Nakul Sharma ; ನಕುಲ್ ಶರ್ಮಾ ಹುಟ್ಟುಹಬ್ಬ : ಶ್ರೀರಸ್ತು ಶುಭಮಸ್ತು ಅಭಿಗೆ ಈಗ ವಯಸ್ಸೆಷ್ಟು ಗೊತ್ತಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಎಂದರೆ ಆಗುವುದಿಲ್ಲ ಎನ್ನುತ್ತಿದ್ದ ಮಕ್ಕಳು ಈಗ ಅಪ್ಪನನ್ನು ಇಷ್ಟಪಡುತ್ತಿದ್ದಾರೆ. ಅಪ್ಪ ಮದುವೆಯಾಗಿ ಕರೆ ತಂದಾಕೆಗೆ ನೋವು ಕೊಡುತ್ತಿದ್ದವರು ಈಗ ಪ್ರೀತಿಸಲು ಶುರು ಮಾಡಿದ್ದಾರೆ. ಧಾರಾವಾಹಿ ಶುರುವಾದಾಗ ಇದ್ದ ರೀತಿಗೂ ಈಗಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಶಾರ್ವರಿ ತನ್ನ ಸ್ವಾರ್ಥಕ್ಕಾಗಿ ಅಭಿ ಹಾಗೂ ಅವಿ ಮನದಲ್ಲಿ ದ್ವೇಷವನ್ನು ಹುಟ್ಟು ಹಾಕಿದ್ದಳು. ಆದರೆ, ತುಳಸಿ ಮನೆಗೆ ಬಂದ ಬಳಿಕ ನಿಧಾನವಾಗಿ ಅದೆಲ್ಲವೂ ಬದಲಾಗುತ್ತಾ ಹೋಯ್ತು. ತಂದೆ ಮಾಧವ್ ಬಗ್ಗೆ ಮಕ್ಕಳಿಗೆ ಗೌರವ ಕೂಡ ಬಂತು
ಅಮ್ಮನ ಕಾಳಜಿ ಹೆಚ್ಚಿಸಿಕೊಂಡ ಮಕ್ಕಳು
ಅವಿ ಮೊದಲು ತುಳಸಿ ಮತ್ತು ಮಾಧವ್ ಇಬ್ಬರನ್ನೂ ಒಪ್ಪಿಕೊಂಡ. ತನ್ನ ತಂದೆಯ ತಪ್ಪಿರುವುದಿಲ್ಲ ಎಂಬ ನಂಬಿಕೆಗೆ ಬಂದ. ಅವರಿಬ್ಬರ ಮದುವೆಯನ್ನೂ ಒಪ್ಪಿಕೊಂಡ. ತುಳಸಿ ಗುಣಗಳನ್ನು ಇಷ್ಟಪಟ್ಟ. ಅವರನ್ನು ಅಪ್ಪ-ಅಮ್ಮ ಎಂದು ಒಪ್ಪಿಕೊಂಡ. ಇಬ್ಬರ ಬಗ್ಗೆಯೂ ಕಾಳಜಿ ಮಾಡಿದ. ಈಗ ಅಭಿ ಸಂಕೋಚದಿಂದಲೇ ತುಳಸಿ ಮತ್ತು ಮಾಧವ್ ನನ್ನು ಮಾತನಾಡಿಸುತ್ತಾನೆ. ಅಲ್ಲದೇ, ಇಬ್ಬರನಮ್ನೂ ಕಾಳಜಿ ಕೂಡ ಮಾಡುತ್ತಿದ್ದಾನೆ. ಶಾರ್ವರಿ ಮಾಡಿದ ಪ್ಲಾನ್ ಗಳೆಲ್ಲವೂ ಉಲ್ಟಾ ಆಗುತ್ತಿದೆ. ಅದರಲ್ಲೂ ಅಭಿ ಮತ್ತು ಅವಿ ಸೇರಿಕೊಂಡು ತುಳಸಿ ಹೆಸರಲ್ಲಿ ಹೊಸ ಕಂಪನಿಯನ್ನು ಪ್ರಾರಂಭಿಸಬೇಕು ಎಂದು ತೀರ್ಮಾನಿಸಿದ್ದಾರೆ.

