ಎಲ್ಲಿದ್ದಾರೆ, ಹೇಗಿದ್ದಾರೆ, ಏನ್ಮಾಡ್ತಿದ್ದಾರೆ ಸತ್ಯ ಸೀರಿಯಲ್ ಖ್ಯಾತಿಯ ಅನು ಜನಾರ್ಧನ್..!
ಸತ್ಯ ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮನದಲ್ಲಿ ಉಳಿದ ನಟಿ ಅನು ಜನಾರ್ಧನ್ ಅರ್ಧಕ್ಕೆ ಸೀರಿಯಲ್ ಬಿಟ್ಟು ಹೊರ ನಡೆದರು. ಕಳೆದ ಒಂದು ವರ್ಷದಿಂದ ಯಾವುದೇ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳದ ಅನು ಜನಾರ್ಧನ್ ಅವರು ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾವನ್ನು ನೆಗಲೆಕ್ಟ್ ಮಾಡಿದ್ದೇ ಇಲ್ಲ. ತಾವು ಧರಿಸುವ ಹೊಸ ಬಟ್ಟೆಯಿಂದ ಹಿಡಿದು, ಪ್ರತಿಯೊಂದು ವಿಚಾರವನ್ನೂ ತಮ್ಮ ನೆಚ್ಚಿನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ಸ್ಟೈಲಿಷ್ ಲುಕ್ ರಿವೀಲ್ ಮಾಡುವುದರ ಜೊತೆಗೆ ಫ್ಯಾನ್ಸ್ ಗಳಿಗೆ ಟಿಪ್ಸ್ ಕೂಡ ನೀಡುತ್ತಾರೆ.
ಫ್ಯಾಷನ್ ಲೇಡಿ ಅನು ಜನಾರ್ಧನ್
ಕನ್ನಡ ಕಿರುತರೆಯಲ್ಲಿ ಈಗಾಗಲೇ ಸಾಕಷ್ಟು ಮಂದಿ ಸ್ಟೈಲಿಷ್ ವಿಲನ್ ಗಳಿದ್ದಾರೆ. ಅದರಲ್ಲಿ ನಟಿ ಅನು ಜನಾರ್ಧನ್ ಕೂಡ ಒಬ್ಬರು. ಆದರೆ, ಅನು ಅವರ ಕಾಸ್ಟೂಮ್ಸ್‌ಗಳಿಗೆ ಭಿನ್ನವಾದ ಅಭಿಪ್ರಾಯ ವ್ಯಕ್ತವಾಗುತ್ತೆ. ಹೆಚ್ಚು ತಮ್ಮ ಔಟ್ ಫಿಟ್ ಬಗ್ಗೆ ಗಮನ ಕೊಡುವ ನಟಿ ಅನು ಜನಾರ್ಧನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇನ್ ಫ್ಲುಯೆನ್ಸರ್ ಕೂಡ ಆಗಿದ್ದಾರೆ. ಕೆಲ ಬ್ರ್ಯಾಂಡ್ ಗಳ ಪ್ರಚಾರವನ್ನೂ ಮಾಡುತ್ತಾರೆ. ಹೀಗಾಗಿ ಕೆಲ ವೀಡಿಯೋಗಳನ್ನು ಇಂಗ್ಲೀಷ್ ನಲ್ಲಿ ಅಪ್ ಲೋಡ್ ಮಾಡುತ್ತಾರೆ. ಆದರೆ, ಈ ಬಗ್ಗೆ ನೆಗೆಟಿವ್ ಕಮೆಂಟ್ ಗಳನ್ನು ಕೂಡ ನಟಿ ಅನು ಅವರು ಪಡೆಯುತ್ತಿರುತ್ತಾರೆ. ಇನ್ನು ಡ್ರೆಸ್ ಗಳ ಕಲರ್ ಕಾಂಬಿನೇಷನ್, ಹಾಗೂ ಯಾವ ಉಡುಗೆಗೆ ಯಾವ ರೀತಿ ರೆಡಿಯಾಗಬೇಕು ಎಂಬ ಎಲ್ಲಾ ಬಗೆಯ ಮಾಹಿತಿಯನ್ನು ಅನು ಅವರು ನೀಡುತ್ತಾರೆ.

