Anjana Srinivas ; ಜಾನಕಿಯಾಗಿ ಬಂದ ರುಕ್ಮಿಣಿಯನ್ನು ಕಂಡು ಸಂತಸಗೊಂಡ ವೀಕ್ಷಕರ ಬಳಗ..!

By ಪ್ರಿಯಾ ದೊರೆ

ಹಲವು ವರ್ಷಗಳಿಂದ ಕನ್ನಡಿಗರನ್ನು ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿ, ಆಗಾಗ ಹೊಸ ಹೊಸ ರಿಯಾಲಿಟಿ ಶೋಗಳು ಮತ್ತು ಧಾರಾವಾಹಿಗಳನ್ನು ಪ್ರಾರಂಭಿಸುತ್ತಲೇ ಇರುತ್ತದೆ. ಇದೀಗ ಸ್ಟಾರ್ ಸುವರ್ಣ ವಾಹಿನಿ ಹೊಸ ಧಾರಾವಾಹಿಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಅದಾಗಲೇ ಪ್ರೋಮೋ ರಿಲೀಸ್ ಮಾಡಿದ್ದು, ವೀಕ್ಷಕರಿಗೆ ಹಳೆಯ ನೆನಪುಗಳನ್ನು ಮರುಕಳಿಸಿದೆ. ಈ ಹೊಸ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯನ್ನು ನೋಡಿದ ವೀಕ್ಷಕರು ಫುಲ್ ಹ್ಯಾಪಿ ಆಗಿದ್ದಾರೆ. ಹಳೆಯ ನಟಿಯನ್ನು ಮತ್ತೆ ನೋಡಿ ಸಂಭ್ರಮಿಸಿದ್ದಾರೆ.

ಹೊಸ ಧಾರಾವಾಹಿಯ ಪ್ರೋಮೋ

ಇತ್ತೀಚೆಗಷ್ಟೇ ನಮ್ಮ ಲಚ್ಚಿ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ ಎಂದು ಹೇಳಲಾಗಿತ್ತು. ಅದರಂತೆಯೇ ಈಗ ಆ ಧಾರಾವಾಹಿಯ ಜಾಗಕ್ಕೆ ಜಾನಕಿ ಸಂಸಾರ ಬರುವುದು ಪಕ್ಕಾ ಆಗಿದೆ. ಅಷ್ಟೇ ಅಲ್ಲದೇ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ರಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪುಟಾಣಿ ಶ್ರೀದಿಶಾ ಈಗ ಜಾನಕಿ ಸಂಸಾರ ಸೀರಿಯಲ್ ನಲ್ಲೂ ಬಣ್ಣ ಹಚ್ಚಿದ್ದಾರೆ. ಪ್ರೋಮೋದಲ್ಲಿ ಶ್ರೀದಿಶಾ, ನಟಿ ಅಂಜನಾ ಶ್ರೀನಿವಾಸ್, ಸಮೀರ್ ಆಚಾರ್ಯ, ಸೂರಜ್ ಹೊಳ್ಳ ಸೇರಿದಂತೆ ಹಲವರನ್ನು ತೋರಿಸಲಾಗಿದೆ. ಪ್ರೋಮೋ ನೋಡಿ ಅಭಿಮಾನಿಗಳಂತೂ ಫುಲ್ ಹ್ಯಾಪಿ ಆಗಿದ್ದಾರೆ.

How will the southwest monsoon rain this time Here is the weather department information

ಜಾನಕಿ ಸಂಸಾರದಲ್ಲಿ ರುಕ್ಮಿಣಿ ರೀ ಎಂಟ್ರಿ

ಇನ್ನು ನಟಿ ಅಂಜನಾ ಶ್ರೀನಿವಾಸ್ ಅವರು ಕಳೆದ ಕೆಲ ವರ್ಷಗಳ ಹಿಂದೆ ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ಇದರಲ್ಲಿ ನಟ ಡಾರ್ಲಿಂಗ್‌ ಕೃಷ್ಣ ಅವರು ನಾಯಕನಾಗಿ ಕಾಣಿಸಿಕೊಂಡಿದ್ದರು. ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ನಟಿ ಅಂಜನಾ ಎಲ್ಲರ ಮನ ಗೆದ್ದಿದ್ದರು. ಇಂದಿಗೂ ಅಂಜನಾ ಅವರನ್ನು ಅದೇ ಹೆಸರಿನಲ್ಲಿ ಗುರುತಿಸುತ್ತಿದ್ದಾರೆ. ಈ ಧಾರಾವಾಹಿ ಪ್ರಸಾರಗೊಂಡು ವರ್ಷಗಳೇ ಕಳೆದ ಬಳಿಕ ಮತ್ತೆ ಕನ್ನಡ ಕಿರುತೆರೆಗೆ ಅಂಜನಾ ಅವರು ಕಮ್‌ ಬ್ಯಾಕ್‌ ಮಾಡಿದ್ದಾರೆ. ಇಷ್ಟು ದಿನ ಅಂಜನಾ ಶ್ರೀನಿವಾಸ್ ಪರಭಾಷೆಗಳಲ್ಲಿ ಮಿಂಚುತ್ತಿದ್ದರು. ತೆಲುಗು, ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಮಿಥೈ ಕೊಟ್ಟು ಚಿಟ್ಟೆಮ್ಮ ಸೇರಿದಂತೆ ತೆಲುಗು ಹಾಗೂ ತಮಿಳಿನಲ್ಲಿ ಸುಮಾರು ಏಳಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕೋಲಾರದ ರೂಪಸಿ ನಟಿ ಅಂಜನಾ

