Adithi Prabhudeva ; ಲವ್ ಅಟ್ ಫಸ್ಟ್ ಸೈಟ್ ಬಗ್ಗೆ ಕ್ಯೂಟ್ ಆಗಿ ಹೇಳಿದ ನಟಿ ಆದಿತಿ ಪ್ರಭುದೇವ

By ಪ್ರಿಯಾ ದೊರೆ

ಸ್ಯಾಂಡಲ್ ವುಡ್ ನಲ್ಲಿ ಬಹಳ ಸಿಂಪಲ್ ಆಗಿದ್ದ ನಟಿ ಎಂದರೆ ಅದು ಅದಿತಿ ಪ್ರಭುದೇವ. ಬಹಳ ಕಡಿಮೆ ಸಮಯದಲ್ಲೇ ಎಲ್ಲರ ಮನಸ್ಸನ್ನು ಕದ್ದ ಚೋರಿ ಎಂದರೂ ತಪ್ಪಾಗುವುದಿಲ್ಲ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಮಾತಿಗೆ ತಕ್ಕಂತೆ ನಡೆದುಕೊಂಡ ನಟಿ ಅಧಿತಿ ಪ್ರಭುದೇವ. ತಾನೊಬ್ಬಳು ಸಿನಿಮಾ ನಟಿ, ಗೋಲ್ಡನ್ ಸ್ಟಾರ್ ಗಣೇಶ್, ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್ ಅವರೊಂದಿಗೆ ನಟಿಸಿದರೂ ಎಲ್ಲೂ ಹಮ್ಮು-ಬಿಮ್ಮು ತೋರಿದವರಲ್ಲ.ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿ ಸುಮ್ಮನೆ ಕೂರದೇ, ಹಳ್ಳಿ ಜೀವನವನ್ನು ಕನ್ನಡಾಭಿಮಾನಿಗಳಿಗೆ ಮತ್ತೊಮ್ಮೆ ಪರಿಚಯಿಸಿದವರೇ ನಟಿ ಅದಿತಿ ಪ್ರಭುದೇವ.

ಸಿಂಪಲ್ ನಟಿ ಅದಿತಿ ಪ್ರಭುದೇವ

ಧೈರ್ಯಂ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ಅಧಿತಿ ಪ್ರಭುದೇವ ಕನ್ನಡಿಗರ ಮನೆ ಮಗಳಾಗಿ ಉಳಿದರು. ಸಿನಿಮಾಗಳನ್ನು ಮಾಡಿ ಸಕ್ಸಸ್ ಕಾಣುವ ವೇಳೆಗೆ ಕೋವಿಡ್ ಬಂದ ಕಾರಣ ಸಿನಿ ರಂಗವೇ ತಣ್ಣಗಾಗಿತ್ತು. ಆಗ ಯೂಟ್ಯೂಬ್ ಬಳಸಿಕೊಂಡ ಅಧಿತಿ ಪ್ರಭುದೇವ ಅವರು ತಮ್ಮೂರಿನ ಸರಳ ಬದುಕನ್ನು ತೋರಿಸಿಕೊಟ್ಟರು. ಹೀರೋಯಿನ್ ಆದರೂ ಕೂಡ ರೊಟ್ಟಿ ತಟ್ಟಿ, ಭೆರಣಿ ಮಾಡಿ, ಹಸು ಮೇಯಿಸಿ ಹಾಲು ಕರೆದರು. ಮನೆ ಕೆಲಸಗಳನ್ನು ಮಾಡುತ್ತಾ ತಮ್ಮ ದಿನಚರಿಯನ್ನು ತೋರುತ್ತಾ ಎಲ್ಲರಿಗೂ ಬಹಳ ಹತ್ತಿರವಾದರು. 'ಬಜಾರ್', 'ಸಿಂಗ್', 'ಬ್ರಹ್ಮಚಾರಿ', 'ಒಂಬತ್ತನೆ ದಿಕ್ಕು', 'ತೋತಾಪುರಿ', 'ತ್ರಿಬಲ್ ರೈಡಿಂಗ್'ಸಿನಿಮಾಗಳಲ್ಲಿ ಮಿಂಚಿದರು.

