ಕೇವಲ 25 ವರ್ಷಕ್ಕೆ ಸ್ವಂತ ಮನೆ ಕಟ್ಟಿ ಗೃಹಪ್ರವೇಶ ಮಾಡಿದ ನಟಿ ಅಕ್ಷತಾ ದೇಶಪಾಂಡೆ..!

By ಪ್ರಿಯಾ ದೊರೆ

ಮನೆ ಕಟ್ಟುವ ಕನಸು ಯಾರಿಗೆ ಇರಲ್ಲ ಹೇಳಿ. ಒಮ್ಮೆ ಓದು ಮುಗಿಸಿ ಕೆಲಸಕ್ಕೆಂದು ಸೇರಿದ ಬಳಿಕ ಪ್ರತಿಯೊಬ್ಬ ವ್ಯಕ್ತಿಯೂ ಕಾಣುವ ಮೊದಲ ಕನಸೇ ಸ್ವಂತ ಮನೆ.ತಮ್ಮ ತಂದೆಯಿಂದ ಪಿತ್ರಾರ್ಜಿತವಾಗಿ ಬಂದ ಸ್ವಂತ ಮನೆ ಇರುವವರೂ ಕೂಡ ತಮ್ಮ ಮನೆಯನ್ನು ತಾವೇ ಕಟ್ಟಿ ಗೃಹಪ್ರವೇಶ ಮಾಡಬೇಕು ಎಂದು ಬಯಸುತ್ತಾರೆ. ಆದರೆ, ಕನಸು ಕಾಣುವುದು ಸುಲಭ. ಅದನ್ನು ನನಸು ಮಾಡಿಕೊಳ್ಳುವ ಮುನ್ನ ಹೈರಾಣಾಗುವುದಂತೂ ಪಕ್ಕಾ. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂದು ಇದಕ್ಕೆ ಹಿರಿಯರು ಹೇಳಿರುವುದು. ಒಂದು ಮದುವೆ ಮಾಡಿ ಮತ್ತು ಒಂದು ಮನೆ ಕಟ್ಟುವ ವೇಳೆಗೆ ಸುಸ್ತಾಗಿ ಬಿಡುತ್ತೇವೆ.

ಗೃಹಪ್ರವೇಶ ನೆರವೇರಿಸಿದ ಅಕ್ಷತಾ

ಆದರೆ, ಇತ್ತೀಚೆಗೆ ಬ್ಯಾಂಕ್ ಗಳಲ್ಲಿ ಮನೆ ಕಟ್ಟಲು ಸಾಲ ಸಿಗುವುದರಿಂದ ಸ್ವಲ್ಪ ಕಷ್ಟ ಕಡಿಮೆಯಾಗಿದೆ. ಆದರೆ ಆ ಸಾಲವನ್ನು ತೀರಿಸುವುದು ಸುಲಭದ ಮಾತಂತೂ ಖಂಡಿತಾ ಅಲ್ಲವೇ ಅಲ್ಲ. ಇನ್ನು ಸ್ಟಾರ್ ನಟ-ನಟಿಯರಿಗೆ ಮನೆ ಕಟ್ಟುವುದು ಕಷ್ಟವಲ್ಲ ಎಂದು ನಾವೊಂದುಕೊಳ್ಳುತ್ತೇವೆ. ಆದರೆ ಸ್ವಂತ ಮನೆ ಕಟ್ಟಲು ಅವರು ಕೂಡ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಕಿರುತೆರೆಯ ಕಲಾವಿದರಿಗೂ ಸ್ವಂತ ಮನೆಯ ಕನಸು ಇದ್ದೇ ಇರುತ್ತದೆ. ಕಳೆದ ವರ್ಷವಂತೂ ಕನ್ನಡ ಕಿರುತೆರೆಯ ಕಲಾವಿದರಲ್ಲಿ ಸುಮಾರು ಮಂದಿ ಸಾಲು ಸಾಲಾಗಿ ಮನೆ ಕಟ್ಟಿ ಗೃಹಪ್ರವೇಶ ನೆರವೇರಿಸಿದ್ದರು. ಆ ಸಾಲಿನಲ್ಲಿ ನಟಿ ಅನುಪಮಾ ಗೌಡ, ಪ್ರಿಯಾಂಕಾ ಚಿಂಚೋಳಿ, ಸಂಗೀತಾ ಅನಿಲ್ ಸೇರಿದಂತೆ ಹಲವರು ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದಾರೆ. ಈಗ ಆ ಸಾಲಿಗೆ ನಟಿ ಅಕ್ಷತಾ ದೇಶಪಾಂಡೆ ಕೂಡ ಸೇರಿಕೊಂಡಿದ್ದಾರೆ. ನಟಿ ಅಕ್ಷತಾ ದೇಶಪಾಂಡೆ ಅವರು ಸ್ವಂತ ಮನೆಯನ್ನು ಕಟ್ಟಿ ಗೃಹಪ್ರವೇಶವನ್ನು ನೆರವೇರಿಸಿದ್ದಾರೆ.

