ಹಿಟ್ಲರ್ ಕಲ್ಯಾಣದ ರಜಿನಿಯ ಪ್ರೀತಿ ವಿಚಾರ ರಟ್ಟಾಯ್ತಾ..? ಇವರೇನಾ ಪ್ರಿಯಕರ..?
ಸದ್ಯ ಸಿರಿ ಕನ್ನಡ ವಾಹಿನಿಯಲ್ಲಿ ಬ್ಯುಸಿಯಾಗಿರುವ ನಟಿ ರಜಿನಿ ಅವರು, ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ಒಂದು ದಿನವೂ ತಪ್ಪದಂತೆ ಜಿಮ್ ಗೆ ಹೋಗುತ್ತಾರೆ.ನಟಿ ರಜಿನಿ ಅವರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ರೀಲ್ಸ್ ಗಳನ್ನು ಅಪ್ ಲೋಡ್ ಮಾಡಿದ್ದಾರೆ. ಅದರಲ್ಲಿ ಹೆಚ್ಚಿನವು ಜಿಮ್ ನಲ್ಲಿ ಮಾಡಿರುವುದೇ ಆಗಿದೆ. ಅದರಲ್ಲೂ ಜಿಮ್ ನಲ್ಲಿ ತಮಗೆ ಪಾಟ್ನರ್ ಕೂಡ ಇದ್ದು, ಕುಚೇಷ್ಟೇ ಮಾಡುತ್ತಾ ಇಬ್ಬರೂ ಕಾಮಿಡಿಯಾಗಿರುವಂತಹ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ.
ಬಣ್ಣದ ಲೋಕದಲ್ಲಿ ನಟಿ ರಜಿನಿ
ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾ ಮನೆ ನಡೆಸಲು ಕಷ್ಟಪಟ್ಟು ದುಡಿಯುತ್ತಿದ್ದ ನಟಿ ರಜಿನಿ ಅವರು ಅಮೃತವರ್ಷಿಣಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು. ನಂತರ ಆತ್ಮ ಬಂಧನ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ರಿಯಾಲಿಟಿ ಶೋಗಳಾದ ಸ್ಟಾರ್ ಸಿಂಗರ್, ಡ್ಯಾನ್ಸಿಂಗ್ ಸ್ಟಾರ್ಸ್, ಮಜಾ ಟಾಕೀಸ್, ಸೂಪರ್ ಕ್ವೀನ್, ಕುಕ್ಕರಿ ಶೋಗಳಲ್ಲಿ ಭಾಗವಹಿಸಿದ್ದರು. ಕುಕ್ಕರಿ ಶೋ ಮತ್ತು ನಾರಿಗೊಂದು ಸೀರೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದರು. ಇನ್ನು ಅಂಬುಜ, ಅಸುರನ ಕೈಯಲ್ಲಿ ಪಾರಿಜಾತ, ಡವ್ ಮಂಜ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು.

ನಾರಿಗೊಂದು ಸೀರೆ ಕಾರ್ಯಕ್ರಮದಲ್ಲಿ ಬ್ಯುಸಿ
ಸೀರೆಗಳನ್ನು ಫೋನ್ ಕಾಲ್ ಮಾಡಿ ಅದರ ಬೆಲೆಯನ್ನು ನಿಖರವಾಗಿ ಹೇಳುವುದರ ಮೂಲಕ ಗೆಲ್ಲುವ ಕಾರ್ಯಕ್ರಮವೇ ನಾರಿಗೊಂದು ಸೀರೆ. ನಾರಿಗೊಂದು ಸೀರೆ ಶೋ ಕಳೆದ ಐದು ವರ್ಷಗಳಿಂದ ಪ್ರಸಾರವಾಗುತ್ತಿದೆ. ಮೊದಲು ಇದನ್ನು ನಟಿ ರಜಿನಿ ಅವರೇ ನಡೆಸಿಕೊಡುತ್ತಿದ್ದರು. ಫೋನ್ ಮಾಡುವವರ ಜೊತೆಗೆ ಮಾತನಾಡಿ ಅವರ ಪ್ರಕಾರ ಸೀರೆಯ ಬೆಲೆಯನ್ನು ನಿಖರವಾಗಿ ಹೇಳಿದವರಿಗೆ ಬಹುಮಾನವಾಗಿ ಸೀರೆಯನ್ನು ನಾರಿಯರಿಗೆ ಕೊಡುತ್ತಿದ್ದರು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸುವ ಸಲುವಾಗಿ ನಾರಿಗೊಂದು ಸೀರೆ ಕಾರ್ಯಕ್ರಮವನ್ನು ಕೈ ಬಿಡಲಾಯ್ತು. ಈಗ ಇದರ ಸೀಸನ್ 3 ಆರಂಭವಾಗಿದ್ದು, ಮತ್ತೆ ನಟಿ ರಜಿನಿ ಅವರು ನಡೆಸಿಕೊಡುತ್ತಿದ್ದಾರೆ.
