ಖ್ಯಾತ ನಿರೂಪಕಿಯ ಮುಡಿಗೆ ಬಿಗ್ ಬಾಸ್ ಕಿರೀಟ, ಕೇವಲ 98 ದಿನದಲ್ಲಿ ಕೋಟ್ಯಾಧಿಪತಿಯಾದ ಚೆಲುವೆ

ಪ್ರತಿ ವರ್ಷದ ದ್ವೀತಿಯಾರ್ಧದಲ್ಲಿ ಭಾರತವನ್ನು ''ಬಿಗ್ ಬಾಸ್'' ಆವರಿಸಿಕೊಳ್ಳುತ್ತೆ. ಜೂನ್ ನಂತರ ಯಾವ ಭಾಷೆಯಲ್ಲಿ ನೋಡಿದರು ಕೂಡ ''ಬಿಗ್ ಬಾಸ್'' ಕುರಿತು ಚರ್ಚೆ ಶುರುವಾಗುತ್ತೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಜಾತ್ರೆ ನಡೆಯುತ್ತಿದೆ. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಹಿಂದಿಯ ''ಬಿಗ್ ಬಾಸ್'' ಕಾರ್ಯಕ್ರಮ 78 ದಿನಗಳನ್ನು ಪೂರೈಸಿದೆ.

ನಾಗಾರ್ಜುನ ನೇತೃತ್ವದ ''ಬಿಗ್ ಬಾಸ್'' ಕಾರ್ಯಕ್ರಮ 64 ದಿನಗಳನ್ನು ಪೂರೈಸಿದ್ದರೆ, ವಿಜಯ್ ಸೇತುಪತಿ ನಡೆಸಿಕೊಡುವ ತಮಿಳು ''ಬಿಗ್ ಬಾಸ್'' 36 ದಿನಗಳನ್ನು ಪೂರೈಸಿದೆ. ಕನ್ನಡದಲ್ಲಿ ಸುದೀಪ್ ಅವರ ಪಂಚಾಯ್ತಿಗೆ 44 ದಿನಗಳಾಗಿವೆ. ಹೀಗೆ.. ಎಲ್ಲೆಡೆ ''ಬಿಗ್ ಬಾಸ್'' ಯಶಸ್ವಿಯಾಗಿ ನಡೆಯುತ್ತಿದ್ದು ಮಲಯಾಳಂನಲ್ಲಿ ಮೋಹನ್ ಲಾಲ್ ಈ ವರ್ಷದ ''ಬಿಗ್ ಬಾಸ್‌''ಗೆ ನಿನ್ನೆ ( ನವೆಂಬರ್ 9 ) ಮಂಗಳ ಹಾಡಿದ್ಧಾರೆ.

Winner s Glory amp amp Commoner s Triumph Anumol Takes Bigg Boss Malayalam 7 Prize as Aneesh Makes History

ಹೌದು, 98 ದಿನಗಳ ಬಳಿಕ ಮಲಯಾಳಂ ''ಬಿಗ್ ಬಾಸ್‌''ನ ಸೀಸನ್ 7 ನಿನ್ನೆ ( ಭಾನುವಾರ ) ಮುಕ್ತಾಯವಾಗಿದೆ. ಅದ್ಧೂರಿಯಾಗಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಿರೂಪಕಿಯಾಗಿ ಹೆಸರು ಮಾಡಿರುವ ಕಿರುತೆರೆಯ ನಾಯಕಿಯಾಗಿಯೂ ಕೇರಳಿಗರ ಹೃದಯ ಗೆದ್ದಿರುವ ಅನುಮೋಲ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ.

ಇನ್ನೂ ಈ ಬಾರಿ ಮಲಯಾಳಂನ ''ಬಿಗ್ ಬಾಸ್'' ಮನೆಯಲ್ಲಿ ಜನಸಾಮಾನ್ಯರಿಗೆ ಕೂಡ ಅವಕಾಶ ನೀಡಲಾಗಿತ್ತು. ಬರಹಗಾರ ಮತ್ತು ವ್ಲಾಗರ್ ಆದ ಅನೀಶ್ ಟಿಎ ಅವರನ್ನು ಈ ಬಾರಿ ಆಯ್ಕೆ ಮಾಡಲಾಗಿತ್ತು. ವಿಶೇಷ ಅಂದರೆ ಹೀಗೆ ಮನೆಯೊಳಗೆ ಹೋದ ಅನೀಶ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಶಾನವಾಸ್ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಈ ಬಾರಿಯ ''ಬಿಗ್ ಬಾಸ್'' ಟ್ರೋಫಿಯನ್ನು ಮುಡಿಗೇರಿಸಿಕೊಂಡ ಅನುಮೋಲ್ ಅವರಿಗೆ ಮನೆಯಲ್ಲಿ 98 ದಿನ ಇದ್ದಿದ್ದಕ್ಕೆ ₹42.5 ಲಕ್ಷ ಬಹುಮಾನದ ರೂಪದಲ್ಲಿ ಸಿಕ್ಕಿದೆ. ಇಷ್ಟೇ ಅಲ್ಲ ಹೊಸ ಎಸ್‌ಯುವಿ ಕಾರನ್ನು ಕೂಡ ಉಡುಗೊರೆಯಾಗಿ ಅನುಮೋಲ್‌ ಅವರಿಗೆ ನೀಡಲಾಗಿದೆ.

