For Quick Alerts
  ALLOW NOTIFICATIONS  
  For Daily Alerts

  ಅವಮಾನ ಮರೆತು 'ಕಪಿಲ್ ಶರ್ಮಾ ಶೋ'ಗೆ ಮರಳುತ್ತಿದ್ದಾರೆ ಸುನಿಲ್ ಗ್ರೋವರ್?

  |

  ಹಿಂದಿಯ ಅತ್ಯಂತ ಹೆಚ್ಚು ಟಿಆರ್‌ಪಿ ಯುಳ್ಳ ಟಿವಿ ಶೋಗಳಲ್ಲಿ ಒಂದಾದ 'ಕಪಿಲ್ ಶರ್ಮಾ ಶೋ' ಬಗ್ಗೆ ಹಲವರಿಗೆ ಗೊತ್ತೇ ಇದೆ. ಕಾಮಿಡಿಯನ್ ಕಪಿಲ್ ಶರ್ಮಾ ಇತರ ಕಮಿಡಿಯನ್‌ಗಳ ಜೊತೆ ಸೇರಿಕೊಂಡು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ, ಬಾಲಿವುಡ್ ಸಿನಿಮಾಗಳ ಪ್ರಚಾರಕ್ಕಾಗಿ ಆಗಮಿಸುವ ನಟ-ನಟಿಯರ ಕಾಲೆಳೆವ ಈ ಶೋ ಬಹಳ ಪ್ರಸಿದ್ಧಿ.

  ಇದೇ ಶೋ ನಲ್ಲಿ ಪ್ರಮುಖ ಕಮಿಡಿಯನ್ ಆಗಿದ್ದ ಸುನಿಲ್ ಗ್ರೋವರ್ 2019 ರಲ್ಲಿ ಶೋ ಅನ್ನು ಬಿಟ್ಟು ಹೊರಟು ಹೋಗಿದ್ದರು. ಇದು ಮಾಧ್ಯಮಗಳಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಕಪಿಲ್ ಶರ್ಮಾ ಅವರು ಬಹಿರಂಗವಾಗಿ ಸುನಿಲ್ ಗ್ರೋವರ್ ಅನ್ನು ಕ್ಷಮೆ ಕೇಳಿದ್ದರೂ ಸಹ ಸುನಿಲ್ ಗ್ರೋವರ್ ಮನಸ್ಸು ಕರಗಿರಲಿಲ್ಲ.

  ಆದರೆ ಈಗ ಸುನಿಲ್ ಗ್ರೋವರ್ 'ದಿ ಕಪಿಲ್ ಶರ್ಮಾ ಶೋ'ಗೆ ವಾಪಸ್ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮರಳುವಿಕೆಗೆ ಸಲ್ಮಾನ್ ಖಾನ್ ಕಾರಣ ಎಂದೂ ಸಹ ಹೇಳಲಾಗುತ್ತಿದೆ. 'ದಿ ಕಪಿಲ್ ಶರ್ಮಾ ಶೋ' ನ ನಿರ್ಮಾಪಕರೂ ಸಲ್ಮಾನ್ ಖಾನ್ ಆಗಿರುವ ಕಾರಣ ಶೋ ಗೆ ಮತ್ತೆ ಹಳೆಯ ಕಳೆ ತಂದುಕೊಡಲೆಂದು ಸುನಿಲ್ ಗ್ರೋವರ್ ಅನ್ನು ಮರಳಿ ಕರೆಸುವ ಪ್ರಯತ್ನವನ್ನು ಸಲ್ಮಾನ್ ಖಾನ್ ಅವರೇ ಕೈಗೆತ್ತಿಕೊಂಡಿದ್ದಾರೆ.

  ಸಲ್ಮಾನ್ ಖಾನ್ ಜೊತೆಗೆ ಸುನಿಲ್ ಗ್ರೋವರ್ ಆತ್ಮೀಯರಾಗಿದ್ದಾರೆ, ಕಪಿಲ್ ಶರ್ಮಾ ಸಹ. ಹಾಗಾಗಿ ಇಬ್ಬರ ಮಧ್ಯೆ ಸಂಧಾನ ಮಾಡಿ, ಸುನಿಲ್ ಗ್ರೋವರ್ ಮತ್ತೆ ಕಪಿಲ್ ಶರ್ಮಾ ಶೋ ನಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಯತ್ನ ಮಾಡಿದ್ದಾರೆ ಸಲ್ಮಾನ್ ಖಾನ್.

  ವಿದೇಶದಲ್ಲಿ ಶೋ ನೀಡಲು ಹೋಗಿ ಅಲ್ಲಿಂದ ವಾಪಸ್ ಬರುವಾದ ಮದ್ಯಮ ಅಮಲಿನಲ್ಲಿದ್ದ ಕಪಿಲ್ ಶರ್ಮಾ,ವಿಮಾನದಲ್ಲಿಯೇ ಸುನಿಲ್ ಗ್ರೋವರ್ ಅನ್ನು ಅವಾಚ್ಯವಾಗಿ ನಿಂದಿಸಿ, ಸುನಿಲ್ ಗೆ ಚಪ್ಪಲಿಯಿಂದ ಹೊಡೆದಿದ್ದ ಎಂದು ಕೆಲವು ಪ್ರತ್ಯಕ್ಷ ದರ್ಶಿಗಳೇ ಹೇಳಿದ್ದರು. ಈ ಘಟನೆ ಬಳಿಕ ಸುನಿಲ್ ಗ್ರೋವರ್, ಚಂದನ್ ಪ್ರಭಾಕರ್ ಶೋ ಬಿಟ್ಟು ಹೋಗಿದ್ದರು. ನಂತರ ಚಂದನ್ ವಾಪಸ್ ಬಂದರಾದರೂ, ಸುನಿಲ್ ಗ್ರೋವರ್ ವಾಪಸ್ ಬಂದಿಲ್ಲ.

  English summary
  Comedian Sunil Grover may return back to The Kapil Sharma Show. Salman Khan trying to get him back to the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X