Chandan Kumar ; ಆ ಕಡೆ ಪತ್ನಿ ಗರ್ಭಿಣಿ ಈ ಕಡೆ ಫ್ಲರ್ಟ್ ಮಾಡಿದ ಚಂದನ್ ಕುಮಾರ್,ಫ್ಯಾನ್ಸ್ ಶಾಕ್..!
ರಾಧಾ ಕಲ್ಯಾಣ ಸೀರಿಯಲ್ ಮೂಲಕ ಹುಡುಗಿಯರ ಮನಸ್ಸನ್ನು ಗೆದ್ದ ನಟ ಚಂದನ್ ಕುಮಾರ್ ಈಗ ಫ್ಲರ್ಟ್ ಮಾಡಲು ಮುಂದಾಗಿದ್ದಾರೆ.ಹೌದು ಪತ್ನಿ ಕವಿತಾ ಗರ್ಭಿಣಿಯಾಗಿದ್ದಾರೆ. ಈ ಸಂದರ್ಭದಲ್ಲೇ ಚಂದನ್ ಕುಮಾರ್ ಅವರು ಫ್ಲರ್ಟ್ ಮಾಡುತ್ತಿರುವ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.ನಿನ್ನೆ ನಟಿ ಕವಿತಾ ಗೌಡ ಅವರ ಹುಟ್ಟು ಹಬ್ಬವಿತ್ತು. ಈ ಬರ್ತ್ ಡೇ ಕವಿತಾ ಗೌಡ ಅವರಿಗೆ ತುಂಬಾ ಸ್ಪೆಷಲ್. ಯಾಕೆಂದರೆ ಒಡಲಲ್ಲಿ ಪುಟಾಣಿ ಕಂದಮ್ಮನನ್ನು ಇರಿಸಿಕೊಂಡಿದ್ದು, ಹೊಸ ಬದುಕಿನತ್ತ ಮುಖ ಮಾಡಿದ್ದಾರೆ.
ನಟನೆಯಿಂದ ಶುರು ಮಾಡಿ ಡೈರೆಕ್ಷನ್ ವರೆಗೆ
ಈ ಸಂದರ್ಭದಲ್ಲಿ ಪತಿ ಚಂದನ್ ಕುಮಾರ್ ಅವರು ಕೂಡ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಕೂಡ. ಫ್ಲರ್ಟ್ ಮಾಡುವುದನ್ನು ಗುಡ್ ನ್ಯೂಸ್ ಎನ್ನುತ್ತಿದ್ದೀರಲ್ಲ ಎಂದು ಯಾರು ಆಶ್ಚರ್ಯ ಪಡಬೇಕಿಲ್ಲ. ಫ್ಲರ್ಟ್ ಎಂಬುದು ನಟ ಚಂದನ್ ಕುಮಾರ್ ಅವರ ನಟನೆಯ ಹೊಸ ಸಿನಿಮಾ. ಅದರಲ್ಲೇನು ವಿಶೇಷ ಎಂದು ನೀವು ಕೇಳುವುದಾದರೆ, ಪತ್ನಿ ತಾಯಿಯಾಗಿ ಬಡ್ತಿ ಪಡೆಯುವ ಈ ಸಂದರ್ಭದಲ್ಲಿ ನಟ ಚಂದನ್ ಕುಮಾರ್ ಕೂಡ ಡೈರೆಕ್ಟರ್ ಆಗಿ ಪ್ರಮೋಷನ್ ತೆಗೆದುಕೊಂಡಿದ್ದಾರೆ. ಚಂದನ್ ಕುಮಾರ್ ಅವರು ಫ್ಲರ್ಟ್ ಸಿನಿಮಾದಲ್ಲಿ ನಟಿಸುವ ಜೊತೆಗೆ ಡೈರೆಕ್ಷನ್ ಕೂಡ ಅವರೇ ಮಾಡುತ್ತಿದ್ದಾರೆ. ನಿರ್ದೇಶಕನಾಗಿ ಬಡ್ತಿ ಪಡೆದಿದ್ದು, ಅಭಿಮಾನಿಗಳು ಸುದ್ದಿ ಕೇಳಿ ಸಂತಸಗೊಂಡಿದ್ದಾರೆ.

