼ ಜಾಗ ಸೇರಲಿದ್ಯಾ ʻಜೊತೆಜೊತೆಯಲಿʼ?

  ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಅನಿಕಾಳ ಪಾಪದ ಕೊಡ ತುಂಬಿದೆ. ಸದ್ಯಕ್ಕೆ 'ಕಮಲಿ' ಧಾರಾವಾಹಿ ನಡೆಯುತ್ತಿರುವುದು ಅನಿಕಾ ಪಾತ್ರದ ಮೇಲೆ ಮಾತ್ರ. ಅದು ಬಿಟ್ಟರೆ ಒಳಗೆ ಯಾವ ಕಥೆಯೂ ಇಲ್ಲ. ಈಗಾಗಲೇ ಅಮರ್, ರಚನಾ, ಚಂದ್ರು, ಊರ್ಮೀಳಾ ಎಲ್ಲರ ಕಥೆ ಬಂದು ಹೋಗಿದೆ. ಈಗ ಅನಿಕಾಳಿಗೆ ಶಿಕ್ಷೆಯಾದರೆ ಕಥೆ ಮುಂದುವರೆಸಲು ಅಷ್ಟು ಸೀರಿಯಸ್ ಆಗಿರುವಂತ ವಿಚಾರಗಳು ಇಲ್ಲ. 'ಕಮಲಿ' ಧಾರಾವಾಹಿಯನ್ನು ಮುಗಿಸಲಾಗುತ್ತದೆ ಅನ್ನೋ ಮಾತು ಕೇಳಿಬರುತ್ತಿದೆ. ಹೀಗಾಗಿ ರಾತ್ರಿ 10 ಗಂಟೆಯ ಸ್ಲ್ಯಾಟ್ ಅನ್ನು 'ಜೊತೆ ಜೊತೆಯಲಿ' ಧಾರಾವಾಹಿಗೆ ನೀಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಹೊಸ ಧಾರಾವಾಹಿಗೆ ಪ್ರೈಮ್ ಟೈಮ್ ಕೊಡುವ ನಿರ್ಧಾರ ಯಾವಾಗಲೂ ಇರುತ್ತದೆ. ಅದರಲ್ಲೂ ಸುಧಾರಾಣಿ ಲೀಡ್ ರೋಲ್‌ನಲ್ಲಿ ಮಾಡುತ್ತಿರುವ ಸೀರಿಯಲ್ ಆಗಿರೋದ್ರಿಂದ 'ಜೊತೆ ಜೊತೆಯಲಿ' ಸ್ಥಾನಕ್ಕೆ 'ಶ್ರೀರಸ್ತು ಶುಭ ಮಸ್ತು' ಪ್ರಸಾರ ಆಗುತ್ತೆ ಎನ್ನಲಾಗಿದೆ.

  English summary
  Will Srirastu Subhamastu Replace Jothe Jotheyali Or Kamali Serial. Here is the details

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X