Yamuna Srinidhi ; ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಲಾಯರ್ ಆದ ಯಮುನಾ ಶ್ರೀನಿಧಿ..!

By ಪ್ರಿಯಾ ದೊರೆ

ನಟಿ ಯಮುನಾ ಶ್ರೀನಿಧಿ ಅವರ ನಟನೆ ಬಗ್ಗೆ ಯಾರಿಗೂ ಏನೂ ಹೇಳಬೇಕಾಗಿಲ್ಲ. ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಿಂದಲೇ ಜನರ ಮನ ಗೆದ್ದಿದ್ದಾರೆ. ಹಲವು ವರ್ಷಗಳಿಂದ ಹಿರಿ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ ಯಮುನಾ ಶ್ರೀನಿಧಿ ಅವರು ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ನಟಿಸುತ್ತಾರೆ. ಬಿಗ್ ಬಾಸ್ ಸೀಸನ್ 11 ರಲ್ಲಿ ನಟಿ ಯಮುನಾ ಶ್ರೀನಿಧಿ ಅವರು ಭಾಗವಹಿಸಿದ್ದರು. ಒಂದೇ ವಾರಕ್ಕೆ ಎಲಿಮಿನೇಟ್ ಆದರೂ ಕೂಡ ಅಭಿಮಾನಿಗಳ ಮನ ಗೆದ್ದಿದ್ದರು.

ಲಾಯರ್ ಅವತಾರದಲ್ಲಿ ನಟಿ ಯಮುನಾ

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಯಮುನಾ ಅವರು ವಾಪಸ್ ಬಿಗ್ ಬಾಸ್ ಮನೆಗೆ ಬರಬೇಕು ಎಂದು ಬಯಸಿದ್ದರು. ನಟಿ ಯಮುನಾ ಶ್ರೀನಿಧಿ ಅವರ ಮಾತು ಹಾಗೂ ಬಿಗ್ ಬಾಸ್ ಮನೆಯಲ್ಲಿನ ಅವರ ನಡವಳಿಕೆಯನ್ನು ಜನ ಮೆಚ್ಚಿಕೊಂಡಿದ್ದರು. ಬಿಗ್ ಬಾಸ್ ಸೀಸನ್ 11 ರಲ್ಲಿ ಉಳಿದ ಕಂಟೆಸ್ಟೆಂಟ್ ಗಳಿಂಗಿಂತಲೂ ಹಿರಿಯರಾಗಿ ಭಾಗವಹಿಸಿದ್ದರು. ಇನ್ನು ನಟಿ ಯಮುನಾ ಶ್ರೀನಿಧಿ ಅವರು ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸೂರ್ಯವಂಶ ಸೀರಿಯಲ್ ನಲ್ಲಿ ಲಾಯರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರ್ಯವಂಶ ಧಾರಾವಾಹಿಯಲ್ಲಿ ಕಾತ್ಯಾಯಿನಿ ಕೇಲ್ಕರ್ ಎಂಬ ಪಾತ್ರಕ್ಕೆ ನಟಿ ಯಮುನಾ ಶ್ರೀನಿಧಿ ಅವರು ಬಣ್ಣ ಹಚ್ಚಿದ್ದಾರೆ.

