Shwetha Prasad ; ಶಾರದೆ ಲುಕ್ ನಲ್ಲಿ ಎಲ್ಲರ ಮನ ಗೆದ್ದ ನಟಿ ಶ್ವೇತಾ ಪ್ರಸಾದ್

By ಪ್ರಿಯಾ ದೊರೆ

ಕಿರುತೆರೆಯಿಂದ ದೂರವಾದರೂ ಎನ್ನುವಾಗಲೇ ಕಲರ್ಸ್ ಕನ್ನಡದ ಅಂತರಪಟ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟಿ ಶ್ವೇತಾ ಪ್ರಸಾದ್ ಅವರು ಈಗ ಶಾರದೆ ಆಗಿದ್ದಾರೆ. ಹೌದು, ಸದಾ ಒಂದಿಲ್ಲೊಂದು ಹೊಸ ಫೋಟೋಶೂಟ್ ಮಾಡಿಸುತ್ತಾ, ಅಭಿಮಾನಿಗಳಿಗೆ ಹೊಸ ವಿಚಾರಗಳನ್ನು ತಿಳಿಸಿಕೊಡುವ ನಟಿ ಶ್ವೇತಾ ಅವರನ್ನು ಪ್ರೀತಿಸುವ ಅಭಿಮಾನಿಗಳ ಸಂಖ್ಯೆ ಅಂತೂ ಕಡಿಮೆ ಆಗಿಲ್ಲ. ಹಾಟ್ ಲುಕ್ ಗೂ ಸೈ, ಟ್ರೆಡಿಷನಲ್ ಲುಕ್ ಗೂ ಜೈ ಎನ್ನುವ ನಟಿ ಶ್ವೇತಾ ಅವರು ಈಗ ದೇವರ ಅವತಾರವನ್ನು ತಾಳಿದ್ದಾರೆ. ಶ್ವೇತಾ ಅವರ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶಾರದಾಂಬೆ ಅವತಾರದಲ್ಲಿ ನಟಿ ಶ್ವೇತಾ

ನಟಿ ಶ್ವೇತಾ ಪ್ರಸಾದ್ ಅವರು ಆಗಾಗ ಹೊಸ ಹೊಸ ಲುಕ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಬಾರಿ ಯಾರೂ ಊಹಿಸಿದಂತಾ ಅವತಾರದಲ್ಲಿ ಕಂಡಿದ್ದಾರೆ. ತಲೆ ತುಂಬಾ ಮಂಗಳೂರು ಮಲ್ಲಿಗೆ ಹೂವನ್ನು ಮುಡಿದುಕೊಂಡು ಕೆಂಪು ಸೀರೆಯನ್ನು ಧರಿಸಿದ್ದು, ಕೈಯಲ್ಲಿ ವೀಣೆ ಹಾಗೂ ತಾವರೆ ಹೂವನ್ನು ಹಿಡಿದುಕೊಂಡು ಮಂಗಳೂರಿನ ಕುದ್ರೋಳಿಯ ಶಾರದಾ ದೇವಿಯ ಅವತಾರದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

written update on actress Shwetha Prasad new photoshoot

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಕನ್ನಡ ಕಿರುತೆರೆಯಲ್ಲಿ ಹೆಚ್ಚು ದಿನಗಳ ಕಾಲ ಇರದಿದ್ದರೂ ಕೂಡ, ಶ್ವೇತಾ ಪ್ರಸಾದ್ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ . ಕೆಲವೇ ಸಮಯ ಕಿರುತೆರೆಯಲ್ಲಿದ್ದ ಶ್ವೇತಾ ಅವರಿಗೆ ಈಗಲೂ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ಶ್ವೇತಾ ಪ್ರಸಾದ್ ಸದಾ ಆಕ್ಟೀವ್ ಆಗಿ ಇರುತ್ತಾರೆ. ಒಂದಲ್ಲ ಒಂದು ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಯಾವಾಗಲೂ ಹೊಸತನಕ್ಕೆ ತುಡಿಯುವ ಶ್ವೇತಾ ಅವರು ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಶ್ವೇತಾ ಪ್ರಸಾದ್ ಅವರು ಅತಿ ಹೆಚ್ಚು ಟ್ರಾವೆಲ್ ಮಾಡುತ್ತಾರೆ. ಇಡೀ ಭಾರತ ಸುತ್ತಾಡಿರುವ ಶ್ವೇತಾ ಅವರು, ಆಗಾಗ ತಮ್ಮ ಪ್ರವಾಸದ ಫೋಟೋಗಳನ್ನು ಕೂಡ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.