ನಟಿ ರಜಿನಿ ಪ್ರೀತಿಸುತ್ತಿರುವ ಹುಡುಗ ಇವರೇನಾ..?
ಇನ್ನು ಇದೆಲ್ಲಾ ಬಿಡಿ ಇಂದು ನಟಿ ರಜಿನಿ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸ್ಟೋರಿ ಒಂದನ್ನು ಹಾಕಿದ್ದಾರೆ. ಅದರಲ್ಲಿ ತಮ್ಮ ಜಿಮ್ ಪಾರ್ಟ್ನರ್ ಹಾಗೂ ತಮ್ಮ ಕೈಯನ್ನು ಹಾಕಿದ್ದು, ಮುಷ್ಟಿ ಹಿಡಿದು ನರಗಳನ್ನು ತೋರಿಸುವ ಯತ್ನ ಮಾಡಿದ್ದಾರೆ. ಭವಿಷ್ಯವನ್ನು ಉತ್ತಮವಾಗಿ ಊಹಿಸಬೇಕೆಂದರೆ ಒಟ್ಟಿಗೆ ಸೃಷ್ಟಿಸಬೇಕು ಎಂದು ಬರೆಯಲಾಗಿದೆ. "ದಿ ಬೆಸ್ಟ್ ವೇ ಟು ಪ್ರಿಡಿಕ್ಟ್ ಫ್ಯೂಚರ್ ಈಸ್ ಟು ಕ್ರಿಯೇಟ್ ಟುಗೆದರ್" ಎಂದು ಹೇಳಿದ್ದಾರೆ. ಈ ಪೋಸ್ಟ್ ನೋಡಿದವರೆಲ್ಲಾ ರಜಿನಿ ಅವರು ತಮ್ಮ ಭವಿಷ್ಯದ ಪಾಟ್ನರ್ ಬಗ್ಗೆ ಮಾತನಾಡಿರಬಹುದು ಎಂದು ಗೆಸ್ ಮಾಡುತ್ತಿದ್ದಾರೆ.
ಪ್ರೀತಿಸಿ ಮದುವೆಯಾಗುತ್ತಾರಾ ರಜಿನಿ..?
ಕಳೆದ ವರ್ಷ ಖಾಸಗಿ ವಾಹಿನಿಯೊಂದು ಸಂದರ್ಶನ ಮಾಡಿದಾಗ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತಾರಳನ್ನು ಎಜೆ ಪ್ರೀತಿಸುವ ರೀತಿ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಾರಾ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ರಜಿನಿ ಹೌದು ಎಂದು ಹೇಳಿ ಸುಮ್ಮನಾಗಿದ್ದರು. ಈಗ ಈ ಪೋಸ್ಟ್ ನೋಡಿ ರಜಿನಿ ಅವರ ಪ್ರಿಯಕರ ಇವರೇ ಎಂದು ಗೆಸ್ ಮಾಡಿದ್ದಾರೆ. ಅದು ಬೇರೆ ಯಾರೂ ಅಲ್ಲ ನಿತ್ಯ ಜಿಮ್ ನಲ್ಲಿ ಒಟ್ಟಿಗೆ ರೀಲ್ಸ್ ಮಾಡುವ ಅರುಣ್ ಗೌಡ ಎಂದು. ಅಷ್ಟೇ ಅಲ್ಲದೇ, ರಜಿನಿ ಅರುಣ್ ಗೌಡ ಎಂದು ಇಬ್ಬರೂ ಸೇರಿ ಇನ್ ಸ್ಟಾಗ್ರಾಂ ಖಾತೆಯನ್ನು ಕೂಡ ಹೊಂದಿದ್ದಾರೆ. ಹಾಗಿದ್ದರೆ, ಅಭಿಮಾನಿಗಳು ಗೆಸ್ ಮಾಡಿದಂತೆ ಇವರಿಬ್ಬರು ರೀಲ್ಸ್ ಮತ್ತು ಜಿಮ್ ಅಷ್ಟೇ ಅಲ್ಲ ಲೈಫ್ ಪಾಟ್ನರ್ಸ್ ಕೂಡ ಆಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ನಟಿ ರಜಿನಿ ಅವರೇ ಸ್ಪಷ್ಟನೆ ನೀಡಬೇಕಿದೆ.


Click it and Unblock the Notifications











