ಹುಚ್ಚ ವೆಂಕಟ್ ಇಲ್ಲದ 'ಬಿಗ್ ಬಾಸ್' ನೀವು ನೋಡ್ತೀರಾ.?
ಹುಚ್ಚ ವೆಂಕಟ್ ಏನೇ ಹುಚ್ಚಾಟ ಮಾಡಿದ್ರೂ, ಅವರು ಒಳ್ಳೆಯ ಎಂಟರ್ ಟೈನರ್ ಅನ್ನೋದ್ರಲ್ಲಿ ನೋ ಡೌಟ್.! ಬಾಯಿಗೆ ಬಂದ ಹಾಗೆ ಮಾತನಾಡಿದ್ರೂ, ಹುಚ್ಚ ವೆಂಕಟ್ ಗೆ ಈ ಪಾಟಿ ಅಭಿಮಾನಿಗಳು ಹುಟ್ಟಿಕೊಳ್ಳುವುದಕ್ಕೆ ಬಹುಶಃ ಇದೇ ಕಾರಣ.
'ಬಿಗ್ ಬಾಸ್' ಕಾರ್ಯಕ್ರಮದ ಮೂರನೇ ಆವೃತ್ತಿ ಶುರುವಾಗುತ್ತೆ ಅಂತ ಗೊತ್ತಾದಾಗಿನಿಂದಲೂ ಎಲ್ಲರ ಬಾಯಲ್ಲೂ ಹುಚ್ಚ ವೆಂಕಟ್ ಹೆಸರು ನುಲಿದಾಡುತ್ತಿತ್ತು. ಇನ್ ಫ್ಯಾಕ್ಟ್ ವೀಕ್ಷಕರ ಒತ್ತಾಯದ ಮೇರೆಗೆ ಹುಚ್ಚ ವೆಂಕಟ್ 'ಬಿಗ್ ಬಾಸ್-3' Contestant List ಗೆ ಸೇರ್ಪಡೆ ಆಗಿದ್ದು. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಮೂರು ವಾರಗಳ ಕಾಲ ಹುಚ್ಚ ವೆಂಕಟ್ ನಿಮ್ಮೆಲ್ಲರಿಗೆ ಮನರಂಜನೆ ನೀಡಿದ್ದಾರೆ. ನೀವೆಲ್ಲರೂ ಎಂಜಾಯ್ ಮಾಡಿದ್ದೀರಾ. ಈಗ 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಇಲ್ಲ.! ಹುಚ್ಚ ವೆಂಕಟ್ ಇಲ್ಲದ 'ಬಿಗ್ ಬಾಸ್' ಕಾರ್ಯಕ್ರಮ ಕೆಲವರಿಗೆ ನೀರಸ ಅಂತ ಈಗಾಗಲೇ ಅನಿಸೋಕೆ ಶುರುವಾಗಿದೆ. ['ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?]
ಹೀಗಿರುವಾಗ, ಇಂದಿನಿಂದ 'ಬಿಗ್ ಬಾಸ್-3' ಕಾರ್ಯಕ್ರಮವನ್ನ ನೀವು ನೋಡ್ತೀರಾ ಇಲ್ಲ 'ಬಿಗ್ ಬಾಸ್' ಬೋರು ಶಿವಾ ಅಂತ ಚಾನೆಲ್ ಚೇಂಜ್ ಮಾಡ್ತೀರಾ?[ಇಲ್ಲಾಂದ್ರೆ ಇಲ್ಲಿ ವೋಟ್ ಮಾಡಿ]
ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.


Click it and Unblock the Notifications











