Amrutha Murthy ; ಅಮೃತಾ ಮೂರ್ತಿ ಹುಟ್ಟುಹಬ್ಬ : ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆ..!

By ಪ್ರಿಯಾ ದೊರೆ

ಅಮೃತಾ ಮೂರ್ತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಳೆದ ವರ್ಷ ತಮ್ಮ ಹುಟ್ಟುಹಬ್ಬವನ್ನು ದುಬೈನಲ್ಲಿ ಸೆಲಬ್ರೇಟ್‌ ಮಾಡಿಕೊಂಡಿದ್ದರು.ದುಬೈನಲ್ಲಿ ಹುಟ್ಟುಹಬ್ಬದ ದಿನವೇ ಸ್ಕೈಡೈವ್‌ ಮಾಡಿ ಎಂಜಾಯ್‌ ಮಾಡಿದ್ದರು. ಇನ್ನು ಈ ವರ್ಷ ಬರ್ತಡೇ ಸೆಲಬ್ರೇಷನ್‌ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ಆದರೆ, ಗೆಳೆಯರು, ಸಂಬಂಧಿಕರು, ಕಲಾ ಸ್ನೇಹಿತರು, ಅಭಿಮಾನಿಗಳೆಲ್ಲರೂ ನಟಿ ಅಮೃತಾ ಮೂರ್ತಿ ಅವರ ಹುಟ್ಟುಹಬ್ಬವನ್ನು ನೆನಪಿಟ್ಟುಕೊಂಡು ವಿಶ್‌ ಮಾಡಿದ್ದು, ಶುಭ ಕೋರಿದ್ದಾರೆ.


ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ

ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಎಲ್ಲರೂ ತಮ್ಮ ಸ್ಟೋರಿಗಳಲ್ಲಿ ನಟಿ ಅಮೃತಾ ಅವರ ಫೋಟೋ ಅಪ್‌ ಲೋಡ್‌ ಮಾಡಿ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದಾರೆ. ಇದರ ಸ್ಕ್ರೀನ್‌ ಶಾಟ್‌ ಗಳನ್ನು ನಟಿ ಹಂಚಿಕೊಂಡಿದ್ದಾರೆ. ಸದ್ಯ ನಟಿ ಅಮೃತಾ ಮೂರ್ತಿ ಅವರು ನಟನೆಯಿಂದ ದೂರವಿದ್ದು, ಮಾಡೆಲಿಂಗ್‌ ನಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಕೆಲ ಧಾರಾವಾಹಿಗಳಲ್ಲಿ ಕ್ಯೂಟ್‌ ಆಗಿ ನಟಿಸಿದ ಇವರನ್ನು ಇಂದಿಗೂ ಎಲ್ಲರೂ ಕನ್ನಡತಿ ಧಾರಾವಾಹಿ ಮೂಲಕವೇ ಗುರುತಿಸುತ್ತಾರೆ. ಕನ್ನಡತಿಯಲ್ಲಿ ಸುಚಿ ಪಾತ್ರದ ಮೂಲಕ ನಟಿ ಅಮೃತಾ ಅವರು ಅಭಿಮಾನಿಗಳ ಮನ ಗೆದ್ದಿದ್ದರು. ತಂದಿ ಇದ್ದರೆ ಹಗಿರಬೇಕು ಎನ್ನುವಷ್ಟರ ಮಟ್ಟಕ್ಕೆ ಚಿರಪರಿಚಿತರಾಗಿದ್ದರು.

Written update on actress amrutha murthy


ಧಾರಾವಾಹಿಗಳ ಮೂಲಕ ಚಿರಪರಿಚಿತೆ

ಬಳಿಕ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಆರಾಧನಾಳ ಸಹೋದರಿಯಾಗಿ ಭಾವನಾ ಎಂಬ ಕ್ಯಾರೆಕ್ಟರ್ ಮೂಲಕ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಜೇನುಗೂಡು ಧಾರಾವಾಹಿಯಲ್ಲೂ ನಟಿಸಿದ್ದರು. ಇದರಲ್ಲಿ ಲೀಡ್‌ ರೋಲ್‌ ದಿಯಾ ಪಾತ್ರದ ಮೂಲಕ ಕಾಣಿಸಿಕೊಂಡಿದ್ದ ನಟಿ ಅಮೃತಾ ಅವರು ಈ ಧಾರಾವಾಹಿಯು ಉತ್ತರ ಕರ್ನಾಟಕ ಶೈಲಿಯದ್ದಾಗಿತ್ತು. ಪಾತ್ರ ಬಬ್ಲಿಯಾಗಿದ್ದು, ನಟಿ ಅಮೃತಾ ಅವರು ಸಕತ್ ಆಗಿ ನಟಿಸಿದ್ದರು.

ಫ್ಯಾಷನ್‌ ಲೋಕದಲ್ಲಿ ಸಕ್ರಿಯ

ನಟಿ ಅಮೃತಾ ಮೂರ್ತಿ ಅವರು ಮೂಲತಃ ಚಿಕ್ಕಮಗಳೂರಿನ ಬೆಡಗಿ. ಪಿಯುಸಿ ಮುಗಿಯುತ್ತಿದ್ದಂತೆಯೇ ನಟಿಸುವ ಆಸೆಯಿಂದ ಆಡಿಷನ್ ಗಳನ್ನು ನೀಡುತ್ತಿದ್ದ ಅಮೃತಾ ಅವರು ಬಿಎಸ್ಸಿ ಫ್ಯಾಷನ್ ಮತ್ತು ಅಪಾರೆಲ್ ಡಿಸೈನಿಂಗ್ ಕಲಿತಿದ್ದಾರೆ. ಓದು ಮುಗಿದ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದ ಇವರು ಬಳಿಕ ಕಿರುತೆರೆಯಲ್ಲಿ ನಟಿಸಲು ಪ್ರಾರಂಭಿಸಿದರು. ಸೃಜನ್‌ ಅವರ ಪ್ರೊಡಕ್ಷನ್‌ ಮೂಲಕ ಮೊದಲ ಬಾರಿಗೆ ಆಡಿಷನ್‌ ಕೊಟ್ಟ ಅಮೃತಾ ಅವರು ಬಳಿಕ 10-15 ಆಡಿಷನ್‌ ಗಳನ್ನು ಕೊಟ್ಟು ಕನ್ನಡತಿ ಧಾರಾವಾಹಿಗೆ ಎಂಟ್ರಿಕೊಟ್ಟರು. ಪಾತ್ರಗಳ ಬಗ್ಗೆ ಹೆಚ್ಚು ಗಮನ ಕೊಡುವ ನಟಿ ಅಮೃತಾ ಮೂರ್ತಿ ಅವರು ಬಹಳ ಸೆಲೆಕ್ಟಿವ್‌ ಎಂದರೆ ತಪ್ಪಾಗಲಾರದು.

ಮಾಡೆಲಿಂಗ್‌ ಕ್ಷೇತ್ರವನ್ನೇ ಇಚ್ಛಿಸುವ ನಟಿ

ಧಾರಾವಾಹಿಗಳಲ್ಲಿ ಅಷ್ಟೇ ಅಲ್ಲದೇ, ನಟಿ ಅಮೃತಾ ಮೂರ್ತಿ ಅವರು ಡ್ಯಾನ್ಸಿಂಗ್ ಚಾಂಪಿಯನ್ಶಿಪ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇದರಲ್ಲಿ ರಿಶ್ವಿಕ್‌ ಎಂಬುವರ ಜೊತೆಗೆ ಡ್ಯಾನ್ಸ್‌ ಮಾಡಿದ್ದರು. ಈ ಶೋ ನಲ್ಲಿ ವಿಧವಿಧ ರೀತಿಯಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು ಅಮೃತಾ. ಇನ್ನು ಅಪರಾಧಿ ನಾನಲ್ಲ ಎಂಬ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದಾರೆ. ನಟಿ ಅಮೃತಾ ಅವರಿಗೆ ಫ್ಯಾಷನ್ ಫೀಲ್ಡ್ ಬಿಟ್ಟು ಬರೋಕೆ ಇಷ್ಟವಿಲ್ಲವಂತೆ. ನಟನೆಯನ್ನು ಪ್ರೊಫೆಷನ್ ಆಗಿ ನೋಡೋಕೆ ಆಗೋದಿಲ್ಲ. ಯಾಕೆಂದರೆ ಪ್ರತೀ ದಿನ ಕೆಲಸ ಇರುತ್ತೆ ಎಂದುಕೊಳ್ಳುವುದು ತಪ್ಪು. ಹಾಗಾಗಿ ನಟನೆಯ ಅವಕಾಶ ಸಿಕ್ಕಾಗ ನಟಿಸಿ, ಮಿಕ್ಕ ಸಮಯದಲ್ಲಿ ಫ್ಯಾಷನ್ ಲೋಕದಲ್ಲೇ ಇರಲು ಬಯಸುತ್ತೇನೆ ಎಂದು ಹೇಳಿದ್ದರು. ಅದರಂತೆಯೇ ಸದ್ಯ ನಟಿ ಅಮೃತಾ ಮೂರ್ತಿ ಅವರು ಫ್ಯಾಷನ್ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X