Anu Janardhan ; ಶಂಕ ಚಕ್ರದೊಂದಿಗೆ ಹೊಸ ಟ್ಯಾಟೂ ಹಾಕಿಸಿಕೊಂಡಿರುವ ನಟಿ ಅನು ಜನಾರ್ಧನ್..!
ಸದ್ಯ ಕಿರುತೆರೆಯಿಂದ ದೂರ ಉಳಿದಿರುವ ಸ್ಟೈಲಿಷ್ ವಿಲನ್ ಪಾತ್ರ ನಿರ್ವಹಿಸುತ್ತಿದ್ದ ನಟಿ ಅನು ಜನಾರ್ಧನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಎಲ್ಲೇ ಹೋದರೂ, ಏನೇ ಮಾಡಿದರೂ ಪ್ರತಿಯೊಂದನ್ನೂ ಮಿಸ್ ಮಾಡದೆಯೇ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸದಾ ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ನೂ ಅಭಿಮಾನಿಗಳಂತೂ ನಿತ್ಯ ಅನು ಜನಾರ್ಧನ್ ಅವರ ಪೇಜ್ ನೋಡುವುದನ್ನು ತಪ್ಪಿಸುವುದಿಲ್ಲ. ನಿತ್ಯ ಅವರು ಸ್ಟೋರಿಯಲ್ಲಿ ಏನೇನು ಅಪ್ ಲೋಡ್ ಮಾಡುತ್ತಾರೆ ಎಂದು ಫಾಲೋ ಮಾಡುತ್ತಿರುತ್ತಾರೆ.
ಹೆಚ್ಚು ಪ್ರವಾಸ ಮಾಡುವ ಅನು ಜನಾರ್ಧನ್
ಅನು ಜನಾರ್ಧನ್ ಅವರು ಮೊದಲಿನಿಂದ ಫ್ಯಾಷನ್ ಫ್ರೀಕ್. ನೋಡಲು ಬಳುಕುವ ಬಳ್ಳಿಯಂತೆ ಕಾಣುವ ಅನು ಸ್ಟೈಲಿಷ್ ಆಗಿ ಡ್ರೆಸ್ ಮಾಡಿಕೊಳ್ಳುತ್ತಾರೆ. ಮಾರ್ಡನ್ ವಿಲನ್ ನಟಿಯರ ಪೈಕಿ ಫೇಮಸ್ ಎಂದರೆ ಅದು ಅನು ಜನಾರ್ಧನ್. ಅವರ ಫ್ಯಾಷನ್, ಅವರ ಸ್ಟೈಲ್ ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಸೀರೆ ಕಲೆಕ್ಷನ್ ನಲ್ಲೂ ಅನು ಜನಾರ್ಧನ್ ಬಹಳ ಚ್ಯೂಸಿ ಆಗಿರುತ್ತಾರೆ. ಫ್ಯಾಷನ್ ವಿಚಾರಕ್ಕೆ ಬಂದರೆ ಅವರನ್ನು ಫಾಲೋ ಮಾಡಲೇಬೇಕು ಎನ್ನುವಷ್ಟು ಕ್ಯೂಟ್ ಆಗಿ ಡ್ರೆಸ್, ಮೇಕಪ್ ಮಾಡಿಕೊಳ್ಳುತ್ತಾರೆ. ಅನುಗೆ ಕೊಂಚ ಬಿಡುವು ಸಿಕ್ಕರೂ ಸಾಕು ಅಡ್ವೆಂಚರ್ ಮಾಡಲು ಹೊರಟು ಬಿಡುತ್ತಾರೆ. ಟ್ರಾವೆಲ್ ಮಾಡುವುದನ್ನು ಹೆಚ್ಚು ಇಷ್ಟಪಡುವ ಅನು ಆಗಾಗ ಪ್ರವಾಸ ತೆರಳುತ್ತಿರುತ್ತಾರೆ. ಕಳೆದ ವರ್ಷವೂ ಕೂಡ ಸ್ನೇಹಿತರ ಜೊತೆ ಹಿಮಾಚಲ ಪ್ರದೇಶ, ದೆಹಲಿ, ಮಂಗಳೂರು, ಗೋವಾ ಟ್ರಿಪ್ ಹೋಗಿ ಸಖತ್ ಎಂಜಾಯ್ ಮಾಡಿದ್ದರು.
