»   » 'ಸರಿಗಮಪ-13' ಗೆದ್ದವರಿಗೆ ಬಹುಮಾನ ಮೊತ್ತವೆಷ್ಟು?

'ಸರಿಗಮಪ-13' ಗೆದ್ದವರಿಗೆ ಬಹುಮಾನ ಮೊತ್ತವೆಷ್ಟು?

Posted By:
Subscribe to Filmibeat Kannada

'ಜೀ-ಕನ್ನಡ'ದಲ್ಲಿ ಪ್ರಸಾರವಾಗುವ ಖ್ಯಾತ ಟಿವಿ ಕಾರ್ಯಕ್ರಮ 'ಸರಿಗಮಪ ಸೀಸನ್-13' ಕೊನೆಯ ಹಂತಕ್ಕೆ ಬಂದು ತಲುಪಿದೆ. ಕಳೆದ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮದ ಸೆಮಿಫೈನಲ್ ನಡೆದಿದ್ದು, ಅಂತಿಮ ಘಟ್ಟಕ್ಕೆ 6 ಜನ ಪ್ರತಿಭಾನ್ವಿತ ಗಾಯಕರು ಆಯ್ಕೆಯಾಗಿದ್ದಾರೆ.

ಈ ಬಾರಿ ಕಾರ್ಯಕ್ರಮದಲ್ಲಿ ಜಯಶಾಲಿ ಹೊರಹೊಮ್ಮಿದ ಪ್ರತಿಭೆ ಬಂಪರ್ ಬಹುಮಾನ ಸಿಗಲಿದೆ. ಅದೇ ರೀತಿ ಮೊದಲ ರನ್ನರ್ ಅಪ್ ಆದ ಪ್ರತಿಭೆಗೂ ಭರ್ಜರಿ ಮೊತ್ತ ಬಹುಮಾನವಾಗಿ ಸಿಗಲಿದೆ.

ಹಾಗಿದ್ರೆ, 'ಸರಿಗಮಪ-13' ಗೆದ್ದವರಿಗೆ ಬಹುಮಾನ ಮೊತ್ತವೆಷ್ಟು? ರನ್ನರ್ ಅಪ್ ಆದವರಿಗೆ ಬಹುಮಾನ ಮೊತ್ತವೆಷ್ಟು? ಗ್ರ್ಯಾಂಡ್ ಫಿನಾಲೆಗೆ ಯಾವೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ ಎಂದು ಮುಂದೆ ಓದಿ.....

ವಿಜೇತರಿಗೆ ಬಂಪರ್ ಬಹುಮಾನ

ಸರಿಗಮಪ-13ನೇ ಆವೃತ್ತಿಯಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನ ಮೊತ್ತ ಸಿಗಲಿದೆ. ಒಟ್ಟು 6 ಜನ ಈ ಬಹುಮಾನಕ್ಕಾಗಿ ಪೈಪೋಟಿ ನಡೆಸಲಿದ್ದು, ಯಾರಿಗೆ ಸಿಗಲಿದೆ ಈ ದೊಡ್ಡ ಮೊತ್ತವೆಂಬ ಕುತೂಹಲ ಕಾಡಿದೆ.

ಗೆದ್ದವರಿಗೆ ಮೊತ್ತವೆಷ್ಟು?

'ಸರಿಗಮಪ-13' ಗೆದ್ದ ವಿಜೇತರಿಗೆ 5 ಲಕ್ಷ ಹಣದ ಮೊತ್ತ ಸಿಗಲಿದೆ ಎಂದು ಘೋಷಣೆ ಮಾಡಲಾಗಿದೆ.

ರನ್ನರ್ ಅಪ್ ಗೆ ಎಷ್ಟು?

'ಸರಿಗಮಪ-13' ಕಾರ್ಯಕ್ರಮದಲ್ಲಿ ರನ್ನರ್ಅಪ್ ಆದವರಿಗೆ 3 ಲಕ್ಷ ಹಣದ ಮೊತ್ತ ಸಿಗಲಿದೆ. ಈ ಮೊತ್ತವನ್ನ ಮುಗುಳುನಗೆ ಚಿತ್ರದ ನಿರ್ಮಾಪಕ ಸೈಯಾದ್ ಸಲಾಂ ಅವರು ನೀಡುತ್ತಿರುವುದು ವಿಶೇಷ.

ಆರು ಜನರ ನಡುವೆ ಪೈಪೋಟಿ

ಮೈಸೂರಿನ ಶ್ರೀ ಹರ್ಷ, ಮಂಡ್ಯದ ಧನುಷ್, ಸುನೀಲ್, ಮೆಹೆಬೂಬ್ ಸಾಬ್, ಅರವಿಂದ್, ಹಾಗೂ ದೀಕ್ಷಾ ಫಿನಾಲೆ ವೇದಿಕೆಯಲ್ಲಿ ರಾರಾಜಿಸಲಿದ್ದಾರೆ.

ಗ್ರ್ಯಾಂಡ್ ಫಿನಾಲೆ ಯಾವಾಗ?

ಜುಲೈ 30 ರಂದು ಸಂಜೆ 6 ಗಂಟೆಗೆ 'ಸರಿಗಮಪ-13' ಗ್ರ್ಯಾಂಡ್ ಫಿನಾಲೆ ಜೀ ಕನ್ನಡದಲ್ಲಿ ನಡೆಯಲಿದೆ. ಇದೇ ಮೊದಲ ಭಾರಿಗೆ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

'ಸರಿಗಮಪ-13' ಗ್ರ್ಯಾಂಡ್ ಫಿನಾಲೆ ತಲುಪಿದ 6 ಲಕ್ಕಿ ಗಾಯಕರು

English summary
Winning Prize Money of Popular tv show sarigamapa Session 13. The Finale Held on July 30th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada