ಕಿರುತೆರೆಯ ಜೊತೆ ಜೊತೆಗೆ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾದ ಅಣ್ಣಯ್ಯ..!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಶಿವು ತನ್ನ ಸಹೋದರಿಯರ ಬದುಕನ್ನು ದಡ ಮುಟ್ಟಿಸುವ ಸಲುವಾಗಿ ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ತನ್ನ ಬದುಕಿನ ಬಗ್ಗೆ ಕಿಂಚಿತ್ತೂ ಯೋಚಿಸದ ಶಿವು ತಂಗಿಯರಿಗಾಗಿ ರಕ್ತ ಸುರಿಸಲೂ ಹಿಂದೆ ಮುಂದೆ ನೋಡುವುದಿಲ್ಲ. ಅಣ್ಣಯ ಸೀರಿಯಲ್ ನೋಡಿದ ಹೆಣ್ಣು ಮಕ್ಕಳು ಸಿಕ್ಕರೆ ಇಂತಹ ಅಣ್ಣ ಸಿಗಬೇಕು ಎಂದು ಹೇಳುತ್ತಿದ್ದಾರೆ. ಸದ್ಯ ಶಿವಣ್ಣನ ಪಾತ್ರದ ಮೂಲಕ ಫೇಮಸ್ ಆಗಿರುವ ನಟ ವಿಕಾಶ್ ಉತ್ತಯ್ಯ ಅವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದು ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.
ತೆರೆ ಮೇಲೆ ಮಿಂಚಲು ಸಜ್ಜಾದ ಉತ್ತಯ್ಯ
ಹೌದು, ನಟ ವಿಕಾಶ್ ಉತ್ತಯ್ಯ ಅವರು ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತೆರೆ ಮೇಲೆ ಬರಲು ತಯಾರಿ ನಡೆಸಿದ್ದು, ಇದೇ ತಿಂಗಳು ಫೆಬ್ರವರಿ 28ರಂದು ಚಿತ್ರ ತೆರೆಗೆ ಬರಲಿದೆ. ಅಪಾಯವಿದೆ ಎಚ್ಚರಿಕೆ ಎಂಬ ಸಿನಿಮಾದಲ್ಲಿ ವಿಕಾಶ್ ಉತ್ತಯ್ಯ ಅವರು ನಟಿಸಿದ್ದಾರೆ. ನಾಯಕನಾಗಿ ಈ ಸಿನಿಮಾಗೆ ಬಣ್ಣ ಹಚ್ಚಿರುವ ವಿಕಾಶ್ ಅವರು ಚಿತ್ರದ ಸಕ್ಸಸ್ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ವಿಕಾಶ್ ಅವರಿಗೆ ಜೋಡಿಯಾಗಿ ನಟಿ ರಾಧಾ ಭಾಗವತಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಅಭಿಜಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದು, ಮಂಜುನಾಥ್ ವಿ ಜಿ ಹಾಗೂ ಪೂರ್ಣಿಮಾ ಗೌಡ ಅವರು ಹಣ ಹೂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಈ ಚಿತ್ರಕ್ಕಿದ್ದು, ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.

ನಟನೆಯಲ್ಲಿ ತೊಡಗಿದ ಅಡ್ವಕೇಟ್
ಇನ್ನು ಮೂಲತಃ ಕೊಡಗಿನವರಾಗಿರುವ ವಿಕಾಶ್ ಉತ್ತಯ್ಯ ಅವರು ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ನಟರಾಗಿದ್ದಾರೆ. ವಿಕಾಶ್ ಉತ್ತಯ್ಯ ಅವರು ಸೀರಿಯಲ್ ಗೆ ಬರುವ ಮುನ್ನ ಕೆಲ ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಈ ಹಿಂದೆ ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕನಸಿನ ಮಳೆಯಾದವರು ಎಂಬ ಶಾರ್ಟ್ ಫಿಲ್ಮನಲ್ಲೂ ನಟಿಸಿದ್ದಾರೆ.
ಶಿವಣ್ಣನಾಗಿರುವ ವಿಕಾಶ್ ಉತ್ತಯ್ಯ
ಸದ್ಯ ಅಣ್ಣಯ್ಯ ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ನಟ ವಿಕಾಶ್ ಉತ್ತಯ್ಯ ಅವರು ವೀಕ್ಷಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ನಾಲ್ವರು ಸಹೋದರಿಯರನ್ನು ಸಾಕಿ, ಸಲಹಿ ಒಂದೊಳ್ಳೆ ಭವಿಷ್ಯ ರೂಪಿಸುವಲ್ಲಿ ಅಣ್ಣಯ್ಯನ ಪಾತ್ರ ಎಷ್ಟರಮಟ್ಟಿಗೆ ಮಹತ್ವವಾದದ್ದು ಎಂಬುದನ್ನು ಧಾರಾವಾಹಿಯಲ್ಲಿ ತಿಳಿಸಲಾಗಿದೆ. ವಿಕಾಶ್ ಅವರು ಶಿವಣ್ಣನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದು, ಶಿವಣ್ಣನಿಗೆ ತಂಗಿಯರೆಂದರೆ ಜವಾಬ್ದಾರಿ, ಪ್ರೀತಿ. ತನಗೇನೆ ಕಷ್ಟ ಬಂದರೂ ಸಹಿಸಿಕೊಂಡು, ತಂಗಿಯಂದಿರ ಸುಖ ಶಾಂತಿಯನ್ನೇ ನೋಡುವ ಪಾತ್ರ. ಇನ್ನು ಅಣ್ಣಯ್ಯ ಧಾರಾವಾಹಿಯ ನಾಯಕನ ಪಾತ್ರಕ್ಕಾಗಿ 500 ಕಲಾವಿದರನ್ನು ಆಡಿಷನ್ ಮಾಡಲಾಗಿತ್ತು. ಈ ಪೈಕಿ ವಿಕಾಶ್ ಉತ್ತಯ್ಯ ಆಯ್ಕೆಯಾಗಿದ್ದಾರೆ. ಇನ್ನು ಈ ಧಾರಾವಾಹಿಯನ್ನು ಪ್ರಮೋದ್ ಶೆಟ್ಟಿ ಹಾಗೂ ಸುಪ್ರೀತಾ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಪ್ ಡೇಟ್
ವಿಕಾಶ್ ಉತ್ತಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಫುಲ್ ಮಿಂಚುತ್ತಿದ್ದಾರೆ. ಇನ್ ಸ್ಟಾಗ್ರಾಂ ಪೇಜ್ ನಲ್ಲಿ ತಮ್ಮ ಕಾಲೇಜು ದಿನಗಳ ಫೋಟೊಗಳು, ಕೂರ್ಗ್ ಡ್ಯಾನ್ಸ್, ಫ್ಯಾಮಿಲಿ ಫೋಟೋಸ್, ಸಹ ಕಲಾವಿದರ ಜೊತೆಗಿನ ವೀಡಿಯೋಗಳು ಹಾಗೂ ಅವರ ಸಿನಿಮಾಗಳ ಬಗ್ಗೆ ಅಪ್ ಡೇಟ್ ನೀಡುತ್ತಿರುತ್ತಾರೆ. ಸದ್ಯ ಅಪಾಯವಿದೆ ಎಚ್ಚರಿಕೆ ಸಿನಿಮಾ ರಿಲೀಸ್ ಕೆಲಸಗಳಲ್ಲಿ ವಿಕಾಶ್ ಅವರ ಬ್ಯುಸಿಯಾಗಿದ್ದಾರೆ. ಅವರ ಹೊಸ ಪ್ರಯತ್ನಕ್ಕೆ ಸಕ್ಸಸ್ ಸಿಗಲಿ ಎನ್ನುವುದೇ ಇವರ ಅಭಿಮಾನಿಗಳ ಆಶಯ


Click it and Unblock the Notifications











