ಸೀತಾರಾಮ ಧಾರಾವಾಹಿಯಿಂದ ಡಾ.ಮೇಘಶ್ಯಾಮ್ ಏಕಾಏಕಿ ಕಣ್ಮರೆಯಾಗಿದ್ದೇಕೆ ?
ಸೀತಾರಾಮ ಧಾರಾವಾಹಿಯಲ್ಲಿ ನಟ ಅರ್ಜುನ್ ಆದಿದೇವ ಅವರು ಮೇಘಶ್ಯಾಮ್ ಪಾತ್ರದ ಮೂಲಕ ವೀಕ್ಷಕರನ್ನು ಹೃದಯ ಗೆದ್ದಿದ್ದರು. ಆದರೆ, ಸಿಹಿಯ ನಿಜವಾದ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡ ಅರ್ಜುನ್ ಅವರು ಕೆಲವೇ ದಿನಗಳಲ್ಲಿ ಮಗಳು ತಮ್ಮ ಪಾಲಿಗೆ ಬೇಕು ಎಂಬ ಸ್ವಾರ್ಥವನ್ನು ತೋರಿಸಿದರು.
ಬಳಿಕ ಮಗಳ ಖುಷಿಯೇ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡ ಮೇಘಶ್ಯಾಮ್ ಮತ್ತು ಶಾಲಿನಿ ಸಿಹಿ ಇಷ್ಟದಂತೆ ಅವಳಿಂದ ದೂರಾಗಬೇಕಾಗಿ ಬಂತು.
ಮೇಘಶ್ಯಾಮ್ ಪಾತ್ರವನ್ನು ಮೆಚ್ಚಿಕೊಂಡ ಜನ
ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಸಾವನ್ನಪ್ಪಿದ್ದು, ಆತ್ಮ ಮಾತ್ರ ಅಲೆದಾಡುತ್ತಿದೆ. ಹೀಗಾಗಿ ಮೇಘಶ್ಯಾಮ್ ಪಾತ್ರ ಕೂಡ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ವೀಕ್ಷಕರು ಅರ್ಜುನ್ ಅವರನ್ನು ಬೇರೆ ಧಾರಾವಾಹಿಗಳಲ್ಲೂ ನೋಡಿದ್ದರು. ಅರ್ಜುನ್ ಅವರ ಲುಕ್ ಮತ್ತು ನಟನೆಯನ್ನು ಇಷ್ಟಪಟ್ಟಿದ್ದರು. ಆದರೆ, ಸೀತಾರಾಮ ಧಾರಾವಾಹಿಯಲ್ಲಿ ಅರ್ಜುನ್ ಅವರು ಮೊದಲು ಸಾಫ್ಟ್ ಪಾತ್ರದಲ್ಲಿ ಕಾಣಿಸಿಕೊಂಡರು. ಸಿಹಿಗೆ ಇಷ್ಟವಾಗುವಂತೆ ಇದ್ದರು. ಆದರೆ, ಸಿಹಿ ತಮ್ಮದೇ ಮಗು ಎಂಬ ಸತ್ಯ ತಿಳಿದ ಬಳಿಕ ಕೊಂಚ ರೆಬೆಲ್ ಆದರು. ರಾಮ್ ಮತ್ತು ಸೀತಾ ಬಳಿ ಬಹಳ ನಿಷ್ಠೂರವಾಗಿ ನಡೆದುಕೊಂಡರು. ಸಿಹಿಯನ್ನು ಬಲವಂತವಾಗಿ ತಮ್ಮ ಜೊತೆಗೆ ಇಟ್ಟುಕೊಂಡರು. ಈ ನೆಗೆಟಿವ್ ಪಾತ್ರವನ್ನು ಕೂಡ ವೀಕ್ಷಕರು ಮೆಚ್ಚಿಕೊಂಡು ಕೆಟ್ಟದಾಗಿ ಕಮೆಂಟ್ ಕೂಡ ಮಾಡುತ್ತಿದ್ದರಂತೆ.

