Aishwarya Salimath ; ಧಾರವಾಡ To ವಿಯೆಟ್ನಾಂ, ರಾಮಾಚಾರಿ ಅತ್ತಿಗೆ ವೈಶಾಖ ಮೋಜು ಮಸ್ತಿ...!
ಮಹಾಸತಿ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ನಟಿ ಐಶ್ವರ್ಯ ಅವರು ಸದ್ಯ ವೈಶಾಕ ಆಗಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.ಇದೀಗ ನಟಿ ಐಶ್ವರ್ಯ ಅವರು ಮೊದಲ ಬಾರಿಗೆ ವಿದೇಶಕ್ಕೆ ತೆರಳಿದ್ದಾರೆ. ಅದೂ ಕೂಡ ಪತಿಯೊಂದಿಗೆ ವಿಮಾನ ಏರಿದ್ದು, ಪ್ರವಾಸವನ್ನು ಸಕತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ರಾಮಾಚಾರಿ ಧಾರಾವಾಹಿಯ ನಟಿ ಐಶ್ವರ್ಯ ಸಾಲಿಮಠ ಅವರು ಹಲವು ವರ್ಷದಿಂದ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿಯೂ ನಟಿಸಿದ್ದ ಐಶ್ವರ್ಯ ಅವರು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಐಶ್ವರ್ಯ ಅವರು ನಟಿಸಿದ ಧಾರಾವಾಹಿಗಳು
ಪಾಸಿಟಿವ್ ಜೊತೆಗೆ ನೆಗೆಟಿವ್ ರೋಲ್ ಗಳನ್ನು ಮಾಡುವ ನಟಿ, ಹೆಚ್ಚಾಗಿ ವಿಲನ್ ಲುಕ್ ನಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸದ್ಯ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಅತ್ತಿಗೆ ವೈಶಾಖ ಪಾತ್ರ ಮಾಡುತ್ತಿದ್ದಾರೆ. ಐಶ್ವರ್ಯಾ ಸಾಲಿಮಠ ಮೂಲತಃ ಧಾರಾವಾಡದವರು. ನಟನಾ ಕ್ಷೇತ್ರದಲ್ಲಿ ಆಸಕ್ತಿ ಇರುವ ಕಾರಣ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಮಹಾಸತಿ, ಸರಯೂ, ಸೇವಂತಿ, ಅಗ್ನಿಸಾಕ್ಷಿ ಸೇರಿದಂತೆ ಹಲವು ಧಾರಾವಾಹಿಗಳಿಗೆ ನಟಿ ಐಶ್ವರ್ಯ ಅವರು ಬಣ್ಣ ಹಚ್ಚಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ತಂಗಿ ತನು ವಿಲನ್ ಪಾತ್ರದಲ್ಲಿ ನಟಿಸಿದ್ದರು. ಜೇನುಗೂಡು ಧಾರಾವಾಹಿಯಲ್ಲಿ ಸುಮಿಯ ಪಾತ್ರವನ್ನು ನಿರ್ವಹಿಸಿದ್ದರು. ಮಾಡ್ರನ್ ಡ್ರೆಸ್ ಗಳಿಗೂ ಪೋಸ್ ಕೊಟ್ಟಿರುವ ಐಶ್ವರ್ಯಾ, ಟ್ರೆಡಿಷನಲ್ ಡ್ರೆಸ್ ಗೂ ಸೈ ಎನ್ನುತ್ತಾರೆ. ಅವರ ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ.

