ಸದ್ದು ಗದ್ದಲ ಇಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಮಂಜು ಪಾವಗಡ, ಬಿಗ್ ಬಾಸ್ ವಿನ್ನರ್ ಹೃದಯ ಗೆದ್ದ ಹುಡುಗಿ ಯಾರು..?

By ಪ್ರಿಯಾ ದೊರೆ

ಎಲ್ಲರನ್ನು ನಗಿಸುವ ಹಾಸ್ಯ ನಟ ಮಂಜು ಪಾವಗಡ ಅವರು ಬಹಳ ಕಷ್ಟದ ಜೀವನವನ್ನು ನೋಡಿದ್ದಾರೆ. ಆದರೆ, ಬಿಗ್‌ ಬಾಸ್‌ ಗೆ ಎಂಟ್ರಿ ಕೊಟ್ಟಿದ್ದೆ ಅವರ ಲಕ್‌ ಬದಲಾಗಿ ಹೋಯ್ತು. ತಮ್ಮ ಕಾಮಿಡಿ ಮೂಲಕವೇ ವೀಕ್ಷಕರನ್ನು ಸೆಳೆದಿರುವ ಮಂಜು ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಹಂತ ಹಂತವಾಗಿ ಬೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಮನೆಯನ್ನು ಖರೀದಿಸಿದ್ದಾರೆ. ಇಂಥಾ ಮಂಜು ಪಾವಗಡ ಅವರು ಜೀವನದಲ್ಲಿ ಇದೀಗ ಪತಿಯಾಗಿ ಬಡ್ತಿ ಪಡೆಯಲು ಮುಂದಾಗಿದ್ದಾರೆ. ಇದೇನಿದು ಎಂದು ಕೇಳಿ ಶಾಕ್‌ ಆಯ್ತಾ..? ಹೌದು ಮಂಜು ಪಾವಗಡ ಅವರ ಲೈಫ್ ಗೆ ಹೊಸ ಸದಸ್ಯರ ಎಂಟ್ರಿಯಾಗುತ್ತಿದೆ.

ಸೈಲೆಂಟ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಮಂಜು

ಸದ್ದಿಲ್ಲದೇ ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಂದಿನಿ ಎಂಬ ಹುಡುಗಿ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದು, ಇವರ ಎಂಗೇಜ್ಮೆಂಟ್‌ ಫೋಟೋಗಳು ವೈರಲ್‌ ಆಗಿವೆ. ನಂದಿನಿ ಅವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇತರೆ ಮಾಹಿತಿ ಲಭ್ಯವಿಲ್ಲ. ಮನೆಯವರ ಸಮ್ಮುಖದಲ್ಲಿ ಮಂಜು ಪಾವಗಡ ಅವರು ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ನವೆಂಬರ್ 13 ಹಾಗೂ 14ರಂದು ಮದುವೆ ನಡೆಯಲಿದ್ದು, ಇವರದ್ದು ಅರೇಂಜ್‌ ಮ್ಯಾರೇಜ್‌ ಎಂದು ಹೇಳಲಾಗಿದೆ. ಇನ್ನು ಮಂಜುಉ ಪಾವಗಡ ಅವರ ನಿಶ್ಚಿತಾರ್ಥದ ಫೋಟೋ ನೋಡಿ ಅಭಿಮಾನಿಗಳು, ಸ್ನೇಹಿತರು ಶುಭ ಕೋರಿದ್ದಾರೆ.