written-update-on-actress-and-bb-fame-yamuna-srinidhi

ಹಾಫ್ ಸೆಂಚುರಿ ಬಾರಿಸಲಿರುವ ನಟಿ

ಇನ್ನೂ ಯಂಗ್ ಆಗಿ ಕಾಣುವ ನಟಿ ಯಮುನಾ ಶ್ರೀನಿಧಿ ಅವರು ಇನ್ನೇನು ಕೆಲವೇ ತಿಂಗಳಿನಲ್ಲಿ ಹಾಫ್ ಸೆಂಚುರಿ ಬಾರಿಸಲಿದ್ದಾರೆ. ಆದರೂ ಇನ್ನೂ 30 ರಿಂದ 35 ವಯಸ್ಸಿರಬಹುದು ಎನ್ನುವಷ್ಟು ಯಂಗ್ ಆಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಯಮುನಾ ಶ್ರೀನಿಧಿ ಅವರು ಈಗಲೂ ಭರತನಾಟ್ಯ ಹೇಳಿಕೊಡುತ್ತಾರೆ. ಅಲ್ಲದೇ, ಕಳೆದ 27 ವರ್ಷದಿಂದ ಪ್ರತೀ ವರ್ಷವೂ ರಕ್ತ ದಾನವನ್ನು ಮಾಡುತ್ತಾರೆ. ಶಿಸ್ತುಬದ್ಧ ಜೀವನವನ್ನು ನಡೆಸುವ ಯಮುನಾ ಶ್ರೀನಿಧಿ ಅವರು ನಿತ್ಯ ಮುಂಜಾನೆ ಬೇಗ ಏಳುವ ಅಭ್ಯಾಸವನ್ನು ಹೊಂದಿದ್ದಾರೆ. ಸೂರ್ಯವಂಶ ಧಾರಾವಾಹಿಯ ಜೊತೆಗೆ ನಟಿ ಯಮುನಾ ಶ್ರೀನಿಧಿ ಅವರು ಅಭಿಮನ್ಯು ಸಿನಿಮಾದಲ್ಲೂ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿಶೇಷ ದಿನಗಳಲ್ಲಿ ಸಮಾಜ ಸೇವೆ

ಭರತನಾಟ್ಯ ಕಲಾವಿದೆ ಆಗಿರುವ ಯಮುನಾ ಅವರು, ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. 12 ವರ್ಷಗಳ ಕಾಲ ಅಮೆರಿಕಾದಲ್ಲಿದ್ದರು. ಭಾರತಕ್ಕೆ ಬಂದ ಯಮುನಾ ಅವರು ಆನ್ ಲೈನ್ ನಲ್ಲಿ ಇಂದಿಗೂ ಅಮೆರಿಕಾ ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಇನ್ನು ಯಮುನಾ ಶ್ರೀನಿಧಿ ಅವರು ಸದಾ ಸಮಾಜ ಸೇವೆಯಲ್ಲಿ ಮುಂದಿರುತ್ತಾರೆ. ತಮ್ಮ ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳನ್ನು ಸಮಾಜ ಸೇವೆಗೆ ಮೀಸಲಿಟ್ಟಿರುತ್ತಾರೆ.


ಧಾರಾವಾಹಿ, ಸಿನಿಮಾಗಳಲ್ಲಿ ನಟನೆ

ಅರಮನೆ, ಅಶ್ವಿನಿ ನಕ್ಷತ್ರ, ಮಧು ಮಗಳು, ಒಂದೂರಲ್ಲಿ ರಾಜ ರಾಣಿ, ಅಮೃತವರ್ಷಿಣಿ, ಸಾಕ್ಷಿ, ಕಮಲಿ, ಮನಸಾರೆ, ಕನ್ಯಾಕುಮಾರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತೆಲುಗಿನ ಅನು ಅನೆ ನೇನು ಎಂಬ ಧಾರಾವಾಹಿಗೂ ಬಣ್ಣ ಹಚ್ಚಿದ್ದರು. ಇನ್ನು ರಿಯಾಲಿಟಿ ಶೋ ಡಾನ್ಸ್ ಸಮರದಲ್ಲೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಮನಸಿನಾಟ, ಫೇಸ್ ಟು ಫೇಸ್, ಕರ್ಷಣಂ, ಗಲ್ಲಿ ಬೇಕರಿ, ರನ್ನ, ರಾಂಧವ, ಕಾಪಾಲ, ಸೆಪ್ಟೆಂಬರ್ 13, ಲೊವೆ 360, ಶ್ರೀರಂಗ, ಅಭಿಮನ್ಯು ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಇನ್ನು ಕೆಲ ಸಿನಿಮಾಗಳಿಗೆ ನಟಿ ಯಮುನಾ ಶ್ರೀನಿಧಿ ಅವರು ಕಂಠ ದಾನ ಕೂಡ ಮಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X