For Quick Alerts
  ALLOW NOTIFICATIONS  
  For Daily Alerts

  'ಅಗ್ನಿಸಾಕ್ಷಿ'ಯಿಂದ ಸಿದ್ಧಾರ್ಥ್ ಹೋದ ಬೆನ್ನಲ್ಲೆ ಸನ್ನಿಧಿ ಕೊಡ್ತಾರಾ ಶಾಕ್?

  |
  Agnisakshi Kannada Serial: ಸನ್ನಿಧಿ ಅಗ್ರಿಮೆಂಟ್ ಮುಗಿದಿಲ್ವಾ? | FILMIBEAT KANNADA

  ಸುಮಾರು ಐದೂವರೆ ವರ್ಷದಿಂದ ಪ್ರಸಾರವಾಗ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಈಗ ಮಹತ್ವದ ಬದಲಾವಣೆ ಆಗಿದೆ. ಸಿದ್ಧಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಸೀರಿಯಲ್ ನಿಂದ ಹೊರಬಂದಿದ್ದಾರೆ. ಐದು ವರ್ಷದ ಅಗ್ರಿಮೆಂಟ್ ಮುಗಿದ ಕಾರಣ, ಧಾರಾವಾಹಿಯಿಂದ ಹೊರಬಂದಿದ್ದಾರೆ.

  ಈಗಾಗಲೇ ಧಾರಾವಾಹಿಯಲ್ಲೂ ಕೂಡ ಸಿದ್ಧಾರ್ಥ್ ಪಾತ್ರಕ್ಕೆ ಒಂದು ರೀತಿ ಅಂತ್ಯವಾಡಿದ್ದಾರೆ. ಬಿಸಿನೆಸ್ ಉದ್ದೇಶದಿಂದ ಆಸ್ಟ್ರೇಲಿಯಾ ಹೋಗುತ್ತಿರುವ ಕಾರಣ ನೀಡಿ, ವಿದೇಶಕ್ಕೆ ಹಾರುತ್ತಿದ್ದಾರೆ. ಅಲ್ಲಿಗೆ ಇನ್ನು ಮುಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ಧಾರ್ಥ್ ನೋಡಲು ಸಿಗಲ್ಲ.

  ಯಶಸ್ಸಿನಲ್ಲಿರುವಾಗಲೇ ಸೀರಿಯಲ್ ಬಿಟ್ಟು ಹೋದ ಸ್ಟಾರ್ ಕಲಾವಿದರಿವರು.!ಯಶಸ್ಸಿನಲ್ಲಿರುವಾಗಲೇ ಸೀರಿಯಲ್ ಬಿಟ್ಟು ಹೋದ ಸ್ಟಾರ್ ಕಲಾವಿದರಿವರು.!

  ಆಸ್ಟ್ರೇಲಿಯಾದಿಂದ ಸಿದ್ಧಾರ್ಥ್ ವಾಪಸ್ ಬರುವಾಗ ಹೊಸ ಪಾತ್ರಧಾರಿ ಸಿದ್ಧಾರ್ಥ್ ಆಗಿ ಪ್ರವೇಶ ಮಾಡಬಹುದು. ಇದು ನಿರೀಕ್ಷಿತ. ಆದ್ರೀಗ, ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಮೇಲೆ ಅನುಮಾನ ಮೂಡಿದೆ. ಇವರು ಕೂಡ ಈ ಸಿರೀಯಲ್ ಬಿಟ್ಟು ಹೋಗಬಹುದಾ ಎಂಬ ಸುಳಿವು ಸಿಕ್ತಿದೆ. ಅಷ್ಟಕ್ಕೂ, ಏನಿದು ಹೊಸ ಟ್ವಿಸ್ಟ್? ಮುಂದೆ ಓದಿ....

  ಸನ್ನಿಧಿ ಪಾತ್ರನೂ ಮುಗಿಯುತ್ತಾ?

  ಸನ್ನಿಧಿ ಪಾತ್ರನೂ ಮುಗಿಯುತ್ತಾ?

  ಸಿದ್ಧಾರ್ಥ್ ಮತ್ತು ಸನ್ನಿಧಿಯ ಜೋಡಿ ಕಿರುತೆರೆ ಪ್ರೇಕ್ಷಕರಿಗೆ ಆಲ್ ಟೈಂ ಫೆವರೇಟ್. ಸಿದ್ಧಾರ್ಥ್ ಹೈಟ್, ಸನ್ನಿಧಿ ಹೈಟು ಮ್ಯಾಚ್ ಆಗಿಲ್ಲ ಎಂಬ ಟೀಕೆಗಿಂತ ಅವರಿಬ್ಬರ ಜೋಡಿ ಮುದ್ದಾಗಿದೆ ಎಂದು ಹೊಗಳಿದವರೇ ಹೆಚ್ಚು. ಇದೀಗ, ಸನ್ನಿಧಿ ಜೋಡಿ ಸಿದ್ಧಾರ್ಥ್ ಬದಲಾಗ್ತಿದ್ದಾರೆ. ಹೊಸ ಸಿದ್ಧಾರ್ಥ್ ಹೇಗಿರಬಹುದು ಎಂಬ ಸುಳಿವು ಸಿಕ್ಕಿಲ್ಲ. ಪುನಃ ಆ ಪಾತ್ರ ವಾಪಸ್ ಬರುತ್ತಾ ಎಂಬ ಸುಳಿವು ಕೂಡ ಸದ್ಯಕ್ಕಿಲ್ಲ. ಹಾಗಾಗಿ, ಸನ್ನಿಧಿ ಕತೆ ಏನು ಎಂಬುದು ಈಗ ಚಿಂತೆಯಾಗಿದೆ.

