ಬಿಗ್ ಬಾಸ್‌ನಲ್ಲಿ ಗೆದ್ದ ಹಣದಿಂದ ವರ್ಷದ ನಂತರ ಹೊಸ ಬಿಸಿನೆಸ್ ಶುರುಮಾಡಿದ ಸ್ಫರ್ಧಿ..!

By ಪ್ರಿಯಾ ದೊರೆ

ಬಿಗ್ ಬಾಸ್ ಸೀಸನ್ 10 ರಲ್ಲಿ ವಿನ್ನರ್ ಆಗಿ ಹೊರ ಹೊಮ್ಮಿದ ನಟ ಕಾರ್ತಿಕ್ ಮಹೇಶ್ ಅವರು ನಟನೆಯ ಜೊತೆಗೆ ಇದೀಗ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ಉತ್ತಮವಾದ ಜೀವನವನ್ನು ನಡೆಸಲು ನಟನೆಯೊಂದೇ ಸಾಕಾಗುವುದಿಲ್ಲ ಎಂದು ಹಲವು ನಟ-ನಟಿಯರು ತಮ್ಮದೇ ಆದ ಬಿಸಿನೆಸ್ ಗಳನ್ನು ಕೂಡ ಹೊಂದಿರುತ್ತಾರೆ. ನಟಿ ತನಿಷಾ ಕುಪ್ಪಂಡಾ, ಸಾನ್ಯಾ ಅಯ್ಯರ್, ಶೃತಿ ರಮೇಶ್, ರೂಪಿಕಾ, ನಟ ಚಂದನ್ ಕುಮಾರ್, ಶಮಂತ್ ಗೌಡ ಸೇರಿದಂತೆ ಹಲವರು ತಮ್ಮದೇ ಬಿಸಿನೆಸ್ ಅನ್ನು ಕೂಡ ಹೊಂದಿದ್ದಾರೆ. ಇದೀಗ ಈ ಸಾಲಿಗೆ ನಟ ಕಾರ್ತಿಕ್ ಮಹೇಶ್ ಅವರು ಕೂಡ ಸೇರಿಕೊಳ್ಳಲು ತಯಾರಿ ನಡೆಸಿದ್ದಾರೆ.

ಕನಸಿನ ಬೆನ್ನು ಹತ್ತಿದ ನಟ

ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ಕಾರ್ತಿಕ್ ಮಹೇಶ್ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು ಖುಷಿ ಧಾರಾವಾಹಿಯ ಮೂಲಕ. ಬಳಿಕ ಅಕ್ಕ, ಮಹಾಕಾಳಿ, ದೇವಯಾನಿ, ಇಂತಿ ನಿಮ್ಮ ಆಶಾ, ಪುಟ್ಟಕ್ಕನ ಮಕ್ಕಳು ಹಾಗೂ ಅಂತರಪಟ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಕಾರ್ತಿಕ್ ಅವರು ನಟಿಸಿದ ಮೊದಲ ಸಿನಿಮಾವೇ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟಿದೆ. ಡೊಳ್ಳು ಸಿನಿಮಾದಲ್ಲಿ ಇವರ ನಟನೆಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಮೂಲತಃ ಮೈಸೂರಿನವರಾದ ಕಾರ್ತಿಕ್ ಅವರು ಮಹಾರಾಜ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿದ್ದಾರೆ. ಬಾಲ್ಯದಿಂದಲೂ ನಟನೆ ಮಾಡುವ ಕನಸು ಹೊತ್ತ ಇವರು ಬಳಿಕ ಕಿರುತೆರೆಗೆ ಆಗಮಿಸಿ ಕನಸನ್ನು ನನಸು ಮಾಡಿಕೊಂಡರು.

