ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಇರ್ತಾರಾ ನಟಿ ವಿನಯಾ ಪ್ರಸಾದ್; ಮಗಳು ಹೇಳಿದ್ದೇನು?

By ಫಿಲ್ಮ್ ಡೆಸ್ಕ್

ಕನ್ನಡ ಬಿಗ್ ಬಾಸ್ ಸೀಸನ್ 8ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ಈಗಾಗಲೇ ಮೊದಲ ಪ್ರೋಮೋ ರಿಲೀಸ್ ಆಗಿದೆ. ಇದೇ ತಿಂಗಳು ಬಿಗ್ ಬಾಸ್ -8 ಪ್ರಾರಂಭವಾಗಲಿದ್ದು, ಈಗಾಗಲೇ ಸ್ಪರ್ಧಿಗಳ ಆಯ್ಕೆ ಕೂಡ ಫೈನಲ್ ಆಗಿದೆ.

Recommended Video

Bigg Boss Kannada Season 8 : ಬಿಗ್ ಬಾಸ್ ಗೆ ಎಂಟ್ರಿ ಕೊಡ್ತಾರ ವಿನಯಾ ಪ್ರಸಾದ್ | Vinaya prasad

ಈ ಬಾರಿ ಬಿಗ್ ಬಾಸ್ ನಲ್ಲಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಸಾಕಷ್ಟು ಜನರ ಹೆಸರುಗಳು ಸಹ ಕೇಳಿಬರುತ್ತಿದೆ. ಇದೀಗ ಸ್ಯಾಂಡಲ್ ವುಡ್ ನ ಹಿರಿಯ ನಟಿ ವಿನಯಾ ಪ್ರಸಾದ್ ಹೆಸರು ಸಹ ಹರಿದಾಡುತ್ತಿದೆ. ಈ ಬಾರಿಯ ಬಿಗ್ ಮನೆಯಲ್ಲಿ ವಿನಯಾ ಪ್ರಸಾದ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಬ್ಯುಸಿ ಇರುವ ವಿನಯಾ ಪ್ರಸಾದ್ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ. ಆದರೆ ಈ ಬಗ್ಗೆ ವಿನಯಾ ಪ್ರಸಾದ್ ಮಗಳು ಪ್ರಥಮಾ ಪ್ರಸಾದ್ ಆಂಗ್ಲ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿ ಸ್ಪಷ್ಟಪಡಿಸಿದ್ದಾರೆ.

Will Vinaya Prasad Participate in Bigg Boss Kannada Season 8?

'ಅಮ್ಮ ಬಿಗ್ ಬಾಸ್ ಗೆ ಹೋಗುತ್ತಿದ್ದಾರಾ ಎಂದು ಅನೇಕ ಸಂದೇಶಗಳು ಬರುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನನ್ನ ಅಮ್ಮ ಬಿಗ್ ಬಾಸ್ ಗೆ ಹೋಗುತ್ತಿಲ್ಲ. ಈ ಬಗ್ಗೆ ದಯವಿಟ್ಟು ವದಂತಿ ಹಬ್ಬಿಸಬೇಡಿ' ಎಂದು ಹೇಳಿದ್ದಾರೆ.

ವಿನಯಾ ಪ್ರಸಾದ್ ಸದ್ಯ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಅಕಿಲಾಂಡೇಶ್ವರಿ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ. ಅಂದಹಾಗೆ ಈ ಬಾರಿ ಬಿಗ್ ಬಾಸ್ ನಲ್ಲಿ ಡ್ರೋನ್ ಪ್ರತಾಪ್, ಸೋನು ಗೌಡ ಸೇರಿದಂತೆ ಅನೇಕರ ಹೆಸರು ಕೇಳಿಬರುತ್ತಿದೆ. ಆದರೆ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

More from Filmibeat

English summary
Prathama Prasad reaction about her mother Vinaya prasad Participate in Bigg Boss Kannada Season 8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X