ಸೋಶಿಯಲ್ ಮೀಡಿಯಾ ಮೂಲಕ ಕಿರುತೆರೆಗೆ ಬಂದ ಗಾಯಕ ಈಗ ಸಿನಿಮಾ ಹೀರೋ..!
ಬಿಗ್ ಬಾಸ್ ಮೂಲಕ ಕಿರುತೆರೆಗೆ ಬಂದು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಜನಪ್ರಿಯ ಧಾರಾವಾಹಿಯಲ್ಲಿ ನಟ ಶಮಂತ್ ಗೌಡ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿ TRPಯಲ್ಲಿಯೂ ಮುಂದಿದ್ದು, ಇದಕ್ಕೆ ಅನೇಕ ಪ್ರೇಕ್ಷಕರಿದ್ದಾರೆ. ನಾಯಕ ವೈಷ್ಣವ್ ಪಾತ್ರವನ್ನು ಶಮಂತ್ ಅವರು ನಿರ್ವಹಿಸುತ್ತಿದ್ದಾರೆ. ಬಿಗ್ ಬಾಸ್ ಗೆ ಬರುವ ಮುನ್ನ ಶಮಂತ್ ಅವರು ಬ್ರೋ ಗೌಡ ಎಂದೇ ಫೇಮಸ್ ಆಗಿದ್ದರು. ಆಗ ಸೋಶಿಯಲ್ ಮೀಡಿಯಾ ಹಾಗೂ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ರಾಪ್ ಸಾಂಗ್ಸ್ ಹಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು.
ಸೋಶಿಯಲ್ ಮೀಡಿಯಾದಿಂದ ಹಿಟ್ ಆದ ನಟ
ತಮ್ಮ ಕಂಠಕ್ಕೆ ಸಾಥ್ ಕೊಟ್ಟ ಸೋಶಿಯಲ್ ಮೀಡಿಯಾ ಮೂಲಕ ಜನರಿಗೆ ಹತ್ತಿರವಾಗಿದ್ದರು. ಕಲರ್ಸ್ ಕನ್ನಡ ಬಿಗ್ ಬಾಸ್ ಮನೆಯ ಸ್ಫರ್ಧಿಯನ್ನಾಗಿ ಶಮಂತ್ ಅವರನ್ನು ಆಯ್ಕೆ ಮಾಡಿ ಕಿರುತೆರೆ ಲೋಕಕ್ಕೆ ಪರಿಚಯಿಸಿತು. ಶಮಂತ್ ಮೂಲತಃ ಬೆಂಗಳೂರಿನವರಾಗಿದ್ದು, ಭಗವಾನ್ ಮಹಾವೀರ ಜೈನ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪಡೆದಿದ್ದಾರೆ. ಇಂಟೀರಿಯರ್ ಡಿಸೈನಿಂಗ್ ಕೂಡ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಶಮಂತ್ ಅವರಿಗೆ ಅಭಿಮಅನಿಗಳ ಬಳಗ ಹೆಚ್ಚಾಗ ತೊಡಗಿತು. ಬಳಿಕ ಲಕ್ಷ್ಮೀ ಬಾರ್ಮ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ಒದಗಿ ಬಂತು.

ವೈಷ್ಣವ್ ಗೆ ಒಲಿದು ಬಂದ ಅದೃಷ್ಟ
ನಿಜ ಜೀವನದಲ್ಲೂ ಗಾಯಕನಾಗಿರುವ ಶಮಂತ್ ಅವರಿಗೆ ಧಾರಾವಾಹಿಯ ವೈಷ್ಣವ್ ಪಾತ್ರವೂ ಗಾಯಕನಾಗಿದ್ದು, ಅದೇ ಪಾತ್ರದಲ್ಲಿ ಈಗ ಶಮಂತ್ ಅವರು ನಟಿಸುತ್ತಿದ್ದಾರೆ. ವೈಷ್ಣವ್ ಪಾತ್ರದ ಶಮಂತ್ ಗೌಡ ಅವರಿಗೆ ನಾಯಕಿಯಾಗಿ ಲಕ್ಷ್ಮಿ ಪಾತ್ರದಲ್ಲಿ ನಟಿ ಭೂಮಿಕಾ ನಟಿಸಿದ್ದಾರೆ. ಜೊತೆಗೆ ಎರಡನೇ ನಾಯಕಿಯಾಗಿ ಕೀರ್ತಿ ಪಾತ್ರದಲ್ಲಿ ನಟಿ ತನ್ವಿರಾವ್ ಕಾಣಿಸಿಕೊಂಡಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ವಿಲನ್ ಕಾವೇರಿ ಜೈಲು ಪಾಲಾಗಿದ್ದು, ಲಕ್ಷ್ಮೀ ಹೆಗಲಿಗೆ ಕೀರ್ತಿಯ ಜವಾಬ್ದಾರಿ ಬಿದ್ದಿದೆ. ಹಳೆಯದನ್ನೆಲ್ಲಾ ಮರೆತು ಮಗುವಿನಂತಿರೋ ಕೀರ್ತಿಯನ್ನು ಲಕ್ಷ್ಮಿಯೇ ಸಂಬಾಳಿಸಬೇಕಾಗಿದೆ.