ಕಲಾವಿದನೊಂದಿಗೆ ಸಪ್ತಪದಿ ತುಳಿದ ನಟಿ
2022 ರಲ್ಲಿ ನಟ ವಿನಯ್ ಎಂಬುವವರ ಜೊತೆ ವಿವಾಹವಾದ ನಟಿ ಐಶ್ವರ್ಯ ಅವರು ಈಗ ಪತಿ ಜೊತೆಗೆ ವಿದೇಶಕ್ಕೆ ತೆರಳಿದ್ದಾರೆ. ಇವರ ಪತಿ ಹುಬ್ಬಳ್ಳಿ ಹುಡುಗ ವಿನಯ್, ಇವರು ಕೂಡ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಬ್ಬರು ಸ್ನೇಹಿತರಾಗಿದ್ದು, ಬಳಿಕ ಮನೆಯವರ ಒಪ್ಪಿಗೆಯೊಂದಿಗೆ ಗ್ರ್ಯಾಂಡ್ ಆಗಿ ಮದುವೆಯಾಗಿದ್ದರು. ನಟ ವಿನಯ್ ಅವರು ಮಹಾದೇವಿ ಧಾರಾವಾಹಿಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಮಹಾಸತಿ ಧಾರಾವಾಹಿಯಲ್ಲೂ ಅದ್ಭುತವಾಗಿ ನಟಿಸಿದ್ದರು. ಗಂಡ ಹೆಂಡತಿ ಇಬ್ಬರು ನಟನಾ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮಹಾಸತಿ ಧಾರಾವಾಹಿ ಮೂಲಕ ಐಶ್ವರ್ಯ ಮತ್ತು ವಿನಯ್ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ ಈಗ ದಂಪತಿಗಳಾಗಿದ್ದಾರೆ.
ಐಶ್ವರ್ಯ ಅವರ ಇತರೆ ಪ್ರಾಜೆಕ್ಟ್ ಗಳು
ನಟಿ ಐಶ್ವರ್ಯ ಅವರು ಪರಭಾಷೆಯಲ್ಲೂ ನಟಿಸಿದ್ದಾರೆ. ತಮಿಳಿನ ರಾಜ್ ಟಿವಿಯಲ್ಲಿ ನಟಿ ಐಶ್ವರ್ಯ ಅವರು ಅನಂತಿ ಎಂಬ ಧಾರಾವಾಹಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಲಾಕ್ ಡೌನ್ ಸಮಯದಲ್ಲಿ ಕಿರುಚಿತ್ರಕ್ಕೆ ನಟಿಸಿದ್ದಾರೆ. ಇನ್ನು ನಟನೆ ಒಂದರಿಂದಲೇ ಜೀವನ ನಡೆಯೋದಿಲ್ಲ ಎಂದು ನಂಬಿರುವ ನಟಿ ಐಶ್ವರ್ಯ ಅವರು ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ಇನ್ನು ಐಶ್ವರ್ಯ ಮತ್ತು ವಿನಯ್ ಇಬ್ಬರೂ ಕೂಡ ರಾಜಾ-ರಾಣಿ ಸೀಸನ್ 2 ರಲ್ಲಿಯೂ ಕಾಣಿಸಿಕೊಂಡಿದ್ದರು.
ವಿದೇಶ ಪ್ರವಾಸದಲ್ಲಿ ನಟಿ ಐಶ್ವರ್ಯ ಸಾಲಿಮಠ
ಇನ್ನು ಪತಿ ಹಾಗೂ ಐಶ್ವರ್ಯ ಇಬ್ಬರೂ ಒಂದೇ ಫೀಲ್ಡ್ ನಲ್ಲಿದ್ದು, ಇಬ್ಬರಿಗೂ ಕಾಮನ್ ಗೆಳೆಯರಿದ್ದಾರೆ. ಆಗಾಗ ಪ್ರವಾಸಗಳನ್ನು ಮಾಡುತ್ತಿರುತ್ತಾರೆ. ವಯನಾಡ್, ಗೋವಾ, ಹರಿದ್ವಾರ, ಕೇದಾರನಾಥ, ಕೂರ್ಗ್ ಸೇರಿದಂತೆ ಹಲವು ಕಡೆ ಪ್ರವಾಸ ಮಾಡಿರುವ ಈ ಜೋಡಿಗಳು ಇಂದು ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ವಿಯೆಟ್ನಾಂಗೆ ಹಾರಿರುವ ಈ ಜೋಡಿ ಅಲ್ಲಿನ ಟ್ರೈನ್ ಸ್ಟ್ರೀಟ್ ಹೊನಾಯ್ ನಲ್ಲಿ ಸುತ್ತಾಡಿದ್ದಾರೆ. ಇದರ ಫೋಟೋಗಳನ್ನು ಅಪ್ಲೋಡ್ ಕೂಡ ಮಾಡಿದ್ದಾರೆ. ಐಶ್ವರ್ಯ ಅವರು ತಮ್ಮ ಟ್ರಿಪ್ ನ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