ಅಭಿ ಪಾತ್ರದ ಮೂಲಕ ಮಿಂಚುತ್ತಿರುವ ನಟ
ಇನ್ನು ಅಭಿ ಪಾತ್ರವನ್ನು ನಿರ್ವಹಿಸುತ್ತಿರುವ ನಟನ ನಿಜವಾದ ಹೆಸರು ನಕುಲ್ ಶರ್ಮಾ. ನಕುಲ್ ಶರ್ಮಾ ಅವರ ನಟನೆ ಬಹಳ ಸಾಫ್ಟ್ ಆಗಿದ್ದು, ನೋಡುವವರಿಗೆ ಮನೆಯ ಮಕ್ಕಳು ಹಠ ಮಾಡಿದಂತೆ ಕಾಣುತ್ತದೆ. ಅಭಿ ಮಾಡುವ ಹಠವನ್ನು ನೋಡಿದರೆ, ಎಂಥವರಿಗೂ ಸಮಾಧಾನ ಮಾಡಬೇಕು ಅನಿಸುತ್ತದೆಯೇ ಹೊರತು ಕೂಗಾಡಬೇಕು, ಶಿಕ್ಷಿಸಬೇಕು ಎಂದು ಅನಿಸಲ್ಲ. ನಕುಲ್ ಅವರು ಅಷ್ಟು ಅದ್ಭುತವಾಗಿ ನಟಿಸುತ್ತಿದ್ದಾರೆ. ನಕುಲ್ ಶರ್ಮಾ ಉದಯೋನ್ಮುಖ ನಟ. ನಕುಲ್ ಅವರಿಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಒಳ್ಳೆಯ ವೇದಿಕೆಯಾಗಿದ್ದು, ನಕುಲ್ ಅವರ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ನಕುಲ್ ಶರ್ಮಾ ಪ್ರಾಜೆಕ್ಟ್ ಗಳು
ನಕುಲ್ ಶರ್ಮಾ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುವ ಮುನ್ನ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಧ್ರುವ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿ ನಕುಲ್ ಅವರಿಗೆ ಎರಡನೇಯ ಪ್ರಾಜೆಕ್ಟ್. ಇನ್ನು ಕಿರುತೆರೆ ಬಿಟ್ಟರೆ, ನಕುಲ್ ಅವರು ಎಡಕಲ್ಲು ಗುಡ್ಡದ ಮೇಲೆ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಎಂಬ ಚಿತ್ರದಲ್ಲೂ ನಕುಲ್ ಅವರು ಬಣ್ಣ ಹಚ್ಚಿದ್ದಾರೆ. ಬಣ್ಣದ ಲೋಕದ ಬಗ್ಗೆ ಸಾಕಷ್ಟು ಕನಸು ಹೊತ್ತು ಬಂದಿದ್ದಾರೆ. ನಕುಲ್ ಶರ್ಮಾ ಅವರು ಬಿಗ್ ಬಾಸ್ ಸೀಸನ್ 11 ಪ್ರಾರಂಭವಾದ ದಿನ ತನ್ನ ಗೆಳೆಯ ಶಿಶಿರ್ ಅವರನ್ನು ಕಳಿಸಿಕೊಡಲು ಆಗಮಿಸಿದ್ದರು.
ನಕುಲ್ ಶರ್ಮಾ ಹುಟ್ಟುಹಬ್ಬ
ಇದಿಷ್ಟೇ ಅಲ್ಲದೇ, ನಕುಲ್ ಶರ್ಮಾ ಅವರು ಮಿಸ್ಟರ್ ಹ್ಯಾಂಡಸಮ್ ಆಫ್ ಸೌತ್ ಕರ್ನಾಟಕ 2017 ನಲ್ಲಿ ಭಾಗವಹಿಸಿ ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂದು ನಕುಲ್ ಶರ್ಮಾ ಅವರ ಹುಟ್ಟುಹಬ್ಬ. ಹೀಗಾಗಿ ಸಹಕಲಾವಿದರು, ಸ್ನೇಹಿತರು, ಸಂಬಂಧಿಕರೆಲ್ಲರೂ ನಕುಲ್ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. ನಕುಲ್ ಶರ್ಮಾ ಅವರಿಗೆ ಇನ್ನೂ ಕೇವಲ 26 ವರ್ಷ ವಯಸ್ಸಾಗಿದೆ. ಸದ್ಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಎಲ್ಲರಿಗಿಂತಲೂ ಚಿಕ್ಕವರು ಇವರೇ. ಿನ್ನು ನಕುಲ್ ಶರ್ಮಾ ಅವರ ಬಣ್ಣದ ಲೋಕದ ಪಯಣ ಇನ್ನಷ್ಟು ಸುಗಮವಾಗಿರಲಿ ಎಂದು ಹಾರೈಸೋಣ.


Click it and Unblock the Notifications