ಸಿನಿಮಾ ನಾಯಕನಾದ ಶಮಂತ್
ಇನ್ನು ನಟ ಶಮಂತ್ ಗೌಡ ಅವರಿಗೆ 2025 ಅದೃಷ್ಟದ ವರ್ಷವಾಗಿದ್ದು, ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಕಾಲ ಕೂಡಿ ಬಂದಿದೆ. ಸ್ಯಾಂಡಲ್ ವುಡ್ ನಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾ ಒಂದಕ್ಕೆ ಶಮಂತ್ ಅವರು ನಾಯಕನಾಗಿ ಆಯ್ಕೆ ಆಗಿದ್ದಾರೆ. ರಾಘು, ಶೆಫ್ ಚಿದಂಬರ ಸಿನಿಮಾಗಳ ನಿರ್ದೇಶಕ ಎಂ ಆನಂದ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಇದು ಕನ್ನಡದಲ್ಲಿ ಮೂಡಿ ಬರುತ್ತಿರುವ ಮೊದಲ ಜೊಂಬಿ ಸಿನಿಮಾ ಇದಾಗಿರಲಿದೆ ಎಂದು ಹೇಳಿದ್ದಾರೆ. ಅಲ್ಲದೇ, ಈ ಚಿತ್ರದಲ್ಲಿ ಹೈ-ಲೆವೆಲ್ ಆಕ್ಷನ್ ಸೀನ್ಗಳು ಇರಲಿವೆ. ವೈಲೆಂಟ್ ಆಕ್ಷನ್ ಡ್ರಾಮಾ ಸಿನಿಮಾ ಇದಾಗಿರಲಿದ್ದು, ಈಗಾಗಲೇ ಈ ಚಿತ್ರದ ಟೀಸರ್ ಸಿದ್ಧವಾಗಿದೆ ಎಂದು ಕೂಡ ಹೇಳಲಾಗಿದೆ.
ಜೊಂಬಿ ಚಿತ್ರದ ಶೂಟಿಂಗ್
ಈ ಜೊಂಬಿ ಚಿತ್ರ ಹೆಚ್ಚಾಗಿ ಕಾಡಿನ ಮಧ್ಯೆ ಶೂಟಿಂಗ್ ನಡೆಯಲಿದೆ. ಹಾಗಾಗಿ ಕೊಡಗು, ಚಿಕ್ಕಮಗಳೂರು ಸುತ್ತಮುತ್ತ ಶೂಟಿಂಗ್ ಮಾಡಲು ಪ್ಲಾನ್ ಸಿದ್ಧವಾಗಿದೆ. ಇದರೊಂದಿಗೆ ಚಿತ್ರಕ್ಕೆ ಇನ್ನಷ್ಟು ಕಲಾವಿದರನ್ನು ಆಯ್ಕೆ ಮಾಡುವುದು ಬಾಕಿ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ. ಲಕ್ಷ್ಮೀಬಾರಮ್ಮ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ಇದರ ಬಳಿ ಶಮಂತ್ ಅವರು ಸ್ಯಾಂಡಲ್ ವುಡ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳಂತೂ ಹ್ಯಾಪಿ ಆಗಿದ್ದಾರೆ


Click it and Unblock the Notifications