ಘಾಟಿ ಅತ್ತಿಗೆಯಿಂದ ಸೈಲೆಂಟ್ ವಿಲನ್ ಆಗಿ ಈಗ ಸ್ವೀಟ್ ಅಮ್ಮ ಆಗಲು ಹೊರಟ ನಟಿ ಅನುಪಲ್ಲವಿ..!
ನಟಿ ಅನುಪಲ್ಲವಿ ಅಥವಾ ಮೇಕಪ್ ಆರ್ಟಿಸ್ಟ್ ಅನುಪಲ್ಲವಿ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಅದೇ ಬೃಂದಾವನದ ಘಾಟಿ ಅತ್ತಿಗೆ ಎಂದರೆ ಎಲ್ಲರೂ ಅನುಪಲ್ಲವಿಯನ್ನು ನೆನಪು ಮಾಡಿಕೊಳ್ಳುತ್ತಾರೆ. ಇನ್ನು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರವ ನೂರು ಜನ್ಮಕೂ ಧಾರಾವಾಹಿಯಲ್ಲಿ ಛಾಯಾ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ. ಇದರಲ್ಲೂ ನಟಿ ಅನುಪಲ್ಲವಿ ಅವರು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಸೈಲೆಂಟ್ ಆಗಿಯೇ ನಾಯಕಿಗೆ ಕಾಟ ಕೊಡುತ್ತಾ ವೀಕ್ಷಕರ ಮನ ಗೆದ್ದಿದ್ದಾರೆ.
ನೆಗೆಟಿವ್ ರೋಲ್ ನಲ್ಲೂ ಸ್ಟೈಲಿಷ್ ಲುಕ್
ಹೌದು, ನೂರು ಜನ್ಮಕೂ ಧಾರಾವಾಹಿಯಲ್ಲಿ ಚಾಯಾ ನಾಯಕಿ ಮೈತ್ರಿ ಹಾಗೂ ಅವಳ ಮನೆಯವರಿಗೆ ಸೈಲೆಂಟ್ ಆಗಿ ಕಾಟ ಕೊಡುತ್ತಿದ್ದಾಳೆ. ನೆಗೆಟಿವ್ ರೋಲ್ ಆದರೂ ಅನುಪಲ್ಲವಿ ಅವರ ನಟನೆ ಎಲ್ಲರಿಗೂ ಇಷ್ಟವಾಗಿದೆ. ಪ್ಲೈನ್ ಸೀರೆಗಳನ್ನು ಧರಿಸುತ್ತಿರುವ ಅನುಪಲ್ಲವಿ ಅವರು ಸ್ಟೈಲಿಷ್ ಬ್ಲೌಸ್ ನೊಂದಿಗೆ ಮ್ಯಾಚ್ ಮಾಡುತ್ತಿದ್ದು, ನಿತ್ಯ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಅನುಪಲ್ಲವಿ ಈ ಹಿಂದೆ ಘಾಟಿ ಅತ್ತಿಗೆ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಗೆದ್ದಿದ್ದರು. ಈ ಹಿಂದೆ ಇದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಬೃಂದಾವನ ಧಾರಾವಾಹಿಯಲ್ಲಿ ನಟಿ ಅನುಪಲ್ಲವಿ ಅವರು ಕಾಣಿಸಿಕೊಂಡಿದ್ದರು.

