Sujay Hegde ; ನಟ ಸುಜಯ್ ಹೆಗಡೆಗೆ ಹತ್ತಿರವಾದ ದೂರದ ಸಂಬಂಧಿ ಪ್ರೇರಣಾ..!

By ಪ್ರಿಯಾ ದೊರೆ

ಕನ್ನಡ ಕಿರುತೆರೆಯ ನಟ-ನಟಿಯರು ಸೈಲೆಂಟ್ ಆಗಿ ಸಿಂಗಲ್ ಜೀವನಕ್ಕೆ ಗುಡ್ ಬೈ ಹೇಳಿ ಮಿಂಗಲ್ ಆಗುತ್ತಿದ್ದಾರೆ. ಲವ್ ಮ್ಯಾರೇಜ್ ಮಾಡಿಕೊಳ್ಳುವವರ ನಡುವೆ ಅರೇಂಜ್ ಮ್ಯಾರೇಜ್ ಗೂ ಸೈ ಎಂದು ಹೇಳಿದ್ದಾರೆ ಇಲ್ಲೊಬ್ಬ ನಟ. ಯಾರಿಗೂ ಹೇಳದಂತೆ ಸೈಲೆಂಟ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡು ಭಾವಿ ಪತ್ನಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ ನಟ ಸುಜಯ್ ಹೆಗಡೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ನಟ ಸುಜಯ್ ಅವರು ಯತಿರಾಜ್ ಬಹದ್ಧೂರು ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರೇರಣಾ ಜೊತೆಗೆ ಉಂಗುರ ಬದಲಿಸಿಕೊಂಡ ನಟ

ಇದೀಗ ನಟ ಸುಜಯ್ ಅವರು ಕುಟುಂಬದವರ ಸಮ್ಮುಖದಲ್ಲಿ ಸೈಲೆಂಟ್ ಆಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಸುಜಯ್ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರೇರಣಾ ಎಂಬಾಕೆ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸದ್ಯ ಕುಟುಂಬದವರ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಆಗಸ್ಟ್ ನಲ್ಲಿ ಮದುವೆ ನಡೆಯಲಿದೆ. ಆಗ ಕಿರುತೆರೆ, ಹಿರಿತೆರೆ ತಾರೆಯರನ್ನು ಕೂಡ ಆಹ್ವಾನಿಸಲಾಗುವುದು ಎಂದು ಸುಜಯ್ ಅವರು ಹೇಳಿದ್ದಾರೆ.

written-update-on-actor-sujay-hegde-engagement

ಅರೇಂಜ್ ಮ್ಯಾರೇಜ್ ಎಂದ ಸುಜಯ್

ಮೂಲತಃ ಉತ್ತರ ಕನ್ನಡ ಜಿಲ್ಲೆ ಹುಡುಗನಾಗಿರುವ ಸುಜಯ್ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ದೂರದ ಸಂಬಂಧಿ ಆಗಿರುವ ಪ್ರೇರಣಾ ಹಾಗೂ ತಮ್ಮ ಮದುವೆಯನ್ನು ಮನೆಯವರೇ ನೋಡಿ ನಿಶ್ಚಯಿಸಿದ್ದಾರಂತೆ. ನಮ್ಮಿಬ್ಬರದ್ದು ಲವ್ ಮ್ಯಾರೇಜ್ ಅಲ್ಲ, ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದಾರೆ. ಇನ್ನು ಸುಜಯ್ ಅವರು ನಟನಾ ಲೋಕಕ್ಕೆ ಆಗಮಿಸಿದ್ದೇ ಆಕಸ್ಮಿಕವಾಗಿ. ನಟನೆ ಇಷ್ಟವಿಲ್ಲದಿದ್ದರೂ ಸುಮ್ಮನೆ ಆಡಿಷನ್ ಕೊಟ್ಟು ಸೆಲೆಕ್ಟ್ ಆಗಿದ್ದರಂತೆ. ಬೇಡ ಎಂದುಕೊಂಡರೂ ನಟನೆಯ ಸೆಳೆತ ತಮ್ಮನ್ನು ಬಿಡಲಿಲ್ಲ. ಈಗ ನಟನೆ ಬಹಳ ಇಷ್ಟವಾಗಿರುವ ಕೆಲಸ ಎನ್ನುತ್ತಾರೆ ಸುಜಯ್ ಹೆಗಡೆ. ಇನ್ನು ಮೊದ ಮೊದಲು ಸುಜಯ್ ಅವರು ನಟನಾ ಲೋಕಕ್ಕೆ ಬಂದಾಗ ಮನೆಯವರು ಸಪೋರ್ಟ್ ಮಾಡಿರಲಿಲ್ಲವಂತೆ. ಈಗ ಮನೆಯವರೂ ಕೂಡ ಸುಜಯ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದು, ಬಹಳ ಸಪೋರ್ಟ್ ಮಾಡುತ್ತಾರಂತೆ.

ಕಿರುತೆರೆಯಲ್ಲಿ ಕಮಾಲ್ ಮಾಡಿದ ಸುಜಯ್

ಮೊದಲು ಆಕಾಶ ದೀಪ, ಗೋಕುಲದಲ್ಲಿ ಸೀತೆ, ಈ ಬಂಧನ, ಶನಿ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಸಪೋರ್ಟಿಂಗ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಉದಯ ಟಿವಿಯಲ್ಲಿ ಪ್ರಸಾರವಾಗಿದ್ದ ಮನಸಾರೆ ಧಾರಾವಾಹಿಯಲ್ಲಿ ನಾಯಕನಾಗಿ ಮೊದಲ ಬಾರಿಗೆ ಬಡ್ತಿ ಪಡೆದರು. ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನಸ್ಸೆಲ್ಲಾ ನೀನೆ ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸಿ, ವೀಕ್ಷಕರ ಫೇವರಿಟ್ ನಟರಾದರು. ಇದೀಗ ಕಥೆಯೊಂದು ಶುರುವಾಗಿದೆ ಶಾರಾವಾಹಿಯಲ್ಲಿ ಯತಿರಾಜ್ ಬಹದ್ದೂರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

written-update-on-actor-sujay-hegde-engagement

ಸುಜಯ್ ಫೇವರಿಟ್ ಹೀರೋ ಇವರೇ..

ಇನ್ನು 2014 ರಲ್ಲೇ ನಟ ಸುಜಯ್ ಅವರು ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ದರು. ಇದರಲ್ಲಿ ಚಿಕ್ಕ ಪಾತ್ರವಾದರೂ ಇವರ ಪಾತ್ರ ದೊಡ್ಡದಾಗಿಯೇ ಸೌಂಡ್ ಮಾಡಿತ್ತು. ಇಷ್ಟೇ ಅಲ್ಲದೇ, ವಜ್ರಕಾಯ, ಮಿಸ್ಟರ್ ಎಲ್ಎಲ್ಬಿ, ಪ್ರೀತಿಯಲ್ಲಿ ಸಹಜ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಸಿನಿ ರಂಗದಲ್ಲೂ ಸುಜಯ್ ಹೆಗಡೆ ಅವರು ಕಾಣಿಸಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಜೊತೆ ನಟಿಸಿರುವ ಸುಜಯ್ ಅವರಿಗೆ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಪೇವರಿಟ್ ಹೀರೋ ಅಂತೆ. ಸದ್ಯ ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ಸುಜಯ್ ಹೆಗಡೆ ಅವರು ಬ್ಯುಸಿಯಾಗಿದ್ದಾರೆ.

More from Filmibeat

English summary
star suvarna channel katheyodu shuruvagide Actor sujay hegde engagement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X