ಕಿರುತೆರೆ ಮೂಲಕ ಚಂದನ್ ಹಿರಿತೆರೆ ಪಯಣ
ನಟ ಚಂದನ್ ಕುಮಾರ್ ಅವರು ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಪ್ಯಾಟೆ ಬಂದಿ ಹಳ್ಳಿಗ್ ಬಂದ್ರು ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡರು. ಲೈಫು ಇಷ್ಟೇನೆ, ಪರಿಣಯ, ಎರಡೊಂದ್ಲಾ ಮೂರು, ಲವ್ ಯೂ ಆಲಿಯಾ, ಪ್ರೇಮ ಬರಹ ಸೇರಿದಂತೆ ಸುಮಾರು ಸಿನಿಮಾಗಳಲ್ಲಿ ನಟಿಸಿದರು. ಎಲ್ಲಾ ಸಿನಿಮಾಗಳಲ್ಲೂ ಲೀಡ್ ರೋಲ್ ನಲ್ಲಿ ನಟಿಸಿದ ಚಂದನ್ ಅವರದ್ದು ಫ್ಲರ್ಟ್ ಸಿನಿಮಾ 10ನೇ ಸಿನಿಮಾವಾಗಿದೆ. ಇನ್ನು ಬಿಗ್ ಬಾಸ್ ಸೀಸನ್ 3 ರಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿ ಹೊರ ಬಂದರು.
ಯುವತಿಯರು ಇಷ್ಟ ಪಡುವ ಸಿನಿಮಾ
ಲಕ್ಷ್ಮೀ ಬಾರಮ್ಮ, ಸರ್ವಮಂಗಳ ಮಾಂಗಲ್ಯೇ, ಮರಳಿ ಮನಸಾಗಿದೆ ಕನ್ನಡ ಧಾರಾವಾಹಿಗಳು ಹಾಗೂ ಸಾವಿತ್ರಮ್ಮ ಗಾರಿ ಅಬ್ಬಾಯಿ, ಶ್ರೀಮತಿ ಶ್ರೀನಿವಾಸ್ ತೆಲುಗು ಸೀರಿಯಲ್ ಗಳಲ್ಲೂ ನಾಯಕನಾಗಿ ಮಿಂಚಿದ್ದಾರೆ. ನಟನೆಯೊಂದಿಗೆ ಚಂದನ್ ಕುಮಾರ್ ಅವರು ಹೋಟೆಲ್ ಬಿಸಿನೆಸ್ ಕೂಡ ಮಾಡುತ್ತಿದ್ದಾರೆ. ಇದೀಗ ಯಾವುದೇ ತರಬೇತಿ ಇಲ್ಲದೇ ಡೈರೆಕ್ಷನ್ ಮಾಡಲು ಮುಂದಾಗಿದ್ದು, ಯುವಕರಿಗೆ ಫ್ಲರ್ಟ್ ಸಿನಿಮಾ ಬಹಳ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಈ ಸಿನಿಮಾ ಕಾಮಿಡಿ ಹಾಗೂ ಆಕ್ಷನ್ ಆಗಿರಲಿದ್ದು, ಕಮರ್ಷಿಯಲ್ ಚಿತ್ರ ಇದಾಗಿದೆ ಎಂದು ತಿಳಿಸಿದ್ದಾರೆ.
ಹಿರಿಯ ಕಲಾವಿದರ ಜೊತೆ ಚಂದನ್ ಚಿತ್ರ
ಇನ್ನು ಮೊದಲ ಬಾರಿಗೆ ಡೈರೆಕ್ಷನ್ ಮಾಡುತ್ತಿರುವ ಫ್ಲರ್ಟ್ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದ್ದು, ಇದರಲ್ಲಿ ಶ್ರುತಿ, ಅವಿನಾಶ್, ಸಾಧು ಕೋಕಿಲ, ಗಿರಿ ಶಿವಣ್ಣ ಸೇರಿದಂತೆ ಹಲವರು ನಟಿಸುತ್ತಿದ್ದಾರಂತೆ. ಈ ಚೆತ್ರಕ್ಕೆ ಜೆಸ್ಸಿ ಗಿಫ್ಟ್ ಅವರ ಸಂಗೀತವಿರಲಿದ್ದು, ವೇಣು ಅವರ ಛಾಯಾಗ್ರಹಣ ಇರಲಿದೆ. ಎವರೆಸ್ಟ್ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಖುಷಿ ಸುದ್ದಿಯನ್ನು ಕೇಳಿದ ಅಭೀಮಾನಿಗಳೂ ಚಂದನ್ ಕುಮಾರ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದು, ಸಿನಿಮಾ ಸಕ್ಸಸ್ ಆಗಲಿ ಎಂದು ವಿಶ್ ಮಾಡುತ್ತಿದ್ದಾರೆ.


Click it and Unblock the Notifications