Written update on actor karthik Mahesh

ಸಿನಿಮಾ ಜೊತೆಗೆ ಹೊಸ ಯೋಜನೆ

ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿ ವಿನ್ನರ್ ಆದ ಕಾರ್ತಿಕ್ ಮಹೇಶ್ ಅವರಿಗೆ ನೇಮ್, ಫೇಮ್ ಎಲ್ಲವೂ ಸಿಕ್ಕಿದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟ ಕಾರ್ತಿಕ್ ಮಹೇಶ್ ಅವರು ನಟಿಸುತ್ತಿದ್ದು, ಕಂಪ್ಲೀಟ್ ಆಗಿ ಬ್ಯುಸಿಯಾಗಿದ್ದಾರೆ. ಸದ್ಯ ರಾಮರಸ ಹಾಗೂ ರಿಚಿ ರಿಚ್ ಸಿನಿಮಾ ಶೂಟಿಂಗ್ ನಲ್ಲಿ ಕಾರ್ತಿಕ್ ಮಹೇಶ್ ಅವರು ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಕಾರ್ತಿಕ್ ಮಹೇಶ್ ಅವರು ಮತ್ತೊಂದು ಹೊಸ ಹೆಜ್ಜೆಯನ್ನು ಇಡಲು ಮುಂದಾಗಿದ್ದಾರೆ.

ಹೊಸ ಬಿಸಿನೆಸ್ ಮಾಡಲಿರುವ ನಟ

ಈಗ ವಿಷಯ ಏನಪ್ಪ ಅಂದರೆ, ಇಷ್ಟೆಲ್ಲಾ ಹೆಸರುವಾಸಿಯಾಗಿರುವ ಕಾರ್ತಿಕ್ ಅವರು ಬಿಸಿನೆಸ್ ಅನ್ನು ಆರಂಭಿಸಲು ತಯಾರಿ ನಡೆಸಿದ್ದಾರೆ. ಅದರಲ್ಲೂ ತಾಯಿ ಜೊತೆಗೆ ಸೇರಿಕೊಂಡು ಕಾರ್ತಿಕ್ ಅವರು ತಮ್ಮ ಹೊಸ ಬಿಸಿನೆಸ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಬಿಸಿನೆಸ್ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಕಾರ್ತಿಕ್ ಅವರು ಬಿಸಿನೆಸ್ ಪಾರ್ಟ್ನರ್ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ಬಿಸಿನೆಸ್ ಎಲ್ಲಿ, ಯಾವಾಗ ಪ್ರಾರಂಭವಾಗುತ್ತಿದೆ ಎಂಬುದರ ಬಗ್ಗೆ ತಿಳಿದು ಬರಬೇಕಿದೆ.


ಅಮ್ಮನ ಜೊತೆಗೆ ಹೊಸ ಹೆಜ್ಜೆ

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಮ್ಮನ ಫೋಟೋವನ್ನು ಹಂಚಿಕೊಂಡಿರುವ ಕಾರ್ತಿಕ್ ಅವರು ಇವಳು ಗೆದ್ದಾಗ ಹಿಗ್ಗಲಿಲ್ಲ, ಸೋತಾಗ ಕುಗ್ಗಲು ಬಿಡಲಿಲ್ಲ, ಪ್ರತಿಯೊಂದು ಹೆಜ್ಜೆಯಲ್ಲೂ ಮುನ್ನುಗ್ಗು ಮಗನೇ ಎಂದು ಧೈರ್ಯ ತುಂಬುವಳು, ಮುಂದಿನ ಹೆಜ್ಜೆಯಲ್ಲೂ ಜೊತೆಯಾಗಿದ್ದಾಳೆ.. ನನ್ನ ಮೊದಲ ಟೀಚರ್... ನನ್ನ ಮೊದಲ ಚಿಯರ್ ಲೀಡರ್... ದಿನದ ಆರಂಭ, ಕೊನೆ ಎಲ್ಲವೂ... ಪ್ರಸ್ತುತ ಪಡಿಸುತ್ತಿದ್ದೇನೆ GOLIFY ... with ಅಮ್ಮ, ಆದಷ್ಟು ಬೇಗ ಮಾರುಕಟ್ಟೆಗೆ ಎಂದು ಬರೆದುಕೊಂಡಿದ್ದಾರೆ. ಕಾರ್ತಿಕ್ ಅವರು ಕೈ ಹಾಕಿರುವ ಈ ಹೊಸ ಬಿಸಿನೆಸ್ ಆದಷ್ಟು ಭೇಗ ಸಕ್ಸಸ್ ಕೊಡಲಿ. ನಮ್ಮ ಕಡೆಯಿಂದ ಕಾರ್ತಿಕ್ ಮಹೇಶ್ ಅವರಿಗೆ ಆಲ್ ದಿ ಬೆಸ್ಟ್.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X