ಫೋಟೋ, ವೀಡಿಯೋಗಳಂತೂ ಸೂಪರ್
ಮಹಾಕಾಳಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನು, ಆ ನಂತರ ಬ್ರಹ್ಮಗಂಟು, ಜೈ ಹನುಮಾನ್, ಶ್ರೀವಿಷ್ಣು ದಶಾವತಾರ, ರಂಗನಾಯಕಿ, ಸತ್ಯ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಮಾತ್ರ ಕೊಂಚವೂ ದೂರ ಸರಿಯದೇ, ಅಭಿಮಾನಿಗಳಿಗೆ ನಿತ್ಯ ಒಂದಲ್ಲ ಒಂದು ರೀಲ್ಸ್, ಫೋಟೋ ಅಥವಾ ಸ್ಟೋರಿಗಳನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ಅನು ಜನಾರ್ಧನ್ ಅವರ ಫೋಟೋಸ್ ಹಾಗೂ ವೀಡಿಯೋಗಳು ಸಕತ್ ಇಂಪ್ರೆಸ್ಸಿವ್ ಆಗಿರುತ್ತದೆ. ಬಹಳ ಕ್ರಿಯೇಟೀವ್ ಆಗಿ ಫೊಟೋಗಳನ್ನು ತೆಗೆಸಿಕೊಳ್ಳುತ್ತಾರೆ. ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.
ಹೊಸ ಟ್ಯಾಟೂ ಹಾಕಿಸಿಕೊಂಡಿರುವ ಅನು
ಇನ್ನು ಇದೀಗ ಇಂದು ಅನು ಜನಾರ್ಧನ್ ಅವರು ತಮ್ಮ ಹೊಸ ಟ್ಯಾಟೂ ಒಂದನ್ನು ರಿವೀಲ್ ಮಾಡಿದ್ದಾರೆ. ಕುತ್ತಿಗೆಯ ಕೆಳಗಿನ ಬೆನ್ನ ಮೇಲೆ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಬ್ಲ್ಯಾಕ್ ಆಂಡ್ ವೈಟ್ ಫ್ರಾಕ್ ಅನ್ನು ಧರಿಸಿರುವ ಅನು ಅವರು ರೆಡಿಯಾಗಿ ಟ್ಯಾಟೂ ಅಂಗಡಿಗೆ ಹೋಗಿದ್ದಾರೆ. ಹೊಸ ಟ್ಯಾಟೂ ಹಾಕಿಸಿಕೊಂಡಿರುವ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದು, ಇಂದು ಅವರ ಸ್ಟೋರಿಯಲ್ಲಿ ಇದೇ ತುಂಬಿ ಹೋಗಿದೆ.

ಡಿಫರೆಂಟ್ ಆಗಿದೆ ಟ್ಯಾಟೂ ಡಿಸೈನ್
ಈ ಹೊಸ ಟ್ಯಾಟೂ ಬಹಳ ಡಿಫರೆಂಟ್ ಆಗಿದೆ. ತಮಗಾಗಿ ಟ್ಯಾಟೂ ಆರ್ಟಿಸ್ಟ್ ಡಿಸೈನ್ ರೆಡಿ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಎಕ್ಸ್ ಕ್ಲೂಸಿವ್ ಡಿಸೈನ್ ಸೂಪರ್ ಆಗಿದ್ದು, ಟ್ಯಾಟೂ ಅದ್ಭುತವಾಗಿ ಮೂಡಿ ಬಂದಿದೆ. ಶಂಕು, ಚಕ್ರ ಸಮೇತವಾಗಿ ವೇಂಕಟೇಶ್ವರನ ನಾಮ ಇರುವ ಈ ಟ್ಯಾಟೂ ನೋಡಲು ಅಂದವಾಗಿದೆ. ಅನು ಜನಾರ್ಧನ್ ಅವರ ಈ ವೀಡಿಯೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಟ್ಯಾಟೂ ಡಿಸೈನ್ ಅನ್ನು ಕೂಡ ಮೆಚ್ಚಿಕೊಂಡಿದ್ದಾರೆ. ಟ್ಯಾಟೂ ಅಂತೂ ಸೂಪರ್ ಆಗಿದ್ದು, ೊಟ್ನಲ್ಲಿ ಅನು ಜನಾರ್ಧನ್ ಅವರು ಆಗಾಗ ಹೊಸತೇನಾದರೂ ಟ್ರೈ ಮಾಡುತ್ತಲೇ ಇರುತ್ತಾರೆ.


Click it and Unblock the Notifications











