Sara Annaiah ; ಸನ್ಯಾಸಿನಿ ಲುಕ್ ನಲ್ಲಿ ಸಾರಾ ಅಣ್ಣಯ್ಯ : ಪೋಸ್ಟ್ ಗಳನ್ನು ಕಡಿಮೆ ಮಾಡಿಕೊಂಡ ನಟಿ
ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಗೌತಮ್ ಮನೆಯ ಕಥೆಯಷ್ಟೇ ನಡೆಯುತ್ತಿದೆ. ಸದಾಶಿವ ಅಪೇಕ್ಷಾ ಮದುವೆಯಾದಾಗ ಕಾಣೆಯಾದರು.ಅಂದಿನಿಂದ ಇಂದಿನವರೆಗೂ ಮಹಿಮಾ ಮನೆಯ ಕಡೆಯವರು ನಾಪತ್ತೆಯಾಗಿದ್ದಾರೆ. ಮಲ್ಲಿಯ ಸೀಮಂತಕ್ಕೂ ಬರಲಿಲ್ಲ. ಮಲ್ಲಿಗೆ ಅಪಘಾತವಾದಾಗಲೂ ಕಾಣಿಸಿಕೊಳ್ಳಲಿಲ್ಲ. ಸದಾಶಿವ, ಮಂದಾಕಿನಿ, ಜೀವನ್ ಮತ್ತು ಮಹಿಮಾ ನಾಲ್ವರು ಕೂಡ ಸೀರಿಯಲ್ ನಿಂದ ನಾಪತ್ತೆಯಾಗಿದ್ದಾರೆ. ಇನ್ನು ಸ್ವಲ್ಪ ದಿನ ಹೋದರೆ, ಈ ಧಾರಾವಾಹಿಯಲ್ಲಿ ಕುಟಂಬವೊಂದಿತ್ತು ಎಂಬುದೇ ವೀಕ್ಷಕರಿಗೆ ಮರೆತು ಹೋಗುತ್ತದೆಯೋ ಏನೋ.
ಒಳ್ಳೆಯವಳಾಗಿರುವ ಮಹಿಮಾ
ಮಾಡೆಲಿಂಗ್ ಕ್ಷೇತ್ರದಿಂದ ಕಿರುತೆರೆಗೆ ಧುಮುಕಿದ ನಟಿ ಸಾರಾ ಅಣ್ಣಯ್ಯ ಅವರು ಈಗ ಕಂಪ್ಲೀಟ್ ಆಗಿ ನಟಿಯಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ನಟನೆ ಆರಂಭಿಸಿದಾಗಿನಿಂದಲೂ ನಟಿ ಸಾರಾ ಅಣ್ಣಯ್ಯ ಅವರು ಸಿರಿವಂತ ಕುಟುಂಬದ ಹುಡುಗಿಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಮೊದಲೆರಡು ಧಾರಾವಾಹಿಗಳಲ್ಲಿ ದುರಹಂಕಾರಿಯಾಗಿದ್ದರು. ಈಗಿನ ಅಮೃತಧಾರೆ ಧಾರಾವಾಹಿಯಲ್ಲಿ ಮೊದಲೂ ಹೆಡ್ ವೈಟ್ ಇದ್ದಂತೆ ನಟಿಸಿದರು. ಈಗ ಜೀವನ್ ಜೊತೆಗೆ ಮಿಡಲ್ ಕ್ಲಾಸ್ ಮನೆಗೆ ಎಂಟ್ರಿಕೊಟ್ಟ ಬಳಿಕ ಬಹಳ ಸಾಫ್ಟ್ ಆಗಿದ್ದಾರೆ. ಸದಾಶಿವ ಅವರ ಮನೆಗೆ ಹೊಂದಿಕೊಂಡಿದ್ದು, ಕೆಟ್ಟ ಆಲೋಚನೆಗಳಿಗೆ ಮಹಿಮಾ ಬ್ರೇಕ್ ಹಾಕಿದ್ದಾರೆ.

ಸನ್ಯಾಸಿನಿ ಆದ ಸಾರಾ ಅಣ್ಣಯ್ಯ
ಮಹಿಮಾ ಅಲಿಯಾಸ್ ಸಾರಾ ಅಣ್ಣಯ್ಯ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿಲ್ಲವಾದರೂ ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಇಣುಕಿ ನೋಡುತ್ತಿರುತ್ತಾರೆ. ಇದೀಗ ನಟಿ ಸಾರಾ ಅಣ್ಣಯನ್ನ ಅವರು ಸನ್ಯಾಸಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ನಟಿ ಸಾರಾವಾ ಅಣ್ಣಯ್ಯ ಅವರು ಮೇಲುಕೋಟೆಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಚೇಲುವನಾರಾಯಣ ಸ್ವಾಗಿ ಹಾಗೂ ಯೋಗಾ ನರಸಿಂಹ ದೇವರ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ. ಕಲ್ಯಾಣಿ ಬಳಿ ಫೋಟೋಗಳನ್ನು ತೆಗೆಸಿಕೊಂಡಿರುವ ಸಾರಾ ಅಣ್ಣಯ್ಯ ಅವರು ಸೀರೆ ಜೊತೆಗೆ ನಾಮ ಹಾಕಿಸಿಕೊಂಡಿರುವ ಕಾರಣ ಸನ್ಯಾಸಿನಿಯಂತೆ ಕಾಣಿಸಿದ್ದಾರೆ.