  ಆಸ್ಟ್ರೇಲಿಯಾಗೆ ಹೋದ ಸಿದ್ದಾರ್ಥ್ : ಪತಿ ಇಲ್ಲದೆ ಒಂಟಿಯಾದ ಸನ್ನಿಧಿಆಸ್ಟ್ರೇಲಿಯಾಗೆ ಹೋದ ಸಿದ್ದಾರ್ಥ್ : ಪತಿ ಇಲ್ಲದೆ ಒಂಟಿಯಾದ ಸನ್ನಿಧಿ

  ಸನ್ನಿಧಿ ಅಗ್ರಿಮೆಂಟ್ ಮುಗಿದಿಲ್ವಾ?

  ಸನ್ನಿಧಿ ಅಗ್ರಿಮೆಂಟ್ ಮುಗಿದಿಲ್ವಾ?

  ಸಿದ್ದಾರ್ಥ್ ಈ ಧಾರಾವಾಹಿಯಿಂದ ಹಿಂದೆ ಸರಿಯಲು ಐದು ವರ್ಷದ ಅಗ್ರಿಮೆಂಟ್ ಮುಗಿದಿದೆ. ಬೇರೆ ಏನಾದರೂ ಮಾಡಬೇಕು ಎನ್ನುವುದು. ಹಾಗ್ನೋಡಿದ್ರೆ ಸನ್ನಿಧಿ ಅಗ್ರಿಮೆಂಟ್ ಮುಗಿದಿಲ್ವಾ? ಮುಗಿದಿದ್ದರೂ ಅದೇ ಧಾರಾವಾಹಿಯಲ್ಲಿ ಮುಂದುವರಿಸುವ ನಿರ್ಧಾರ ಮಾಡಿದ್ದಾರಾ ಅಥವಾ ತಾನು ಕೂಡ ಅಗ್ನಿಸಾಕ್ಷಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರಾ ಎಂಬ ಗೊಂದಲ ಕಾಡುತ್ತಿದೆ.

  ಕೊನೆಯ ದಿನ ಸುಳಿವು ಕೊಟ್ಟರ ಸಿದ್ಧಾರ್ಥ್-ಸನ್ನಿಧಿ

  ಕೊನೆಯ ದಿನ ಸುಳಿವು ಕೊಟ್ಟರ ಸಿದ್ಧಾರ್ಥ್-ಸನ್ನಿಧಿ

  ಅಗ್ನಿಸಾಕ್ಷಿ ಧಾರಾವಾಹಿಯ ನಿನ್ನೆ ಎಪಿಸೋಡ್ ನಲ್ಲಿ ನಡೆದ ಸಂಭಾಷಣೆ ಇದೆಕ್ಕೆಲ್ಲಾ ಪುಷ್ಠಿ ನೀಡುವಂತಿದೆ. ಆಸ್ಟ್ರೇಲಿಯಾ ಹೋಗಲು ಸಿದ್ಧವಾಗಿದ್ದ ಸಿದ್ದಾರ್ಥ್ ''ಇನ್ನು ಸ್ವಲ್ಪ ದಿನ, ನಿನ್ನನ್ನು ಅಲ್ಲಿಗೆ ಕರೆಸಿಕೊಳ್ಳುತ್ತೇನೆ, ಆಗ ಅಲ್ಲೇ ಸೆಟ್ಲ್ ಆಗಬಹುದು'' ಎಂದು ಸನ್ನಿಧಿಗೆ ಹೇಳಿದರು. ಸನ್ನಿಧಿ ಕೂಡ ಇದಕ್ಕೆ ಹುಂ ಸರಿ ಎಂದು ತಲೆ ಅಲ್ಲಾಡಿಸಿದರು.

  ಸೀರಿಯಲ್ ಬಿಟ್ಟ ವಿಜಯ್ ಸೂರ್ಯಗೆ ವೈಷ್ಣವಿ ವಿಶ್ಸೀರಿಯಲ್ ಬಿಟ್ಟ ವಿಜಯ್ ಸೂರ್ಯಗೆ ವೈಷ್ಣವಿ ವಿಶ್

  ಬಹುಶಃ ಸನ್ನಿಧಿಯೂ ಹೋಗಬಹುದು.!

  ಬಹುಶಃ ಸನ್ನಿಧಿಯೂ ಹೋಗಬಹುದು.!

  ವಿಜಯ್ ಸೂರ್ಯ ಸಿದ್ಧಾರ್ಥ್ ಪಾತ್ರಕ್ಕೆ ಗುಡ್ ಬೈ ಹೇಳಿದಂತೆ ಸನ್ನಿಧಿ ಪಾತ್ರಕ್ಕೆ ವೈಷ್ಣವಿ ಗೌಡ ಕೂಡ ವಿದಾಯ ಹೇಳಬಹುದು. ಅದರ ಸೂಚನೆಯಂತೆ ಈ ಸಭಾಷಣೆ ಸಿದ್ಧ ಮಾಡಿರಬಹುದು ಎಂಬ ಅನುಮಾನ ಕಾಡುತ್ತಿದೆ. ಮುಂದಿನ ದಿನದಲ್ಲಿ ವೈಷ್ಣವಿ ಕೂಡ ವಿದೇಶಕ್ಕೆ ಹೋಗುವ ನೆಪವೊಡ್ಡಿ ಧಾರಾವಾಹಿಯಿಂದ ಹೊರಬರಬಹುದು?

  'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಶಾಕ್ ನೀಡಿದ ನಟ ವಿಜಯ್ ಸೂರ್ಯ'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಶಾಕ್ ನೀಡಿದ ನಟ ವಿಜಯ್ ಸೂರ್ಯ

  English summary
  After Vijay surya left agnisakshi, sannidhi will continue agnisakshi serial or she also decided to quit the serial?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X