ಫ್ಯಾಮಿಲಿ ಜೊತೆಗೆ ದುಬೈ ಸುತ್ತಾಟ
ಸತ್ಯ ಧಾರಾವಾಹಿ ನಂತರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ಅನು ಜನಾರ್ಧನ್ ಅವರು ತಮ್ಮ ಕುಟುಂಬದ ಜೊತೆಗೆ ದುಬೈಗೆ ಹಾರಿದ್ದಾರೆ. ತಂದೆ-ತಾಯಿ ಹಾಗೂ ಸಹೋದರಿಯೊಂದಿಗೆ ದುಬೈಗೆ ತೆರಳಿರುವ ಅನು ಅವರು, ಅಲ್ಲಿ ಸಫಾರಿಗೆ ಹೋಗಿದ್ದಾರೆ. ಯಾವ ಜಾಗಕ್ಕೆ ಯಾವ ರೀತಿಯ ಉಡುಗೆ ಸೂಟ್ ಆಗುತ್ತೋ ಅಂತಹದ್ದೇ ಬಟ್ಟೆಯನ್ನು ಧರಿಸಿದ್ದು, ಕ್ಯೂಟ್ ಲುಕ್ ಗೆ ಅಭಿಮಾನಿಗಳು ಸ್ವೀಟ್ ಸ್ವೀಟ್ ಆದ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಬೆಸ್ಟ್ ಫ್ರೆಂಡ್ ಸೋಶಿಯಲ್ ಮೀಡಿಯಾ
ಎಲ್ಲೇ ಹೋದರೂ, ಏನೇ ಮಾಡಿದರೂ ಪ್ರತಿಯೊಂದನ್ನೂ ಮಿಸ್ ಮಾಡದೆಯೇ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸದಾ ಅಪ್ ಲೋಡ್ ಮಾಡುತ್ತಿರುತ್ತಾರೆ. ಅಭಿಮಾನಿಗಳಂತೂ ನಿತ್ಯ ಅನು ಜನಾರ್ಧನ್ ಅವರ ಪೇಜ್ ನೋಡುವುದನ್ನು ತಪ್ಪಿಸುವುದಿಲ್ಲ. ನಿತ್ಯ ಅವರು ಸ್ಟೋರಿಯಲ್ಲಿ ಏನೇನು ಅಪ್ ಲೋಡ್ ಮಾಡುತ್ತಾರೆ ಎಂದು ಫಾಲೋ ಮಾಡುತ್ತಿರುತ್ತಾರೆ. ಮಹಾಕಾಳಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನು ಬ್ರಹ್ಮಗಂಟು, ಜೈ ಹನುಮಾನ್, ಶ್ರೀವಿಷ್ಣು ದಶಾವತಾರ, ರಂಗನಾಯಕಿ, ಸತ್ಯ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.
ಟ್ರಾವೆಲ್ ಜೊತೆ ಫ್ಯಾಷನ್ ಫ್ರೀಕ್
ಪದವಿ ಪಡೆದಿರುವ ನಟಿ ಅನು ಅವರು ಮೊದಲು ಫ್ಯಾಷನ್ ಮಾಡೆಲ್ ಆಗಿ ಕೆಲಸ ಆರಂಭಿಸಿದರು. ಮೊದಲು ತೀರಾ ದಪ್ಪಗಿದ್ದ ಇವರು ಡ್ಯಾನ್ಸ್ ಮತ್ತು ಡಯಟ್ ಮೂಲಕ ಸ್ಲಿಮ್ ಆಗಿದ್ದಾರೆ. ನಟಿ ಅನು ಜನಾರ್ಧನ್ ಅವರು ಮೊದಲಿನಿಂದ ಫ್ಯಾಷನ್ ಫ್ರೀಕ್. ಇನ್ನು ಅನುಗೆ ಕೊಂಚ ಬಿಡುವು ಸಿಕ್ಕರೂ ಸಾಕು ಅಡ್ವೆಂಚರ್ ಮಾಡಲು ಹೊರಟು ಬಿಡುತ್ತಾರೆ. ಟ್ರಾವೆಲ್ ಮಾಡುವುದನ್ನು ಹೆಚ್ಚು ಇಷ್ಟಪಡುವ ಅನು ಆಗಾಗ ಪ್ರವಾಸ ತೆರಳುತ್ತಿರುತ್ತಾರೆ. ಕಳೆದ ವರ್ಷವೂ ಕೂಡ ಸ್ನೇಹಿತರ ಜೊತೆ ಹಿಮಾಚಲ ಪ್ರದೇಶ, ದೆಹಲಿ, ಮಂಗಳೂರು, ಗೋವಾ ಟ್ರಿಪ್ ಹೋಗಿ ಸಖತ್ ಎಂಜಾಯ್ ಮಾಡಿದ್ದರು. ಇದೀಗ ಫ್ಯಾಮಿಲಿ ಜೊತೆಗೆ ದುಬೈನಲ್ಲಿದ್ದಾರೆ.


Click it and Unblock the Notifications











