ವರ್ಷದ ಬಳಿಕ ನಟನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಈ ನಟಿ ಮತ್ತೆ ಬಣ್ಣ ಹಚ್ಚುತ್ತಾರಾ..?

By ಪ್ರಿಯಾ ದೊರೆ

ನಟನೆಯಿಂದ ದೂರ ಉಳಿದು, ಜಾಹೀರಾತು, ಪ್ರವಾಸ, ಫೋಟೋಶೂಟ್, ರೀಲ್ಸ್ ಎಂದು ಅರಾಮಾಗಿದ್ದ ನಟಿ ಅನು ಜನಾರ್ಧನ್ ಅವರು ಈಗ ಬೇಸರದಲ್ಲಿದ್ದಾರೆ.ವರ್ಷಕ್ಕೆ ಎರಡು ಟ್ರಿಪ್, ತಿಂಗಳಿಗೆ ಒಂದು ಜಾಹೀರಾತು. ಹಬ್ಬ-ಹರಿದಿನಗಳಲ್ಲಿ ಫೋಟೋಶೂಟ್. ಇದೆಲ್ಲಾ ಹೊರತು ಪಡಿಸಿ ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಇಷ್ಟರಲ್ಲೇ ನಟಿ ಅನು ಜನಾರ್ಧನ್ ಅವರು ಕಳೆದು ಹೋಗಿದ್ದರು.

ಆದರೆ, ಈಗ ಅನು ಜನಾರ್ಧನ್ ಅವರು ತಮ್ಮ ನಟನೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಲ್ಲದೇ, ನಟಿಸಿದ ಸಮಯವನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

written update on actress anu janardhan

ನಟನೆಯನ್ನು ಮಿಸ್ ಮಾಡಿಕೊಂಡ ನಟಿ

ಹೌದು, ನಟಿ ಅನು ಜನಾರ್ಧನ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಕೀರ್ತನಾ ಎಂಬ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಸತ್ಯ ಧಾರಾವಾಹಿಯಿಂದ ನಟಿ ಅನು ಜನಾರ್ಧನ್ ಅವರು ಹೊರ ಬಂದಿದ್ದರು. ಆದರೆ, ಇದೀಗ ನಟೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಅವಕಾಶ ಸಿಕ್ಕರೆ ಮತ್ತೆ ಹೊಸ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ನಟಿ ಅನು ಜನಾರ್ಧನ್ ಅವರು ಸಜ್ಜಾಗಿರುವುದು ಈ ಪೋಸ್ಟ್ ಮೂಲಕ ಗೊತ್ತಾಗುತ್ತಿದೆ.


ಇನ್ ಫ್ಲುಯೆನ್ಸ್ ಆಗಿರುವ ನಟಿ

ಸತ್ಯ ಧಾರಾವಾಹಿಯಿಂದ ಹೊರ ಬಂದ ಬಳಿಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದರು. ಹಲವು ಬ್ರ್ಯಾಂಡ್ ಕಂಪನಿಗಳ ಜೊತೆಗೆ ಕೊಲಾಬೊರೇಟ್ ಮಾಡಿಕೊಂಡಿದ್ದ ಅನು ಅವರು ಇನ್ ಫ್ಲುಯೆನ್ಸರ್ ಆಗಿದ್ದಾರೆ. ಅನು ಜನಾರ್ಧನ್ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಎಲ್ಲವನ್ನೂ ಡ್ರೆಸ್, ಬ್ಯಾಗ್, ಮೇಕಪ್ ಪ್ರಾಡಕ್ಟ್ಸ್ ಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಡ್ರೆಸ್ ಗಳ ಕಲರ್ ಕಾಂಬಿನೇಷನ್, ಹಾಗೂ ಯಾವ ಉಡುಗೆಗೆ ಯಾವ ರೀತಿ ರೆಡಿಯಾಗಬೇಕು ಎಂಬ ಎಲ್ಲಾ ಬಗೆಯ ಮಾಹಿತಿಯನ್ನು ಅನು ಅವರು ನೀಡುತ್ತಾರೆ.