ಇನ್ನೂ ಈ ಬಾರಿಯ ದುಬಾರಿ ಸ್ಫರ್ಧಿಗಳಲ್ಲಿ ಒಬ್ಬರಾಗಿದ್ದವರು ಅನುಮೋಲ್. ''ಟೈಮ್ಸ್ ಆಫ್ ಇಂಡಿಯಾ'' ವರದಿಯ ಪ್ರಕಾರ ದಿನವೊಂದಕ್ಕೆ ₹50,000 ಸಂಭಾವನೆ ಇವರಿಗೆ ನಿಗದಿ ಮಾಡಲಾಗಿತ್ತು. ಆ ಪ್ರಕಾರ ಇವರ 98 ದಿನದ ಸಂಭಾವನೆಯೇ 50 ಲಕ್ಷವಾಗುತ್ತೆ. ಹೀಗಾಗಿ ಹೇಗೆ ಕೂಡಿ ಕಳೆದು ಲೆಕ್ಕ ಹಾಕಿದರು ''ಬಿಗ್ ಬಾಸ್'' ಮನೆ ಪ್ರವೇಶ ಮಾಡಿದ ಅನುಮೋಲ್‌ ಮನೆಯಿಂದ ಹೊರ ಬರುವಾಗ ಹೆಚ್ಚು ಕಡಿಮೆ ಒಂದು ಕೋಟಿ ಹಣವನ್ನು ತಮ್ಮ ಜೊತೆ ತೆಗೆದುಕೊಂಡು ತಮ್ಮ ಮನೆಗೆ ಮರಳಿ ಈಗ ಹೋದಂತೆ ಆಗಿದೆ.

Winner s Glory amp amp Commoner s Triumph Anumol Takes Bigg Boss Malayalam 7 Prize as Aneesh Makes History

ಉಳಿದಂತೆ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಕಾಮನ್ ಮ್ಯಾನ್ ಅನೀಶ್ ಅವರಿಗೆ ಮನೆಗೆ ಉಪಯೋಗವಾಗುವಂತಹ ಸಕಲ ವಸ್ತುಗಳನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ಎರಡು ಲಕ್ಷ ಬೆಲೆ ಬಾಳುವ ಫೋನ್‌ನ್ನು ಉಡುಗೊರೆಯಾಗಿ ನೀಡಲಾಗಿದೆ.

ಅಂದ್ಹಾಗೇ ಈ ಬಾರಿಯ ಮಲಯಾಳಂ ''ಬಿಗ್ ಬಾಸ್'' ಮನೆಯನ್ನು 19 ಜನ ಪ್ರವೇಶ ಮಾಡಿದ್ದರು. ಆ ನಂತರ 5 ಜನ ವೈಲ್ಡ್ ಕಾರ್ಡ್‌ ಮೂಲಕ ಮನೆಯೊಳಗೆ ಹೋಗಿದ್ದರು. ಆ ಪೈಕಿ ಸಲಿಂಗ ವಿವಾಹವಾದ LGBTQ+ ಸಮುದಾಯದ ಪರ ಕಾನೂನು ಹೋರಾಟವನ್ನು ಕೂಡ ಮಾಡುವ ಅಧಿಲಾ ಮತ್ತು ನೂರಾ ಕೂಡ ಹೋಗಿದ್ದರು. ಅನೇಕರು ಈ ಬಾರಿಯ ''ಬಿಗ್ ಬಾಸ್'' ಗೆಲ್ಲುವುದು ಇವರೇ ಎಂದು ಅಂದುಕೊಂಡಿದ್ದರು. ಆದರೆ ಎಲ್ಲರನ್ನೂ ಹಿಂದಿಕ್ಕಿ ಅನುಮೋಲ್ ''ಬಿಗ್ ಬಾಸ್'' ವಿಜೇತರಾಗಿ ಹೊರ ಹೊಮ್ಮಿದ್ದಾರೆ.

More from Filmibeat

English summary
The final results are in! Anumol is crowned BB Malayalam 7 champion. Don't miss the story of Aneesh, the commoner contestant who triumphed as the season's first runner-up.
Read more about: ಟಿವಿ biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X