ಮಿರಮಿರನೆ ಮಿಂಚುವ ಹುಡುಗಿ
ನಟಿ ಸಾರಾ ಅಣ್ಣಯ್ಯ ಅವರು ಸಿಕ್ಕಾಪಟ್ಟೆ ಬೋಲ್ಡ್ ಆಗಿರುತ್ತಾರೆ. ಸದಾ ಕಾಲ ಸಿಕ್ಕಾಪಟ್ಟೆ ಫೋಟೋಶೂಟ್ ಅನ್ನು ಮಾಡಿಸುತ್ತಿರುತ್ತಾರೆ. ಮಾಡ್ರರ್ನ್ ಹಾಗೂ ಟ್ರೆಡಿಷನಲ್ ಲುಕ್ ನಲ್ಲಿ ಆಗಾಗಾ ಫೋಟೋ ಶೂಟ್ ಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ. ಸಾರಾ ಅವರ ಡ್ರೆಸ್ಸಿಂಗ್ ಫ್ಯಾಷನ್ ಅನ್ನು ಹುಡುಗಿಯರು ಇಷ್ಟ ಪಟ್ಟು ಫಾಲೋ ಮಾಡುತ್ತಾರೆ. ಅವರು ನಟಿಸಿರುವ ಮೂರೂ ಧಾರಾವಾಹಿಯಲ್ಲೂ ಧರಿಸಿರುವ ಉಡುಗೆಯೂ ಸೂಪರ್ ಆಗಿದ್ದು, ಫೋಟೋಶೂಟ್ ಮಾಡಿಸುವಾಗಲೂ ಸೂಪರ್ ಆಗಿ ರೆಡಿಯಾಗುತ್ತಾರೆ. ಕೆಲವೊಂದು ಬೋಲ್ಡ್ ಫೋಟೋಗಳಿಗೆ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ನಟಿ ಸಾರಾ ಅಣ್ಣಯ್ಯ ಅವರು ಯಾವುದೇ ಬಟ್ಟೆ ಧರಿಸಿದರೂ ಮಾಡೆಲ್ ನಂತೆಯೇ ಕಂಗೊಳಿಸುತ್ತಿರುತ್ತಾರೆ. ಎಲ್ಲಾ ರೀತಿಯಲ್ಲೂ ಉಡುಗೆಯಲ್ಲೂ ಮಿರಮಿರನೇ ಮಿಂಚುತ್ತಿರುತ್ತಾರೆ.
ಕಡಿಮೆಯಾದ ಪೋಸ್ಟ್ ಗಳು
ಸಾರಾ ಅಣ್ಣಯ್ಯ ಅವರು ಇದುವರೆಗೂ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಮೊದಲು 156 ಪೋಸ್ಟ್ ಗಳು ಇದ್ದವು ಆದರೆ ಇದೀಗ 59ಕ್ಕೆ ಇಳಿಕೆಯಾಗಿದ್ದು, 272ಕೆ ಫಾಲೋವರ್ಸ್ ಗಳಿದ್ದಾರೆ. ಹುಣಸೂರಿನ ಬೆಡಗಿ ಸಾರಾ ಅಣ್ಣಯ್ಯ ಅವರಿಗೆ ಟ್ರಾವೆಲಿಂಗ್ ಮಾಡುವುದೆಂದರೆ ಬಹಳ ಇಷ್ಟವಂತೆ. ಆಗಾಗ ಟ್ರಿಪ್ ಗಳಿಗೂ ಹೋಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸಾರಾ ಅವರು ಸಾಕಷ್ಟು ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸುತ್ತಾರೆ. ಸದ್ಯ ಶೂಟಿಂಗ್ ನಿಂದ ಬ್ರೇಕ್ ಕೊಟ್ಟಿರುವ ಸಾರಾ ಅವರು, ಇತ್ತೀಚೆಗೆ ಫೋಟೋಶೂಟ್ ಕೂಡ ಕಡಿಮೆ ಮಾಡಿದ್ದಾರೆ.


Click it and Unblock the Notifications