Written update on Actor manju pavagada engagement

ಮಂಜು ಅವರ ಮುಂದಿನ ಪ್ರಾಜೆಕ್ಟ್‌ಗಳು

ಬಿಗ್ ಬಾಸ್ ಮೂಲಕ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿರುವ ಮಂಜು ಪಾವಗಡ ಅವರು, ಮಜಾ ಭಾರತ, ಗಿಚ್ಚಿ ಗಿಲಿ ಗಿಲಿ ಎಂಬ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನು ನಗಿಸುತ್ತಿರುತ್ತಾರೆ. ಇನ್ನು ಮಜಾಭಾರತ ಮೂಲಕ ಕಿರುತರೆಗೆ ಎಂಟ್ರಿ ಕೊಟ್ಟ ಮಂಜು ಪಾವಗಡ ಅವರು, ರುದ್ರಾಕ್ಷಿಪುರ, ನಾ ಮುಟ್ಟಿದ್ದೆಲ್ಲಾ ಚಿನ್ನ, ಎಲಾ ಕುನ್ನಿ, ಕಥಾ ಲೇಖನ, ವಾಸಂತಿ ನಲಿದಾಗ, ಲವ್ ಯು ಟೂ, ವೇಷ, ರೈಡರ್, ಯದಾ ಯದಾ ಹಿ, ನಾನು ನನ್ ಜಾನು, ಜಾರ್ಡನ್ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇದರೊಂದಿಗೆ ವೆಬ್ ಸೀರೀಸ್ ಗಳಲ್ಲಿಯೂ ನಟಿಸಿದ್ದಾರೆ.

ಕನಸು ನನಸು ಮಾಡಿಕೊಂಡಿದ್ದ ನಟ

ಇನ್ನು ಮಂಜು ಪಾವಗಡ ಅವರು ಬಿಗ್ ಬಾಸ್ ಸೀಸನ್ 8ರಲ್ಲಿ ಅತ್ಯುತ್ತಮವಾಗಿ ಸ್ಪರ್ಧಿಸಿ ವಿನ್ನರ್ ಆಗಿ ಹೊರ ಬಂದಿದ್ದರು. ನಂತರ ಅಂತರಪಟ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಸದ್ಯ ಭಾಗ್ಯ ಧಾರಾವಾಹಿಯಲ್ಲು ನಟಿಸುತ್ತಿದ್ದಾರೆ. ಎರಡರಲ್ಲೂ ನೆಗೆಟಿವ್‌ ರೋಲ್‌ ನಲ್ಲಿ ಕಾಣಿಸಿಕೊಂಡಿರುವ ನಟ ಮಂಜು ಪಾವಗಡ ಅವರು ವೀಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗಷ್ಟೇ ನಟ ಮಂಜು ಪಾವಗಡ ಅವರು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು.

ಮಂಜು ಅವರ ಮುಂದಿನ ಸಿನಿಮಾಗಳು

ಬೆಂಗಳೂರಿನಲ್ಲಿ ಸ್ವಂತ ಮನೆಯನ್ನು ಖರೀದಿ ಮಾಡಿದ ಮಂಜು ಪಾವಗಡ ಅವರು ಗೃಹಪ್ರವೇಶವನ್ನು ನೆರವೇರಿಸಿದ್ದಾರೆ. ಗೃಹಪ್ರವೇಶಕ್ಕೆ ಮಂಜು ಪಾವಗಡ ಅವರು ತಮ್ಮ ಗೆಳೆಯರಾದ ರಾಜೀವ್, ಅಂಕಿತ ಜಯರಾಮ್ ಮುಂತಾದವರು ಆಗಮಿಸಿ ಶುಭ ಹಾರೈಸಿದ್ದರು. ಇನ್ನು ಮಂಜು ಪಾವಗಡ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್‌ ಗಳು ಇವೆ. ಎಲಾ ಕಾಲ ಎಳೆಯುತ್ತೆ ಕಾಲ, 45 ಸೇರಿದಂತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಜೀವನದಲ್ಲಿ ಬಡ್ತಿ ಪಡೆಯಲು ಮುಂದಾಗಿರುವ ಮಂಜು ಪಾವಗಡ ಅವರ ಜೀವನಕ್ಕೆ ನಂದಿನಿ ಅವರ ಎಂಟ್ರಿ ಆಗಿದೆ. ಮುಂದಿನ ತಿಂಗಳು ಇಬ್ಬರೂ ಸಪ್ತಪದಿ ತುಳಿಯಲಿದ್ದು, ಇವರ ನಿಶ್ಚಿತಾರ್ಥದ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X