Sudarshan Rangaprasad ; ಮದುವೆ ವಾರ್ಷಿಕೋತ್ಸವ, ಹೆಂಡತಿ ಕಾಲೆಳೆದ ನಟ ಸುದರ್ಶನ್ ರಂಗಪ್ರಸಾದ್
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸಿಡುಕು ಮೂತಿ ತಾಂಡವ್ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಇರಬಹುದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ತಾಂಡವ್ ಪಾತ್ರವನ್ನು ವೀಕ್ಷಕರು ಸ್ವಲ್ಪವೂ ಇಷ್ಟ ಪಡುವುದಿಲ್ಲ. ಆದರೆ, ತಾಂಡವ್ ಅಲಿಯಾಸ್ ಸುದರ್ಶನ್ ರಂಗಪ್ರಸಾದ್ ಅವರ ನಿಜ ಜೀವನವನ್ನು ಕಂಡು ಖುಷಿ ಪಡುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಭಾಗ್ಯಳನ್ನು ಮದುವೆಯಾಗಿದ್ದು, ಅವಳು ದಡ್ಡಿ ಎಂಬ ಕಾರಣಕ್ಕೆ ಶ್ರೇಷ್ಠಳನ್ನು ಇಷ್ಟಪಡುವ ಕಾರಣ ವೀಕ್ಷಕರು ಬೇಸರ ಮಾಡಿಕೊಳ್ಳುತ್ತಿದ್ದಾರೆ.
ತಾಂಡವ್ ಅಲಿಯಾಸ್ ಸುದರ್ಶನ್
ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ನೋಡುವ ಪ್ರತಿಯೊಬ್ಬರೂ ತಾಂಡವ್ ನ ಬೈಯುತ್ತಲೇ ಇರುತ್ತಾರೆ. ಭಾಗ್ಯಳ ಜೊತೆಗೆ ಬಾಳುವುದು ಬಿಟ್ಟು ಯಾಕೆ ದಡ್ಡನಂತೆ ಆಡುತ್ತಿದ್ದಾನೋ ಎಂದು ಹೇಳುತ್ತಿರುತ್ತಾರೆ. ಸುದರ್ಶನ್ ಅವರು ಕಿರುತೆರೆಗೆ ಎಂಟ್ರಿಕೊಟ್ಟು ತಾಂಡವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಭಾಗ್ಯಲಕ್ಷ್ಮೀ ಧಾರಾವಾಹಿ ಸುದರ್ಶನ್ ಅವರ ಮೊದಲ ಸೀರಿಯಲ್. ಇದರಲ್ಲಿ ಭಾಗ್ಯ ಪತಿ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಸುದರ್ಶನ್ ಅವರು ರಿಯಲ್ ಪತ್ನಿ ಜೊತೆಗೆ ಇಂದು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಪ್ರೀತಿಸಿ ಮದುವೆಯಾದ ಜೋಡಿಗಳು
ನಟ ಸುದರ್ಶನ್ ರಂಗಪ್ರಸಾದ್ ಅವರು ಸ್ಯಾಂಡಲ್ ವುಡ್ ನಟಿ ಸಂಗೀತಾ ಭಟ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಎಂಟು ವರ್ಷಗಳ ಹಿಂದೆ ಈ ಜೋಡಿ ಪ್ರೀತಿಸಿ ಸಿಂಪಲ್ ಆಗಿ ಮದುವೆಯಾಗಿದ್ದಾರೆ. ಜರ್ಮನಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್ ರಂಗಪ್ರಸಾದ್ ಅವರು ಬೆಂಗಳೂರಿಗೆ ವಾಪಸ್ ಬಂದು ಸಂಗೀತಾ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದರು. ನಂತರ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾದರು. ಎಂಟು ವರ್ಷದ ದಾಂಪತ್ಯ ಜೀವನವನ್ನು ಸುಖವಾಗಿ ಕಳೆದ ಈ ಜೋಡಿಗಳು ಈಗ ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಬ್ಬರು ಫೊಟೋ ಜೊತೆಗೆ ಒಬ್ಬರಿಗೊಬ್ಬರು ವಿಶ್ ಮಾಡಿಕೊಂಡಿದ್ದಾರೆ.