ಘಾಟಿ ಅತ್ತಿಗೆಯಾಗಿ ಕಂಡಿದ್ದ ನಟಿ ಅನುಪಲ್ಲವಿ
ಬೃಂದಾವನ ಧಾರಾವಾಹಿಯಲ್ಲಿ ನಾಯಕಿ ಪುಷ್ಪಾಳ ಅತ್ತಿಗೆ ಗಿರಿಜಾ ಪಾತ್ರದಲ್ಲಿ ನಟಿಸಿದ್ದರು. ಹಣದ ದುರಾಸೆಯಿಂದ ನಾದಿನಿಯ ಬದುಕನ್ನೆ ಸಂಕಷ್ಟಕ್ಕೆ ಸಿಲುಕಿಸಿದ್ದ ಘಾಟಿ ಅತ್ತಿಗೆ ಪಾತ್ರವಾಗಿತ್ತು. ತಮ್ಮ ಪಾತ್ರದ ಮೂಲಕವೇ ಅನುಪಲ್ಲವಿ ಅವರು ವೀಕ್ಷಕರ ಮನ ಗೆದ್ದಿದ್ದರು. ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡು ಚಿರಪರಿಚಿತರಾಗಿದ್ದರು. ನೋಡಲು ಘಾಟಿಯಾಗಿ ಕಾಣದ ಅನು ಪಲ್ಲವಿ ಅವರು ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ನಟಿ ಅನುಪಲ್ಲವಿ ಅವರು ನೂರು ಜನ್ಮಕೂ ಧಾರಾವಾಹಿಯಲ್ಲಿ ಚಾಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೂರು ಜನ್ಮಕೂ ಧಾರಾವಾಹಿಯಲ್ಲಿ ಹಿರಿಯ ನಟ-ನಟಿಯರು ಇದ್ದಾರೆ. ನಟಿ ಗಿರಿಜಾ ಲೋಕೇಶ್, ಶಾಲಿನಿ ಎಸ್ ರಾವ್, ಗಾಯಕಿ ಕಮ್ ನಟಿ ಅರ್ಚನಾ ಉಡುಪಾ, ನಟ ಧನುಷ್ ಸೇರಿದಂತೆ ಹಲವರು ನಟಿಸಿದ್ದಾರೆ.
ಸ್ವೀಟ್ ಅಮ್ಮನಾಗಲಿರುವ ನಟಿ
ಇನ್ನು ಇದೇ ತಿಂಗಳ 17ರಿಂದ ಉದಯ ಟಿವಿಯಲ್ಲಿ ರಾತ್ರಿ 9.30ಕ್ಕೆ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. ಇದರಲ್ಲಿ ನಾಯಕನಾಗಿ ದರ್ಶಕ್ ಹಾಗೂ ನಾಯಕಿಯಾಗಿ ಅನುಷಾ ಅವರು ಕಾಣಿಸಿಕೊಂಡಿದ್ದು, ಈ ಅನುಪಲ್ಲವಿ ಎಂಬ ಧಾರಾವಾಹಿಗೆ ನಟಿ ಅನುಪಲ್ಲವಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತಾ ಎಂಬ ಪಾತ್ರದ ಮೂಲಕ ನಟಿಸಲಿದ್ದು, ಇವರಿಗೆ ಜೋಡಿಯಾಗಿ ನಟ ರಜನಿಕಾಂತ್ ಅವರು ಗೋವಿಂದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದು, ಇನ್ನೂ ತಮ್ಮ ಪಾತ್ರಗಳ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.
ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್
ಇನ್ನು ಅನು ಪಲ್ಲವಿ ಅವರು ಈ ಹಿಂದೆ ಪರ್ವ, ಹೂ ಮಳೆ, ನಮ್ಮನೆ ಯುವರಾಣಿ, ಬೃಂದಾವನ ಧಾರಾವಾಹಿಗಳ ಜೊತೆಗೆ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇನ್ನು ಇದರ ಜೊತೆಗೆ ನಟಿ ಅನು ಪಲ್ಲವಿ ಅವರು ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದಷ್ಟೇ ಅಲ್ಲದೇ, ಅನು ಪಲ್ಲವಿ ಅವರು ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರುವ ಅನು ಪಲ್ಲವಿ ಅವರು ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಸಹ ಕಲಾವಿದರ ಜೊತೆಗೆ ರೀಲ್ಸ್, ಕಾಮಿಡಿಗಳನ್ನು ಮಾಡುತ್ತಿರುತ್ತಾರೆ.


Click it and Unblock the Notifications