ಗೊಂಬೆಯಂತಿರುವ ಮುದ್ದು ನಟಿ

ಸದಾ ಬೇರೆಯವರಿಗೆ ಸಹಾಯ ಮಾಡುವ ಶ್ವೇತಾ ಪ್ರಸಾದ್ ಅವರು ತಂದೆಯ ಹೆಸರಿನಲ್ಲಿ ಹೊಸ ಎನ್ .ಜಿ.ಓ ಕೂಡ ಪ್ರಾರಂಭಿಸಿದ್ದರು. ಈ ಬಗ್ಗೆಯೂ ವೀಡಿಯೋ ಮಾಡಿದ್ದರು. ಅವರ ತಂದೆ ಪ್ರಸಾದ್ ಫೌಂಡೇಷನ್ ಮೂಲಕ ಎನ್ ಜಿಒ ಪ್ರಾರಂಭಿಸಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿ ಇರುವ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಮಲೆನಾಡಿನ ಬೆಡಗಿ ಶ್ವೇತಾ ಪ್ರಸಾದ್ ಅವರು ಎಲ್ಲಾ ಬಗೆಯ ಉಡುಗೆಯಲ್ಲೂ ಗೊಂಬೆಯಂತೆ ಕಂಗೊಳಿಸುತ್ತಿರುತ್ತಾರೆ.

ನಾಯಕಿಯಾಗಿ ನಟಿಸುತ್ತಾರಂತೆ ಶ್ವೇತಾ

ಭಾರತದ ಪ್ರವಾಸ ಮಾಡಿದ್ದು, ಕೇರಳ, ಮಂಗಳೂರು, ಉತ್ತರ ಕರ್ನಾಟಕ, ಉತ್ತರ ಭಾರತ, ಆಂಧ್ರ, ಅಸ್ಸಾಂ, ಕಾಶ್ಮೀರ ಹೀಗೆ ಎಲ್ಲೆಡೆ ಪ್ರವಾಸ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಸೌದಿ ಅರೇಬಿಯಾ ಸೇರಿದಂತೆ ಹೊರ ದೇಶಗಳಲ್ಲೂ ಸುತ್ತಾಡಿದ್ದಾರೆ. ಶ್ವೇತಾ ಅವರಿಗೆ ಟ್ರಾವೆಲಿಂಗ್ ಅಂದರೆ ಖುಷಿಯಂತೆ. ಹಾಗಾಗಿ ಹೊಸ ಹೊಸ ಜಾಗಗಳಿಗೆ ತೆರಳುತ್ತಿರುತ್ತಾರಂತೆ. ಇನ್ನು ಆಗಾಗ ಫೋಟೋಶೂಟ್ ಗಳ ಮೂಲಕ ಹೊಸ ಲುಕ್ ನಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಅಂತರಪಟ ಧಾರಾವಾಹಿಯಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ನಲ್ಲಿ ಕೆಲ ಸಮಯ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಇದನ್ನು ನೋಡಿದ ಅಭಿಮಾನಿಗಳು ಶ್ವೇತಾ ಅವರನ್ನು ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಿದ್ದಾರೆ.

More from Filmibeat

English summary
actress Shwetha Prasad new look uploaded in social media page
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X