ಆನಿವರ್ಸರಿ ಆಚರಿಸಿಕೊಂಡ ಜೋಡಿಗಳು
ಅಲ್ಲದೇ, ಸುದರ್ಶನ್ ಅವರು ತಮ್ಮ ತಾಳ್ಮೆಗೆ ಹ್ಯಾಟ್ಸ್ ಆಫ್ ಹೇಳಿದ್ದು, ಸಂಗೀತಾ ಅವರ ಕಾಲು ಎಳೆದಿದ್ದಾರೆ. ನಿನ್ನನ್ನು ಹ್ಯಾಂಡಲ್ ಮಾಡಲು ನನ್ನೊಬ್ಬನಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಇದಕ್ಕೆ ಸಂಗೀತಾ ಅವರು ರಿಪ್ಲೈ ಮಾಡಿದ್ದು, ನಿಜಕ್ಕೂ ನನ್ನನ್ನು ಹೇಗೆ ಹ್ಯಾಂಡಲ್ ಮಾಡುತ್ತೀರೋ ನನಗಂತೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಹಲವರು ಜೋಡಿಗಳಿಗೆ ವಿಶ್ ಮಾಡಿ ಶುಭ ಹಾರೈಸಿದ್ದಾರೆ. ಇಬ್ಬರೂ ಆಗಾಗ ಪ್ರವಾಸಕ್ಕೆ ಹೋಗುವುದು, ಫೋಟೋಶೂಟ್ ಮಾಡಿಸುವುದನ್ನು ಮಾಡುತ್ತಿರುತ್ತಾರೆ.

ಸುದರ್ಶನ್ ಅವರ ಕೆಲಸ ಇತರೆ ವಿವರ
ಸುದರ್ಶನ್ ಕಂಪನಿಯಲ್ಲಿ ಕೆಲಸ ಮಾಡಿದ್ದು, ಸ್ಟ್ಯಾಂಡಪ್ ಕಾಮಿಡಿಯನ್ ಕೂಡ ಹೌದು. ಗೆಳೆಯ ಪವನ್ ಒಡೆಯರ್ ಅವರ ಮೂಲಕ ಪ್ರೀತಿ ಗೀತಿ ಇತ್ಯಾದಿ ಎಂಬ ಸಿನಿಮಾದಲ್ಲಿ ಸುದರ್ಶನ್ ಗೆ ನಟಿಸಲು ಅವಕಾಶ ಸಿಕ್ಕಿತ್ತು. ಇಲ್ಲೇ ಪರಿಚಯವಾದ ಸಂಗೀತಾ ಭಟ್ ಅವರನ್ನು ಇಷ್ಟಪಟ್ಟು, ಪ್ರೀತಿಸಿ ವರಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಸುದರ್ಶನ್ ರಂಗಪ್ರಸಾದ್ ಹಾಗೂ ಅವರ ಪತ್ನಿ ಇಬ್ಬರು ಪ್ರವಾಸಗಳನ್ನು ಮಾಡಿದ್ದು, ದೆಹಲಿ, ಆಗ್ರಾ, ಜೈಪುರ, ಬಾಲಿ, ಪಟ್ಟದಕಲ್ಲು, ಬಾದಾಮಿ, ಐಹೊಳೆ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಇದರ ಫೋಟೋಗಳನ್ನು ಇನ್ ಸ್ಟಾಗ್ರಾಂ ಪೇಜ್ನಲ್ಲೂ ಹಂಚಿಕೊಂಡಿದ್ದರು. ಇನ್ನು ಸಂಗೀತಾ ಭಟ್ ಚಿತ್ರರಂಗದಿಂದ ಬಹಳ ದೊಡ್ಡ ಬ್ರೇಕ್ ಪಡೆದು, ಅಬ ಜಬ ದಬ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ.


Click it and Unblock the Notifications