ಸಕ್ಕರೆ ನಾಡಿನ ಬೆಣ್ಣೆ ಗೊಂಬೆ ಅನು

ಮೂಲತಃ ಸಕ್ಕರೆ ನಾಡು ಮಂಡ್ಯದವರಾಗಿರುವ ನಟಿ ಅನು ಜನಾರ್ಧನ್ ಅವರು ಸತ್ಯ ಧಾರಾವಾಹಿಯಲ್ಲಿ ತುಂಬಾ ಸ್ಟೈಲ್ ಆಗಿ ಮಾತನಾಡುತ್ತಿದ್ದಾರೆ. ಅಲ್ಲದೇ, ಅವರ ಉಡುಗೆ ತೊಡುಗೆಯ ಮೂಲಕವೂ ಸ್ಟೈಲ್ ಐಕಾನ್ ಕೂಡ ಆಗಿದ್ದರು. ನೋಡಲು ಬಳುಕುವ ಬಳ್ಳಿಯಂತೆ ಕಾಣುವ ಅನು ಸ್ಟೈಲಿಷ್ ಆಗಿ ಡ್ರೆಸ್ ಮಾಡಿಕೊಳ್ಳುತ್ತಾರೆ. ಮಾರ್ಡನ್ ವಿಲನ್ ನಟಿಯರ ಪೈಕಿ ಫೇಮಸ್ ಎಂದರೆ, ಅದು ಅನು ಜನಾರ್ಧನ್. ಅವರ ಫ್ಯಾಷನ್, ಅವರ ಸ್ಟೈಲ್ ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಸೀರೆ ಕಲೆಕ್ಷನ್ ನಲ್ಲೂ ಅನು ಜನಾರ್ಧನ್ ಬಹಳ ಚ್ಯೂಸಿ ಆಗಿರುತ್ತಾರೆ. ಫ್ಯಾಷನ್ ವಿಚಾರಕ್ಕೆ ಬಂದರೆ ಅವರನ್ನು ಫಾಲೋ ಮಾಡಲೇಬೇಕು ಎನ್ನುವಷ್ಟು ಕ್ಯೂಟ್ ಆಗಿ ಡ್ರೆಸ್, ಮೇಕಪ್ ಮಾಡಿಕೊಳ್ಳುತ್ತಾರೆ.


ಧಾರಾವಾಹಿಗಳಲ್ಲಿ ಅನು ನಟನೆ ಸೂಪರ್

ಅನು ಜನಾರ್ಧನ್ ಅವರು ಶಾಸ್ತ್ರೀಯ ನೃತ್ಯವನ್ನು ಕಲಿತಿದ್ದಾರೆ. ಮಹಾಕಾಳಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನು ಬ್ರಹ್ಮಗಂಟು, ಜೈ ಹನುಮಾನ್, ಶ್ರೀವಿಷ್ಣು ದಶಾವತಾರ, ರಂಗನಾಯಕಿ, ಸತ್ಯ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ರಂಗನಾಯಕಿಯಲ್ಲಿ ಖಡಕ್ ವಿಲನ್ ಲುಕ್ ನಲ್ಲಿ ಕಾಣಿಸಿಕೊಂಡ ಅನು ಪೌರಾಣಿಕ ಹಾಗೂ ಸಾಮಾಜಿಕ ನಟನೆ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ.ಸತ್ಯ ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮನದಲ್ಲಿ ಉಳಿದಿದ್ದಾರೆ.

ಕಳೆದ ಒಂದು ವರ್ಷದಿಂದ ಯಾವುದೇ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳದ ಅನು ಜನಾರ್ಧನ್ ಅವರು ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾವನ್ನು ನೆಗಲೆಕ್ಟ್ ಮಾಡಿದ್ದೇ ಇಲ್ಲ. ತಾವು ಧರಿಸುವ ಹೊಸ ಬಟ್ಟೆಯಿಂದ ಹಿಡಿದು, ಪ್ರತಿಯೊಂದು ವಿಚಾರವನ್ನೂ ತಮ್ಮ ನೆಚ್ಚಿನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X