"ಮುಂದೆ ನಟಿಸೋದಿದ್ದರೆ ಕನ್ನಡದಲ್ಲೇ ನಟಿಸುತ್ತೇನೆ " ಎಂದ ರಶ್ಮಿ ಪ್ರಭಾಕರ್

By ಅನಿತಾ ಬನಾರಿ

ತಮಿಳಿನ ಸ್ಟಾರ್ ವಿಜಯ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ 'ಕಣ್ಣೆ ಕಲೈಮಾನೆ' ಧಾರಾವಾಹಿಯು ಇತ್ತೀಚೆಗಷ್ಟೇ ಮುಕ್ತಾಯಗೊಂಡಿತ್ತು. 'ಕಣ್ಣೆ ಕಲೈಮಾನೆ'ಯಲ್ಲಿ ನಾಯಕಿಯಾಗಿ ಅಭಿನಯಿಸಿರೋ ರಶ್ಮಿ ಪ್ರಭಾಕರ್ ತನ್ನ ನಟನೆಯ ಸುಂದರ ಜರ್ನಿಯ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೌದು, 'ಕಣ್ಣೆ ಕಲೈಮಾನೆ'ಯಲ್ಲಿ ನಾಯಕಿ ಮಾಧುರಿಯಾಗಿ ನಟಿಸಿರುವ ರಶ್ಮಿ ಪ್ರಭಾಕರ್ ತಮ್ಮ ಜರ್ನಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

"ನಾನು ಮಾಧುರಿಯಾಗಿ ನಟಿಸಿರುವ ಕಣ್ಣೆ ಕಲೈಮಾನೆ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿತ್ತು. ಇದೇ ಮೊದಲ ಬಾರಿಗೆ ಒಂದು ಹೊಸ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೆ. ಅದು ನನಗೆ ತುಂಬಾ ತೃಪ್ತಿಯಿದೆ. ಮಾಧುರಿ ನೆಗೆಟಿವ್ ಶೇಡ್ ಇರುವ ಪಾತ್ರ ಎನ್ನುವ ಒಂದು ಕಾರಣಕ್ಕೆ ನಾನು ಅದನ್ನು ಒಪ್ಪಿಕೊಂಡೆ. ಅಂದ್ರೆ ಹೋಗ್ತಾ ಹೋಗ್ತಾ ಆ ಪಾತ್ರ ನೆಗೆಟಿವ್ ಆಗುತ್ತೆ ಅಂದುಕೊಂಡು ನಾನು ನಟಿಸುತ್ತೇನೆ ಎಂದು ಹೇಳಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದಾರೆ ರಶ್ಮಿ ಪ್ರಭಾಕರ್.

Wish to do next project in Kannada says Kannada actress Rashmi Prabhakar

"ಮಾಧುರಿ ಪಾತ್ರವನ್ನು ಜನ ಯಾವ ತರಹ ಇಷ್ಟ ಪಟ್ಟಿದ್ದಾರೆ ಎಂದರೆ ಕಥೆಯನ್ನು ಒಂದು ಚೂರು ಬದಲಾಯಿಸಿ ನಾನು ಮಾಡುತ್ತಿದ್ದ ಮಾಧುರಿ ಪಾತ್ರವನ್ನು ನೆಗೆಟಿವ್ ಮಾಡಬಾರದು ಅಂತ ಡಿಸೈಡ್ ಮಾಡಿ ಮುಂದುವರಿಸಿಕೊಂಡು ಹೋದ್ರು. ಆ ರೀತಿಯಾಗಿ ನೋಡುವುದಿದ್ರೆ ತುಂಬಾನೇ ಸಮಾಧಾನ, ತೃಪ್ತಿಯಿದೆ. ಈ ಧಾರಾವಾಹಿ ಇನ್ನೊಂದು ನೂರು - ನೂರೈವತ್ತು ಎಪಿಸೋಡ್ ಬರ್ತಿತ್ತೇನೋ! ಆದರೆ ಕಾರಣಾಂತರಗಳಿಂದ ಧಾರಾವಾಹಿ ಮುಗೀತು. ಆದರೆ ಹೊಸ ಜಾಗ, ಹೊಸ ಜನ, ಪ್ರಾಜೆಕ್ಟ್ ನನಗೆ ಖುಷಿ ನೀಡಿದೆ" ಎಂದು ಫಿಲ್ಮಿಬೀಟ್ ಹೊತೆಗೆ ಹಂಚಿಕೊಂಡಿದ್ದಾರೆ ರಶ್ಮಿ ಪ್ರಭಾಕರ್.

"ಮುಂದೆ ಪ್ರಾಜೆಕ್ಟ್ ಮಾಡಿದ್ರೆ ಪ್ರಾಯಶ: ನಾನು ಕನ್ನಡದಲ್ಲಿ ಮಾಡ್ತೇನೆ. ಬೇರೆ ಭಾಷೆಯ ಪ್ರಾಜೆಕ್ಟ್‌ನಲ್ಲಿ ನಾನು ಸದ್ಯಕ್ಕೆ ಮಾಡೋದಿಲ್ಲ. ಕನ್ನಡದಲ್ಲಿ ಯಾವುದಾದರೂ ಒಳ್ಳೆಯ ಪಾತ್ರ ಅದರಲ್ಲೂ ತೂಕವಿರುವಂತಹ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೇನೆ. ಅಂತಹ ಪಾತ್ರ ಸಿಕ್ಕಿದ ಕೂಡಲೇ ನಾನು ನಟಿಸಲು ತಯಾರಿದ್ದೇನೆ" ಎಂದು ಹೇಳಿದ್ದಾರೆ. ರಶ್ಮಿ ಪ್ರಭಾಕರ್ ಕೊನೆಯದಾಗಿ 'ಮನಸ್ಸೆಲ್ಲ ನೀನೆ' ಧಾರಾವಾಹಿಯಲ್ಲಿ ರಾಗಾಳಾಗಿ ಕಾಣಿಸಿಕೊಂಡಿದ್ದರು.

Wish to do next project in Kannada says Kannada actress Rashmi Prabhakar

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯಲ್ಲಿ ನಾಯಕಿ ರಾಗಾಳಾಗಿ ರಶ್ಮಿ ಪ್ರಭಾಕರ್ ಕಾಣಿಸಿಕೊಂಡಿದ್ದರು. ತದ ನಂತರ ಕಾರಣಾಂತರಗಳಿಂದ ಪಾತ್ರಕ್ಕೆ ವಿದಾಯ ಹೇಳಿದ ಈಕೆ ತೆಲುಗಿನ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಕಾವ್ಯ ಪಾತ್ರಕ್ಕೆ ಜೀವ ತುಂಬಿದ್ದರು.

ತದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಕ್ವೀನ್' ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು ರಶ್ಮಿ ಪ್ರಭಾಕರ್. ಸತತ ಹದಿನೇಳು ವಾರ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿರುವ ರಶ್ಮಿ ಪ್ರಭಾಕರ್ ಆ ಶೋವಿನಲ್ಲಿ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಚೆಲುವೆ.

More from Filmibeat

English summary
Do you know actress Rashmi Prabhakar wants to act in kannada serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X