ಮುದ್ದಾದ ಮಗಳಿಗೆ ನಾಮಕರಣ ಮಾಡಿ ಸಂಭ್ರಮಿಸಿದ ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು..!

By ಪ್ರಿಯಾ ದೊರೆ

ಸತ್ಯ ಧಾರಾವಾಹಿ ಖ್ಯಾತಿಯ ನಟ ಸಾಗರ್ ಬಿಳಿ ಗೌಡ ಹಾಗೂ ನಟಿ ಸಿರಿ ರಾಜು ಅವರು ಕಳೆದ ವರ್ಷ ಸಪ್ತಪದಿ ತುಳಿದಿದ್ದರು. ಮದುವೆಯಾಗಿ ವರ್ಷ ಕಳೆಯುವ ಮುನ್ನವೇ ಗುಡ್ ನ್ಯೂಸ್ ಕೊಟ್ಟಿದ್ದರು. ಇದೇ ವರ್ಷ ಯುಗಾದಿ ಹಬ್ಬದ ದಿನ ಮನೆಗೆ ಮಹಾಲಕ್ಷ್ಮೀ ಆಗಮಿಸಿದ್ದಳು. ಹೆಣ್ಣು ಮಗುವಿಗೆ ಸಿರಿ ಜನ್ಮ ನೀಡಿದ್ದು, ಚೊಚ್ಚಲ ಮಗುವಿನೊಂದಿಗೆ ಯುಗಾದಿ ಹಬ್ಬವನ್ನು ಆಚರಿಸಿದ್ದರು. ಮಗಳಿಗೆ ಈಗ ಒಂಭತ್ತು ತಿಂಗಳು. ಮಗಳಿಗೆ ನಾಮಕರಣವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಮಗಳ ನಾಮಕರಣ ವೀಡಿಯೋವನ್ನು ಸಾಗರ್ ಮತ್ತು ಸಿರಿ ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಮಗಳಿಗೆ ನಾಮಕರಣ ಮಾಡಿದ ನಟ-ನಟಿ

ಕಿರುತೆರೆ ನಟಿ ಸಿರಿ ರಾಜು ಅವರು ಯುಗಾದಿ ಹಬ್ಬದ ದಿನವೇ ಮಹಾಲಕ್ಷ್ಮೀಗೆ ಜನ್ಮ ನೀಡಿದ್ದರು. ಈಗ ತಮ್ಮ ಮಗಳಿಗೆ ಒಂಭತ್ತು ತಿಂಗಳಾಗಿದ್ದು, ಮಗಳಿಗೆ ಹೆಸರಿಟ್ಟು ಸಂಭ್ರಮಿಸಿದ್ದಾರೆ. ಅದ್ಧೂರಿಯಾಗಿ ಮಗಳ ನಾಮಕರಣವನ್ನು ನೆರವೇರಿಸಿರುವ ನಟ-ನಟಿ, ಮಗಳ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಮಗಳಿಗೆ ಪ್ರಹರ್ಷ ಎಂದು ನಾಮಕರಣ ಮಾಡಿದ್ದಾರೆ. ಮಗಳಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಅದೇ ಅರ್ಥ ನೀಡುವ ಹೆಸರನ್ನು ಇಟ್ಟಿದ್ದಾರೆ, ನೆಟ್ಟಿಗರು ಸಿರಿ ಮತ್ತು ಸಾಗರ್ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ. ಮಗಳಿಂದ ನಿಮ್ಮ ಕುಟುಂಬಕ್ಕೆ ಇನ್ನಷ್ಟು ಒಳಿತಾಗಲಿ ಎಂದು ಶುಭ ಕೋರಿದ್ದಾರೆ.

