For Quick Alerts
  ALLOW NOTIFICATIONS  
  For Daily Alerts

  ಅನಿರುದ್ಧ್ ಇಲ್ಲದೆ 'ಜೊತೆ ಜೊತೆಯಲಿ' ನೋಡಲ್ಲ ಅಂತಿರೋ ಜನ!

  |

  ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯವಾದ ಧಾರಾವಾಹಿಗಳಲ್ಲಿ 'ಜೊತೆ ಜೊತೆಯಲಿ' ಕೂಡ ಒಂದು. ಜೀ ಕನ್ನಡದಲ್ಲಿ ಹಲವು ದಿನಗಳಿಂದ 'ಜೊತೆ ಜೊತೆಯಲಿ' ಧಾರಾವಾಹಿ ಪ್ರಸಾರವಾಗುತ್ತಿದೆ. ಕಿರುತೆರೆ ವೀಕ್ಷಕರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಸೀರಿಯಲ್‌ನಲ್ಲಿ ಇವರ ಪಾತ್ರಗಳ ಮೂಲಕವೇ ಹೆಚ್ಚು ಜನಪ್ರಿಯಗೊಂಡ ಕತೆ ಇದು.

  ಆದ್ರೀಗ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಎಲ್ಲವೂ ಸರಿಯಿಲ್ಲ. ನಟ ಅನಿರುದ್ಧ್ ವಿರುದ್ಧ 'ಜೊತೆ ಜೊತೆಯಲಿ' ತಂಡ ತಿರುಗಿಬಿದ್ದಿದೆ ಎನ್ನಲಾಗಿದೆ. ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಮತ್ತು ಸೀರಿಯಲ್ ತಂಡದ ನಡುವೆ ವೈಮನಸ್ಯ ಉಂಟಾಗಿದೆ ಎನ್ನಲಾಗಿದೆ.

  'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?

  ಇನ್ನು ಮತ್ತೊಂದು ಕಡೆಗೆ ನಟ ಅನಿರುದ್ಧ್ ಅವ್ರನ್ನು ಕಿರುತೆರೆಯಿಂದ ಬ್ಯಾನ್ ಮಾಡಲಾಗುತ್ತದೆ ಎನ್ನುವ ಸುದ್ದಿ ಕೂಡ ಕೇಳಿಬಂದಿದೆ. ಆದರೆ ಈ ವಿವಾದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗ್ತಿದೆ. ನಟ ಅನಿರುದ್ಧ ಅವ್ರನ್ನು ಧಾರಾವಾಹಿಯಿಂದ ಕೈ ಬಿಡುವ ಮತ್ತು ಬ್ಯಾನ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

  ಅನಿರುದ್ಧ್ ಬ್ಯಾನ್‌ಗೆ ವಿರೋಧ!

  ಅನಿರುದ್ಧ್ ಬ್ಯಾನ್‌ಗೆ ವಿರೋಧ!

  ನಟ ಅನಿರುದ್ಧ್ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ವರ್ಷಗಳಿಂದ ಅಭಿನಯಿಸುತ್ತಾ ಬಂದಿದ್ದಾರೆ. ಈಗ ಈ ಸೀರಿಯಲ್‌ನಲ್ಲಿ ಹಲವು ಟ್ವಿಸ್ಟ್‌ಗಳು ಕೂಡ ಎದುರಾಗುತ್ತಿವೆ. ಕೇವಲ ಸೀರಿಯಲ್‌ನಲ್ಲಿ ಮಾತ್ರ ಟ್ವಿಸ್ಟ್‌ಗಳಿಲ್ಲ, ಸೀರಿಯಲ್ ತಂಡದಲ್ಲೂ ಟ್ವಿಸ್ಟ್ ಉಂಟಾಗಿದೆ. ಈ ಧಾರಾವಾಹಿಯಿಂದ ನಟ ಅನಿರುದ್ಧ್ ಅವ್ರನ್ನು ಕೈ ಬಿಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿದ ಬಳಿಕ ಜನರೆಲ್ಲ ತಂಡದ ವಿರುದ್ಧ ರೊಚ್ಚಿದ್ದಿದ್ದಾರೆ. ಇನ್ನು ಅನಿರುದ್ಧ್ ಅವ್ರನ್ನು ಬ್ಯಾನ್ ಮಾಡುವ ವಿಚಾರಕ್ಕೆ ವಿರೋಧ ವ್ಯಕ್ತವಾಗಿದೆ.

  ಅನಿರುದ್ಧ್‌ಗಾಗಿಯೇ ಸೀರಿಯಲ್ ನೋಡೋದು!

  ಅನಿರುದ್ಧ್‌ಗಾಗಿಯೇ ಸೀರಿಯಲ್ ನೋಡೋದು!