ಕಾರಣಾಂತರಗಳಿಂದ ದೂರ ಉಳಿದ ಅರ್ಜುನ್
ಆದರೆ, ಕೆಲವೇ ಎಪಿಸೋಡ್ ಗಳಳ್ಲಿ ಕಾಣಿಸಿಕೊಂಡ ನಟ ಅರ್ಜುನ್ ಆದಿದೇವ ಅವರಿಗೆ ತ್ರಿಭಾಷೆಯಲ್ಲಿ ಮೂಡಿಬರಲಿರುವ ಚಿತ್ರವೊಂದರಲ್ಲಿ ನಟಿಸಲು ಅವಕಾಶ ದೊರಕಿತಂತೆ. ಆ ಚಿತ್ರಕ್ಕಾಗಿ ಅರ್ಜುನ್ ಅವರು ಒಂದೂವರೆ ತಿಂಗಳು ಕೆಲಸ ಮಾಡಬೇಕಿತ್ತಂತೆ. ಹೀಗಾಗಿ ಧಾರಾವಾಹಿ ತಂಡಕ್ಕೆ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕೆಲಸ ಮುಂದುವರೆಸಲಾಗದ ಕಾರಣ ಧಾರಾವಾಹಿ ತಂಡವನ್ನು ತೊರೆದಿದ್ದರು. ಆದರೆ, ದುರಾದೃಷ್ಟವಶಾತ್ ಸಿನಿಮಾ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ಮತ್ತೆ ಸೀತಾರಾಮ ಧಾರಾವಾಹಿ ತಂಡಕ್ಕೆ ಈ ವಿಚಾರವನ್ನು ತಿಳಿಸುವುದು ಸರಿಯಲ್ಲ ಎಂದು ಅರ್ಜುನ್ ಅವರು ಸುಮ್ಮನಾಗಿದ್ದಾರೆ. ಧಾರಾವಾಹಿ ತಂಡಕ್ಕೆ ಮತ್ತೆ ಹೋದರೆ ಕಥೆಗೆ ಸಮಸ್ಯೆ ಆಗಬಹುದು ಎಂದು ಆಲೋಚಿಸಿ ಸುಮ್ಮನಿದ್ದಾರೆ.
ಧಾರಾವಾಹಿ ತಂಡದಿಂದ ಬಂದಿದೆ ಫೋನ್
ಇದೇ ವೇಳೆಗೆ ಸೀತಾರಾಮ ಧಾರಾವಾಹಿಯ ಕಥೆ ಹೊಸ ದಿಕ್ಕಲ್ಲಿ ಸಾಗಿದೆ. ಅದರೊಂದಿಗೆ ನಟ ಅರ್ಜುನ್ ಅವರಿಗೆ ಧಾರಾವಾಹಿ ತಂಡದಿಂದ ಮತ್ತೆ ಫೋನ್ ಕಾಲ್ ಕೂಡ ಬಂದಿದೆಯಂತೆ. ಮುಂದಿನ ದಿನಗಳಲ್ಲಿ ಸೀತಾರಾಮ ಸೀರಿಯಲ್ ನಲ್ಲಿ ಮತ್ತೆ ಮೇಘಶ್ಯಾಮ್ ಪಾತ್ರದ ಮೂಲಕ ಕಾಣಿಸಿಕೊಳ್ಳಲೂ ಬಹುದು ಎಂದು ನಟ ಅರ್ಜುನ್ ಆದಿದೇವ ಅವರು ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ಮಾತನ್ನು ಕೇಳಿದ ಮೇಘಶ್ಯಾಮ್ ಪಾತ್ರದ ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದಾರೆ.
ಮತ್ತೆ ಧಾರಾವಾಹಿಗೆ ಹೋದರೆ ಕಥೆ ಬದಲಾಗುತ್ತಾ..?
ಹಾಗೊಂದು ವೇಳೆ ನಟ ಅರ್ಜುನ್ ಅವರು ಮತ್ತೆ ಸೀತಾರಾಮ ಧಾರಾವಾಹಿಯ ತಂಡವನ್ನು ಸೇರಿಕೊಂಡರೆ, ಈಗ ಕೊಂಚ ಬೋರ್ ಆಗಿರುವ ಸೀರಿಯಲ್ ಇಂಟರೆಸ್ಟಿಂಗ್ ಅನಿಸಬಹುದಾ..? ಹಾಗೇನಾದರೂ ಮೇಘಶ್ಯಾಮ್ ಪಾತ್ರ ಮತ್ತೆ ಬಂದರೆ, ಸುಬ್ಬಿ ಶ್ಯಾಮ್ ಕೈ ಸೇರುತ್ತಾಳಾ..? ಇಲ್ಲ ಮತ್ತೆ ಸೀತಾ ಮತ್ತು ಶ್ಯಾಮ್ ನಡುವೆ ಮತ್ತೆ ಗೊಂದಲ ಸೃಷ್ಟಿಯಾಗುತ್ತಾ..? ಇದರಿಂದ ಧಾರಾವಾಹಿಯ ಕತೆಯನ್ನು ವೀಕ್ಷಕರು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ಎಂಬ ಎಲ್ಲಾ ರೀತಿಯ ಪ್ರಶ್ನೆಗಳು ಎದ್ದಿವೆ. ಆದರೆ, ಅರ್ಜುನ್ ಅವರ ಅಭಿಮಾನಿಗಳು ಮೇಘಸ್ಯಾಮ್ ಪಾತ್ರಕ್ಕಾಗಿ ಎದುರು ನೋಡುತ್ತಿರುವುದಂತೂ ಪಕ್ಕಾ ಆಗಿದೆ.


Click it and Unblock the Notifications