ಪ್ರತಿಯೊಂದು ಸೀರಿಯಲ್ ನ ಒಪ್ಪಿಕೊಳ್ಳುವ ಮುನ್ನ ನಟಿ ಅಂಜನಾ ಅವರು ಪಾತ್ರದ ಬಗ್ಗೆ ಹೆಚ್ಚು ಗಮನವನ್ನು ಕೊಡುತ್ತಾರೆ. ಒಂದು ಪಾತ್ರಕ್ಕೂ ಮತ್ತೊಂದು ಪಾತ್ರಕ್ಕೂ ಬಹಳ ಡಿಫರೆಂಟ್ ಆಗಿರಬೇಕು ಎಂದು ಬಯಸುತ್ತಾರೆ. ಅಂಜನಾ ಅವರನ್ನು ನಕ್ಷತ್ರಾ ಶ್ರೀನಿವಾಸ್ ಎಂದು ಕೂಡ ಕರೆಯಲಾಗುತ್ತದೆ. ಮೂಲತಃ ಕೋಲಾರದ ಚಿಂತಾಮಣಿಯವರಾದ ಅಂಜನಾ ಅವರು ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ನಟಿಸುವಾಗ 17 ವರ್ಷದವರಾಗಿದ್ದರು. ಆಗಲೇ ನಟನೆಗೆ ಆಗಮಿಸಿದ ಅಂಜನಾ ಅವರು ಈಗ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾನಕಿ ಸಂಸಾರ ಧಾರಾವಾಹಿಯಲ್ಲಿ ಜಾನಕಿಯಾಗಿ ನಟಿಸಿರುವ ಅಂಜನಾ ಅವರು ನಾಯಕಿಯಾಗಿದ್ದಾರೆ.

How will the southwest monsoon rain this time Here is the weather department information

ಹಿಂದಿ ಧಾರಾವಾಹಿಯ ರಿಮೇಕ್

ಅಂಜನಾ ಅವರಿಗೆ ಜೋಡಿಯಾಗಿ ಕುಲವಧು ಖ್ಯಾತಿಯ ನಟ ಸೂರಜ್‌ ಹೊಳ್ಳ ಅಲಿಯಾಸ್‌ ಗೌರವ್‌ ಕಾಣಿಸಿಕೊಂಡಿದ್ದಾರೆ. ಇನ್ನು ಜಾನಕಿ ಸಂಸಾರ ಧಾರಾವಾಹಿಯು ರಿಮೇಕ್‌ ಎಂದು ಅಭಿಮಾನಿಗಳು ಹೇಳಿದ್ದಾರೆ. ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಕಹಾನಿ ಘರ್‌ ಘರ್‌ ಕಿ ಧಾರಾವಾಹಿ ಎಂದು ಉಲ್ಲೇಖಿಸಿದ್ದಾರೆ. ಧಾರಾವಾಹಿ ರಿಮೇಕ್‌ ಆದರೂ ಕೂಡ ಅಭಿಮಾನಿಗಳಿಗೆ ನಟಿ ಅಂಜನಾ ಶ್ರೀನಿವಾಸ್‌ ಅವರು ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿರುವುದು ಸಖತ್‌ ಖುಷಿಯನ್ನು ನೀಡಿದೆ. ಮತ್ತೆ ಕನ್ನಡ ಕಿರುತೆರೆಗೆ ಕಮ್‌ ಬ್ಯಾಕ್‌ ಮಾಡಿರುವ ನಟಿ ಅಂಜನಾ ಶ್ರೀನಿವಾಸ್‌ ಅವರಿಗೆ ಶುಭ ಹಾರೈಸುವುದರ ಜೊತೆಗೆ ಧಾರಾವಾಹಿ ಸೂಪರ್‌ ಹಿಟ್‌ ಆಗಲಿ ಎಂದು ಆಶಿಸೋಣ.

More from Filmibeat

English summary
star suvarna channel janaki samsara Actress anjana srinivas and her serial journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X