  ಧಾರಾವಾಹಿಯಿಂದ ಅನಿರುದ್ಧ್ ಬ್ಯಾನ್ ಆಗಿರುವ ವಿಷಯ ಹೊರ ಬೀಳುತ್ತಿದ್ದಂತೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಹಲವರು, ಅನಿರುದ್ಧ್ ಅವರಿಗಾಗಿಯೇ ಸೀರಿಯಲ್ಲ್ ನೋಡುತ್ತಾ ಇರುವುದು ಎಂದರೆ, ಮತ್ತೆ ಕೆಲವರು ಅನಿರುದ್ಧ್ ಅವರನ್ನು ಈ ಪಾತ್ರದಿಂದ ಕಿತ್ತು ಹಾಕಿದರೆ ಈ ಧಾರಾವಾಹಿಯನ್ನು ನೋಡುವುದೇ ಇಲ್ಲ ಎನ್ನುತ್ತಿದ್ದಾರೆ. ಜೊತೆಗೆ ಅವ್ರನ್ನು ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ ಎನ್ನುವ ಕೂಗು ಕೇಳಿ ಬರ್ತಿದೆ. ಒಟ್ಟಾರೆ ಈ ವಿಚಾರದಲ್ಲಿ ಪ್ರೇಕ್ಷಕರು ನಟ ಅನಿರುದ್ಧ್ ಪರವಾಗಿಯೇ ಇದ್ದಾರೆ. ಆದರೆ ಈ ವಿಚಾರ ಹೇಗೆ ಅಂತ್ಯವಾಗಲಿದೆಯೋ ನೋಡಬೇಕಿದೆ.

  ವಿವಾದದ ಬಗ್ಗೆ ಅನಿರುದ್ಧ ಪ್ರತಿಕ್ರಿಯೆ!

  ವಿವಾದದ ಬಗ್ಗೆ ಅನಿರುದ್ಧ ಪ್ರತಿಕ್ರಿಯೆ!

  ಹೆಸರಾಂತ ಧಾರಾವಾಹಿ 'ಜೊತೆ ಜೊತೆಯಲಿ' ಇಂದ ನಟ ಅನಿರುದ್ಧ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಮನಸ್ತಾಪದ ವಿಚಾರವಾಗಿ ಈ ಧಾರಾವಾಹಿಯ ಅನಿರುದ್ಧರನ್ನು ಕೈಬಿಡಲಾಗಿದೆ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ ನಟ ಅನಿರುದ್ಧ. "ನಾನು ಕೂಡ ಈ ವಿಚಾರವಾಗಿ ಹಲವು ಸುದ್ದಿಗಳು ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ಮುಂಜಾನೆಯಿಂದ ಇದಕ್ಕೆ ಸಂಬಂಧಪಟ್ಟ ಹಲವು ಸುದ್ದಿಗಳನ್ನು ಕೂಡ ಓದುತ್ತಾ ಇದ್ದೇನೆ. ಇದು ಕೇವಲ ಹರಿದಾಡುತ್ತಿರುವ ಸುದ್ದಿಗಳೇ ಹೊರತು ಧಾರಾವಾಹಿ ತಂಡ ಅಥವಾ ವಾಹಿನಿ ನನ್ನ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಹಾಗಾಗಿ ನಾನು ಅವರನ್ನು ಭೇಟಿಯಾಗಲು ಈಗ ಹೋಗುತ್ತಿದ್ದೇನೆ, ಮುಂದೆ ಏನಾಗುತ್ತದೋ ನೋಡಬೇಕು." ಎಂದಿದ್ದಾರೆ ನಟ ಅನಿರುದ್ಧ.

  ನಿರ್ಮಾಪಕನ ಪ್ರತಿಕ್ರಿಯೆ!

  ನಿರ್ಮಾಪಕನ ಪ್ರತಿಕ್ರಿಯೆ!

  ಸಿನಿಮಾ ಆಗಲಿ, ಧಾರಾವಾಹಿಯಾಗಲಿ ಕಥೆಯೇ ಹೀರೊ. ಇದೇ ಮಾತನ್ನು ಧಾರಾವಾಹಿಯ ನಿರ್ಮಾಪಕರಾದ ಆರೂರು ಜಗದೀಶ್ ಹೇಳುತ್ತಿದ್ದಾರೆ. "ಕಥೆಯೇ ಹೀರೊ, ಹೀರೊಯಿನ್. ಯಾರೇ ಇರಲಿ. ಯಾರು ಇಲ್ಲದೇ ಇರಲಿ. ಶೋ ನಡೆಯಬೇಕು. ನಡೆಯುತ್ತದೆ ಕೂಡ. ಯಾವುದೇ ವಾಹಿನಿ ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಹೀರೊ ಮಾಡಬಹುದು. ಅದು ವಾಹಿನಿಗೆ ಇರುವ ಶಕ್ತಿ. ಪ್ರತಿಯೊಂದು ಸಂಸ್ಥೆಗೂ ಇರುವಂತಹ ಶಕ್ತಿ."

  English summary
  Without Aniruddh We Will Not Watch Jothe Jotheyali, Says Netizens, Know More,
  Saturday, August 20, 2022, 17:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X