written update on actress adithi prabhudeva


ಮದುವೆ ಬಳಿಕ ನಟಿಸಿದ ಸಿನಿಮಾಗಳು

ಕೋವಿಡ್ ಮುಗಿಯುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ಮದುವೆಯ ಬಗ್ಗೆ ಅನೌನ್ಸ್ ಮಾಡಿ ಹಲವು ಹುಡುಗರ ನಿದ್ದೆಗೆಡಿಸಿದರು. ಮನೆಯಲ್ಲಿ ನೋಡಿ ಒಪ್ಪಿದ ಹುಡುಗನಿಗೆ ಓಕೆ ಎಂದ ಅದಿತಿ ಪ್ರಭುದೇವ ಅವರು ಮದುಗೆ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿದ್ದರು. 2022ರಲ್ಲಿ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಾಫಿ ಬೆಳಗಾರ ಹಾಗೂ ಉದ್ಯಮಿ ಆಗಿರುವ ಯಶಸ್ ಪಾಟ್ಲಾ ಎಂಬುವರನ್ನು ಅಧಿತಿ ಅವರು ಮದುವೆ ಆದರು. ವಿವಾಹದ ಬಳಿಕವೂ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದರು. 'ಛೂ ಮಂತರ್', 'ಮ್ಯಾಟ್ನೀ', 'ಅಂದೊಂದಿತ್ತು ಕಾಲ', 'ಮಾಫಿಯಾ', 'ದಿಲ್ಮಾರ್', 'ಅಲೆಕ್ಸಾ' ಸಿನಿಮಾಗಳಲ್ಲಿ ನಟಿಸಿದ್ದು, ಕೆಲವು ಇನ್ನೂ ರಿಲೀಸ್ ಆಗಬೇಕಿವೆ.

ಮಗುವಾದ ಮೇಲೂ ಆಕ್ಟೀವ್ ಆಗಿರುವ ನಟಿ

ಇದಕ್ಕೂ ಮುನ್ನವೇ ಇದೇ ವರ್ಷ ಜನವರಿಯಲ್ಲಿ ಸಿಹಿ ಸುದ್ದಿಯನ್ನು ನೀಡಿದರು. ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಗೊಳಿಸಿ ಅಭಿಮಾನಿಗಳು ಖುಷಿ ಪಡುವಂತೆ ಮಾಡಿದ್ದರು. ಏಪ್ರಿಲ್ 4ರಂದು ಯುಗಾದಿ ಹಬ್ಬ, ಇದೇ ದಿನ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಧಿತಿ ಪ್ರಭುದೇವ ಅವರು ಮನೆಗೆ ಮಹಾಲಕ್ಷ್ಮೀ ಬಂದಿದ್ದಾಳೆ ಎಂದು ಸಂತಸವನ್ನು ಹಂಚಿಕೊಂಡಿದ್ದರು. ಮಗುವಿಗೆ ಎರಡು ತಿಂಗಳಾಗುತ್ತಿದ್ದಂತೆಯೇ ಅಧಿತಿ ಅವರು ಕಲರ್ಸ್ ಕನ್ನಡದಲ್ಲಿ ಮೂಡಿ ಬಂದ ರಾಜಾ-ರಾಣಿ ಸೀಸನ್ 3 ರಲ್ಲಿ ಭಾಗವಹಿಸಿ ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾಡಿದ್ದರು.

written update on actress adithi prabhudeva

ಲವ್ ಅಟ್ ಫಸ್ಟ್ ಸೈಟ್ ಎಂದ ನಟಿ

ಇದೀಗ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು, ತಾವು ಅದು ಹೇಗೆ ಯಶಸ್ ಅವರನ್ನು ಒಪ್ಪಿದರು ಎಂಬುದೇ ತಮಗೆ ಗೊತ್ತಿಲ್ಲ. ಮದುವೆ ಆಗುವ ಹುಡುಗನ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಅಧಿತಿ ಅವರು ಮನೆಯಲ್ಲಿ ಹುಡುಗನನ್ನು ತೋರಿಸಿದ ಕೂಡಲೇ ಒಕೆ ಎಂದಿದ್ದರಂತೆ. ಆದರೆ, ತಮ್ಮ ಕನಸಿನ ಹುಡುಗನ ಗುಣಗಳ್ಯಾವೂ ಯಶಸ್ ಅವರಲ್ಲಿ ಇಲ್ಲ. ಜೊತೆಗೆ ಅವರ ಹಾಗೂ ಯಶಸ್ ಟೇಸ್ಟ್ ಬಹಳ ಡಿಫರೆಂಟ್ ಆಗಿದೆಯಂತೆ. ಹಾಗಿದ್ದರು ಮದುವೆಗೆ ಒಪ್ಪಿ ಈಗ ಸುಖ ಜೀವನ ಮಾಡುತ್ತಿದ್ದೇವೆ ಎಂದು ತಾವು ಹುಡುಗನನ್ನು ಒಪ್ಪಿಕೊಂಡ ಬಗೆಯನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಯಶಸ್ ಅವರ ತಮ್ಮ ಜೊತೆಗೆ ಮಾತನಾಡಿದ ಮೊದಲ ಮಾತುಗಳಿಗೆ ಫಿದಾ ಆಗಿ ಲವ್ ಅಟ್ ಫಸ್ಟ್ ಸೈಟ್ ಆಯ್ತು. ಹಾಗೆ ಮದುವೆಯೂ ಆಗಿ ಹೋಯ್ತು ಎಂದು ಕ್ಯೂಟ್ ಆಗಿ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X