Written update on actress akshatha deshpande

ಸಹೋದರಿಯ ಸಹಾಯಕ್ಕೆ ಅಕ್ಷತಾಳ ಧನ್ಯವಾದ

ನಟಿ ಅಕ್ಷತಾ ದೇಶಪಾಂಡೆ ಅವರು ಕುಟುಂಬದ ಜೊತೆಗೆ ಸೇರಿ ಹೊಸ ಮನೆಗೆ ಪ್ರವೇಶಿಸಿದ್ದಾರೆ. ಗೃಹಪ್ರವೇಶದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನಸಿನ ಮನೆಗೆ ಎಂಟ್ರಿ ಕೊಟ್ಟಿರುವ ಅಕ್ಷತಾ ಅವರು ಕೇವಲ 25 ವರ್ಷದ ಬೆಡಗಿ. ಇಷ್ಟು ಚಿಕ್ಕವಯಸ್ಸಿಗೆ ದೊಡ್ಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ದೊಡ್ಡ ಕನಸು ಕಂಡು, ಕಠಿಣವಾಗಿ ಶ್ರಮಿಸಿದರೆ, ಕನಸು ನನಸಾಗುತ್ತದೆ. ಈ ನನ್ನ ಕನಸನ್ನು ನನಸು ಮಾಡಿಕೊಳ್ಳಲು ಪ್ರತೀ ಹಂತದಲ್ಲೂ ಸಹಕರಿಸಿದ ನನ್ನ ಸಹೋದರಿಗೆ ಧನ್ಯವಾದ ಎಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಸಹೋದರಿ ಸೌಮ್ಯಾ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಇನ್ನು ಹೊಸ ಮನೆಗೆ ಶಾರದಾನಿಲಯ ಎಂದು ಹೆಸರಿಟ್ಟಿದ್ದಾರೆ. ಅಕ್ಷತಾ ಅವರ ಸಹೋದರಿ ಸೌಮ್ಯಾ ದೇಶಪಾಂಡೆ ಅವರು ಫ್ಯಾಷನ್ ಡಿಸೈನರ್ ಆಗಿದ್ದಾರೆ. ಆಗಾಗ ಅಕ್ಷತಾ ಅವರು ಕುಟುಂಬದ ಜೊತೆಗೆ ಫ್ಯಾಮಿಲಿ ಟ್ರಿಪ್ ಕೈಗೊಳ್ಳುತ್ತಿರುತ್ತಾರೆ.

ಚಿಕ್ಕೆಜಮಾನಿಯ ಕಾವೇರಿ ಅಕ್ಷತಾ ದೇಶಪಾಂಡೆ

ಸದ್ಯ ನಟಿ ಅಕ್ಷತಾ ದೇಶಪಾಂಡೆ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಚಿಕ್ಕೆಜಮಾನಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಕಾವೇರಿ ಪಾತ್ರಕ್ಕೆ ನಟಿ ಅಕ್ಷತಾ ಅವರು ಜೀವ ತುಂಬಿದ್ದಾರೆ. ನಾಯಕಿಯ ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಅಕ್ಷತಾ ಅವರಿಗೆ ಕಾವೇರಿ ಎಂಬ ಈ ಪಾತ್ರ ಬಹಳ ಖುಷಿ ಕೊಟ್ಟಿದೆಯಂತೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅಕ್ಷತಾ ಅವರು ಫ್ರಾಕ್ ಧರಿಸಿದರೆ ಇನ್ನು ಕಾಲೇಜ್ ಹುಡುಗಿಯಂತೆ ಕಾಣುತ್ತಾರೆ. ಎಲ್ಲಾ ವಿಧದ ಉಡುಗೆಗಳಲ್ಲೂ ಅಕ್ಷತಾ ಅವರು ಮುದ್ದಾಗಿ ಕಾಣುತ್ತಾರೆ.

ತ್ರಿಭಾಷಾ ಕಿರುತೆರೆ ನಟಿ ಅಕ್ಷತಾ ದೇಶಪಾಂಡೆ

ಬೆಳಗಾವಿ ಮೂಲದ ಅಕ್ಷತಾ ದೇಶಪಾಂಡೆ ಅವರು ಬೆಂಗಳೂರಿನಲ್ಲಿ ಕುಟುಂಬದ ಜೊತೆಗೆ ವಾಸವಿದ್ದಾರೆ. ಈಗಾಗಲೇ ಅಮೃತವರ್ಷಿಣಿ, ಕಾವ್ಯಾಂಜಲಿ, ಮತ್ತೆ ವಸಂತ, ಕಥೆಯೊಂದು ಶುರುವಾಗಿದೆ ಧಾರಾವಾಹಿಗಳಲ್ಲಿ ನಟಿಸಿದ್ದು, ಜಾಕ್ ಪಾಟ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತ್ರಿಭಾಷಾ ನಟಿಯಾಗಿರುವ ಅಕ್ಷತಾ ದೇಶಪಾಂಡೆ ಅವರು ತಮಿಳಿನ ಅನಾಮಿಕ ಧಾರಾವಾಹಿಗೆ ಬಣ್ಣ ಹಚ್ಚಿದ್ದರು. ಹಾಗೂ ತೆಲುಗಿನಲ್ಲಿ ನಿನ್ನ ಕೋರಿ ಎಂಬ ಸೀರಿಯಲ್ ನಲ್ಲಿ ನಟಿಸಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X