Written update on actor Sagar bili gouda daughters naming ceremony

ಕುಟುಂಬದಲ್ಲಿ ಬ್ಯುಸಿಯಾದ ಜೋಡಿಗಳು

ಸಾಗರ್ ಮತ್ತು ಸಿರಿ ಇಬ್ಬರೂ ಬಣ್ಣದ ಲೋಕದಲ್ಲೇ ಇದ್ದರೂ ಕೂಡ ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದರು. ಈ ವಿಚಾರವನ್ನು ಇಂಡಸ್ಟ್ರಿಯಲ್ಲಿ ಯಾರಿಗೂ ತಿಳಿಯದಂತೆ ಕಾಪಾಡಿಕೊಂಡಿದ್ದರು. ಸಾಗರ್ ಬಿಳಿಗೌಡ ಅವರು ಸಿರಿ ರಾಜು ಅವರ ಜೊತೆ 2023 ಜನವರಿ 26 ರಂದು ಸಪ್ತಪದಿ ತುಳಿದಿದ್ದರು. ಮದುವೆಯಾದ ವರ್ಷವೇ ಗರ್ಭಿಣಿಯಾದ ಸಿರಿ ಅವರು ಇದೇ ವರ್ಷ ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. ಬಾಣಂತನದಲ್ಲಿ ಬ್ಯುಸಿಯಾಗಿದ್ದ ಸಿರಿ ಅವರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಕೆಲ ಆಡ್ ಗಳಲ್ಲಿ ಸಿರಿ ಅವರು ಮಾಡೆಲ್ ಆಗಿ ಕಾರ್ಯ ನಿರ್ವಹಿಸಿದ್ದರು. ದಂಪತಿಗಳಿಬ್ಬರೂ ತಂದೆ-ತಾಯಿಯಾಗಿ ಬಡ್ತಿ ಪಡೆದು ಕ್ಯಾಮರಾದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು.


ಪತಿ-ಪತ್ನಿ ಇಬ್ಬರೂ ನಟರೇ

ನಟಿ ಸಿರಿ ರಾಜು ಅವರು ಕೂಡ ಧಾರಾವಾಹಿಗಳಲ್ಲಿ ನಟಿಸಿದ್ದು, ಮದುವೆಯಾದ ಬಳಿಕ ಶೂಟಿಂಗ್ ಗಳಿಗೆ ಬ್ರೇಕ್ ಕೊಟ್ಟಿದ್ದರು. ಆದರೆ, ಸೋಶೀಯಲ್ ಮೀಡಿಯಾದಲ್ಲಿ ಮಾತ್ರ ಮಿಸ್ ಮಾಡದೇ ಆಗಾಗ ತಮ್ಮ ಬಗ್ಗೆ ಅಪ್ ಡೇಟ್ಸ್ ಗಳನ್ನು ನೀಡುತ್ತಿರುತ್ತಾರೆ. ಇನ್ನು ಕಿರುತೆರೆಯಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚಿದ ಸಾಗರ್ ಬಿಳಿ ಗೌಡ ಅವರಿಗೆ ಸತ್ಯ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿತು. ಸಾಗರ್ ಬಿಳಿ ಗೌಡ ಅವರು ಕಾರ್ತಿಕ್ ಅಂದರೆ, ಅಮುಲ್ ಬೇಬಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು.


ಕಿರುತೆರೆಯಿಂದ ದೂರ ಉಳಿದ ನಟ

ಸಾಗರ್ ಬಿಳಿ ಗೌಡ ಅವರಿಗೆ ನಟಿಸುವುದು ಎಂದರೆ ತುಂಬಾನೇ ಇಷ್ಟ. ನಟನಾಗುವ ಆಸೆಯಿಂದ ಕೆಲ ತರಬೇತಿಗಳನ್ನು ಕೂಡ ಫಾರಿನ್ ನಲ್ಲಿ ಪಡೆದವರು ಸಾಗರ್. ಇನ್ನು ಸಾಗರ್ ಅವರು ಲಂಡನ್ ನಲ್ಲಿ ಎಂಬಿಎ ಓದಿ, ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಮಾಡಿಕೊಂಡಿದ್ದಾರೆ. ಕಂಪನಿ ಕೆಲಸವನ್ನು ಬಿಟ್ಟು ಕಿರುತೆರೆಗೆ ಬಂದು ನಟನೆಯನ್ನೇ ವೃತ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಸದ್ಯ ಕಿರುತೆರೆಯಿಂದ ದೂರ ಉಳಿದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X